ಬೆಂಗಳೂರಿನಲ್ಲಿ ಕೇವಲ 24 ಘಂಟೆಗಳಲ್ಲಿ 2400 ಚದರ ಅಡಿಯ ಮನೆ ಕಟ್ಟಿ ದಾಖಲೆ ನಿರ್ಮಾಣವಾಯಿತು.

0
1265

ಒಂದೇ ದಿನದಲ್ಲಿ 2400 ಚದರ ಅಡಿ ಮನೆ ನಿರ್ಮಿಸಿದ ಬೆಂಗಳೂರು ಉದ್ಯಮಿ ಪ್ಯಾಡಿ ಮೆನನ್

ನಾವು ಸಾಮಾನ್ಯವಾಗಿ ಮನೆ ಕಟ್ಟಲು 1 ವರ್ಷ ಅಥವಾ 6 ತಿಂಗಳು ಸಾಕಾಗಬಹುದು ಆದರೆ ಇಲ್ಲಿ ಕೇವಲ 24 ಗಂಟೆಗಳೊಳಗೆ ಮೂರು ಮಲಗುವ ಕೋಣೆ, 2400 ಚದರ ಅಡಿ ಮನೆ ನಿರ್ಮಾಣವಾಗುತ್ತಿದೆ. ಹಾಗಾದರೆ ಈ ಮನೆ ರಟ್ಟಿನ ಮನೆ ಅಂತ ಯೋಚನೆ ಮಾಡಬೇಡಿ, ಇದು ಕೂಡ ಗೋಡೆಗಳಿಂದ ನಿರ್ಮಿತವಾಗಿರುತ್ತವೆ. ಸಾಮಾನ್ಯವಾಗಿ ನಾವು ಕಟ್ಟೋ ಮನೆಗಳಿಗಿಂತ ಚನ್ನಾಗಿರತ್ತೆ ಅಂತೇ.

3-bedroom-house3-build-just-24-hours
source: thenewsminute.com

ಪೂರ್ವಭಾವಿ ತಂತ್ರಜ್ಞಾನವನ್ನು ಬಳಸಿ, ಸಾಮಾನ್ಯ ವಿಧಾನಗಳಿಗಿಂತ ಹೆಚ್ಚು ವೇಗವಾಗಿ ಮತ್ತು ಅಗ್ಗದ ಮನೆಗಳನ್ನು ನಿರ್ಮಾಣ ಮಾಡವುವ ಸಾಹಸಕ್ಕೆ ಕೈ ಹಾಕೋದವ್ರು ಪ್ಯಾಡಿ ಮೆನನ್. ರೆಬಲ್‌ ಡಿಸ್ರಪ್ಟಿವ್‌ ಬಿಲ್ದಿಂಡ್‌ ಟೆಕ್ನಾಲಜಿ ಸಂಸ್ಥೆಯು ಈ ಮನೆ ನಿರ್ಮಾಣಕ್ಕೆ ಹೊರಟಿತ್ತು.

3-bedroom-house-build-just-24-hours2
source: thenewsminute.com

ರೆಬಲ್‌ ಡಿಸ್ರಪ್ಟಿವ್‌ ಬಿಲ್ಡಿಂಗ್‌ ಟೆಕ್ನಾಲಜಿಯ ಸಿಇಒ ಪ್ಯಾಡಿ ಮೆನನ್‌ ಶನಿವಾರ ಬೆಂಗಳೂರಿನ ಹೊರವಲಯದಲ್ಲಿರುವ ರಾಜಾನುಕುಂಟೆ ತರಹುಣಸೆ ಅಗ್ರಹಾರ ಸಮೀಪದ ಸ್ಟೋನ್‌ ಹಿಲ್‌ ಇಂಟರ್‌ ನ್ಯಾಷನಲ್‌ ಶಾಲೆಯ ಬಳಿ ಪೂರ್ವಭಾವಿ ತಂತ್ರಜ್ಞಾನವನ್ನು ಬಳಸಿಕೊಂಡು 24 ಗಂಟೆಗಳೊಳಗೆ ಮೂರು ಮಲಗುವ ಕೋಣೆ, 2400 ಚದರ ಅಡಿ ಮನೆ ನಿರ್ಮಿಸುವ ಮೂಲಕ ವಿಶ್ವ ದಾಖಲೆಯನ್ನು ಸ್ಥಾಪಿಸಲು ಪ್ರಯತ್ನಿಸಿದರು. ಮನೆ ನಿರ್ಮಾಣ ಮಾಡುವ ಕಾರ್ಯ ಶನಿವಾರ ಬೆಳಗ್ಗೆ 6 ಗಂಟೆಗೆ ಆರಂಭವಾಗಿತ್ತು. ಭಾನುವಾರ ಬೆಳಗ್ಗೆ ಆರು ಗಂಟೆಗೆ ಮನೆ ನಿರ್ಮಾಣ ಕಾರ್ಯ ಮುಕ್ತಾಯವಾಗಬೇಕಿತ್ತು. ಆದರೆ, ಅಷ್ಟರೊಳಗೆ ಕೇವಲ ಚಾವಣಿ ಕೂರಿಸುವ ಕೆಲಸ ಮಾತ್ರ ಪೂರ್ತಿಯಾಗಿದ್ದ ಕಾರಣ ಲಿಮ್ಕಾ ವಿಶ್ವದಾಖಲೆಯಿಂದ ವಂಚಿತವಾಗಿದೆ.

3-bedroom-house-build-just-24-hours1
source: thenewsminute.com

ಮೂರು ಬೆಡ್‌ ರೂಂಗಳನ್ನು ಹೊಂದಿರುವ ಈ ಮನೆಯ ನಿರ್ಮಾಣ ಕಾರ್ಯಕ್ಕೆ 20 ಕಾರ್ಮಿಕರು ಸೇರಿದಂತೆ ಎಂಜಿನಿಯರ್‌ಗಳ ತಂಡ ಕೆಲಸ ಮಾಡಿತ್ತು. ಭಾನುವಾರ ಬೆಳಗ್ಗಿನ ವೇಳೆಗೆ ಮನೆ ಬಹುತೇಕ ತಯಾರಿಗಿದ್ದರೂ, ಕ್ರೇನ್‌ಗಳಲ್ಲಿ ಮಾಡುವ ಕೆಲಸ ಬಾಕಿಯಾದ ಕಾರಣ ಅವಧಿಯೊಳಗೆ ಪೂರ್ತಿ ಮಾಡಲು ಸಾಧ್ಯವಾಗಲಿಲ್ಲ.

”ಸೂಪರ್-ಫಾಸ್ಟ್ ವೇಗದಲ್ಲಿ ಜನರಿಗೆ ಸೂಪರ್-ಗುಣಮಟ್ಟದ ವಸತಿಯನ್ನು ಕೊಡುವ ನಿಟ್ಟಿನಲ್ಲಿ ಈ ಕಾರ್ಯವನ್ನು ಮಾಡುವ ಮೂಲ ಉದ್ದೇಶವಾಗಿದೆ” ಎಂದು ಪ್ಯಾಡಿ ಮೆನನ್‌ ಹೇಳಿದ್ದಾರೆ.

3-bedroom-house-build-just-24-hours
source: thenewsminute.com

ಇಷ್ಟೊಂದು ಕಡಿಮೆ ಟೈಮ್ ನಲ್ಲಿ ಚೆನ್ನಾಗಿರೋ ಮತ್ತು ಗುಣಮಟ್ಟ ಮನೆಯನ್ನು ಹೇಗೆ ಕಟ್ಟಲು ಸಾಧ್ಯ? ಇದಕ್ಕೆ ಉತ್ತರ ಕೊಟ್ಟ ಪ್ಯಾಡಿ ಮೆನನ್‌ ಹೀಗೆ ಹೇಳುತ್ತಾರೆ “ಇಂತಹ ಮನೆ ನಿರ್ಮಾಣಕ್ಕೆ ಪ್ರೀ ಕಾಸ್ಟ್ ಟೆಕ್ನಾಲಜಿ ಉಪಯೋಗಿಸುತ್ತಾರೆ, ಇದರಲ್ಲಿ
ಎಲೆಕ್ಟ್ರಿಕಲ್ ಫಿಟ್ಟಿಂಗಳು, ವಾಟರ್ ಪೈಪ್ಗಳೆನ್ನೆಲ್ಲಾ ಮೊದಲೇ ಗೋಡೆಗಳಲ್ಲಿ ಅಳವಡಿಸಿ ತಯಾರು ಮಾಡಿಕೊಂಡಿರುತ್ತೇವೆ. ಇದಕ್ಕೆ ಸ್ಪೆಷಲ್ ಅಚ್ಚುಗಳಿವೆ. ಉಳಿದ ಕೆಲಸವನ್ನು ಮಾಡಿದನಂತರ ಈ ಗೋಡೆಗಳನ್ನ ಕ್ರೇನ್ ಮೂಲಕ ಸಾಗಿಸಿ ಮನೆ ನಿರ್ಮಾಣ ವಾಗುತ್ತದೆ.”