ಭ್ರಷ್ಟಾಚಾರ ಮುಚ್ಚಿದೊಡಕ್ಕೆ ಏನೇನ್ ಮಾಡ್ತಾರೆ ನೋಡಿ; ಈ ಮುಖ್ಯಮಂತ್ರಿಯ 3 ವರ್ಷದ ಮೊಮ್ಮಗನ ಬಳಿ ಇದೆ ಕೋಟ್ಯಂತರ ರೂಪಾಯಿ ಆಸ್ತಿ!!

0
424

ರಾಜಕೀಯ ರಂಗವೆಂದರೆ ಹಾಗೆಯೇ ತಂದೆಗಿಂತ ಮಗನ ಆಸ್ತಿ ಜಾಸ್ತಿ, ಮಗನಕ್ಕಿಂತ ಮೊಮ್ಮಗನ ಆಸ್ತಿ ಜಾಸ್ತಿ ಇವರೆಲ್ಲರಿಗಿಂತ ಹೆಂಡತಿಯ ಆಸ್ತಿ ಜಾಸ್ತಿ. ಏನೂ ಇಲ್ಲದ ಒಬ್ಬ ವ್ಯಕ್ತಿ ರಾಜಕೀಯಕ್ಕೆ ಇಳಿದರೆ ಸೋನ್ನೆಯಿರುವ ಆಸ್ತಿ ಸಾವಿರಾರು ಕೊಟ್ಟಿ ಆಗುವುದರಲ್ಲಿ ಯಾವುದೇ ಅನುಮಾನವೇ ಇಲ್ಲ, ಇದು ನಮ್ಮ ದೇಶದಲ್ಲಿ ನಡೆಯುತ್ತಿರುವ ರಾಜಕೀಯ ಸೇವೆ ಅನ್ನುವುದಕ್ಕಿಂತ ಹಗಲು ಕಳ್ಳತನ ಎಂದರೆ ತಪ್ಪಾಗಲಾರದು. ಇದರ ಹಿನ್ನೆಲೆಯಾಗಿ ರಾಜಕೀಯ ವ್ಯಕ್ತಿಗಳೆ ಏಕೆ ಶ್ರೀಮಂತರೂ? ದೇಶದಲ್ಲಿ ಹೆಚ್ಚು ಸಂಬಳ ಬರುವ ಹುದ್ದೆ ರಾಜಕೀಯವೇ? ಇಂತಹ ಹತ್ತಾರು ಪ್ರಶ್ನೆಗಳು ಹುಟ್ಟುವುದು ಸಹಜವೇ. ಏಕಂದರೆ ಸದ್ಯದ ರಾಜಕೀಯ ಸ್ಥಿತಿ ಹಾಗಿದೆ. ಇದಕ್ಕೆ ಒಂದು ಸೂಕ್ತ ಉದಾಹರಣೆ ಎಂದರೆ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು.

Also read: ಬೆಂಗಳೂರಿನ ಮೂಲ ಸೌಕರ್ಯಗಳು ಮಾತ್ರ ಸುಧಾರಣೆ ಕಾಣುತ್ತಿಲ್ಲ, ಆದರೆ BBMP ಮಾತ್ರ ತೆರಿಗೆ ಏರಿಕೆ ಮಾಡುತ್ತಲೇ ಇದೆ, ಇದು ಸರೀನಾ??

ಹೌದು CBI ತನಿಖೆಗೆ ಅನುಮತಿ ಪಡೆಯಲು ಸೂಚಿಸಿದ ಆಂಧ್ರಪ್ರದೇಶ ಸಿಎಂ, ತೆಲುಗುದೇಶಂ (ಟಿಡಿಪಿ) ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರ ಮೊಮ್ಮಗ ಅವರಿಗಿಂತ 6 ಪಟ್ಟು ಹೆಚ್ಚು ಆಸ್ತಿಯನ್ನು ಹೊಂದಿದ್ದಾನೆ ಅಂತೆ. ಕೇಳಲು ವಿಚಿತ್ರವಾದರೂ ಇದು ಸತ್ಯವಾಗಿದೆ. ಚಂದ್ರಬಾಬು ನಾಯ್ಡು ಸತತವಾಗಿ 8ನೇ ವರ್ಷ ತಮ್ಮ ಆಸ್ತಿ ವಿವರಗಳನ್ನು ಘೋಷಣೆ ಮಾಡಿದ್ದು, ಅವರಿಗಿಂತ ಮೊಮ್ಮಗ 6 ಪಟ್ಟು ಹೆಚ್ಚು ಆಸ್ತಿಯನ್ನು ಹೊಂದಿದ್ದು. ಚಂದ್ರಬಾಬು ನಾಯ್ಡು ಅವರ ಬಳಿ ಬರಿ 2.99 ಕೋಟಿ ರೂ. ಆಸ್ತಿ ಇದೆ ಎಂದು ಘೋಷಣೆ ಮಾಡಿಕೊಂಡಿದ್ದಾರೆ.

Also read: ಹಾಸನ್ ಜಿಲ್ಲಾ ಕಂದಾಯ ಇಲಾಖೆ ಗ್ರಾಮ ಲೆಕ್ಕಿಗರ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಆಸ್ತಿ ವಿವರದಲ್ಲಿ ಏನಿದೆ?

ನಾಯ್ಡು ಅವರ 3 ವರ್ಷದ ಮೊಮ್ಮದ ನಾರಾ ದೇವಾಂಶ್ 18.71 ಕೋಟಿ ಆಸ್ತಿಯನ್ನು ಹೊಂದಿದ್ದಾನೆ. ನಾಯ್ಡು ಅವರ ಮೊಮ್ಮಗ 16.17 ಕೋಟಿ ರೂ. ಮೌಲ್ಯದ ಮನೆಯನ್ನು ಹೈದರಾಬಾದ್‍ನ ಜುಬ್ಲಿ ಹಿಲ್ಸ್ ನಲ್ಲಿ ಹೊಂದಿದ್ದು, 2.49 ಕೋಟಿ ರೂ. ಠೇವಣಿ ಇಟ್ಟಿದ್ದಾರೆ. ಹೆರಿಟೇಜ್ ಫುಡ್ಸ್ ಸಂಸ್ಥೆಯ ಮುಖ್ಯಸ್ಥರಾಗಿರುವ ನಾಯ್ಡು ಅವರ ಪತ್ನಿ ಭುವನೇಶ್ವರಿ ಅವರು ಕುಟುಂಬದಲ್ಲಿ ಹೆಚ್ಚು ಆಸ್ತಿಯನ್ನು ಹೊಂದಿದ್ದಾರೆ. ದೇವಾಂಶ್, ಚಂದ್ರಬಾಬು ನಾಯ್ಡು ಮಾತ್ರವಲ್ಲದೇ ತಂದೆ ನಾರಾ ಲೋಕೇಶ್ ಅವರಗಿಂತಲೂ ಹೆಚ್ಚಿನ ಆಸ್ತಿಯನ್ನು ಹೊಂದಿದ್ದಾನೆ.

Also read: ಪ್ಯಾನ್ ಕಾರ್ಡ್​ ನಿಯಮದಲ್ಲಿ ಆದಾಯ ತೆರಿಗೆ ಇಲಾಖೆ ತಂದ ಬದಲಾವಣೆ: Pan Card ಪಡೆಯುವ ಮುನ್ನ ಈ ಮಾಹಿತಿ ನೋಡಿ..

ಒಟ್ಟಾರೆಯಾಗಿ; ಕಳೆದ 8 ವರ್ಷಗಳಿಂದಲೂ ಚಂದ್ರಬಾಬು ನಾಯ್ಡು ಸ್ವಯಂಪ್ರೇರಿತವಾಗಿಯೇ ತಮ್ಮ ಆಸ್ತಿ ವಿವರ ಘೋಷಿಸಿಕೊಂಡು ಬರುತ್ತಿದ್ದು. ಘೋಷಣೆಯಾದ ಮಾಹಿತಿ ಪ್ರಕಾರ, ಚಂದ್ರಬಾಬು ನಾಯ್ಡು ಅವರ ಆಸ್ತಿ ಮೌಲ್ಯ 2.53 ಕೋಟಿ ಇದ್ದದ್ದು 3ಕೋಟಿ ರೂ. ಆಗಿದೆ. ಅಂದರೆ, ಸುಮಾರು 47 ಲಕ್ಷ ರೂಪಾಯಿ ಹೆಚ್ಚಳವಾಗಿದೆ. ಅವರ ಹೆಂಡತಿಯ ಹೆಸರಲ್ಲಿರುವ ಆಸ್ತಿಯು 31 ಕೋಟಿ ತಲುಪಿದ್ದು, ಒಂದು ವರ್ಷದಲ್ಲಿ 6 ಕೋಟಿ ಹೆಚ್ಚಾಗಿದೆ. ನಾಯ್ಡು ಮಗ ನರ ಲೋಕೇಶ್ ಅವರ ಆಸ್ತಿಯು 6.19 ಕೋಟಿ ಹೆಚ್ಚಾಗಿ 21.40 ಕೋಟಿ ತಲುಪಿದೆ. ನರ ಪತ್ನಿ ಬ್ರಹ್ಮಿಣಿ ಅವರ ಆಸ್ತಿ ಮೌಲ್ಯ 15.01 ಕೋಟಿ ಇದ್ದದ್ದು 7.72 ಕೋಟಿಗೆ ಕುಸಿದಿದೆ. ಅವರ 3 ವರ್ಷದ ಮಗ ದೇವಾಂಶ್​ನ ಹೆಸರಿನಲ್ಲಿದ್ದ ಆಸ್ತಿ ಮೌಲ್ಯ 7.17 ಕೋಟಿಯಷ್ಟು ಹೆಚ್ಚಳಗೊಂಡು 18.71 ಕೋಟಿ ರೂ. ತಲುಪಿದೆ.