ಟ್ವಿಟ್ಟರ್-ನಲ್ಲಿ ವಿಶ್ವಾದ್ಯಂತ ಅತಿಹೆಚ್ಚು ಫಾಲೋವರ್ಸ್‌ ಹೊಂದಿ ಗಮನ ಸೆಳೆದ ಪ್ರಧಾನಿ ಮೋದಿ, ಫಾಲೋವರ್ಸ್ ಗಳಲ್ಲಿ ಶೇ.60 ರಷ್ಟು ನಕಲಿ ಫಾಲೋವರ್ಸ್‌.!

0
246

ಕಳೆದ ಐದು ವರ್ಷದಲ್ಲಿ ವಿಶ್ವಾದ್ಯಂತ ಅತಿಹೆಚ್ಚು ಫಾಲೋವರ್ಸ್‌ ಹೊಂದುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಪ್ರಧಾನಿ ನರೇಂದ್ರ ಮೋದಿ ಹಿಂದಿಕ್ಕಿದ್ದಾರೆ. ಫೇಸ್‌ಬುಕ್‌, ಟ್ವಿಟ್ಟರ್‌, ಇನ್‌ಸ್ಟಾಗ್ರಾಂಗಳಲ್ಲಿ ಒಟ್ಟು 11 ಕೋಟಿಗೂ ಅಧಿಕ ಫಾಲೋವರ್ಸ್‌ಗಳನ್ನು ಪ್ರಪಂಚದಾದ್ಯಂತ ಮೋದಿ ಹೊಂದಿದ್ದಾರೆ, ಟ್ವಿಟ್ಟರ್‌-ನಲ್ಲಿ 40.3 ಮಿಲಿಯನ್ ಫಾಲೋವರ್ಸ್ ಹೊಂದಿದ ಮೋದಿಯವರು ಪ್ರಪಂಚದಲ್ಲಿ ವಿಶೇಷ ವ್ಯಕ್ತಿ ಎನ್ನುವ ಮಾತುಗಳು ಕೇಳಿ ಬರುತ್ತಿದ್ದವು ಆದರೆ ಈಗ ಶಾಕಿಂಗ್ ಸುದ್ದಿಯೊಂದು ಹರಡಿದ್ದು, ಮೋದಿ ಟ್ವಿಟ್ಟರ್‌ ಫಾಲೋವರ್ಸ್ ಗಳಲ್ಲಿ 60 ರಷ್ಟು ಫೇಕ್ ಫಾಲೋವರ್ಸ್ ಇದ್ದಾರೆ ಎನ್ನುವುದು ಬೆಳಕಿಗೆ ಬಂದಿದೆ.

ಹೌದು ವಿಶ್ವದಲ್ಲಿಯೇ ಅತೀ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿರುವ ನಾಯಕರನ್ನು ಫಾಲೋ ಮಾಡುತ್ತಿರುವ ಅಕೌಂಟ್ಗಳು ಫೇಕ್ ಎಂದು ತಿಳಿದು ಬಂದಿದೆ. ಹಲವು ನಾಯಕರು ಗಣನೀಯ ಸಂಖ್ಯೆಯ ಫೇಕ್ ಫಾಲೋವರ್ಸ್ಗಳನ್ನು ಹೊಂದಿರುವುದು ಬೆಳಕಿಗೆ ಬಂದಿದೆ. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಟ್ವಿಟ್ಟರ್ ಫಾಲೋವರ್ಸ್ ಗಳಲ್ಲಿ ಅರ್ಧಕ್ಕಿಂತ ಹೆಚ್ಚು ಫೇಕ್ ಫಾಲೋವರ್ಸ್ಗಳನ್ನು ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಹಾಗೇ ಇವರ ಜತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕಾಂಗ್ರೆಸ್ ನಾಯಕ ಶಶಿ ತರೂರ್ ರವರು ಕೂಡ ಫೇಕ್ ಫಾಲೋರ್ವಸ್ಗಳನ್ನು ಹೊಂದಿದ್ದಾರೆ. ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಟ್ವಿಟ್ಟರ್ ನಲ್ಲಿ ಅತಿಹೆಚ್ಚು ಮಂದಿ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ಪೈಕಿ ಶೇ.60 ನಕಲಿ ಖಾತೆಗಳು ಎಂದು ವರದಿಯೊಂದು ಹೇಳಿದೆ.

ಏನಿದು ವರದಿ?

ಟ್ವಿಪ್ಲೊಮಸಿ ಅಂತರಾಷ್ಟ್ರೀಯ ಸಂಸ್ಥೆಗಳು ಮತ್ತು ಸರ್ಕಾರಗಳಿಗೆ ಡಿಜಿಟಲ್ ತಂತ್ರಜ್ಞಾನ ಮತ್ತು ಅವುಗಳ ನಿರ್ವಹಣೆ ಹಾಗೂ ಅಭಿವೃದ್ಧಿ ಬಗ್ಗೆ ಸಲಹೆ ನೀಡುವ ಸಂಸ್ಥೆಯಾಗಿದೆ. ಈ ಸಂಸ್ಥೆಯ ವರದಿಯ ಪ್ರಕಾರ, ಪ್ರಧಾನಿ ನರೇಂದ್ರ ಮೋದಿಯ 4,09,93,053 ಅನುಯಾಯಿಗಳಲ್ಲಿ 2,47,99,527 ಮಂದಿ ಅನುಯಾಯಿಗಳು ನಕಲಿ ಮತ್ತು 16,191,426 ಖಾತೆಗಳು ಅಧಿಕೃತ ಎಂದು ಹೇಳಿದೆ. ಕೇವಲ ಪ್ರಧಾನಿ ನರೇಂದ್ರ ಮೋದಿ ಮಾತ್ರವಲ್ಲದೇ ವಿಶ್ವದ ಪ್ರಮುಖ ನಾಯಕರು ನಕಲಿ ಫಾಲೋವರ್ಸ್ ಹೊಂದಿದ್ದಾರೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ಗೆ ಶೇ.37 ನಕಲಿ ಅನುಯಾಯಿಗಳಿದ್ದಾರೆ. ಅವರ 4,89,39,948 ಫಾಲೋವರ್ಸ್ ನಲ್ಲಿ 3,59,80,870 ಅಸಲಿ ಮತ್ತು 1,24,45,604 ನಕಲಿ ಖಾತೆಗಳ
ಮೂಲಕ ಫಾಲೋ ಮಾಡಲಾಗುತ್ತಿದೆ ಎಂದು ವರದಿ ಹೇಳಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‍ನ 3,696,460 ಫಾಲೋವರ್ಸ್ ಪೈಕಿ 1,715,634 ನಕಲಿ ಎಂದು ಕಂಪನಿ ತಿಳಿಸಿದೆ. ಪೋಪ್ ಫ್ರಾನ್ಸಿಸ್ ಅವರಿಗೆ ಶೇ.59 ಮಂದಿ ನಕಲಿ ಅಭಿಮಾನಿಗಳಿದ್ದಾರೆ. ಈ ಹಿಂದೆ ಫೇಸ್‌ಬುಕ್‌, ಟ್ವಿಟ್ಟರ್‌, ಇನ್‌ಸ್ಟಾಗ್ರಾಂಗಳಲ್ಲಿ ಒಟ್ಟು 11 ಕೋಟಿಗೂ ಅಧಿಕ ಫಾಲೋವರ್ಸ್‌ಗಳನ್ನು ಪ್ರಪಂಚದಾದ್ಯಂತ ಮೋದಿ ಹೊಂದಿದ್ದಾರೆ ಎಂದು ಡಿಜಿಟಲ್‌ ಮಾರ್ಕೆಟಿಂಗ್‌ ಕಂಪನಿ ಎಸ್‌ಇಎಮ್‌ ರಶ್‌ ನಡೆಸಿರುವ ಸಮೀಕ್ಷೆಯಲ್ಲಿ ಬಹಿರಂಗವಾಗಿತ್ತು, ಫೇಸ್‌ಬುಕ್‌ನಲ್ಲಿ 4.3 ಕೋಟಿ, ಟ್ವಿಟ್ಟರ್‌ನಲ್ಲಿ 4.7 ಕೋಟಿ ಹಾಗೂ ಇನ್‌ಸ್ಟಾಗ್ರಾಂನಲ್ಲಿ 2 ಕೋಟಿ ಫಾಲೋವರ್ಸ್‌ ಪ್ರಧಾನಿ ಮೋದಿ ಅವರಿಗೆ ಇದ್ದಾರೆ. ಟ್ರಂಪ್‌ಗೆ ಒಟ್ಟು 9.6 ಕೋಟಿ ಫಾಲೋವರ್ಸ್‌ ಇದ್ದಾರೆ. ಎಂದು ಹೇಳಿತ್ತು ಆದರೆ ಈಗ ಬಂದ ವರದಿ ಸಾಕಷ್ಟು ನಿರಾಸೆ ಮೂಡಿಸಿದೆ.