ಹೊಸ ವರ್ಷದ ಆರಂಭದಲ್ಲಿ ಹೊಸ ಬಿಸಿನೆಸ್ ಶುರುಮಾಡಲು ಉತ್ತಮ ಸಲಹೆಗಳು ಇಲ್ಲಿವೆ ನೋಡಿ..

0
1421

2020 ಮುಗಿದು 2021 ಬರಲಿದೆ. ಹಾಗೆಯೇ ನೀವು ಕೂಡ ಹಳೆಯ ವಿಚಾರಗಳನ್ನು ಬಿಟ್ಟಾಕಿ ಹೊಸ ವಿಚಾರಗಳನ್ನು ಮಾಡುತ ಹೊಸ ಹೊಸ ಯೋಜನೆಯನ್ನು ಹಾಕಿಕೊಳ್ಳಬೇಕು ಅಲ್ವೇ? ಅದರಂತೆ ಹೊಸ ಹೊಸ ಉದ್ಯೋಗ, ಬಿಸಿನೆಸ್ ಮಾಡಿ ಈ ವರ್ಷವನ್ನು ಹೊಸ ರೀತಿಯಲ್ಲಿ ಕಳೆಯಬೇಕು ಅಂತ ಎಲ್ಲರ ಯೋಚನೆಯಾಗಿರುತ್ತೆ. ಆದರೆ ಯಾವ ಬಿಸಿನೆಸ್ ಮಾಡಿದರೆ ಲಾಭವಿದೆ. ಯಾವ ಬಿಸಿನೆಸ್ ಮಾಡಿದರೆ ಉತ್ತಮ, ಮತ್ತು ಹೇಗೆ ಹೊಸ ಬಿಸಿನೆಸ್ ಮಾಡಬೇಕು ಅಂತ ತಿಳಿದಿರುವುದಿಲ್ಲ. ಅದಕ್ಕಾಗಿಯೇ ಈ ಹೊಸ ವರ್ಷಕ್ಕೆ ಹೊಸ ಬಿಸಿನೆಸ್-ಗಳ ಉತ್ತಮ ಸಲಹೆ ಇಲ್ಲಿದೆ ನೋಡಿ.

1. ಕೃತಕ ಬುದ್ಧಿವಂತಿಕೆ (Artificial Intelligence):

Also read: ಭಾರತೀಯ ಜೀವ ವಿಮಾ ನಿಗಮದ ಹೊಸ ಯೋಜನೆ; ತಿಂಗಳಿಗೆ 518 ರೂ. ಪಾವತಿಸಿದರೆ ಸಿಗಲಿವೆ ಹಲವಾರು ಲಾಭಗಳು..!

ಇತ್ತೀಚಿನ ವರ್ಷಗಳಲ್ಲಿ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಅತ್ಯಾಧುನಿಕ ತಂತ್ರಜ್ಞಾನವಾಗಿದೆ. ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಅನ್ನು ಕನ್ನಡದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಎಂದು ಕರೆಯಲಾಗುತ್ತದೆ. ಕೃತಕ ಬುದ್ಧಿವಂತಿಕೆ ಇದು ಮಾನವನ ಯೋಚನಾ ಶಕ್ತಿಯಂತೆ ಸಾಫ್ಟವೇರ್ ಸಹ ಯೋಚಿಸಿ ಕೆಲಸ ಮಾಡುವಂತೆ ಕಲಿಸುವುದೇ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಆಗಿದೆ.

ಈ ಕ್ಷೇತ್ರದಲ್ಲಿ ಸ್ಟಾರ್ಟಪ್ ಆರಂಭಿಸಲು ಇರುವ ಅವಕಾಶಗಳು:

ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಆಧರಿತ ಪರ್ಸನಲ್ ಅಸಿಸ್ಟಂಟ್: ನಿರ್ದಿಷ್ಟ ಕಂಪನಿಯೊಂದಕ್ಕೆ, ಗ್ರಾಹಕರೊಂದಿಗೆ ಸಂವಾದ ನಡೆಸಿ ಅವರ ಅಗತ್ಯತೆಗಳನ್ನು ತಿಳಿದುಕೊಂಡು ಅವನ್ನು ಪರಿಹರಿಸುವ ರೀತಿಯಲ್ಲಿ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಅಭಿವೃದ್ಧಿ ಪಡಿಸುವುದು. ಯಂತ್ರಗಳ ರಿಪೇರಿಗಾಗಿ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್: ಸೆನ್ಸರ್ ನೆಟವರ್ಕ ಹಾಗೂ ಆರ್ಟಿಫೀಶಿಯಲ್ ತಂತ್ರಜ್ಞಾನದ ಮೂಲಕ ಕಾರ್ಖಾನೆಗಳ ಯಂತ್ರಗಳಲ್ಲಿ ಉದ್ಭವಿಸುವ ಸಮಸ್ಯೆಗಳನ್ನು ಪತ್ತೆ ಹಚ್ಚುವುದು ಹಾಗೂ ಅವುಗಳನ್ನು ದುರಸ್ತಿ ಮಾಡುವುದು.
SEO ಕನ್ಸಲ್ಟೆನ್ಸಿ: ಇಂಟರ್ನೆಟ್ ಮಾರುಕಟ್ಟೆದಾರ ಆಗಬಯಸುವರು SEO ಕನ್ಸಲ್ಟೆನ್ಸಿಯನ್ನು ಪ್ರಾರಂಭಿಸಬಹುದು. ಇದಕ್ಕೆ ಹೆಚ್ಚು ಬಂಡವಾಳದ ಅಗತ್ಯತೆ ಇರುವುದಿಲ್ಲ. ಪ್ರತಿನಿತ್ಯ ಸಾವಿರಾರು ವೆಬ್ಸೈಟ್ ಮತ್ತು ಬ್ಲಾಗ್ ಖಾತೆಗಳನ್ನು ತೆರೆಯಲಾಗುತ್ತದೆ. ಆದರೆ ಅದರಲ್ಲಿ ಕೆಲವು ಮಾತ್ರ ಉಳಿಯುತ್ತವೆ. ಹೆಚ್ಚಿನವು ಹೆಚ್ಚಿನ ರೇಟಿಂಗ್ ಹಾಗೂ ಬ್ಲಾಗ್ ಮಾರುಕಟ್ಟೆ ಜ್ಞಾನದ ಕೊರತೆಯಿಂದ ವೈಫಲ್ಯ ಅನುಭವಿಸುತ್ತವೆ. ನಿಮಗೆ ಇದರ ಬಗ್ಗೆ ಜ್ಞಾನ ಇದ್ದರೆ SEO ಕನ್ಸಲ್ಟೆನ್ಸಿ ಪ್ರಾರಂಭಿಸಬಹುದು.

2. ಅಮುಲ್ ಪ್ರ್ಯಾಂಚೈಸಿ:

Also read: ಸ್ವಂತ ಉದ್ಯಮ ಸ್ಥಾಪಿಸಲು ಹಣದ ತೊಂದರೆಯಿದ್ರೆ, ಇದನ್ನು ಓದಿ.. ಈ ಸರ್ಕಾರಿ ಯೋಜನೆಗಳು ನಿಮ್ಮ ನೆರವಿಗೆ ಬರುತ್ತೆ!!

ಅಮುಲ್ ಔಟ್ಲೆಟ್, ಅಮುಲ್ ರೈಲ್ವೇ ಪಾರ್ಲರ್ ಅಥವಾ ಅಮುಲ್ ಕಿಯೋಸ್ಕ್ ಹೀಗೆ ಹಲವು ವಿಧದ ಫ್ರ್ಯಾಂಚೈಸಿ ಗಳನ್ನು ಅಮುಲ್ ನೀಡುತ್ತದೆ. ನೀವು ರೂ. 1.5 ಲಕ್ಷದಿಂದ 2 ಲಕ್ಷ ರೂಪಾಯಿ ಹೂಡಿಕೆ ಮಾಡಬೇಕು. ಇದರ ಪೈಕಿ ರೂ. 25,000 ಮರುಪಾವತಿಸಲಾಗದ ಬ್ರ್ಯಾಂಡ್ ಭದ್ರತೆ ಆಗಿರುತ್ತದೆ. ರೂ. 1 ಲಕ್ಷ ನವೀಕರಣಕ್ಕಾಗಿ ಮತ್ತು ಉಪಕರಣಗಳಿಗೆ ರೂ. 75,000 ಖರ್ಚು ಮಾಡಲಾಗುವುದು. ಕಂಪನಿಯ ವೆಬ್ಸೈಟ್ನಲ್ಲಿ ನೀವು ಹೆಚ್ಚಿನ ಮಾಹಿತಿ ಪಡೆಯಬಹುದು. ಅಮುಲ್ ಪ್ರಕಾರ, ಫ್ರ್ಯಾಂಚೈಸಿ ಮೂಲಕ ತಿಂಗಳಿಗೆ ಸುಮಾರು 5 ರಿಂದ 10 ಲಕ್ಷ ಆದಾಯವನ್ನು ನೀವು ಪಡೆಯಬಹುದು.

3. ಆಹಾರ ತಯಾರಿಕೆ (Food preparation):

Also read: ಮಹಿಳೆಯರೇ ಗಮನಿಸಿ, ಸ್ವಂತ ಉದ್ದಿಮೆ ಮಾಡಿ ಜೀವನ ರೂಪಿಸಿಕೊಳ್ಳಲು ಸದಾವಕಾಶ, ಸರ್ಕಾರದ ಈ ಯೋಜನೆಗಳು ನಿಮಗೆ ದಾರಿ ತೋರಲಿವೆ..

ಈಗಿನ ದಿನಗಳಲ್ಲಿ ಎಲ್ಲವು ರೆಡಿಮೇಡ್ ಆಗಿದೆ ಅದರಲ್ಲಿ ಊಟವು ಕೂಡ ರೆಡಿಮೇಡ್ ಆಗಿದೆ. ಈ ಉದ್ಯಮದಲ್ಲಿ ಹೆಚ್ಚಿನ ಬೇಡಿಕೆ ಇದೆ. ಆದರಿಂದ ನೀವು ಬೇಕರ್ ಆಗಿ ನಿಮ್ಮ ಸ್ವಂತ ಬ್ರೆಡ್, ಬಿಸ್ಕತ್ತು, ಕ್ಯಾಂಡಿ, ಐಸ್ ಕ್ರೀಂ, ತಯಾರಿಕಾ, ಉದ್ಯಮವನ್ನು ಪ್ರಾರಂಭಿಸಬಹುದು. ನೀವು ಕಾರ್ಖಾನೆ ಮತ್ತು ಯಂತ್ರೋಪಕರಣಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಇದರಿಂದ ಮನೆಯಲ್ಲೇ ಕುಳಿತು ಕೆಲಸ ಮಾಡಿ, ಪ್ರತಿದಿನ ರೂ. 1000 ದಿಂದ 10,000 ವರೆಗೆ ಹಣ ಗಳಿಸಬಹುದು.

4. ಬಟ್ಟೆ/ಟೀ ಶರ್ಟ್ ಮುದ್ರಣ (Tee-shirt printing)

Also read: ಇನ್ಮುಂದೆ ಕ್ಯಾನ್ಸರ್ ಚಿಕ್ಸಿತೆಗೆ ಹಣದ ಚಿಂತೆ ಬಿಡಿ; ಕೇವಲ 7 ರೂ ಪಾವತಿಸಿ 50 ಲಕ್ಷದವರೆಗೆ ವಿಮಾ ಪಡೆಯರಿ, ಭಾರತೀಯ ಜೀವ ವಿಮಾ ನಿಗಮದ ಹೊಸ ಯೋಜನೆ ..

ಇತ್ತೀಚಿಗೆ ಟೀ-ಶರ್ಟ್ ಪ್ರಿಂಟಿಂಗ್ ಅಥವಾ ನೂತನ ಶೈಲಿಯ ಬಟ್ಟೆಗಳ ವ್ಯವಹಾರ ಬಹು ಜನಪ್ರಿಯತೆ ಪಡೆಯುತ್ತಿದೆ. ದೇಶದಲ್ಲಿರುವ ಬಹುತೇಕ ಎಲ್ಲ ದೊಡ್ಡ ಸಂಘ, ಸಂಸ್ಥೆಗಳು ಹಾಗೂ ಕಂಪನಿಗಳಿಗೆ ದೊಡ್ಡ ಪ್ರಮಾಣದಲ್ಲಿ ತಮ್ಮ ಕಂಪನಿ ಹೆಸರಿನ ಪ್ರಿಂಟ್ ಇರುವ ಟೀ-ಶರ್ಟ್ ಗಳ ಅವಶ್ಯಕತೆ ಇರುತ್ತದೆ. ಕಂಪನಿಗಳಿಗೆ ಬೇಕಾದ ಹಾಗೆ, ವೈವಿಧ್ಯಮಯವಾಗಿ ಟೀ-ಶರ್ಟ್ ಪ್ರಿಂಟ್ ಮಾಡಿಕೊಡುವುದು ಲಾಭದಾಯಕ ಉದ್ಯಮವಾಗಿದೆ.

5. ಬ್ಲಾಗಿಂಗ್ (Blogging)

Also read: 30 ರ ಹರೆಯಕ್ಕೆ ಕಾಲಿಡುವ ಮುನ್ನ ಮುಂದಿನ ಜೀವನ ಭದ್ರತ್ರೆಗಾಗಿ ಪ್ರತಿಯೊಬ್ಬರು ಯೋಚಿಸಲೇಬೇಕಾದ ಉಳಿತಾಯದ ಯೋಜನೆಗಳು..

ಇಂದಿನ ಡಿಜಿಟಲ್ ಯುಗದಲ್ಲಿ ಹೆಚ್ಚಿನ ಹಣಗಳಿಸುವ ಹೊಸ ವಿಧಾನವೆಂದರೆ ಬ್ಲಾಗಿಂಗ್ ಅಥವಾ ಬ್ಲಾಗ್ ಬರವಣಿಗೆ. ಇದಕ್ಕಾಗಿ ಅತಿ ಹೆಚ್ಚಿನ ಬಂಡವಾಳ ಬೇಕಿಲ್ಲ, ಇದಕ್ಕಾಗಿ ಒಂದು ಡೊಮೈನ್ ಹೆಸರನ್ನು ಪಡೆಯಲು ಅಲ್ಪ ಬಂಡವಾಳ ಬೇಕಾಗುತ್ತದೆ. ಸುಮಾರು ರೂ. 3600 ನೀಡಿದರೆ ಅನಿಯಮಿತ ಸ್ಥಳಾವಕಾಶವಿರುವ ಅಂತರ್ಜಾಲ ತಾಣದ ಕೊಂಡಿ ದೊರಕುತ್ತದೆ. ನಿಮ್ಮ ಬರವಣಿಗೆಗಳನ್ನು ಹೆಚ್ಚು ಹೆಚ್ಚು ಜನರಿಗೆ ಒದಗಿಸುವ ಮೂಲಕ ಚಿಕ್ಕಾಸೂ ಖರ್ಚಿಲ್ಲದೇ ಪ್ರಚಾರ ಮಾಡಿ ಜಾಹೀರಾತಿನ ಮೂಲಕ ಹಣ ಗಳಿಸಬಹುದು.