800 ವರ್ಷದ ಪರಂಪರೆ ಮುರಿದು ಇಬ್ಬರು ಹೆಂಗಸರು ಶಬರಿಮಲೆಯಲ್ಲಿ ದರ್ಶನ ಪಡೆದೇ ಬಿಟ್ಟಿದ್ದಾರೆ!!

0
499

ಶಮರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಿಯೇ ತೀರುತೇವೆ ಎಂದು ಪಣ ತೊಟ್ಟಿದ ಇಬ್ಬರು ಮಹಿಳೆಯರು ಇಂದು ಮುಂಜಾನೆ 3.45ಕ್ಕೆ ದೇಗುಲ ಪ್ರವೇಶಿಸಿ ಅಯ್ಯಪ್ಪನ ದರ್ಶನ ಪಡೆದು ಶಮರಿಮಲೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಬಿಂದು ಮತ್ತು ಕನಕದುರ್ಗಾ ಎಂಬ ಮಹಿಳೆಯರು ಪ್ರವೇಶ ಮಾಡಿದು, ಶತಮಾನಗಳಿಂದ ನಡೆದು ಬಂದ ಸಂಪ್ರದಾಯಕ್ಕೆ ಕೊನೆಗೂ ಬ್ರೇಕ್ ಬಿದ್ದಿದ್ದು, ಹಲವಾರು ಹೋರಾಟಗಳ ಬಳಿಕ ಮಹಿಳೆಯರು ದೇಗುಲ ಪ್ರವೇಶಿಸಿ ಅಯ್ಯಪ್ಪನ ದರ್ಶನ ಪಡೆದಿದ್ದಾರೆ.


Also read: ರಾಮನ ಬಗ್ಗೆ ಕೆಟ್ಟದಾಗಿ ಬರೆದ ಪ್ರೊಫೆಸರ್ ಭಗವಾನ್ ವಿರುದ್ದ ಕಿಡಿಕಾರಿದ ಪೇಜಾವರ ಶ್ರೀ; ಬಹಿರಂಗ ಚರ್ಚೆಗೆ ಆಹ್ವಾನ..

ಹೌದು ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಮಹಿಳೆಯರು ಪ್ರವೇಶಿಸಬಾರದು ಎಂದು ಸುಮಾರು ದಿನಗಳಿಂದ ವಿವಾದ ಶೃಷ್ಟಿಯಾಗಿ ಇದಕ್ಕೆ ಸುಪ್ರಿಂ ಕೋರ್ಟ್ ಕೂಡ ಶಬರಿಲೆ ದೇವಸ್ಥಾನಕ್ಕೆ ಮಹಿಳೆಯರು ಪ್ರವೇಶಿಸಬಹುದು ಎಂದು ಆದೇಶ ನೀಡಿತ್ತು. ಅದರ ಬಳಿಕವು ಅಯ್ಯಪ್ಪನ ಭಕ್ತರು ದೇಗುಲದ ಮುಂದೆ ಹೋರಾಟಕ್ಕೆ ಇಳಿದು ಮಹಿಳೆಯರು ಪ್ರವೇಶಿಸದಂತೆ ತಡೆದಿದ್ದರು. ಇದನ್ನೇ ಹಟವಾಗಿ ತೆಗೆದುಕೊಂಡ ಇಬ್ಬರು ಮಹಿಳೆಯರು ನಮ್ಮ ಮೇಲೆ ಎಂತಹ ಹಲ್ಲೆಗಳಾದರೂ ತಾವು ಅಯ್ಯಪ್ಪ ಸ್ವಾಮಿಯ ದರ್ಶನ ಮಾಡದೆ ಹಿಂದಿರುವುದಿಲ್ಲ ಎಂದು ಪ್ರತಿಭಟನಾಕಾರರಿಗೆ ಐವತ್ತು ವರ್ಷ ಕೆಳಗಿನ ಇಬ್ಬರು ಮಹಿಳೆಯರು ಸವಾಲು ಹಾಕಿದ್ದರು.


Also read: ಹೊಸ ವರ್ಷಕ್ಕೆ ಕೇಂದ್ರ ಸರ್ಕಾರದಿಂದ ಭರ್ಜರಿ ಗಿಫ್ಟ್; ಸಬ್ಸಿಡಿ ಸಹಿತ ಮತ್ತು ಸಬ್ಸಿಡಿ ರಹಿತ LPG ಸಿಲಿಂಡರ್ ದರದಲ್ಲಿ ಭಾರಿ ಇಳಿಕೆ..

ಈ ಹಿನ್ನೆಲೆಯಲ್ಲಿ ಮಕರ ಸಂಕ್ರಾಂತಿ ವೇಳೆಗೆ ದೇಗುಲ ಪ್ರವೇಶಿಸಬೇಕೆಂಬ ನಿಟ್ಟಿನಲ್ಲಿ ಮಹಿಳಾ ಕ್ರಾಂತಿ ಆರಂಭವಾಗಿತ್ತು. ಆದರೀಗ ತೀವ್ರ ವಿರೋಧದ ನಡುವೆಯೂ ಬುಧವಾರ ಮುಂಜಾನೆ 3.45ಕ್ಕೆ ಮಹಿಳೆಯರು ದೇಗುಲ ಪ್ರವೇಶಿಸಿದ್ದಾರೆ. ದೇಗುಲ ಪ್ರವೇಶಿಸಿದ ಮಹಿಳೆಯರನ್ನು ಕನಕದುರ್ಗಾ ಹಾಗೂ ಬಿಂದು ಎಂದು ಗುರುತಿಸಲಾಗಿದ್ದು, ತಾವು ದೇಗುಲ ಪ್ರವೆಶಿಸುತ್ತಿರುವ ವಿಡಿಯೋವನ್ನು ಖುದ್ದು ಮಹಿಳೆಯರೇ ಬಹಿರಂಗಪಡಿಸಿದ್ದಾರೆ. ಪೊಲೀಸ್ ಭದ್ರತೆಯೊಂದಿಗೆ ಅವರು ದೇವಾಲಯ ಪ್ರವೇಶಿಸಿದ್ದು, ಅವರ ದೇವಾಲಯ ಪ್ರವೇಶವನ್ನು ಪೊಲೀಸರೇ ಖಚಿತಪಡಿಸಿದ್ದಾರೆ. ಹಾಗೂ ಸುಪ್ರೀಂ ತೀರ್ಪಿನ ಬಳಿಕವೂ ಅಸಾಧ್ಯವೆನ್ನಲಾಗುತ್ತಿದ್ದ ಕಾರ್ಯವನ್ನು ಮಾಡಿದ್ದಾರೆ.

ದೇಗುಲ ಪ್ರವೇಶವನ್ನು ಕುರಿತು ಕನಕದುರ್ಗ:


Also read: ಬೆಂಗಳೂರಿನ ಪೊಲೀಸ್ ಅಧಿಕಾರಿಗಳಿಂದ ಜನರಿಗೆ ಹೊಸ ವರ್ಷಕ್ಕೆ ಇಂಥದ್ದೊಂದು ಉಡುಗೊರೆ ಹಿಂದೆಂದೂ ಸಿಕ್ಕೇ ಇರಲಿಲ್ಲ!!

ಅಯ್ಯಪ್ಪನ ದರ್ಶನ ಪಡೆದ ಕೇರಳ ಮೂಲದ ಬಿಂದು(42), ಸಿಪಿಐ(ಎಂಎಲ್​​) ಕಾರ್ಯಕರ್ತೆ ಕನಕದುರ್ಗ ಮಾತನಾಡಿ ಪೊಲೀಸ್​​ ಭದ್ರೆತೆಯಿಲ್ಲದಂತೆ ನಾವು ಮಧ್ಯರಾತ್ರಿ 12 ಗಂಟೆಗೆ ಪಂಬಾಗೆ ಬಂದಿಳಿದೆವು. ಪಂಬಾದಿಂದ ಮುಂಜಾನೆ 12.30 ರ ಸುಮಾರಿಗೆ ಕಾಲ್ನಡಿಗೆ ಮೂಲ ಶಬರಿಮಲೆ ಸನ್ನಿಧಿ ತಲುಪಿದೆವು. ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಿಯೇ ಹಿಂತಿರುವುದಾಗಿ ಪಣತೊಟ್ಟ ನಮ್ಮ ವಿರುದ್ಧ ಯಾರು ಪ್ರತಿಭಟಿಸಲಿಲ್ಲ. ನಾವು ಅಯ್ಯಪ್ಪನ ದರ್ಶಕ್ಕಾಗಿ ಮೆಟ್ಟಿಲು ಹತ್ತಿ ದೇವಸ್ಥಾನ ತಲುಪಿದೆವು. ಸುಮಾರು ಭಕ್ತಾದಿಗಳು ದೇವಸ್ಥಾನದಲ್ಲಿಯೇ ಇದ್ದರು, ನಮ್ಮನ್ನು ಯಾರು ಪ್ರಶ್ನಿಸಿಲ್ಲ ಎಂದು ಸಾಮಾಜಿಕ ಕಾರ್ಯಕರ್ತೆ ಕನಕದುರ್ಗ ಹೇಳಿದ್ದಾರೆ.
ಒಟ್ಟಾರೆಯಾಗಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಅವಕಾಶ ನೀಡಬೇಕು ಎಂದು ಸುಪ್ರೀಂಕೋರ್ಟ್ ತೀರ್ಪು ಆದೇಶದ ಹೊರತಾಗಿಯೂ ಪ್ರತಿಭಟನಾಕಾರರು ಮಹಿಳೆಯರಿಗೆ ಅಯ್ಯಪ್ಪನ ದರ್ಶನಕ್ಕೆ ಅವಕಾಶ ಕೊಡುತ್ತಿರಲಿಲ್ಲ. ಇದಕ್ಕೆ ಹಲವರು ವಿರೋಧ ವ್ಯಕ್ತಪಡಿಸುತ್ತಿದ್ದರು. ಈ ನಡುವೇ ಯಾರಿಗೂ ಗೊತ್ತಿಲದಾಗೇ ಇಬ್ಬರು ಮಹಿಳೆಯರು ಶಬರಿಮಲೆ ಪ್ರವೇಶಿಸಿದ್ದು, ಕೊನೆಗೂ ಅಯ್ಯಪ್ಪನ ದರ್ಶನ ಪಡೆದಿದ್ದಾರೆ. ಈ ಮೂಲಕ ಶಬರಿಮಲೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.