ಪತಿಯ ಸಾವಿನ ಸುದ್ದಿ ತಿಳಿದು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿ ಮಕ್ಕಳು; ಮಹಿಳೆಯನ್ನು ಬದುಕಿಸಲು ಪ್ರಯತ್ನಿಸಿದ ಸಾಕು ನಾಯಿ.!

0
717

ಮನೆಯ ಯಜಮಾನನ ಸಾವಿನ ಸುದ್ದಿ ತಿಳಿದು ಒಂದೇ ಕುಟುಂಬದ ಮೂವರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು, ಕವಿತಾ ಮದ್ದಣ್ಣ (54) ಎಂಬವರ ಮೃತದೇಹ ಪತ್ತೆಯಾಗಿದ್ದು, ಉಳಿದಂತೆ ಇವರ ಪುತ್ರ ಕೌಶಿಕ್ ಮಂದಣ್ಣ (22), ಪುತ್ರಿ ಕಲ್ಪಿತಾ ಮಂದಣ್ಣ (20)ಅವರಿಗಾಗಿ ಶೋಧಾ ಕಾರ್ಯ ಮುಂದುವರಿದಿದೆ. ಅವರು ಮೈಸೂರಿನ ಪಿ.ಎಸ್.ನಗರದವರು ಎಂದು ಗುರುತಿಸಲಾಗಿದ್ದು, ಮೂಲತಃ ಕೊಡಗು ಜಿಲ್ಲೆಯ ವೀರಾಜಪೇಟೆ ಕಡಂಗಳ ಬಳ್ಳಚಂಡ ಕುಟುಂಬದವರು. ಇವರು ಸಾಕು ನಾಯಿಯ ಜೊತೆಗೆ ನದಿಗೆ ಹಾರಿದರು, ಈ ವೇಳೆ ಮಹಿಳೆಯನ್ನು ಕಾಪಾಡಲು ನಾಯಿ ಹರಸಾಹಸ ಮಾಡಿ ಸ್ವಲ್ಪ ದೂರದ ವರೆಗೆ ನೀರಲ್ಲಿ ಎಳೆದುಕೊಂಡು ಬಂದಿದೆ ಎಂದು ಸ್ಥಳಿಯರು ತಿಳಿಸಿದ್ದಾರೆ.

Also read: ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ವ್ಯಕ್ತಿ ಅನಾಥಾಶ್ರಮಕ್ಕೆ ನೀಡಿದ ದೇಣಿಗೆ ಹಣದಿಂದಲೇ ಅಂತ್ಯಕ್ರಿಯೆ.!

ಒಂದೇ ಕುಟುಂಬದ ಮೂವರು ಆತ್ಮಹತ್ಯೆ?

ಮೃತ ಕವಿತಾ ಮಂದಣ್ಣ ಅವರ ಪತಿ ಕಿಶನ್ ಎಂಬವರು ಓರ್ವ ಕೃಷಿಕರಾಗಿದ್ದು, ಕಿಶನ್ ಅವರು ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿ ದ್ದರು. ತೀವ್ರ ಹುಡುಕಾಟದ ಬಳಿಕ ನಿನ್ನೆ ಮಧ್ಯಾಹ್ನದ ವೇಳೆ ಅವರ ಮೃತ ದೇಹ ಪತ್ತೆಯಾಗಿತ್ತು. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲು ಆಸ್ಪತ್ರೆಗೆ ಕೊಂಡುಹೋದ ವೇಳೆ ಕಿಶನ್ ಅವರ ಸಾವಿನ ದುಃಖದಿಂದ ಜಾರಿದ ಕುಟುಂಬದ ಸದಸ್ಯರು ತಮ್ಮ ಸಂಬಂಧಕರಿಗೆ ಪತ್ರ ಬರೆದು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದರು ಎಂದು ಹೇಳಲಾಗಿದೆ.

Also read: 2 ವರ್ಷದಿಂದ 12 ವರ್ಷದ ಬಾಲಕಿ ಮೇಲೆ 30 ಮಂದಿಯಿಂದ ನಿರಂತರ ಅತ್ಯಾಚಾರ; ಇದರಲ್ಲಿ ಬಾಲಕಿಯ ತಂದೆಯೇ ಆರೋಪಿ.!

ಪುತ್ರ ಕೌಶಿಕ್ ಸಹ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದು, ಈಚೆಗಷ್ಟೆ ಕೆಲಸ ಬಿಟ್ಟಿದ್ದರು. ಸಂಬಂಧಿಕರೊಂದಿಗೆ ಹೆಚ್ಚು ಸಂಪರ್ಕದಲ್ಲಿ ಇವರು ಇದ್ದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮನೆ ಯಜಮಾನನ ಸಾವಿನಿಂದ ಶಾಕ್ ಅದ ಈ ಕುಟುಂಬ ಪತ್ರವನ್ನು ಬರೆದಿಟ್ಟು ಮಂಗಳೂರು ಕಡೆಗೆ ಅಗಮಿಸಿತ್ತು. ರಾತ್ರಿ ಸುಮಾರು 10.30 ರ ವೇಳೆ ಈ ಕುಟುಂಬ ಬಂಟ್ವಾಳಕ್ಕೆ ಬಂದು ನೇತ್ರಾವತಿ ನದಿಯ ಸಮೀಪವಿರುವ ಹೋಟೋಲೊಂದರ ಪಕ್ಕ ತಮ್ಮ ಇಕೋ ಕಾರು ನಿಲ್ಲಿಸಿ ನದಿಯ ಕಡೆಗೆ ನಡೆದುಕೊಂಡು ಬಂದಿದ್ದಾರೆ.ಅಲ್ಲದೆ ಜೊತೆಗೆ ಅವರ ಪ್ರೀತಿಯ ನಾಯಿಯನ್ನು ಕರೆದುಕೊಂಡು ಬಂದಿದ್ದಾರೆ.

Also read: ಸಾಹಸಮಯ ರೈಲ್ವೆ ಹಳಿ ಮೇಲೆ ಟಿಕ್‌ ಟಾಕ್‌ ವಿಡಿಯೋ ಮಾಡಲು ಹೋಗಿ ಅದೇ ರೈಲಿಗೆ ಸಿಕ್ಕು ಪ್ರಾಣ ಕಳೆದುಕೊಂಡ ಯುವಕರು.!

ಗಂಡನ ಸಾವಿನ ಹಿನ್ನಲೆಯಲ್ಲಿ ಸಾಯಲೆಂದೆ ನಿರ್ಣಯ ಮಾಡಿ ಬಂದ ಈ ಕುಟುಂಬ ತಾಯಿ ಜೊತೆ ಇಬ್ಬರು ಮಕ್ಕಳು ನದಿಗೆ ಹಾರಿದ್ದಾರೆ. ಇವರು ಹಾರಿದಾಗ ಸ್ಥಳೀಯ ರಿಕ್ಷಾ ಚಾಲಕರೋರ್ವರು ನೋಡಿ ಸ್ಥಳೀಯ ಈಜುಗಾರರಲ್ಲಿ ತಿಳಿಸಿದ್ದಾರೆ.ಕೂಡಲೇ ರಕ್ಷಣೆಗೆ ಮುಂದಾದರಾದರೂ ರಾತ್ರಿ ವೇಳೆ ಯಾದ್ದರಿಂದ ಅವರ ರಕ್ಷಣೆ ಕಷ್ಟ ಸಾಧ್ಯವಾಯಿತು.
ಕವಿತಾ ಅವರು ತನ್ನ ಪ್ರೀತಿಯ ನಾಯಿಯನ್ನು ಹಿಡಿದುಕೊಂಡು ಜೊತೆಯಾಗಿ ಹಾರಿದ್ದರು. ಗೂಡಿನಬಳಿ ಹಳೇ ಸೇತುವೆ ಬಳಿ ಮಹಿಳೆಯನ್ನು ರಕ್ಷಿಸಿದ್ದಾರೆ. ಮಹಿಳೆಯನ್ನು ಬದುಕಿಸಲು ನಾಯಿ ಭಾರೀ ಪ್ರಯತ್ನ ನಡೆಸಿರುವುದು ಕಂಡು ಬಂದಿದೆ ಎಂದು ಅಗ್ನಿಶಾಮಕ ದಳ ಸಿಬ್ಬಂದಿ ತಿಳಿಸಿದ್ದಾರೆ. ತನ್ನನ್ನು ಮುದ್ದಿನಿಂದ ಸಾಕುತ್ತಿದ್ದ ಮಹಿಳೆಯ ಸಾವಿನಿಂದ ನಾಯಿ ಕಂಗಾಲಾಗಿದ್ದು, ಆಹಾರ ಸೇವಿಸಲು ಹಿಂದೇಟು ಹಾಕುತ್ತಿದೆ. ಮಹಿಳೆ ಪ್ರಜ್ಞಾಹೀನ ಸ್ಥಿತಿಯಲ್ಲಿ ತುಂಬೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು.ಆದರೆ ತುಂಬೆ ಆಸ್ಪತ್ರೆಯಲ್ಲಿ ಮಹಿಳೆ ರಾತ್ರಿ ಸುಮಾರು 11.45ಕ್ಕೆ ಕೊನೆಯುಸಿರೆಳೆದಿದ್ದಾರೆ. ಇನ್ನಿಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.