ಮೋದಿ ಸರ್ಕಾರದ ಮಹತ್ವದ ನಿರ್ಧಾರಗಳಲ್ಲಿ ಈ ನೋಟ್ ಬ್ಯಾನ್ ಕೂಡ ಸಹ ಒಂದು. ಇಂತಹ ಸಮಯದಲ್ಲಿ ಸಾಕಷ್ಟು ರೀತಿಯ ತೊಂದರೆಗಳನ್ನು ಜನಸಾಮಾನ್ಯರು ಅನುಭವಿಸಿದ್ದರು. ೫೦೦ ರೂ ಗಳಿಗೆ ಚಿಲ್ಲರೆ ಸಿಗುವುದು ಕಷ್ಟ ಇರುವ ಕಾಲದಲ್ಲಿ ೨೦೦೦ ನೋಟ್ ನೀಡಿ ಮತ್ತೊಷ್ಟು ಪೇಚಿಗೆ ಸಿಲುಕಿಸಿದ ಸರ್ಕಾರ ಮತ್ತೆ ೨೦೦ ನೋಟ್ ಬ್ಯಾನ್ ಮಾಡಿ ಒಂದು ಸಾವಿರ ಕಾಯಿನ್ ತರಲು ಮುಂದಾಗಿದೆ ಅನ್ನೋ ಹಲವು ವರದಿಗಳು ಬರುತ್ತಿ ವೆ.

ಆರ್ಬಿಐ ಮೂಲಗಳನ್ನು ಆಧಾರಿಸಿ ವರದಿ ಪ್ರಕಟವಾಗಿದ್ದು, 2000 ರೂ. ನೋಟು ಬದಲಿಗೆ 200 ರೂ. ನೋಟ್ ಗಳನ್ನು ಬಿಡುಗಡೆ ಮಾಡಲು ಆರ್ಬಿಐ ಮುಂದಾಗುತ್ತಿದ್ದು, ಈ ನೋಟುಗಳು ಆಗಸ್ಟ್ ತಿಂಗಳಲ್ಲಿ ಚಲಾವಣೆಗೆ ಬರುವ ಸಾಧ್ಯತೆಯಿದೆ.
ಮೈಸೂರಿನಲ್ಲಿರುವ ಪ್ರಿಂಟಿಂಗ್ ಪ್ರೆಸ್ ನಲ್ಲಿ ಈಗಾಗಲೇ 2000 ರೂ. ನೋಟ್ ಮುದ್ರಣ ಕಾರ್ಯ ಸ್ಥಗಿತಗೊಂಡಿದ್ದು, ಈ ಹಣಕಾಸು ವರ್ಷದಲ್ಲಿ 2 ಸಾವಿರ ರೂ.ನೋಟುಗಳನ್ನು ಮುದ್ರಿಸುವುದಿಲ್ಲ ಎಂದು ತಿಳಿದುಬಂದಿದೆ.

ಆರ್ಬಿಐ ಹಂತ ಹಂತವಾಗಿ 2 ಸಾವಿರ ರೂ. ನೋಟುಗಳ ಚಲಾವಣೆಯನ್ನು ಕಡಿಮೆ ಮಾಡುತ್ತಿದೆ ಎಂದು ಹೇಳಲಾಗುತ್ತಿದ್ದು, ಇದಕ್ಕೆ ಪೂರಕ ಎಂಬಂತೆ ಎಟಿಎಂಗಳಲ್ಲಿ ಈಗ ಹೆಚ್ಚಾಗಿ 2 ಸಾವಿರ ರೂ. ನೋಟುಗಳ ಬದಲಿಗೆ 500 ರೂ. ನೋಟುಗಳು ಸಿಗುತ್ತಿದೆ.
ಬ್ಯಾಂಕ್ ಗಳಿಗೆ ಆರ್ಬಿಐ ಈಗ ಹೆಚ್ಚಾಗಿ 500 ರೂ. ನೋಟುಗಳನ್ನು ಹೆಚ್ಚು ಪೊರೈಕೆ ಮಾಡುತ್ತಿದೆ. 2 ಸಾವಿರ ರೂ. ನೋಟುಗಳನ್ನು ಕೌಂಟರ್ ಗಳಲ್ಲಿ ಮಾತ್ರ ವಿತರಣೆ ಮಾಡುತ್ತಿದ್ದೇವೆ ಎಂದು ಬ್ಯಾಂಕ್ ಅಧಿಕಾರಿಗಳ ಹೇಳಿಕೆಯನ್ನು ಆಧಾರಿಸಿ ಕೆಲ ದಿನಗಳ ಹಿಂದೆ ಮಾಧ್ಯಮವೊಂದು ವರದಿ ಪ್ರಕಟಿಸಿತ್ತು.

ಒಂದು ಸಾವಿರದ ಕಾಯಿನ್ ಬಿಡಲು ಸರ್ಕಾರ ಚಿಂತನೆ ನೆಡೆಸಿದೆ ಎನ್ನಲಾಗುತ್ತಿದೆ ೨೦೦ ನೋಟ್ ಗೆ ಚಿಲ್ಲರೆ ಸಮಸ್ಯೆ ಮತ್ತು ಹಲವು ರೀತಿಯ ವ್ಯವರಿಕ ವಿಚಾರಗಳಿಗೆ ಸಮಸ್ಯೆ ಆಗುತ್ತಿರುವುದರಿಂದ ಒಂದು ಸಾವಿರ ಕಾಯಿನ್ ಬಿಡುಗಡೆ ಮಾಡಲಾಗುತ್ತಿದೆ ಎಂದು ವರದಿಗಳು ಬಂದಿವೆ.