ಜೇನು ತುಪ್ಪದಿಂದ ಯಪ್ಪಾ ಇಷ್ಟೆಲ್ಲ ಲಾಭ ಇದೆ ಅಂತ ಮೊದ್ಲೇ ಗೊತ್ತಾಗಿದ್ರೆ ದೇವ್ರಿಗಿಂತ ಮುಂಚೆ ದೇಹಕ್ಕೆ ನೈವೇದ್ಯ ಮಾಡ್ಕೋತಿದ್ರಿ!!!

0
5210

ಕೆಮ್ಮು, ದಮ್ಮು, ಬಹುಮೂತ್ರ, ಮೂತ್ರದ ಉರಿ ನಿವಾರಣೆಗೆ:

ಅತ್ಯಂತ ಕಡಿಮೆ ಬೆಲೆಯಲ್ಲಿ ನಿಮ್ಮ ಜ್ಯೋತಿಷ್ಯದ ವರದಿ ಪಡೆಯಿರಿ!!

ಪ್ರತಿದಿನ ಮಲಗುವುದಕ್ಕಿಂತ ಮುಂಚೆ ಎರಡು ಚಮಚ ಜೇನು ತುಪ್ಪವನ್ನು ಕಾಯಿಸಿ ತಣಿಸಿದ ಒಂದು ಸಣ್ಣ ಕಪ್ಪು ನೀರಿನಲ್ಲಿ ಚೆನ್ನಾಗಿ ಮಿಶ್ರ ಮಾಡಿ ಸೇವಿಸಿದರೆ ಮೇಲಿನ ಸಮಸ್ಯೆ ನಿವಾರಣೆಯಾಗುತ್ತದೆ.

ಬಲಶಕ್ತಿ ಹೆಚ್ಚಲು, ನಿತ್ರಾಣ ನಿವಾರಣೆಗೆ, ನರಶಕ್ತಿಗಾಗಿ:

ಪ್ರತಿ ದಿನ ಬೆಳಿಗ್ಗೆ ಎರಡು ಚಮಚ ಜೇನನ್ನು, ಅರ್ಧ ಹೋಳು ನಿಂಬೆ ರಸದೊಂದಿಗೆ ಬೆರಿಸಿ, ಅರ್ಧ ಲೋಟ ನೀರಿನಲ್ಲಿ ಕಲಕಿ ಶರಬತ್ತಿನಂತೆ ಕುಡಿದರೆ ದೇಹಾರೋಗ್ಯ ವೃದ್ಧಿಯಾಗುತ್ತದೆ.

ಹೃಧಯಾಘಾತ, ಹೃದ್ರೋಗ ತಡೆಗೆ:

ಪ್ರತಿದಿನ ರಾತ್ರಿ ಮಲಗುವುದಕ್ಕಿಂತ ಮುಂಚೆ ಎರಡು ಚಮಚ ಜೇನನ್ನು ಮಿಶ್ರ ಮಾಡಿ ಕುಡಿಯುತ್ತಿರಬೇಕು.

ಎಲ್ಲ ಬಗ್ಗೆ ಹುಣ್ಣುಗಳು ಮಾಯಲು:

ರಕ್ತ, ಕೀವು ಸೋರುವುದನ್ನು ತಡೆಗಟ್ಟಲು ಜೇನುತುಪ್ಪವನ್ನು ಆಗಾಗ ಸವರುತ್ತಿರಬೇಕು. ಅಳಲೆಕಾಯಿ, ತಾರೇಕಾಯಿ, ನೆಲ್ಲಿಕಾಯಿ -ತ್ರಿಫಲಾ ರಸದಲ್ಲಿ, ಇಲ್ಲವೇ ತುಳಸಿ ಕೊಪ್ಪಿನ ಕಷಾಯದಲ್ಲಿ ತೊಳೆದು ಜೇನು ತುಪ್ಪವನ್ನು ಲೇಪನ ಮಾಡಿದರೆ ಹುಣ್ಣು ಗಾಯಗಳು ಬೇಗನೆ ಮಾಯುವವು.

ಸುಟ್ಟ ಗಾಯಗಳು, ಬೊಬ್ಬೆ, ಗುಳ್ಳೆಗಳಿಗೆ:

ಅತ್ಯಂತ ಕಡಿಮೆ ಬೆಲೆಯಲ್ಲಿ ನಿಮ್ಮ ಜ್ಯೋತಿಷ್ಯದ ವರದಿ ಪಡೆಯಿರಿ!!

ಸುಟ್ಟ ಗಾಯಗಳಿಗೆ ಜೇನು ತುಪ್ಪವನ್ನು ಸವರಬೇಕು.

ಕುರು, ಬಾವು, ಗುಳ್ಳೆಗಳಿಗೆ:

ಕುರು ಉಂಟಾಗಿದ್ದರೆ, ಕುರು ಉಂಟಾಗುವಂತಿದ್ದರೆ ಜೇನುತುಪ್ಪವನ್ನು ಸದರಿ ಜಾಗದ ಮೇಲೆ ದಪ್ಪನಾಗಿ ಲೇಪನ ಮಾಡಿದರೆ, ಕುರು ಒಡೆಯುವುದು.

ಮಕ್ಕಳ ನಾಯಿ ಕೆಮ್ಮು ಮತ್ತು ಇತರ ಕೆಮ್ಮುಗಳಿಗೆ:

ಜೇನು ತುಪ್ಪ ಒಂದು ಚಮಚ, ಬೆಳ್ಳುಳ್ಳಿ ರಸ ಅರ್ಧ ಚಮಚ ಎರಡು ಮಿಶ್ರ ಮಾಡಿ ಮಗುವಿಗೆ ನೆಕ್ಕಿಸಬೇಕು.

ವಾಕರಿಕೆ, ವಾಂತಿ, ಉಬ್ಬಳಿಕೆ ನಿವಾರಣೆಗೆ:

ಜೇನು ತುಪ್ಪದಲ್ಲಿ ಅಳಲೆಕಾಯಿಯ ನುಣ್ಣನೆ ಚೂರ್ಣವನ್ನು ಕಲಿಸಿ ನೆಕ್ಕಿಸುತ್ತಿದ್ದರೆ ವಾಕರಿಕೆ, ವಾಂತಿ ನಿವಾರಣೆಯಾಗುವುದು.

ಚರ್ಮದ ಸುಕ್ಕು, ಮುಖ,ಮೈ-ಕೈಗಳ ಸುಕ್ಕು ನಿವಾರಣೆಗೆ:

ಒಂದು ಚಮಚ ಜೇನು ತುಪ್ಪದಲ್ಲಿ ಕ್ಯಾರಟ್ ಇಲ್ಲವೇ ಸೌತೆಕಾಯಿ ರಸ ನಾಲ್ಕೈದು ಚಮಚದಲ್ಲಿ ಮಿಶ್ರ ಮಾಡಿ ಸುಕ್ಕುಬಂದಿರುವ ಭಾಗಗಳಿಗೆಲ್ಲ ಲೇಪನ ಮಾಡಿ ಒಂದೆರಡು ಗಂಟೆಗಳ ನಂತರ ಬಿಸಿ ನೀರಿನಲ್ಲಿ ತೊಳೆದುಕೊಳ್ಳಬೇಕು.

ಮೊಡವೆ, ಪ್ರಯಾಯದ ಬೊಕ್ಕೆ, ಚಿಬ್ಬು, ಕಲೆಗಳ ನಿವಾರಣೆಗೆ:

ಬೆಳಿಗ್ಗೆ ಮುಂಚಿತವಾಗಿ ಎದ್ದು ಅರ್ಧ ಚಮಚ ಜೇನುತುಪ್ಪವನ್ನು ಒಂದು ನಿಂಬೆಹಣ್ಣಿನ ರಸದಲ್ಲಿ ಚೆನ್ನಾಗಿ ಮಸೆದು ಮೊಡವೆ,ಬೊಕ್ಕೆ,ಚಿಬ್ಬು ಮುಂತಾದ ಕಲೆಗಳಿಗೆ ದಪ್ಪನಾಗಿ ಲೇಪಿಸಿಕೊಂಡು ೨-೩ ಗಂಟೆಗಳ ನಂತರ ಬಿಸಿನೀರಿನಿಂದ ತೊಳೆದುಕೊಳ್ಳಬೇಕು.

ಹೊಟ್ಟೆ ಹುಣ್ಣು, ಅಲ್ಸರಗೆ:

ಎರಡು ಚಮಚ ಜೇನು ತುಪ್ಪಕ್ಕೆ ಒಂದು ಪೂರಾ ನಿಂಬೆಹಣ್ಣಿನ ರಸ / ಕಿತ್ತಳೆ ಹಣ್ಣಿನ ರಸ/ ಮೋಸಂಬಿ ಹಣ್ಣಿನ ರಸ ಬೆರೆಸಿ ಚೆನ್ನಾಗಿ ಕಲಕಿ ದಿನದಲ್ಲಿ ಮೂರುಬಾರಿ ಊಟಕ್ಕೆ ಮುಂಚೆ ಕುಡಿಯುತ್ತಾ ಬಂದರೆ ಹೊಟ್ಟೆ ಹುಣ್ಣು ತಾನಾಗಿಯೇ ಕರಗಿ ಹೋಗುವುದು.

ಅನೀಮಿಯಾ, ರಕ್ತಹೀನತೆಗೆ:

ಜೇನಿನಲ್ಲಿ ತಾಮ್ರ, ಕಬ್ಬಿಣ,ಮುಂತಾದ ಲೋಹಾಂಶಗಳಿದ್ದು ಕೆಂಪು ಕಣಗಳನ್ನು ವೃದ್ಧಿಗೊಳಿಸುವುದು.

ವೃದ್ದಾಪ್ಯ ತಡೆಗೆ:

ಒಂದು ಕಪ್ಪು ಬಿಸಿನೀರಿನಲ್ಲಿ ಒಂದು ಚಮಚ ಜೇನು ತುಪ್ಪವನ್ನು ಮಿಶ್ರಣಮಾಡಿ ಸ್ವಲ್ಪ ಬಿಸಿ ಇರುವಾಗಲೇ ಪ್ರತಿದಿನ ಬೆಳಿಗ್ಗೆ ಕುಡಿದಲ್ಲಿ ವೃದ್ಯಾಪದ ನಿತ್ರಾಣವನ್ನು ಹೋಗಲಾಡಿಸಿ ವೃದ್ದಾಪ್ಯವನ್ನು ಮುಂದೂಡುವುದು.

ನಿದ್ರಾಹೀನತೆಗೆ:

ಒಂದು ಚಮಚ ಜೇನಿನಲ್ಲಿ, ನುಣ್ಣಗೆ ಪುಡಿ ಮಾಡಿ ಮಾಡಿದ ಸಬ್ಬಸಿಗೆ ಬೀಜದ ಚೂರ್ಣವನ್ನು ಒಂದು ಚುಟುಕಿಯಷ್ಟು, ಒಂದು ಅರ್ಧ ಕಪ್ಪು ನೀರಿನಲ್ಲಿ ಮಿಶ್ರ ಮಾಡಿ ಮಲಗುವುದಕ್ಕಿಂತ ಮುಂಚೆ ಕುಡಿದಲ್ಲಿ ನಿದ್ರೆ ಬರುವುದು.

ಕೇಶವೃದ್ಧಿಗೆ ಕೂದಲು ಸೊಂಪಾಗಿ ಬೆಳೆಯಲು:

ಶುದ್ಧವಾದ ಜೇನನ್ನು ಆಲ್ಕೋಹಾಲ್ ನೊಂದಿಗೆ, ಬೇಕಾಗುವಷ್ಟು ಚೆನ್ನಾಗಿ ಕಲಿಕಿ ಮಿಶ್ರ ಮಾಡಿ ನೆತ್ತಿ, ಕೂದಲುಗಳ ಬುಡಕ್ಕೆ ಹಚ್ಚಿ ೨-೩ ಗಂಟೆಗಳ ನಂತರ ಬಿಸಿ ನೀರಿನಲ್ಲಿ ತೊಳೆದುಕೊಳ್ಳಬೇಕು.ಕೂದಲು ಪ್ರಫುಲ್ಲವಾಗಿ, ಉದ್ದವಾಗಿ ಬೆಳೆಯುತ್ತದೆ.

ಸ್ತೂಲಕಾಯ ನಿವಾರಣೆಗೆ:

ಎರಡು ಚಮಚ ಜೇನುತುಪ್ಪ, ನಿಂಬೆ ಹಣ್ಣಿನ ರಸ ಎರಡು ಚಮಚವನ್ನು ಒಂದು ಗ್ಲಾಸ್ ಬಿಸಿ ನೀರಿನಲ್ಲಿ ಮಿಶ್ರ ಮಾಡಿ ಬೆಳಿಗ್ಗೆ ಎದ್ದ ಕೂಡಲೇ ಬರಿ ಹೊಟ್ಟೆಯಲ್ಲಿ ಸತತ ಮೂರು ತಿಂಗಳುಗಳ ಕಾಲ ಸೇವಿಸಿದರೆ ದೇಹದ ಕೊಬ್ಬು ಕರಗಿ ಸ್ತೂಲ ಕಾಯ ನಿವಾರಣೆಯಾಗುತ್ತದೆ..

ಅತ್ಯಂತ ಕಡಿಮೆ ಬೆಲೆಯಲ್ಲಿ ನಿಮ್ಮ ಜ್ಯೋತಿಷ್ಯದ ವರದಿ ಪಡೆಯಿರಿ!!