50 ಸಾವಿರಕ್ಕೆ ಎಂಜಿನಿಯರಿಂಗ್ ಸೀಟು ಲಭ್ಯ

0
1459

ಬೆಂಗಳೂರು: ಪ್ರಸಕ್ತ ಸಾಲಿನ ಕಾಮೆಡ್-ಕೆ ಸೀಟು ಹಂಚಿಕೆ ಮಂಗಳ ವಾರದಿಂದ ಆರಂಭವಾಗಿದ್ದು, ಈ ಬಾರಿ ಅಚ್ಚರಿಯಾಗುವಂತೆ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಶುಲ್ಕ ಇಳಿಕೆ ಮಾಡಲಾಗಿದೆ.ರಾಜ್ಯ ಸರಕಾರ ಹಾಗೂ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ನಡುವಿನ ಒಪ್ಪಂದದಂತೆ, ಎಂಜಿನಿಯ ರಿಂಗ್ ಕಾಲೇಜುಗಳು ಗರಿಷ್ಠ 1.7ಲಕ್ಷ ರು. ಶೈಕ್ಷಣಿಕ ಶುಲ್ಕವನ್ನು ವಿದ್ಯಾರ್ಥಿ ಗಳಿಂದ ಪಡೆಯಬಹುದಾಗಿತ್ತು. ಆದರೆ, ಬೆರಳೆಣಿಕೆಯ ಪ್ರತಿಷ್ಠಿತ ಕಾಲೇಜುಗಳನ್ನು ಹೊರತುಪಡಿಸಿ, ಬಹುತೇಕ ಖಾಸಗಿ ಕಾಲೇಜುಗಳು ನಿಗದಿಪಡಿಸಿದ ಮೊತ್ತದ ಅರ್ಧದಷ್ಟನ್ನು ಮಾತ್ರ ಶುಲ್ಕವನ್ನಾಗಿ ಪಡೆಯುತ್ತಿವೆ.

ಕಾಮೆಡ್-ಕೆ ಕೌನ್ಸಿಲಿಂಗ್
ಕಾಮೆಡ್-ಕೆ ಕೌನ್ಸಿಲಿಂಗ್

ಮಂಗಳೂರಿನ ಶ್ರೀನಿವಾಸ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮೆಕ್ಯಾನಿಕಲ್ ಎಂಜಿನಿಯರಿಂಗ್ ಹೊರತುಪಡಿಸಿ, ಇನ್ನಿತರ ಎಲ್ಲ ಕೋರ್ಸ್‌ಗಳ ಶುಲ್ಕವನ್ನು 60 ಸಾವಿರ ರು.ಗೆ ನಿಗದಿಪಡಿಸಿದೆ. ಇದರಂತೆಯೇ ಬಾಗಲಕೋಟೆಯ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜು ಸಹ ಬಯೋ-ಟೆಕ್ ಕೋರ್ಸ್‌ಗೆ 50 ಸಾವಿರ ರು. ಶುಲ್ಕ ನಿಗದಿಪಡಿಸಿದೆ.

ಕುಗ್ಗಿದ ಬೇಡಿಕೆ

ಉತ್ತರ ಭಾರತದಲ್ಲಿ ಸಾಕಷ್ಟು ಎಂಜಿನಿಯರಿಂಗ್ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳು ತಲೆ ಎತ್ತುತ್ತಿರುವುದರಿಂದ, ನಮ್ಮ ರಾಜ್ಯಕ್ಕೆ ಅಲ್ಲಿಂದ ಬರುವ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿದೆ. ಹಾಗಾಗಿ ಎಂಜಿನಿಯರಿಂಗ್ ಸೀಟುಗಳ ಬೇಡಿಕೆಯೂ ಕುಗ್ಗಿರುವುದರಿಂದ, ಈ ಬಾರಿ ಶುಲ್ಕದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಧಿಕಾರಿ ತಿಳಿಸಿದ್ದಾರೆ.

Source: vishwavani