ನೀವು ಧಾರವಾಹಿ ನೋಡ್ತೀರಾ?? ನಿಮ್ಮ ಮನೆಯಲ್ಲೂ ನೋಡ್ತಾರಾ?? ಇದನ್ನು ಓದಿ ಶಾಕ್ ಆಗಬೇಡಿ..!!

0
1965

Kannada News | kannada Useful Tips

ಇತ್ತೀಚಿನ ದಿನಗಳಲ್ಲಿ ಒಂದು ವಯಸ್ಸಿನ ಮಕ್ಕಳು ಸೀರಿಯಲ್ ಗಳಿಗೆ ಅಡಿಕ್ಟ್ ಆಗುತ್ತಿದ್ದಾರೆ.. ಇದಕ್ಕೆ ಕಾರಣ ಹೆತ್ತವರು.. ಹೇಗೆ ಗೊತ್ತಾ?? ಧಾರಾವಾಹಿಯನ್ನು ಒಂದು ಮನರಂಜನೆಯ ವಸ್ತುವಾಗಿ ಪರಿಗಣಿಸದೆ ಸೀರಿಯಲ್ ನೋಡಿದ ಮೇಲೂ ದಿನಪೂರ್ತಿ ಅದರ ಬಗ್ಗೆಯೇ ಮಾತನಾಡುತ್ತಿದ್ದರೆ ಮಕ್ಕಳೂ ಕೂಡ ಅದರಲ್ಲೇನೊ ಇದೆ ಎಂದು ಭಾವಿಸುತ್ತಾರೆಪ್.. ಜೊತೆಗೆ ಮಕ್ಕಳನ್ನು ಟಿ ವಿ ಯ ಮುಂದೆ ಕೂರಿಸಿಕೊಂಡು ಸೀರಿಯಲ್ ನೋಡುವುಫ಼ು ಕೂಡ ಇದಕ್ಕೊಂದು ಕಾರಣ.

ಹಾಗಾದರೆ ಮಕ್ಕಳ ಮುಂದೆ ಸೀರಿಯಲ್ ನೋಡಲೇ ಬಾರದ ಎಂಬ ಪ್ರಶ್ನೆ ಈಗ ಎಲ್ಲರಲ್ಲೂ ಮೂಡುವುದು ಸಹಜ.. ಆದರೆ ಮಕ್ಕಳು ಟಿ ವಿ ಮುಂದೆ ಇದ್ದಾಗ ಆದಷ್ಟು ಅವಾಯ್ಡ್ ಮಾಡಿ.. ಅವರ ಮುಂದೆ ನ್ಯೂಸ್ ಗಳನ್ನು ಹಾಕಿ.. ದಯಮಾಡಿ ಕ್ರೈಂ ನ್ಯೂಸ್ ಗಳನ್ನು ಹಾಕಬೇಡಿ.. ನಮ್ಮ ಕೆಲವು ಕನ್ನಡ ನ್ಯೂಸ್ ಚಾನಲ್ ಗಳು ಟಿ ಆರ್ ಪಿ ಯ ಆಸೆಗಾಗಿ ಬರಿ ಕ್ರೈಂ ನ್ಯೂಸ್ ಅಥವಾ ಯಾರದೊ ಮನೆಯ ಸುದ್ದಿಯನ್ನು ಹಾಕುವುದೇ ಹೆಚ್ಚು.. ಭಾಷೆ ಯಾವುದಾದರೂ ಆಗಲಿ ಮಕ್ಕಳ ಜ್ನಾನ ಹೆಚ್ಚುವಂತದ್ದನ್ನು ತೋರಿಸಿ..
ಯಾಕೆ ಈ ರೀತಿಯಾಗಿ ಹೇಳ್ತಿದ್ದೀನಿ ಅಂದರೆ..

ಮೊನ್ನೆ ಮೊನ್ನೆ ತಾನೆ ಸೀರಿಅಲ್ ನೋಡಿ ಒಂದು ಮಗು ಅದನ್ನು ಅನುಕರಣೆ ಮಾಡಲು ಹೋಗಿ ಸತ್ತಿದ್ದನ್ನು ಇಲ್ಲಿ ನೆನೆಯಬಹುದು.. ಅದೊಂದೆ ಕಾರಣವಲ್ಲ ಮಕ್ಕಳು ಸೀರಿಯಲ್ ಗೆ ಅಡಿಕ್ಟ್ ಆದಷ್ಟೂ ಓದಿನ ಕಡೆ ಗಮನ ಕಡಿಮೆಯಾಗುತ್ತದೆ.. ಬೇಡದೇ ಇರುವ ವಿಚಾರಗಳು ತಲೆಗೆ ತುಂಬಿಕೊಳ್ಳುತ್ತವೆ.. ಮಕ್ಕಳು ದೊಡ್ಡ ಹೆಂಗಸರ ರೀತಿಯಲ್ಲಿ ವರ್ತಿಸಲು ಶುರು ಮಾಡುತ್ತಾರೆ.. ಮೆಚ್ಯುರಿಟಿ ಬರಬೇಕು ಆದರೆ ಕೆಲವೊಂದು ವಿಷಯದಲ್ಲಿ ಮಕ್ಕಳು ಮಕ್ಕಾಳಾಗೆ ಇದ್ದರೆ ಒಳ್ಳೆಯದು.. ಅವರ ಬಾಲ್ಯದ ಸವಿಯನ್ನು ಸ್ವಚ್ಛಂದವಾಗಿ.. ಆಟ ಪಾಠಗಳೊಂದಿಗೆ ಸವಿಯಬೇಕು.. ಅದನ್ನು ಬಿಟ್ಟು ಮನೆ ಮನೆ ಕಥೆ ಕೇಳುತ್ತಾ ಬೆಳೆದರೆ ಮಕ್ಕಳ ಮನಸ್ಸು ಖಿನ್ನತೆಗೆ ಹೋದರೂ ಆಶ್ಚರ್ಯ ಪಡಬೇಕಿಲ್ಲಾ..

ಸೀರಿಯಲ್ ನೋಡುವುದೇ ತಪ್ಪಲ್ಲ.. ಆದರೆ ಮಕ್ಕಳು ನೋಡುವುದು ಬೇಡ .. ಬೆಳಗ್ಗೆ ಇಂದ ಮನೆಕೆಲಸ ಮಾಡಿ ದಿನ ಪೂರ್ತಿ ಮನೆಯಲ್ಲೆ ಇರುವ ದೊಡ್ಡವರಿಗೆ ಮನರಂಜನೆಯ ಅವಷ್ಯಕತೆ ಕಂಡಿತ ಇರುತ್ತದೆ.. ಅವರು ನೋಡಲಿ.. ಆದರೆ ಅದು ನಮ್ಮ ಜೀವನದ ಭಾಗವಾಗದಿರಲಿ ಅಷ್ಟೇ..

ಮಾಹಿತಿ ಉಪಯುಕ್ತವೆನಿಸಿದರೆ ಶೇರ್ ಮಾಡಿ ಇತರರಿಗೂ ಉಪಯೋಗವಾದರೂ ಆದೀತು.