ಪಪ್ಪಾಯ ಎಲೆಗಳು ಉಪಯೋಗಿಸೋದ್ರಿಂದ ಎಲ್ಲ ತರಹದ ಜ್ವರದಿಂದ ಹಿಡಿದು ಕ್ಯಾನ್ಸರ್-ವರೆಗೆ ಗುಣಪಡಿಸಬಹುದು ಈ ಮನೆಮದ್ದಿನ ಬಗ್ಗೆ ತಿಳಿದುಕೊಳ್ಳಿ!!

0
3421

ವಾತಾವರಣ ಬದಲಾವಣೆಯಿಂದ ಇಂದು ಹಲವು ಅಪಾಯಕಾರಕ ಕಾಯಿಲೆಗಳು, ಜ್ವರಗಳು ಬರುತ್ತಿವೆ. ಇಂತಹ ಅರೋಗ್ಯ ಸಮಸ್ಯೆಗಳಿಂದ ಹೊರಬರಲು ಸಾಕಷ್ಟು ಹಣವನ್ನು ವ್ಯಯಿಸಿದರು ಪ್ರಯೋಜನಗಳು ಆಗದೆ ಅತಿಯಾದ ತೊಂದರೆಗಳನ್ನು ಅನುಭವಿಸಬಹುದು, ಅದರಲ್ಲಿ ಈಗಿಗ ಹೆಚ್ಚಾಗಿ ಕಂಡು ಬರುತ್ತಿರುವ ಡೆಂಗ್ಯೂನಿಂದ ಹಲವರು ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಇಂತಹ ಡೇಂಜರಸ್ ಜ್ವರಗಳಿಗೆ ಒಂದು ಪಕ್ಕಾ ಮನೆಮದ್ದು ಎಂದರೆ ಪಪ್ಪಾಯ ಎಲೆ. ಇದೇನು ಹಿತ್ತಲಲ್ಲಿ ಸಾಕಷ್ಟಿದೆ ಇದನ್ನು ಹೇಗೆ ಬಳಕೆ ಮಾಡಬೇಕು ಇದರಿಂದ ಏನೆಲ್ಲಾ ಲಾಭವಿದೆ ಎಂದರೆ ಇಲ್ಲಿದೆ ನೋಡಿ.

Also read: ಬಟ್ಟಲು ನುಗ್ಗೆ ಎಲೆಯರಸ 9 ಮೊಟ್ಟೆಗೆ ಅಥವಾ 9 ಲೋಟ ಬಾದಾಮಿ ಹಾಲಿಗೆ ಸಮ .. ಮತ್ತ್ಯಾಕೆ ಯೋಚ್ನೆ ಮಾಡ್ತಿದೀರಾ ಈಗ್ಲಿಂದಾನೆ ನುಗ್ಗೆ ಸೊಪ್ಪು ಬಳಸಕ್ಕೆ ಶುರು ಮಾಡ್ರಿ…

ಹೌದು ಪಪ್ಪಾಯ ಇಂತಹ ಮನೆಮದ್ದುಗಳಲ್ಲಿ ಒಂದಾಗಿದೆ. ಅದು ವ್ಯಕ್ತಿಯ ಜೀವವನ್ನು ಉಳಿಸಬಲ್ಲದು ಮತ್ತು ಶರೀರದಲ್ಲಿಯ ರೋಗ ನಿರೋಧಕ ವ್ಯವಸ್ಥೆಯನ್ನು ಹೆಚ್ಚಿಸಬಲ್ಲದು. ಪಪ್ಪಾಯ ಹಣ್ಣು ಮಾತ್ರವಲ್ಲ, ಅದರ ಎಲೆಗಳೂ ಹಲವಾರು ಆರೋಗ್ಯಲಾಭಗಳನ್ನು ನೀಡುತ್ತವೆ. ಪಪ್ಪಾಯಿಯಲ್ಲಿ ಹಲವಾರು ರೀತಿಯ ಪೋಷಕಾಂಶಗಳಿವೆ. ಇದರಲ್ಲಿರುವ ಮೆಗ್ನೀಸಿಯುಂ, ಪೊಟಾಸ್ಸಿಯುಂ, ನಿಯಾಸಿನ್, ಕ್ಯಾರೋಟೀನ್, ಪ್ರೋಟೀನ್, ನಾರಿನಾಂಶ ಮತ್ತು ಅನೇಕ ಆರೋಗ್ಯ ಪ್ರಯೋಜನಗಳನ್ನು ಒದಗಿಸುವ ಪಪೈನ್ ಎಂಬ ಕಿಣ್ವ ಅಧಿಕ ಪ್ರಮಾಣದಲ್ಲಿದ್ದು, ಆರೋಗ್ಯವನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅಷ್ಟೇ ಅಲ್ಲದೆ ಪಪ್ಪಾಯಿಯು ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ. ಇದು ಕೇವಲ ಆರೋಗ್ಯಕ್ಕಷ್ಟೆ ಅಲ್ಲದೆ ಸೌಂದರ್ಯವನ್ನು ಸಹ ಹೆಚ್ಚಿಸಲು ಸಹಾಯ ಮಾಡುತ್ತದೆ.

ಪಪ್ಪಾಯ ಎಲೆಯ ಆರೋಗ್ಯಲಾಭಗಳು

1. ಡೆಂಗ್ ರೋಗಿಗಳ ಪ್ರಕರಣಗಳಲ್ಲಿ ಪಪ್ಪಾಯ ಎಲೆಯ ರಸವು ಪ್ಲೇಟ್‌ಲೆಟ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ನೆರವಾಗುತ್ತದೆ ಎನ್ನುವುದನ್ನು ನೀವು ಕೇಳಿರಬೇಕು. ಪಪ್ಪಾಯ ಎಲೆಗಳು ಡೆಂಗ್ ರೋಗಿಗಳಿಗೆ ರಕ್ತಸ್ರಾವದ ವಿರುದ್ಧ ರಕ್ಷಣೆ ನೀಡುತ್ತದೆ ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಡೆಂಗ್ ಜ್ವರದಿಂದ ರಕ್ತಕಣಗಳಿಗೆ ಹಾನಿಯನ್ನು ತಡೆಯುತ್ತದೆ. ಡೆಂಗ್ ಜ್ವರಕ್ಕೆ ಚಿಕಿತ್ಸೆ ನೀಡುವುದು.

2. ಮಲೇರಿಯಾ ಜ್ವರ ನಿವಾರಣೆ
ಮಲೇರಿಯಾ ಜ್ವರ ಪೀಡಿತರೂ ಇದರ ರಸ ಕುಡಿದರೆ ಉತ್ತಮ. ಇದಲ್ಲದೆ, ಪಿತ್ತಕೋಶಕ್ಕೆ ಬರುವಂತಹ ಹಳದಿ ರೋಗ, ಲಿವರ್ ಸಿರೋಸಿಸ್ ನಂತಹ ರೋಗಗಳು ಬಾರದಂತೆ ತಡೆಯಲು ಇದರ ರಸ ಕುಡಿಯಬೇಕು. ಇದರಿಂದ ಇಂತಹದೆ ಜ್ವರವಿದ್ದರೂ ಶೀಘ್ರವಾಗಿ ಆರಾಮವಾಗುತ್ತೆ. ಅಷ್ಟೇ ಅಲ್ಲದೆ ಇದರಲ್ಲಿರುವ ಮೆಗ್ನೀಸಿಯುಂ, ಪೊಟಾಸ್ಸಿಯುಂ, ನಿಯಾಸಿನ್, ಕ್ಯಾರೋಟೀನ್, ಪ್ರೋಟೀನ್, ನಾರಿನಾಂಶ ಮತ್ತು ಅನೇಕ ಆರೋಗ್ಯ ಪ್ರಯೋಜನಗಳನ್ನು ಒದಗಿಸುವುದು.

3. ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡುತ್ತದೆ
ಪಪ್ಪಾಯ ಎಲೆಗಳ ರಸವು ಟ್ಯೂಮರ್‌ಗಳು ಉಂಟಾಗುವುದನ್ನು ತಡೆಯುತ್ತದೆ. ಪಪ್ಪಾಯ ಎಲೆಯಲ್ಲಿರುವ ಕ್ಯಾನ್ಸರ್ ನಿರೋಧಕ ಗುಣದಿಂದಾಗಿ ಅದು ದೀರ್ಘಕಾಲಿಕ ಮೈಲೊಮೊನೊಸೈಟಿಕ್ ಲ್ಯುಕೇಮಿಯಾದ ವಿರುದ್ಧ ಹೋರಾಡುತ್ತದೆ. ಪಪ್ಪಾಯ ಎಲೆಗಳ ರಸದ ನಿಯಮಿತ ಸೇವನೆಯ ಬಳಿಕ ಕ್ಯಾನ್ಸರ್ ರೋಗವು ನಿಯಂತ್ರಣಕ್ಕೆ ಬಂದ ಹಲವಾರು ನಿದರ್ಶನಗಳಿವೆ. ಸ್ತನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್, ಶ್ವಾಸಕೋಶ ಕ್ಯಾನ್ಸರ್ ಮತ್ತು ಮೇದೋಜ್ಜೀರಕ ಗ್ರಂಥಿ ಕ್ಯಾನ್ಸರ್‌ಗಳಿಗೂ ಪಪ್ಪಾಯ ಎಲೆಗಳ ರಸವು ಪರಿಣಾಮಕಾರಿಯಾಗಿದೆ ಎನ್ನುವುದನ್ನು ಸಂಶೋಧನೆಗಳು ತೋರಿಸಿವೆ

4. ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ
ಪಪ್ಪಾಯ ಎಲೆಗಳ ಕಷಾಯವನ್ನು ಸೇವಿಸುವುದರಿಂದ ಜೀರ್ಣಕ್ರಿಯೆಯು ಉತ್ತಮಗೊಳ್ಳುತ್ತದೆ. ಈ ಕಷಾಯವು ಪಪೈನ್, ಚೈಮೊಪಪೈನ್, ಪ್ರೊಟೀಸ್, ಅಮೈಲೇಸ್‌ನಂತಹ ಹಲವಾರು ಕಿಣ್ವಗಳ ಆಗರವಾಗಿದೆ. ವಾಯು ತೊಂದರೆ, ಅಲ್ಸರ್ ಮತ್ತು ಜಠರದ ಉರಿಯೂತದಂತಹ ಹಲವಾರು ಹೊಟ್ಟೆಯ ಸಮಸ್ಯೆಗಳಿಗೂ ಪಪ್ಪಾಯ ಎಲೆಗಳು ಪರಿಹಾರವನ್ನು ನೀಡುತ್ತವೆ.

Also read: ಸೀಬೆ ಹಣ್ಣು ಅಷ್ಟೇ ಅಲ್ಲ, ಸೀಬೆ ಎಲೆಯ ಕಮಾಲ್ ಕೇಳಿದರೆ ಬೆರಗಾಗ್ತೀರಾ..!!

5. ಮಹಿಳೆಯರಲ್ಲಿ ಮುಟ್ಟಿನ ದಿನಗಳಲ್ಲಿ ಬರುವ ನೋವಿಗೆ ಮುಕ್ತಿ
ಮಹಿಳೆಯರು ತಮ್ಮ ಮುಟ್ಟಿನ ದಿನಗಳಲ್ಲಿ ಪಪ್ಪಾಯ ತಿನ್ನಕೂಡದು ಎಂಬ ತಪ್ಪುಗ್ರಹಿಕೆ ಹೆಚ್ಚಿನ ಭಾರತೀಯ ಕುಟುಂಬಗಳಲ್ಲಿವೆ. ಆದರೆ ಅದು ಮುಟ್ಟಿನ ದಿನಗಳಲ್ಲಿ ಮಹಿಳೆಯರು ಅನುಭವಿಸುವ ನೋವಿನಿಂದ ಮುಕ್ತಿ ನೀಡುತ್ತದೆ. ಪಪ್ಪಾಯ ಎಲೆಗಳ ಕಷಾಯದ ಸೇವನೆಯು ಮಹಿಳೆಯರು ಮುಟ್ಟಾಗುವ ಮುನ್ನ ಅನುಭವಿಸುವ ಸಮಸ್ಯೆಗಳನ್ನು ನಿವಾರಿಸುತ್ತದೆ. ಅದರಲ್ಲಿಯ ಕಿಣ್ವಗಳು ಋತುಚಕ್ರವನ್ನು ಕ್ರಮಬದ್ಧಗೊಳಿಸುತ್ತವೆ,ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತವೆ ಮತ್ತು ಹಾರ್ಮೋನ್ ಅಸಮತೋಲವನ್ನು ನಿವಾರಿಸುತ್ತವೆ ಎನ್ನಲಾಗಿದೆ.

6. ಮಧುಮೇಹಕ್ಕೆ ಚಿಕಿತ್ಸೆ ನೀಡುತ್ತದೆ.
ಮಧುಮೇಹಿಗಳು ತಮ್ಮ ದೈನಂದಿನ ಆಹಾರದ ಭಾಗವಾಗಿ ಪಪ್ಪಾಯ ಎಲೆಗಳ ರಸವನ್ನು ಸೇವಿಸಬಹುದಾಗಿದೆ. ಅದು ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ತಗ್ಗಿಸಲು ನೆರವಾಗುತ್ತದೆ. ಆದರೆ ಅತಿಯಾದರೆ ಎಲ್ಲವೂ ಕೆಟ್ಟದ್ದೇ. ಹೀಗಾಗಿ ಮಧುಮೇಹಿಗಳು ಪಪ್ಪಾಯ ಎಲೆಗಳ ರಸವನ್ನು ಸೇವಿಸುವ ಮುನ್ನ ತಮ್ಮ ವೈದ್ಯರ ಸಲಹೆ ಪಡೆದುಕೊಳ್ಳುವುದು ಅಗತ್ಯ.

Also read: ಸೀಬೆ ಹಣ್ಣು ಮಾತ್ರ ಅಲ್ಲ, ಅದರ ಸಿಪ್ಪೆ ಎಲೆಯು ಕೂಡ ಔಷಧೀಯಗುಣ ಇದೆ ಅನ್ನೋದು ನಿಮಗೆ ಗೊತ್ತಾ..?