ರಜೆ ಇಲ್ಲವಂತ ಟೂರಿಸ್ಟ್ ಮಾಡದೆ ಇರಬೇಡಿ ಬರಿ ಎರಡೇ ದಿನಗಳಲ್ಲಿ ಟೂರಿಸ್ಟ್ ಮಾಡುವ ಸ್ಥಳಗಳು ಇಲ್ಲಿವೆ ನೋಡಿ..

0
9234

ಟೂರಿಸ್ಟ್ ಅಂದರೆ ಪ್ರತಿಯೊಬ್ಬರಿಗೂ ಇಷ್ಟಾನೆ ಅಲ್ವ? ಅದಕ್ಕಾಗಿ ರಜೆ ಸಿಗುವುದೇ ನೋಡುತ್ತಿರುತ್ತಾರೆ. ಅದರಲ್ಲಿ ಕೆಲವೊಬ್ಬರಂತು ತಿಂಗಳಿಗೆ ಒಂದು ಸಾರಿ ಔಟ್ ಸೈಡ್ ಹೋಗಲೇ ಬೇಕು ಇಲ್ಲವಾದರೆ ಮನಸ್ಸಿಗೆ ನೆಮ್ಮದಿ ಇರುವುದೇ ಇಲ್ಲ. ಆದ್ರೆ ಏನ್ ಮಾಡೋದು ಈ ಒತ್ತಡದ ಜೀವನದಲ್ಲಿ ವಾರದ ವರೆಗೆ ರಜೆ ಇರುವುದೇ ಇಲ್ವೆ! ಬರಿ ಶನಿವಾರ, ಭಾನುವಾರ ಎರಡೂ ದಿನ ರಜೆ ಇರುತ್ತದೆ. ಅದರಲ್ಲಿ ಹೇಗೆ ಟೂರಿಸ್ಟ್ ಮಾಡೋದು ಸಾದ್ಯ? ಅಂತ ಹೆಚ್ಚಿನವರು ತಮ್ಮ ಟೂರಿಸ್ಟ್ ಯೋಜನೆಯನ್ನು ಕ್ಯಾನ್ಸಲ್ ಮಾಡುತ್ತಾರೆ. ಆದರೆ ಇವರಿಗೆ ತಿಳಿಯದೆ ಇರುವ ವಿಚಾರ ಅಂದ್ರೆ ಎರಡೇ ದಿನಗಳಲ್ಲಿ ಬೊಂಬಾಟ್ ಆಗಿ ಪ್ರವಾಸ ಮಾಡಿ ಎಂಜಾಯ್ ಮಾಡೋ ಸ್ಥಳಗಳ ಬಗ್ಗೆ. ಹಾಗಾದ್ರೆ ಎರಡೇ ದಿನಗಳಲ್ಲಿ ಟೂರಿಸ್ಟ್ ಮಾಡುವ ಸ್ಥಳಗಳು ಯಾವವು ಅಂದ್ರೆ ಈ ಮಾಹಿತಿ ನೋಡಿ.

ಪಾಂಡಿಚೇರಿ

Also read: ಬೆಂಗಳೂರಿನ ಸುತ್ತ ಮುತ್ತ ನೋಡಲೇ ಬೇಕಾದ ಸ್ಥಳಗಳು…

ಟೂರಿಸ್ಟ್ ಪ್ರಿಯರಿಗೆ ಒಂದು ಒಳ್ಳೆಯ ಪ್ರವಾಸಿ ಸ್ಥಳ ವೆಂದರೆ ಪಾಂಡಿಚೇರಿ. ಬೆಂಗಳೂರಿನಿಂದ 305 ಕಿ.ಮೀ ದೂರದಲ್ಲಿ ಪಾಂಡಿಚೇರಿ ಇದೆ. ತಮಿಳು ಮತ್ತು ಫ್ರೆಂಚ್ ಸಮಾಜಗಳ ಅದ್ಭುತ ಸಂಯೋಜನೆಯೊಂದಿಗೆ ಈ ಪ್ರಾಂತ್ಯವು ಶಾಂತವಾಗಿದೆ. ಅಲ್ಲಿ ಅರೋಬಿಂದೋ ಆಶ್ರಮವಿದೆ. ಅದಕ್ಕೂ ಭೇಟಿ ನೀಡಬಹುದು. ಈ ಪ್ರವಾಸಕ್ಕೆ ಬರಿ ಎರಡು ದಿನಗಳು ಸಾಕಾಗುತ್ತೆ. ಬೆಂಗಳೂರಿನಿಂದ ಪಾಂಡಿಚೇರಿಗೆ ಟ್ಯಾಕ್ಸಿ ಮೂಲಕವೂ ಹೋಗಬಹುದು. ಇಲ್ಲಿ ನೀವು ಸ್ಕೂಬಾ ಡೈವಿಂಗ್‌ನ ಮಜಾ ಮಾಡಿ ಜೀವನದಲ್ಲಿ ಯಾವತ್ತು ಮರೆಯೋದಿಲ್ಲ.

ಊಟಿ

Also read: ರಜೆದಿನಗಳಲ್ಲಿ ಭೇಟಿ ನೀಡಬಹುದಾದ ಅಂದಾನಮಾನ್-ನಿಕೋಬಾರ್ ದ್ವೀಪದ ಪ್ರಮುಖ ಟೂರಿಸ್ಟ್ ಸ್ಥಳಗಳು ಯಾವುವು ಗೊತ್ತಾ?

ಕಡಿಮೆ ಸಮಯದಲ್ಲಿ ನೋಡುವ ಇನ್ನೊಂದು ಸ್ಥಳ ವೆಂದರೆ ಊಟಿಯಲ್ಲಿ ಒಟ್ಟು 48 ಪ್ರವಾಸಿ ತಾಣಗಳಿವೆ. ಹಾಗಾಗಿ ಪ್ರವಾಸಿಗರು ಒಂದೇ ಪ್ರದೇಶದಲ್ಲಿ ಸುಮಾರು 48 ಅದ್ಭುತ ತಾಣವನ್ನು ಸವಿಯಬಹುದಾಗಿದೆ. ಬೆಂಗಳೂರಿನಿಂದ 266ಕಿ.ಮೀ ದೂರದಲ್ಲಿದೆ. ಇದನ್ನು ಕ್ವೀನ್ ಆಫ್ ಹಿಲ್ಸ್ ಎನ್ನುತ್ತಾರೆ. ಇಲ್ಲಿ ಬೊಟಾನಿಕಲ್ ಗಾರ್ಡನ್, ಡಿಯರ್ ಪಾರ್ಕ್ ಹಾಗೂ ಮ್ಯೂಸಿಯಂನ್ನೂ ನೋಡಬಹುದು. ಊಟಿಯ ವಾತಾವರಣ ಯಾರಿಗಾದರೂ ಇಷ್ಟವಾಗಲಾರದೆ ಇರಲಾರದು. ಎರಡು ದಿನಗಳ ಮಟ್ಟಿಗೆ ಊಟಿ ಫರ್‌ಫೆಕ್ಟ್ ಸ್ಥಳವಾಗಿದೆ.

ಬಂಡೀಪುರ

Also read: ಈ ೧೦ ಸ್ಥಳಗಳು ಚಳಿಗಾಲದಲ್ಲಿ ತುಂಬಾ ರಮಣೀಯ!!!

ಬಂಡೀಪುರ ರಾಷ್ಟ್ರೀಯ ಉದ್ಯಾನವನ ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿ ಇರುವ ಒಂದು ರಾಷ್ಟ್ರೀಯ ಉದ್ಯಾನವನ. ತಮಿಳುನಾಡಿನ ಮದುಮಲೈ ರಾಷ್ಟ್ರೀಯ ಉದ್ಯಾನವನ ಮತ್ತು ಕೇರಳದ ವಾಯ್ನಾಡ್ ವನ್ಯಜೀವಿ ಅಭಯಾರಣ್ಯ ಇದಕ್ಕೆ ಹೊಂದಿಕೊಂಡಿದೆ. ಬೆಂಗಳೂರಿನಿಂದ 220 ಕಿ.ಮೀ ದೂರದಲ್ಲಿ ಬಂಡೀಪುರ ಅಭಯಾರಣ್ಯವಿದೆ. ಬಂಡಿಪುರ ರಾಷ್ಟ್ರೀಯ ಅಭಯಾರಣ್ಯ, ನಿಮಗೆ ಕಾಡಿನಲ್ಲಿ ಸಫಾರಿ ಮಾಡಬೇಕೆಂದಿದ್ದರೆ ಬಂಡೀಪುರಕ್ಕೆ ಬನ್ನಿ. ಅಳಿವಿನಂಚಿನಲ್ಲಿರುಬವ ಕೆಲವು ಪ್ರಾಣಿಗಳನ್ನು ನೋಡಬಹುದು.

ಕೂರ್ಗ್

Also read: ದೋಸೆಯ ಕ್ಯಾಪಿಟಲ್ ಸಿಟಿ ಎಂದು ಪ್ರಸಿದ್ದಿ ಪಡೆದಿರುವ ಬೆಂಗಳೂರಿನಲ್ಲಿ ದೋಸೆ ಸಿಗುವ 20 ಸೂಪರ್ ಜಾಗಗಳು ಇಲ್ಲಿವೆ ನೋಡಿ..

ಕೊಡಗಿಗೆ ಕೂರ್ಗ್ (Coorg) ಎಂಬ ಆಂಗ್ಲೀಯ ಬಳಕೆಯೂ ಇದೆ. ಭಾರತದ ‘ಸ್ಕಾಟ್ ಲ್ಯಾಂಡ್’ ಎಂಬ ಹೆಸರೂ ಇದಕ್ಕಿದೆ ‘ಕೊಡಗು’ – ಕನ್ನಡದ ಕುಡು, ಎಂದರೆ ಗುಡ್ಡ ಅಥವಾ ಬೆಟ್ಟದ ಪ್ರದೇಶ ಎಂಬುದರಿಂದ ಬಂದಿರಬಹುದೆಂದು ಭಾವಿಸಲಾಗಿದೆ. ಭಾರತದಲ್ಲಿರುವ ಪ್ರಸಿದ್ದ ಹಿಲ್ ಸ್ಟೇಶನ್‌ಗಳಲ್ಲಿ ಕೂರ್ಗ್ ಕೂಡಾ ಒಂದು. ಬೆಂಗಳೂರಿನಿಂದ 260 ಕಿ.ಮೀ ದೂರದಲ್ಲಿ ಕೊಡಗು ಇದೆ. ಮೋಡಗಳಿಂದ ಆವರಿಸಲ್ಪಟ್ಟ ಬೆಟ್ಟಗಳು, ಕಾಫಿ ತೋಟ, ಎಸ್ಟೆಟ್‌ಗಳು ಬೆಂಗಳೂರಿನಿಂದ 2ದಿನಗಳ ರಜೆ ಕಳೆಯಲು ಸೂಕ್ತವಾಗಿದೆ.

ಹಂಪಿ

Also read: ಕರ್ನಾಟಕದ ಈ ಒಂಬತ್ತು ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿದರೆ, ನಿಮ್ಮೆಲ್ಲಾ ಕಷ್ಟಗಳು ಶೀಘ್ರವೇ ಪರಿಹಾರವಾಗುತ್ತೆ, ನೀವು ಎಷ್ಟಕ್ಕೆ ಭೇಟಿ ಕೊಟ್ಟಿದ್ದೀರ?

ಹಂಪಿಯಲ್ಲಿ ಒಂದೊಂದು ಶಿಲೆಯೂ ಅದ್ಭುತ ಕತೆಯನ್ನು ಹೇಳುತ್ತವೆ. ಪ್ರತೀ ಕಟ್ಟಡಗಳೂ ತನ್ನದೇ ಆದ ವೈವಿಧ್ಯತೆಯನ್ನೂಳಗೊಂಡಿದೆ. ದೇವಸ್ಥಾನ, ಸಪ್ತಸ್ವರ ಸಂಗೀತ ಹೊರಹೊಮ್ಮಿಸುವ ಕಲ್ಲಿನ ಕಂಭಗಳು, ಜುಳು ಜುಳು ಹರಿಯುವ ತುಂಗಭದ್ರೆಯ ತಟದಲ್ಲಿರುವ ವಿಶ್ವವಿಖ್ಯಾತ ಕಲ್ಲಿನ ರಥ, ಮಹಾನವಮಿ ದಿಬ್ಬ, ಸಾಸಿವೆ ಕಾಳು ಗಣಪತಿ, ಉಗ್ರ ನರಸಿಂಹ, ಕಮಲ ಮಹಲ್ , ಬಡವಿ ಲಿಂಗ, ಅನೆ ಲಾಯ, ಒಂಟೆ ಸಾಲು, ಎಲ್ಲವನ್ನು ಜೀವನದಲ್ಲಿ ನೋಡಲೇ ಬೇಕು. ಬೆಂಗಳೂರಿನಿಂದ 367 ಕಿ,ಮೀ ದೂರದಲ್ಲಿದೆ. ಯುನೆಸ್ಕೋದ ವಿಶ್ವ ಪಾರಂಪರೆಯ ಪಟ್ಟಿಯಲ್ಲಿ ಹಂಪಿ ಸೇರಿದೆ. ಐತಿಹಾಸಿಕ ಹಿನ್ನೆಯಯನ್ನು ಹೊಂದಿರುವ ಹಂಪಿಯು ಎರಡು ದಿನಗಳ ಮಟ್ಟಿಗೆ ತಿರುಗಾಡಿ ಬರಲು ಉತ್ತಮ ಸ್ಥಳವಾಗಿದೆ. ಚಿತ್ರದುರ್ಗ ಎನ್‌ಹೆಚ್ 4 ಹೈವೇಯಲ್ಲಿ ಹೋಗಿ ಹೊಸಪೇಟೆ ತಲುಪಿ ನಂತರ ಅಲ್ಲಿದ್ದ 13 ಕಿ.ಮೀ ದೂರದಲ್ಲಿ ಹಂಪಿ ಇದೆ. ಬೆಟ್ಟ ಹತ್ತುವುದು, ಪ್ರಕೃತಿ ಸೌಂದರ್ಯವನ್ನು ನೋಡಬಹುದು.

ಕಬಿನಿ

Also read: ಮನಸ್ಸಿಗೆ ನೆಮ್ಮದಿ ಬಯಸುವವರಿಗೆ ಶೃಂಗೇರಿ ಹಾಗು ಸುತ್ತ ಮುತ್ತಲಿನ ಜಾಗ ಹೇಳಿ ಮಾಡಿಸಿದ್ದು..

ಬೆಂಗಳೂರಿನಿಂದ 200 ಕಿ.ಮೀ ದೂರದಲ್ಲಿದೆ ಕಬಿನಿ. ನಿಸರ್ಗ ಸೌಂದರ್ಯವನ್ನು ಇಷ್ಟಪಡುವವರಿಗೆ ಕಬಿನಿ ವಾರಾಂತ್ಯ ಕಳೆಯಲು ಉತ್ತಮ ಸ್ಥಳವಾಗಿದೆ. ಇಲ್ಲಿ ಬ್ಯಾಕ್‌ವಾಟರ್ ಕೂಡಾ ಇದೆ. ಎರಡು ದಿನದ ಮಟ್ಟಿಗೆ ಸಿಟಿ ಲೈಫ್‌ನಿಂದ ಬ್ರೇಕ್ ಪಡೆಯಲು ಇಲ್ಲಿಗೆ ಬರಬಹುದು. ಇಲ್ಲಿಗೆ ಬಸ್ ಮೂಲಕನೂ ಹೋಗಬಹುದು. ರೈಲ್ ಮೂಲಕಾನೂ ತಲುಪಬಹುದು ಅಲ್ಲಿನ ವಿಶೇಷತೆ ಅಂದರೆ. ಕಪಿಲಾ ಎಂದೂ ಕರೆಯಲ್ಪಡುವ ಕಬಿನಿ ನದಿಯು ದಕ್ಷಿಣ ಭಾರತದ ನದಿಗಳಲ್ಲೊಂದು. ಕೇರಳ ರಾಜ್ಯದ ವಯನಾಡ್ ಜಿಲ್ಲೆಯಲ್ಲಿ, ಪನಮರಮ್ ಮತ್ತು ಮಾನಂತವಾಡಿ ನದಿಗಳ ಸಂಗಮದಿಂದ ಹುಟ್ಟಿ ಪೂರ್ವಾಭಿಮುಖವಾಗಿ ಹರಿದು ಕರ್ನಾಟಕದ ತಿರುಮಕೂಡಲು ನರಸೀಪುರದಲ್ಲಿ ಕಾವೇರಿ ನದಿಯನ್ನು ಸೇರುತ್ತದೆ. ಈ ಸ್ಥಳವನ್ನು ನೋಡುವುದು ವಿಶೇಷವಾಗಿದೆ.

ಮಂಗಳೂರು

Also read: ಮಕ್ಕಳಿಗೆ ರಜೆ ಬಂದರೆ.. ಮನರಂಜನೆಯ ಜೊತೆಗೆ ಜ್ಞಾನದ ಅಭಿವೃದ್ಧಿಗೆ ಈ 5 ರೀತಿಯ ಜಾಗಗಳಿಗೆ ತಪ್ಪದೇ ಕರೆದುಕೊಂಡು ಹೋಗಿ..

ಪ್ರವಾಸ ಪ್ರಿಯರಿಗೆ ಇನ್ನೊಂದು ಉತ್ತಮ ಸ್ಥಳ ವೆಂದರೆ ಮಂಗಳೂರು. ಬೆಂಗಳೂರಿನಿಂದ 355ಕಿ.ಮೀ ದೂರದಲ್ಲಿದೆ. ಬಂದರುಗಳ ನಗರವಾಗಿರುವ ಮಂಗಳೂರು ಬೀಚ್‌ಗಳಿಂದ ಕೂಡಿದ್ದು, ಟ್ರಕ್ಕಿಂಗ್ ಕೂಡಾ ಮಾಡಬಹುದಾಗಿದೆ. ಬಸ್‌ ಮೂಲಕ ಮಂಗಳೂರು ತಲುಪುವುದು ಬೆಸ್ಟ್. ಮಂಗಳೂರಿನಲ್ಲಿ ಬೀಚ್‌ನ ಮಜಾ ಪಡೆಯುವುದರ ಜೊತೆಗೆ ಸೀ ಫುಡ್‌ನ್ನೂ ಸವಿಯಬಹುದು. ಫಿಶ್ ಪ್ರಿಯರಿಗೆ ಇಷ್ಟವಾದ ಎಲ್ಲ ತರಹದ ಊಟ ಸವಿಯ ಬಹುದು.