ಮನೆ ಕಟ್ಟುವುದು ಎಲ್ಲರ ಕನಸು.. ಆದರೆ ಸುಮ್ಮನೆ ಮನೆ ಕಟ್ಟುವ ಕೆಲಸಕ್ಕೆ ಕೈ ಹಾಕಬಾರದು.. ಇಲ್ಲಿದೆ ನಿಮಗಾಗಿ ಒಂದಿಷ್ಟು ಮಾಹಿತಿ..

0
5056

ಮದುವೆ.. ಮನೆ.. ಮಕ್ಕಳು.. ಇದು ಎಲ್ಲರ ಸಾಮಾನ್ಯ ಕನಸು.. ಇದರಲ್ಲಿ ಮನೆ ಕಟ್ಟಬೇಕು ಎಂದುಕೊಂಡಿರುವವರಿಗೆ ಇಲ್ಲಿದೆ ನೋಡಿ ಉಪಯುಕ್ತ ಸಲಹೆಗಳು..

ಅತ್ಯಂತ ಕಡಿಮೆ ಬೆಲೆಯಲ್ಲಿ ನಿಮ್ಮ ಜ್ಯೋತಿಷ್ಯದ ವರದಿ ಪಡೆಯಿರಿ!!

1. ಪ್ಲಾನ್ ಮಾಡಿ ಕೊಳ್ಳಿ..
ಮೊದಲು ಒಂದು ದಿನ ನಿಮ್ಮ ಫ್ಯಾಮಿಲಿ ಯೊಂದಿಗೆ ಕೂತು ನೀಟ್ ಆಗಿ ಪ್ಲಾನ್ ಮಾಡಿ.. ಸೈಟ್ ಗೆ ಬಂಡವಾಳ.. ಮನೆ ಕಟ್ಟಲು ಬಂಡವಾಳ.. ಕಟ್ಟಿದ ಮೇಲೆ ನಮಗೆ ಮಾಡುವ ಸಾಲ ತೀರಿಸಲು ಸಾಧ್ಯವೇ ಹೀಗೆ..

2. ಸೈಟ್
ಅಪ್ಪ ಮಾಡಿಟ್ಟ ಹಣವಿದ್ದರೆ ಸುಲಭವಾಗಿ ಮನೆ ಕಟ್ಟಿಬಿಡಬಹುದು.. ಆದರೆ ನಾವು ದುಡಿದು ಬಂದ ದುಡ್ಡಲ್ಲಿ ಸ್ವಲ್ಪ ಸ್ವಲ್ಪ ಕೂಡಿಟ್ಟು ಮನೆ ಕಟ್ಟುವವರು.. ಅದಕ್ಕಾಗಿ ಮೊದಲು ಸೈಟ್ ಖರೀದಿಸಬೇಕು.. ಎಲ್ಲಿ ಖರೀದಿಸುವುದು ಉತ್ತಮ?? ಇದು ತುಂಬಾ ಮುಖ್ಯ.. ನಾವು ಮನೆ ಕಟ್ಟುವುದು ಇನ್ನು ಒಂದು ಅಥವಾ ಎರಡು ವರ್ಷವಾಗುತ್ತದೆ ಎಂದರೆ ಈಗ ಬೆಳವಣಿಗೆ ಯಾಗುತ್ತಿರುವ ಏರಿಯಾಗಳಲ್ಲಿ ಖರೀದಿಸಿ.. ಆದರೆ ಸೈಟ್ ಕೊಂಡ ತಕ್ಷಣ ಮನೆ ಕಟ್ಟುವ ಪ್ಲಾನ್ ನಲ್ಲಿ ಇದ್ದರೆ.. ಈಗಾಗಲೇ ಡೆವಲಪ್ ಆಗಿರುವ ಏರಿಯಾದಲ್ಲಿ ಸೈಟ್ ಖರೀದಿಸಿ..

3. ಮನೆ ಕಟ್ಟಲು ಮೊದಲು ಬೇಸಿಕ್ ಬಂಡವಾಳವನ್ನು ಕೂಡಿಟ್ಟುಕೊಳ್ಳಿ..
ಸೈಟ್ ಖರೀದಿಸಿದ ಮೇಲೆ ತಕ್ಷಣ ಮನೆ ಕಟ್ಟಲು ಶುರು ಮಾಡುವುದು ಒಳ್ಳೆಯದಲ್ಲ.. ಅದಕ್ಕಾಗಿ ಸ್ವಲ್ಪ ತಿಂಗಳುಗಳ ಕಾಲ ಸಣ್ಣ ಪ್ರಮಾಣದ ಹಣ ಕಾಸನ್ನು ಕೂಡಿಟ್ಟುಕೊಳ್ಳಿ.. ಏಕೆಂದರೆ ಬ್ಯಾಂಕ್ ಸಾಲವನ್ನು ನಂಬಿ ಶುರು ಮಾಡುವುದು ಒಳ್ಳೆಯದಲ್ಲ..

4. ಬ್ಯಾಂಕ್ ಸಾಲ
ಮನೆ ಕಟ್ಟಲು ಎಲ್ಲರಿಗೂ ಇರುವ ಒಂದು ಆಧಾರವೆಂದರೆ ಹೋಮ್ ಲೋನ್.. ಹೌದು ಸಾಮಾನ್ಯ ವರ್ಗದ ಜನರು ಮನೆ ಕಟ್ಟಲೆಂದೇ ಹಲಾವರು ವಸತಿ ಯೋಜನೆ ಗಳಿವೆ.. ಅದರಲ್ಲಿ ಒಂದು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆ.. ಈ ಯೋಜನೆಯಡಿಯಲ್ಲಿ 15 ಲಕ್ಷದ ವರೆಗೆ ಸಾಲ ಕೊಡುವ ಸೌಲಭ್ಯವಿದೆ.. ಮತ್ತು ಬಡ್ಡಿ ದರವು ಕಡಿಮೆ ಇರಲಿದೆ ಹಾಗೆಯೇ ಸಬ್ಸಿಡಿ ಸೌಲಭ್ಯವು ಚೆನ್ನಾಗಿದೆ.. ಹತ್ತಿರದ ಬ್ಯಾಂಕ್ ಗಳಲ್ಲಿ ಭೇಟಿ ಕೊಟ್ಟು ವಿವರ ಪಡೆದುಕೊಳ್ಳಿ.. ಆದರೆ ಬ್ಯಾಂಕ್ ನ ಸಾಲ ಮನೆ ಕಟ್ಟುವ ಹಂತ ಹಂತ ದಲ್ಲಿ ಮಂಜೂರು ಮಾಡುವುದು ಅವರ ನಿಯಮ.. ಅದಕ್ಕಗಿಯೇ ನಾವು ಮೊದಲೇ ಹೇಳಿದ್ದು.. ಸಣ್ಣ ಪ್ರಮಾಣದ ಬಂಡವಾಳವನ್ನು ಕೂಡಿಟ್ಟುಕೊಂಡಿರಿ ಎಂದು..

5. ಸಾಲ ತೀರಿಸುವ ಪ್ಲಾನ್..
ಇದು ತುಂಬಾ ಮುಖ್ಯ ಸುಮ್ಮನೆ ಸಾಲ ಸಿಗುತ್ತದೇ ಎಂದು ತೆಗೆದುಕೊಂಡು ಸಾಲದ ಸುಳಿಗೆ ಸಿಲುಕ ಬೇಡಿ.. ನಿಮಗೆ ಎಷ್ಟು ತೀರಿಸಲು ಸಾಧ್ಯವೋ ಅಷ್ಟಕ್ಕೆ ಕೈ ಹಾಕಿ.. ಮೊದಲು ಆಡಂಬರಕ್ಕಾಗಿ ದೊಡ್ಡ ಮನೆ ಕಟ್ಟಬೇಕೆಂದುಕೊಂಡು ಆನಂತರ ಸಾಲ ತೀರಿಸಲಾಗದೆ ತೊಂದರೆಗೆ ಸಿಲುಕಬೇಡಿ.. ನೀವು ಮತ್ತು ನಿಮ್ಮ ಹೆಂಡತಿ/ಗಂಡ ಇಬ್ಬರೂ ದುಡಿಯುತ್ತಿದ್ದರೆ.. ಲೋನ್ ಅನ್ನು ಹೆಂಡತಿಯ ಹೆಸರಲ್ಲಿ ಮಾಡಿದರೆ ಒಳ್ಳೆಯದು ಏಕೆಂದರೆ.. ಮಹಿಳೆಯರಿಗೆ ಬಡ್ಡಿ ದರದಲ್ಲಿ ಸ್ವಲ್ಪ ವಿನಾಯಿತಿ ಇದೆ..

ಆಲ್ ದಿ ಬೆಸ್ಟ್ ನಿಮ್ಮ ಮನೆ ಕಟ್ಟುವ ಕನಸು ಆದಷ್ಟು ಬೇಗ ನನಸಾಗಲಿ.. ಶೇರ್ ಮಾಡಿಟ್ಟುಕೊಳ್ಳಿ ಮುಂದೆ ಉಪಯೋಗಕ್ಕೆ ಬಂದೀತು..

ಅತ್ಯಂತ ಕಡಿಮೆ ಬೆಲೆಯಲ್ಲಿ ನಿಮ್ಮ ಜ್ಯೋತಿಷ್ಯದ ವರದಿ ಪಡೆಯಿರಿ!!