ಈ ಎಣ್ಣೆಯ ಎರಡೇ ಎರಡು ಹನಿ ಸಾಕು ನಿಮ್ಮ ಹೊಟ್ಟೆಯ ಬೊಜ್ಜು ಕರಗಿಸೋಕೆ, ಇದಕ್ಕಿಂತ ಬೊಜ್ಜು ಕರಗಿಸುವ ಸುಲಭ ಉಪಾಯ ಇನ್ನೊಂದಿಲ್ಲ!!

0
4079

ಸಾಮಾನ್ಯವಾಗಿ ನಾವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡಿರುತ್ತೇವೆ, ಈ ರೂಡಿ ನಮ್ಮ ಸುತ್ತಮುತ್ತಲಿನ ಬಹುತೇಕ ಜನರಲ್ಲಿ ಇದೆ ಆದರೆ ಕೆಲವರು ಅಂದರೆ ಹೊಟ್ಟೆಯ ಭಾಗದಲ್ಲಿ ಕೊಬ್ಬು ಶೇಖರಣೆಯಾಗಿರುವಂತವರು ತುಂಬಾ ದಪ್ಪವಾಗಿ ಇರುವವರು ತಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಇಚ್ಚಿಸುವವರು ಬೆಳಿಗ್ಗೆನ ಸಮಯದಲ್ಲಿ ಬಿಸಿನೀರಿನ ಜೊತೆಗೆ ನಿಂಬೆಹಣ್ಣು ಮತ್ತು ಜೇನುತುಪ್ಪವನ್ನು ಕುಡಿಯುವುದು ಒಳ್ಳೆಯದು.

ಫ್ಲ್ಯಾಟ್ ಆಬ್ಸ್ ಕಾಣಿಸುವವರಿಗೆ ಕೂಡಾ ಸ್ವಲ್ಪ ಹೊಟ್ಟೆ ಬೊಜ್ಜಿದ್ದೇ ಇರುತ್ತದೆ. ಅದು ಸಾಮಾನ್ಯ. ಆದರೆ, ಅತಿಯಾದ ಹೊಟ್ಟೆಯ ಬೊಜ್ಜು ಆರೋಗ್ಯದ ಮೇಲೆ ಕೆಡುಕುಂಟು ಮಾಡುವಷ್ಟು ಇತರೆ ಬೊಜ್ಜು ಮಾಡುವುದಿಲ್ಲ. ನಮ್ಮ ಕೆಲ ಫ್ಯಾಟ್ ಚರ್ಮದ ಕೆಳಗೇ ಇರುತ್ತದೆ. ಮತ್ತೆ ಕೆಲವು ಬಹಳ ಆಳದಲ್ಲಿ ಇರುತ್ತದೆ. ಅಂದರೆ, ಹೃದಯ, ಶ್ವಾಸಕೋಶ, ಲಿವರ್ ಹಾಗೂ ಇತರೆ ಅಂಗಗಳ ಸುತ್ತ. ಈ ಆಳದ ಫ್ಯಾಟ್‌ನ್ನೇ ವಿಸೆರಲ್ ಎನ್ನುವುದು.

ಇದು ಎಲ್ಲ ಅಂಗಗಳಿಗೆ ಕುಶನ್ ನೀಡುವುದರಿಂದ ಸ್ವಲ್ಪ ಮಟ್ಟಿಗೆ ಇರುವುದು ಅಗತ್ಯ. ಆದರೆ, ಅತಿಯಾದ ಕುಶನ್ ಇದ್ದಾಗ ಅದು ಸಮಸ್ಯೆಯಾಗುತ್ತದೆ. ತೆಳ್ಳಗಿರುವವರಿಗೆ ಕೂಡಾ ಈ ವಿಸೆರಲ್ ಹೆಚ್ಚಿರಬಹುದು. ಇದರಿಂದ ಹೈ ಬಿಪಿ, ಟೈಪ್ 2 ಡಯಾಬಿಟೀಸ್, ಹೃದಯ ಸಮಸ್ಯೆಗಳು, ಮರೆವು, ಕೆಲ ಕ್ಯಾನ್ಸರ್‌ಗಳು ಕಾಣಿಸಿಕೊಳ್ಳಬಹುದು. ಹಾಗಾಗಿಯೇ ಈ ಫ್ಯಾಟ್ ಕರಗಿಸುವುದು ಅಗತ್ಯ. ಸಧ್ಯ ಹೊಟ್ಟೆಯ ಬೊಜ್ಜು ಕರಗಿಸಲು ಹೀಗೆ ಮಾಡಿ.

ಬೇಕಾಗುವ ಪದಾರ್ಥಗಳು: 50 ಗ್ರಾಂ ಸಾಸಿವೆ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ, 3 ಚಕ್ಕೆ ಚೂರುಗಳು, 1 ಚಮಚ ಅಜ್ವಾನ, 4 ಕರ್ಪೂರ.

ಮಾಡುವ ವಿಧಾನ: ಬಾಣಲೆಗೆ ಎಣ್ಣೆ ಬಿಟ್ಟು ಬಿಸಿ ಮಾಡಿ. ನಂತರ ಇದಕ್ಕೆ ಚಕ್ಕೆ, ಅಜ್ವಾನ, ಕರ್ಪೂರದ ಪುಡಿ ಹಾಕಿ ಚೆನ್ನಾಗಿ ಕುದಿಸಿ. ಇದು ತಣ್ಣಗಾದ ಮೇಲೆ ಬಾಟಲಿಗೆ ಹಾಕಿ ಸ್ಟೋರ್ ಮಾಡಿ. ಇದು 6 ತಿಂಗಳಾದರೂ ಕೆಡುವುದಿಲ್ಲ.

ಬಳಸುವ ವಿಧಾನ: ಈ ಎಣ್ಣೆಯನ್ನು ಅರ್ಧ ಚಮಚ ತೆಗೆದುಕೊಂಡು ನಿಮ್ಮ ದೇಹದಲ್ಲಿ ಬೊಜ್ಜಿರುವ ಜಾಗ ಅಂದರೆ ಹೊಟ್ಟೆಯ ಸುತ್ತಾ ಹಚ್ಚಿ ಮಸಾಜ್ ಮಾಡಿ. ಹೀಗೆ ದಿನವೂ ಮಾಡಿದರೆ ನಿಮ್ಮ ಹೋಟ್ಟೆ ಬೇಗ ಕರಗುತ್ತದೆ.

ಇನ್ನು ಹೊಟ್ಟೆಗೆ ಬಟ್ಟೆಯನ್ನು ಬಿಗಿಯಾಗಿ ಕಟ್ಟುವುದರಿಂದಲೂ ಬೊಜ್ಜು ಕರಗುತ್ತದೆ. ವೀವು ತಿನ್ನುವ ಆಹಾರದ ಬಗ್ಗೆ ಗಮನವಿರಲಿ.

Also read: ಒಂದು ವಾರದಲ್ಲಿ ಹೊಟ್ಟೆಯ ಸುತ್ತಲಿರುವ ಕೊಬ್ಬನ್ನು ಕರಗಿಸೋ ವಿಧಾನ