ಬೆಂಗಳೂರು ‘ನಗರಕ್ಕೆ ಇಂದು ಐದು ಜನ ಪೊಲೀಸ್ ಆಯುಕ್ತರುಗಳು’ ನೇಮಕ ಮಾಡಲಾಗಿದೆ ಎನ್ನುವ ಸುದ್ದಿ ರಾಜ್ಯದ ತುಂಬೆಲ್ಲ ವೈರಲ್ ಆಗಿದೆ ಆದರೆ ನೇಮಕವಾದ ಐದು ಪುಟಾಣಿ ಆಯುಕ್ತರ ಕತೆಕೆಳಿದರೆ ಹೃದಯ ಹಿಡುತ್ತೆ. ಏಕೆಂದರೆ ಯಾವ ಸಮಯದಲ್ಲಿ ವಿಧಿ ಅವರನ್ನು ಕರೆಯುತ್ತೋ ಗೊತ್ತಿಲ್ಲ, ಆದರೆ ತಮ್ಮ ಕನಸು ಮಾತ್ರ ಸಾಯಬಾರದು ಎನ್ನುವ ಮಕ್ಕಳನ್ನು ಇಂದು ನಗರದ ಪೊಲೀಸ್ ಆಯುಕ್ತರಾಗಿ ನೇಮಕ ಮಾಡಿದ್ದು ನೋಡಿದವರಿಗೆ ಕಣ್ಣಲ್ಲಿ ನೀರು ಬರಿಸುತ್ತೆ.
ಹೌದು ವಿಧಿ ನಮಗೆ ನಿಡಿದಷ್ಟು ದಿನ ಭೂಮಿ ಮೇಲೆ ಜೀವಿಸಬೇಕು, ಅದರಲ್ಲಿ ಏನಾದರು ಒಂದು ಸಾಧನೆ ಮಾಡಬೇಕು ಎನ್ನುವುದು ಎಲ್ಲ ಮಕ್ಕಳಲ್ಲೂ ಇರುತ್ತೆ. ಆದರೆ ವಿಧಿಯ ಕೆಟ್ಟಗಳಿಗೆ ಎನ್ನುವಂತೆ ಚಿಕ್ಕ ಮಕ್ಕಳೇ ಖಾಯಿಲೆಗೆ ಬಲಿಯಾಗಿ ತಮ್ಮ ಕನಸ್ಸನು ಅರ್ಧದಲ್ಲೇ ಬಿಟ್ಟು ಹೋಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿರುವ ಐದು ಮಕ್ಕಳ ಕನಸು ಕೇಳಿದರೆ ಹೆಮ್ಮೆಯಾಗುತ್ತೆ ಆದರೆ ಅವರ ಭವಿಷ್ಯ ಕೇಳಿದರೆ ನೋವಾಗುತ್ತೆ. ಏಕೆಂದರೆ ಈ ಐದು ಮಕ್ಕಳು ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದು ಕೊನೆಯ ಆಸೆಯನ್ನು ಬೆಂಗಳೂರು ನಗರದ ನೂತನ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಈಡೇರಿಸುವ ಮೂಲಕ ಮೆಚ್ಚುಗೆ ಪಡೆದಿದ್ದಾರೆ.
Also read: ವಿಕ್ರಮ್ ಲ್ಯಾಂಡರ್ ಪತ್ತೆ; ಸಹಾಯಕ್ಕೆ ಬಂದ ಮಿತ್ರ ಇಸ್ರೇಲ್ ದೇಶ, ಯಶಸ್ವಿಯಾಗುತ್ತ ಚಂದ್ರಯಾನ-2??
ಇಂತಹ ಮುದ್ದ ನತದೃಷ್ಟ ಮಕ್ಕಳಾದ ರುತನ್ ಕುಮಾರ್, ಮಹಮದ್ ಶಕೀಬ್, ಅರ್ಷಾಥ್ ಪಾಷಾ, ಶ್ರಾವಣಿ ಬಂಟ್ಟಾಳ, ಸಯ್ಯದ್ ಇಮಾದ್ ಸೇರಿ 5 ಮಂದಿ ಮಕ್ಕಳ ನಗರ ಪೋಲೀಸ್ ಆಯುಕ್ತರನ್ನಾಗಿ ಮಾಡುವ ಮೂಲಕ ಅವರ ಕೊನೆಯ ಆಸೆ ಈಡೇರಿಸಿದರು. 5 ಮಕ್ಕಳಿಗೆ ಗಾರ್ಡ್ ಆಫ್ ಹಾನರ್ ಕೊಟ್ಟು ಕಮೀಷನರ್ ಸೀಟ್ ಅಲಂಕರಿಸಲು ಅನುವು ಮಾಡಿಕೊಟ್ಟರು. ಡಾಗ್ ಸ್ಕ್ವಾಡ್ ಕರೆದು ಅವರನ್ನ ಪರಿಚಯ ಮಾಡಿಸುವ ಕೆಲಸ ಕೂಡ ಮಾಡಿ ಪುಟಾಣಿಗಳ ಆಸೆ ಈಡೇರಿಸಲಾಯಿತು. ಈ ಸಮಯದಲ್ಲಿ ರುತನ್ ಕುಮಾರ್ ಎನ್ನುವ ಬಾಲಕನ ಮಾತು ಕೇಳಿದ ಅಧಿಕಾರಿಗಳ ಕಣ್ಣಲ್ಲಿ ನೀರು ಬರುತ್ತಿತ್ತು.
ಖಾಕಿ ತೊಟ್ಟು ಪೊಲೀಸ್ ಕಚೇರಿಯ ಮೆಟ್ಟಿಲು ಹತ್ತಿರುವ ಆತನ ಮನಸ್ಸಿನಲ್ಲಿ ಇನ್ನಿಲ್ಲದ ಉತ್ಸಾಹ. ಸಿನಿಮಾದಲ್ಲಿ ತೋರಿಸಿದಂತೆ ತಾನು ಕೂಡ ಕಳ್ಳರನ್ನು ಹಿಡಿದು ಉತ್ತಮ ಸಮಾಜ ರೂಪಿಸುವ ಮಹದಾಸೆ ಅವನದ್ದು. ಆದರೆ, ವಿಧಿ ಈ ಆಸೆಗೆ ತಣ್ಣೀರು ಎರಚಿದೆ. ಈಗಾಗಲೇ ಒಂದು ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಹಾಸನ ಮೂಲದ ಈ ಪೋರನ ಮತ್ತೊಂದು ಮೂತ್ರಪಿಂಡ ಸಹ ಹಾಳಾಗಿದೆ. ಅದು ಶೇ.30ರಷ್ಟು ಮಾತ್ರ ಕಾರ್ಯನಿರ್ವಹಿಸುತ್ತಿದೆ. ವೈದ್ಯರು ಬಾಲಕನ ಆಯಸ್ಸಿನ ಬಗ್ಗೆ ಭರವಸೆ ನೀಡಿಲ್ಲ. ಆದರೆ, ರುತನ್ ಕಂಡ ಕನಸುಗಳನೆಲ್ಲ ನನಸಾಗಿಸಲು ರಾಜ್ಯ ಪೊಲೀಸ್ ಇಲಾಖೆ ಅನಾರೋಗ್ಯ ಪೀಡಿತ ಈ ಮುಗ್ಧ ಮಗುವಿನ ಆಸೆಯಂತೆ ಬೆಂಗಳೂರು ಪೊಲೀಸ್ ಆಯುಕ್ತ ವಿಜಯ್ ಭಾಸ್ಕರ್ ಬಾಲಕನನ್ನು ಒಂದು ದಿನದ ಮಟ್ಟಿಗೆ ಪೊಲೀಸ್ ಕಮಿಷನರ್ ಆಗಿ ಕರ್ತವ್ಯ ನಿರ್ವಹಿಸುವ ಮೂಲಕ ಆತ ಕನಸು ನನಸು ಮಾಡಲು ಅವಕಾಶ ಮಾಡಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಖಾಕಿತೊಟ್ಟು ಪುಟಾಣಿ ರುತನ್ ಕುಮಾರ್ ಮಾತನಾಡಿ, ನಟ ದರ್ಶನ್ ಐರಾವತ ಸಿನಿಮಾ ನೋಡಿ ನಾನು ಕೂಡ ಪೊಲೀಸ್ ಆಫೀಸರ್ ಆಗಬೇಕು ಎನ್ನುವ ಆಸೆ ಹುಟ್ಟಿಕೊಂಡಿತ್ತು. ಭಗವಂತ ನನ್ನ ಆಸೆಯನ್ನು ಗಿಡವಾಗಿ ಇರುವಾಗಲೇ ಚಿವುಟಿ ಹಾಕಿದ್ದಾನೆ. ಸದ್ಯ ಈಗ ಪೊಲೀಸ್ ಅಧಿಕಾರಿಯಾಗಿ ತನ್ನ ಆಸೆ ಪೂರೈಸಿ ತಾತ್ಕಾಲಿಕ ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ನಡೆಸಲು ಅನುವು ಮಾಡಿಕೊತ್ತಿದ್ದು. ಪೊಲೀಸರಿಗೆ ಧನ್ಯವಾದ ತಿಳಿಸಲು ಬಯಸುತ್ತೇನೆ ಎಂದು ಹೇಳಿದ್ದಾನೆ.