ನಮ್ಮ ಸೇನೆಯ ಈ ೧೨ ಸತ್ಯ ಸಂಗತಿಗಳನ್ನು ತಿಳಿದರೆ ನೀವು ಅವರನ್ನು ಇನ್ನೂ ಹೆಚ್ಚು ಗೌರವಿಸುತ್ತೀರ.

0
1137

ನಮಗಾಗಿ ಹೋರಾಡಿ, ಪ್ರಾಣ ತ್ಯಾಗ ಮಾಡುವ ನಮ್ಮ ಸೈನಿಕರಿಗೆ ನಾವು ಎಷ್ಟು ಕೃತಜ್ಞತೆ ಹೇಳಿದರು ಕಡಿಮೇನೆ.

ನಮ್ಮ ಸೇನೆಯ ಈ ೧೨ ಸತ್ಯ ಸಂಗತಿಗಳನ್ನು ತಿಳಿದರೆ ನೀವು ಅವರನ್ನು ಇನ್ನು ಹೆಚ್ಚು ಗೌರವಿಸುತ್ತೀರ.

Also read: ಮನೆಯಲ್ಲಿ ೪೦೦ ರೂ ಕದ್ದು ಭಾರತೀಯ ಸೇನೆ ಸೇರಿದ ವೀರ ಯೋಧ..!

೧. ಭಾರತೀಯ ಸೇನೆ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಸ್ವ-ಇಚ್ಛೆಯಿಂದ ಕೆಲಸ ಮಾಡುವ ಸೇನೆಯಾಗಿದೆ.

೨. ಭಾರತೀಯ ಸೈನಿಕರನ್ನು ಅತ್ಯಂತ ಧೈರ್ಯಶಾಲಿ ಹಾಗು ಕ್ರಿಯಾಶೀಲ ಸೈನಿಕರೆಂದು ಪರಿಗಣಿಸಲಾಗುತ್ತದೆ.

೩.ಎತ್ತರದ ಮತ್ತು ಪರ್ವತ ಯುದ್ಧದಲ್ಲಿ ನಮ್ಮ ಸೈನಿಕರಿಗೆ ಯಾರು ಸರಿಸಾಟಿಯಿಲ್ಲ.

೪.ಭಾರತ ವಿಶ್ವದ ಅತಿ ಎತ್ತರದ ಮತ್ತು ಅತ್ಯಂತ ಕಷ್ಟಕರವಾದ ಯುದ್ಧಭೂಮಿ ಕ್ಷೇತ್ರ, ಸಿಯಾಚಿನ್ ಗ್ಲೇಸಿಯರ್ ಅನ್ನು ನಿಯಂತ್ರಿಸುತ್ತದೆ. ಇಲ್ಲಿನ ತಾಪಮಾನ -೫೦ ಡಿಗ್ರಿ ಇರುತ್ತದೆ.

೫.ಭಾರತೀಯ ಸೈನ್ಯವು ವಿಶ್ವದ ಅತಿ ಎತ್ತರದ ಸೇತುವೆಗಳಲ್ಲಿ ಒಂದಾದ “ಬೈಲಿ ಸೇತುವೆ” ಯನ್ನು ನಿರ್ಮಿಸಿದೆ.

೬.ಭಾರತ ೧೯೭೦ ರ ಪ್ರಾರಂಭದಲ್ಲಿ ಮತ್ತು ೧೯೯೦ ರ ಕೊನೆಯಲ್ಲಿ ರಹಸ್ಯವಾಗಿ ಪರಮಾಣು ಶಸ್ತ್ರಾಸ್ತ್ರಗಳನ್ನು ಬೇರೆ ಯಾವ ರಾಷ್ಟ್ರದ ಸಹಾಯವಿಲ್ಲದೆ ಸ್ವತಂತ್ರವಾಗಿ ಪರೀಕ್ಷೆ ಮಾಡಿತ್ತು.

೭.ಅಮೆರಿಕಾದ ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿಯವರಿಗೆ ಭಾರತದ ಈ ನಡೆಯ ಬಗ್ಗೆ ಸಣ್ಣ ಸುಳಿವು ಸಿಗದ ಹಾಗೆ ಈ ಕಾರ್ಯವನ್ನು ಸಫಲವಾಗಿಸಿತ್ತು.

೮.ನಮ್ಮ ಸೇನೆ ೨೦೧೩ ರಲ್ಲಿ ಮಾಡಿದ “ಆಪರೇಷನ್ ರಾಹತ್ ” ಪ್ರಪಂಚದಲ್ಲಿಯೇ ಮಾಡಿದ ದೊಡ್ಡ ನಾಗರಿಕ ರಕ್ಷಣಾ ಕಾರ್ಯಾಚರಣೆಗಳಲ್ಲಿ ಒಂದಾಗಿದೆ.

೯.ಭಾರತೀಯ ಸೈನೆಯಲ್ಲಿ ಕುದುರೆ ಅಶ್ವದಳದ ರೆಜಿಮೆಂಟ್ ಇದೆ, ಇದು ಪ್ರಪಂಚದಲ್ಲಿ ಕೇವಲ ೩ ದೇಶದ ಸೈನೆಗಳಲ್ಲಿ ಮಾತ್ರವಿದೆ.

೧೦.೧೯೭೧ ರಲ್ಲಿ ನಡೆದ ಇಂಡೋ-ಪಾಕಿಸ್ತಾನಿ ಯುದ್ಧದಲ್ಲಿ ಸುಮಾರು ೯೩೦೦೦ ಪಾಕಿಸ್ತಾನಿ ಯುದ್ಧ ಹೋರಾಟಗಾರರು ಮತ್ತು ಅಧಿಕಾರಿಗಳು ನಮ್ಮ ಸೇನೆಗೆ ಶರಣಾದರು.

೧೧.ಭಾರತೀಯ ಸೇನೆ ಅಮೆರಿಕ ಮತ್ತು ಚೀನಾದ ನಂತರ ವಿಶ್ವದಲ್ಲಿಯೇ ೩ ನೇ ಅತ್ಯಂತ ದೊಡ್ಡ ಸೇನೆಯಾಗಿದೆ.

೧೨.ಭಾರತ ಮತ್ತೆ ಪಾಕಿಸ್ತಾನದ ನಡುವೆ ಎಷ್ಟೇ ವೈಷಮ್ಯವಿದ್ದರೂ, ಭಾರತ ಮತ್ತು ಪಾಕಿಸ್ತಾನಿ ಅಧಿಕಾರಿಗಳು ಯುನೈಟೆಡ್-ನೇಷನ್ಸ್ ಶಾಂತಿ ನೆಲೆಸುವ ಕಾರ್ಯಗಳಿಗೆ ಜಂಟಿಯಾಗಿ ಕೆಲಸಮಾಡುತ್ತಾರೆ.

ಇವರ ಈ ಎಲ್ಲ ಕಾರ್ಯಗಳು ನಮಗೆ ತುಂಬ ಹೆಮ್ಮೆಯೆನಿಸುತ್ತದೆ, ನಿಮ್ಮ ಈ ತ್ಯಾಗಕ್ಕೆ ತುಂಬ ಧನ್ಯವಾದಗಳು.

Also read: ಚೀನಿಯರ ವಿರುದ್ಧ ಪರಮವೀರ ಸುಬೇದಾರ್ ಜೋಗಿಂದರ್ ಸಿಂಗ್-ರವರ ಸಾಹಸ ಶೌರ್ಯದ ಕಥೆ ಕೇಳಿ, ನಮ್ಮ ಸೇನೆ ನಮಗಾಗಿ ಮಾಡುತ್ತಿರುವ ತ್ಯಾಗದ ಬಗ್ಗೆ ಇನ್ನೂ ಗೌರವ ಹೆಚ್ಚುತ್ತೆ!!