6 ವರ್ಷದ ಬಾಲಕಿ ಮೊಸಳೆಯಿಂದ ತನ್ನ ಗೆಳತಿಯನ್ನು ರಕ್ಷಿಸಿದ್ದಾಳೆ

0
646

ಸ್ನೇಹಿತೆಗಾಗಿ 6 ವರ್ಷದ ಬಾಲಕಿ ಮಾಡಿದ್ಲು ಇಂಥ ಕೆಲಸ

 

ಒಡಿಶಾದ ಕೇಂದ್ರಪರಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಆರು ವರ್ಷದ ಬಾಲಕಿಯೊಬ್ಬಳು ತನ್ನ ಸ್ನೇಹಿತೆಯನ್ನು ಮೊಸಳೆಯಿಂದ ಕಾಪಾಡಿದ್ದಾಳೆ. ಮೊಸಳೆ ದಾಳಿಗೊಳಗಾದ ಬಾಲಕಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಾ ಇದೆ.

 

ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿ ಓದುತ್ತಿರುವ ಟಿಕಿ ದಲೈ ತನ್ನ ಸಹಪಾಠಿ ಬಸಂತಿಯನ್ನು ರಕ್ಷಿಸಿದ್ದಾಳೆ. ಬಸಂತಿಯ ತಲೆ ಹಾಗೂ ತೊಡೆ ಮೇಲೆ ಮೊಸಳೆ ಕಚ್ಚಿದ ಗಾಯಗಳಿವೆ. ಮಂಗಳವಾರ ಇಬ್ಬರೂ ಕೆರೆಯಲ್ಲಿ ಸ್ನಾನ ಮಾಡುತ್ತಿದ್ದರು.ಈ ವೇಳೆ ಮೊಸಳೆಯೊಂದು ನೀರಿನಿಂದ ಮೇಲೆ ಬಂದು ಬಸಂತಿ ಮೇಲೆ ದಾಳಿ ಮಾಡಿದೆ. ಈ ವೇಳೆ ಒಂದನೇ ಕ್ಲಾಸಿನಲ್ಲಿ ಓದುತ್ತಿರುವ ಆಕೆಯ ಸಹಪಾಠಿ ಬಿದಿರಿನ ಕೋಲಿನಿಂದ ಮೊಸಳೆ ತಲೆಗೆ ಹೊಡೆದಿದ್ದಾಳೆ. ತಲೆಗೆ ಸರಿಯಾಗಿ ಏಟು ಬಿದ್ದದ್ದರಿಂದ ಮೊಸಳೆ ಬಸಂತಿಯನ್ನು ಬಿಟ್ಟು ಓಡಿ ಹೋಗಿದೆ.

 

ಮೊಸಳೆ ದಾಳಿಗೊಳಗಾದ ಬಾಲಕಿಗೆ ಚಿಕಿತ್ಸೆ ನೀಡುವ ಜೊತೆಗೆ ಕುಟುಂಬಕ್ಕೆ ಪರಿಹಾರ ನೀಡುವುದಾಗಿ ಅರಣ್ಯ ಇಲಾಖೆ ಹೇಳಿದೆ.