ಕಷ್ಟದಲ್ಲಿರುವವರಿಗೆ ನಮ್ಮ ಕೈಯಲ್ಲಿ ಏನೂ ಆಗೋಲ್ಲ ಅನ್ನೋರು ಲಕ್ಷಾಂತರ ರೂಪಾಯಿ ಸಂಗ್ರಹ ಮಾಡಿ ಸಹಾಯ ಮಾಡಿದ ಈ 14 ವರ್ಷದ ಬಾಲಕನನ್ನು ನೋಡಿ ಕಲಿಯಬೇಕು!!

0
551

ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡುತ್ತಿರುವ ಮಕ್ಕಳು ಸರ್ಕಾರವೇ ಯೋಚನೆ ಮಾಡದಷ್ಟು ದೊಡ್ಡ ಯೋಚನೆಯನ್ನು ಯಶಸ್ವಿಯಾಗುತ್ತಿದ್ದಾರೆ. ಇನ್ನೂ ಚಿಕ್ಕ ಮಕ್ಕಳು ಅವರಿಗೇನು ಗೊತ್ತು ಅಂತ ಸುಮ್ಮನೆ ಕೂರದೆ ಸ್ಪೂರ್ತಿ ನೀಡಿ ಸಹಾಯ ಮಾಡುತ್ತಿರುವ ಜನರು ಕೂಡ ದೊಡ್ಡ ಮನಸ್ಸಿನವರೇ ಎನ್ನಬೇಕು. ಏಕೆಂದರೆ 14 ವರ್ಷದ ಯುವಕ ಲಕ್ಷಾಂತರ ಹಣವನ್ನು ಸಹಾಯವಾಗಿ ಪಡೆದು ಅಂಗವಿಕಲರಿಗೆ ಸಹಾಯ ಮಾಡುತ್ತಾನೆ ಎಂದರೆ ಅದು ಸಣ್ಣ ಮಾತಲ್ಲ. ಇಂತಹ ಸಹಾಯ ಮಾಡಿದ ವೀರ್ ಅಗರ್ವಾಲ್‌ ಎನ್ನುವ ಯುವಕ 300 ಜನ ವಿಕಲಾಂಗರಿಗಾಗಿ 14 ಲಕ್ಷ ರೂಪಾಯಿ ಅನುದಾನವನ್ನು ಸಂಗ್ರಹಿಸಿ ಮೆಚ್ಚುಗೆ ಪಡೆದಿದ್ದಾರೆ.

Also read: ಇನ್ಮುಂದೆ ಹೆಲ್ಮೆಟ್ ಹಾಕಿಕೊಂಡರು ತೊಂದರೆಯೇ ಇಲ್ಲ; ಹೆಲ್ಮೆಟ್​, ಜಾಕೆಟ್​ಗೂ ಬಂತು ಎಸಿ, ಏನಿದು Ac ಹೆಲ್ಮಟ್ ವಿಶೇಷತೆ??

ಹೌದು ಕೈ ಕಾಲು ಕಳೆದುಕೊಂಡು ಜೀವನವನ್ನು ಮಾಡುವುದು ಅದೆಷ್ಟು ಕಷ್ಟ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ ಇಂತಹ ನೋವು ಅನುಭವಿಸಿದ ಜನರು ಬೇರೆಯವರ ಬಗ್ಗೆ ಯೋಚನೆ ಮಾಡುವುದೇ ಕಡಿಮೆ ಅಂತಹದರಲ್ಲಿ ಈ ಯುವಕ “ರಸ್ತೆ ಅಪಘಾತದಲ್ಲಿ ತೊಡೆಯ ಮೂಳೆ ಮುರಿದುಕೊಂಡು ಹಲವು ವಾರಗಳ ಕಾಲ ಹಾಸಿಗೆ ಹಿಡಿದು ನೋವನ್ನು ಅನುಭವಿಸಿ ಬಡ ವಿಕಾಲಾಂಗರಿಗೆ ಏನನ್ನಾದರು ಒಳ್ಳೆಯದನ್ನು ಮಾಡಬೇಕೆಂಬ ಸ್ಪೂರ್ತಿಯನ್ನೂ ಪಡೆದ ವಿದ್ಯಾರ್ಥಿ ಅಗರ್ವಾಲ್‌, 300 ಜನ ವಿಕಲಾಂಗರಿಗಾಗಿ 14 ಲಕ್ಷ ರೂಪಾಯಿಗಳ ಬೃಹತ್‌ ಮೊತ್ತವನ್ನು ಸಂಗ್ರಹಿಸಿದ್ದಾರೆ. ಬಂದ ಹಣದಿಂದ ನಾಲ್ಕು ದಿನಗಳ ಕಾಲ ಮಹಾರಾಷ್ಟ್ರದ ರಿಸೋದ್‌ ಜಿಲ್ಲೆಯಲ್ಲಿ ಕ್ಯಾಂಪ್ ಮಾಡಿ 300 ಅಂಗವಿಕಲರಿಗೆ ಕೃತಕ ಕಾಲುಗಳು ನೀಡಿದ್ದಾರೆ.

Also read: ಡೈರಿ ಕೃಷಿಯಿಂದ ಎರಡೇ ವರ್ಷದಲ್ಲಿ 2 ಕೋಟಿ ಹಣ ಸಂಪಾದಿಸಿ ಯುವಪಿಳಿಗೆಗೆ ಸ್ಪೂರ್ತಿ ತುಂಬುತ್ತಿರುವ ಏರ್ ಇಂಡಿಯಾ ನೌಕರ.!

ಬಾಂಬೆಯ ಅಮೇರಿಕನ್‌ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಅಗರ್ವಾಲ್‌, ಈ ಕುರಿತು ಮಾತನಾಡಿದ ಅವರು “ರಸ್ತೆ ಅಪಘಾತದಲ್ಲಿ ತೊಡೆಯ ಮೂಳೆ ಮುರಿದುಕೊಂಡು ನಾನು ಹಲವು ವಾರಗಳ ಕಾಲ ಹಾಸಿಗೆ ಹಿಡಿದು ಬಿಟ್ಟೆ. ಅಂತಹ ಸಂಕಟದ ಅನುಭವ ನನ್ನನ್ನು ಭಯಭೀತಗೊಳಿಸುವುದರ ಜೊತೆಗೆ ಬಡ ವಿಕಾಲಾಂಗರಿಗೆ ಏನನ್ನಾದರು ಒಳ್ಳೆಯದನ್ನು ಮಾಡಬೇಕೆಂಬ ಸ್ಪೂರ್ತಿಯನ್ನೂ ನೀಡಿತು ಹಾಗೂ ಅವರಿಗೆ ಮತ್ತೆ ಮೊದಲಿನಂತೆ ನಡೆಯುವ ಹಾಗೂ ಓಡುವ ಖುಷಿಯ ಅನುಭವವನ್ನು ಪಡೆಯಲಿಕ್ಕೆ ಸಹಾಯ ಮಾಡಬೇಕು ಎನಿಸಿತು” ಅದಕ್ಕೆ ಬೇಕಾದ ಹಣವನ್ನು ಸಂಗ್ರಹಿಸಿ ಕಾಲಿಲ್ಲದವರಿಗೆ ಕೃತಕ ಕಾಲು ನೀಡಲು ಶಿಬಿರ ಮಾಡಿದೆವು, ಈ ಮಾಹಿತಿ ತಕ್ಷಣವೇ ಅಕ್ಕಪಕ್ಕದ ಜಿಲ್ಲೆಗಳ ಅಂಗವಿಕಲರ ಗಮನಕ್ಕೆ ಬಂದು 350 ಜನ ವಿಕಲಾಂಗರು ಚಿಕಿತ್ಸೆಗಾಗಿ ಶಿಬಿರಕ್ಕೆ ಬ0ದರು. ಆದರೆ ಕೃತಕ (ಪ್ರೋಸ್ಥೆಟಿಕ್‌) ಕಾಲುಗಳು ಕೇವಲ 300 ಜನರಿಗೆ ಲಭ್ಯವಿದ್ದವು. ಹಾಗಾಗಿ, ಉಳಿದವರಿಗೆ ಗಾಲಿಕುರ್ಚಿಗಳನ್ನು ನೀಡಲಾಯಿತು. ಮತ್ತು ಪ್ರೋಸ್ಥೆಟಿಕ್‌ ಕಾಲುಗಳ ಅಗತ್ಯವಿರುವ ಮಂದಿಯ ಬಗ್ಗೆ ಅಂತರ್ಜಾಲದಲ್ಲಿ ಹುಡುಕಿದ ನ೦ತರವೇ ಇಂತದ್ದೊಂದು ಅದ್ಬುತ ಕಾರ್ಯಕ್ಕೆ ಸ್ಪೂರ್ತಿ ಪಡೆದು ಆರಂಭಿಸಿದ್ದು ಎಂದು ಹೇಳಿದ್ದಾರೆ.

Also read: ಸಮಾಜಿಕ ಕಾರ್ಯಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಈ ವ್ಯಕ್ತಿ, 6000 ಅನಾಥ ಹೆಣಗಳ ಅಂತ್ಯಕ್ರಿಯೆ ನಡೆಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ಮಾದರಿಯಾಗಿದ್ದಾರೆ.!

ಅದರಂತೆ ಭಾರತ ಸುಮಾರು 8 ಕೋಟಿ ಅಂಗವಿಕಲರ ಆಶ್ರಯ ತಾಣವಾಗಿದೆ, ಹಾಗೂ ಹತ್ತಿರತ್ತಿರ 70 ಪ್ರತಿಶತ ಜನರು ಹಳ್ಳಿಗಳಲ್ಲಿ ವಾಸವಾಗಿರುವುದರುಂದ ಅವರಿಗೆ ಚಿಕಿತ್ಸೆ ಸಿಗುವುದು ಕಷ್ಟವಾಗಿದೆ. “ಅವರೆಲ್ಲ ಮತ್ತೆ ಎದ್ದು ನಡೆದಾಡುಯುವುದನ್ನು ನೋಡಿದರೆ, ಮನಸ್ಸು ತುಂಬಿ ಬರುತ್ತದೆ. ನಾನು ಈ ಶಿಬಿರ ಯಶಸ್ವಿ ಆಗುವುದಕ್ಕೆ ಸಹಕರಿಸಿದ ಹಾಗೂ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ ತಿಳಿಸಲು ಬಯಸುತ್ತೇನೆ ಎಂದು ಹೇಳಿದ್ದು, ಈ ಸೇವೆ ಹೀಗೆ ದೊಡ್ಡ ಮಟ್ಟದಲ್ಲಿ ಮುಂದುವರೆಯಲಿದೆ ಎಂದು ಹೇಳಿದ್ದಾರೆ.