ವಾಹನ ಸವಾರರಿಗೆ ಸಿಹಿ ಸುದ್ದಿ; ಈ ಕಾರ್ಡ್ ಬಳಸಿದರೆ ಸಿಗುತ್ತೆ 71 ಲೀಟರ್ ಉಚಿತ ಪೆಟ್ರೋಲ್.! ಆಫರ್ ಪಡೆಯಲು ಈ ಮಾಹಿತಿ ನೋಡಿ..

0
810

ವಾಹನ ಸವಾರರಿಗೆ 2018 ರಲ್ಲಿ ಫ್ರೀ ಪೆಟ್ರೋಲ್ ಆಫರ್- ಗಳು ಬರುತ್ತಾನೆ ಇವೆ ಈ ಹಿಂದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಭರ್ಜರಿ ಆಫರ್‌ವೊಂದನ್ನು ನೀಡಿ. ತನ್ನ ಗ್ರಾಹಕರಿಗೆಲ್ಲಾ ಉಚಿತವಾಗಿ 5 ಲೀಟರ್ ಪೆಟ್ರೋಲ್ ನೀಡಿ ಸುದ್ದಿಯಲ್ಲಿತು. ಹಾಗೆಯೇ ದೇಶಿಯ ಮೊಬೈಲ್ ವಾಲೆಟ್ ಸಂಸ್ಥೆ ಮೊಬಿಕ್ವಿಕ್ ಪೆಟ್ರೋಲ್ ಪಾವತಿಗಳ ಮೇಲೆ ಶೇಕಡಾ ನೂರು ಕ್ಯಾಶ್ ಬ್ಯಾಕ್ ಆಫರ್ ಘೋಷಿಸಿತ್ತು. ನಂತರ ಹಲವಾರು ಕಂಪನಿಗಳು ಆಫರ್ ನೀಡಿ ಗ್ರಾಹಕರು ತಮ್ಮ app- ನ್ನು ಸ್ಮಾರ್ಟ್ ಫೋನ್ ಗಳಲ್ಲಿ ಬಳಕೆ ಮಾಡಿದರೆ ಉಚಿತವಾಗಿ 1 ರಿಂದ 5 ಲೀಟರ್ ವರೆಗೂ ಪೆಟ್ರೋಲ್ ನೀಡಲು ಘೋಷಣೆ ಮಾಡಿದ್ದವು ಈಗ ಕೇವಲ ಈ ಕಾರ್ಡ್ ಬಳಕೆ ಮಾಡಿದರೆ 71 ಲೀಟರ್ ಪೆಟ್ರೋಲ್ ಉಚಿತವಾಗಿ ಸಿಗಲಿದೆ ಅದು ಹೇಗೆ ಅಂತ ಇಲ್ಲಿದೆ ನೋಡಿ.

ಹೌದು ಸರ್ಕಾರಿ ತೈಲ ಕಂಪೆನಿ ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್​ (IOCL) ಸಿಟಿ ಬ್ಯಾಂಕ್​ ಸಹಯೋಗದೊಂದಿಗೆ ತನ್ನ ಗ್ರಾಹಕರಿಗೆ ವಿಶೇಷ ಆಫರ್​ನ್ನು ಒದಗಿಸುತ್ತಿದೆ. ಅದು ಹೇಗೆ ಅಂದರೆ ಸಿಟಿ ಬ್ಯಾಂಕ್​ನ​ ಪ್ಲಾಟಿನಮ್ ಕ್ರೆಡಿಟ್ ಕಾರ್ಡ್​ನೊಂದಿಗೆ ಈ ಕೊಡುಗೆಯನ್ನು ನೀಡುತ್ತಿದ್ದು, ಈ ವಿಶೇಷ ಕಾರ್ಡ್​ ಬಳಸಿ 71 ಲೀಟರ್ ​ಪೆಟ್ರೋಲ್ ಅಥವಾ ಡೀಸೆಲ್​ನ್ನು ಉಚಿತವಾಗಿ ಪಡೆಯಬಹುದು. ಅಷ್ಟೇ ಅಲ್ಲದೆ ಸಿಟಿ ಬ್ಯಾಂಕ ನೀಡುತ್ತಿರುವ ಈ ಕಾರ್ಡ್​ನ್ನು ಬಳಸಿ IOC ಲಿಮಿಟೆಡ್-​ನ ಯಾವುದೇ ಶಾಖೆಯಿಂದ ಇಂಧನವನ್ನು ತುಂಬಿಸಿದರೆ ಅದರ ತೆರಿಗೆಯನ್ನು ಕೂಡ ನೀಡಬೇಕಿಲ್ಲ. ಮತ್ತು ಕಾರ್ಡ್​ ಮೂಲಕ ಹೋಟೆಲ್ ರೆಸ್ಟೋರೆಂಟ್​ ಬಿಲ್ ಪಾವತಿ ಮಾಡಿದರೆ ಶೇ.15 ರಷ್ಟು ರಿಯಾಯತಿ ಸಿಗಲಿದೆ.

ಇತರೆ ಲಾಭಗಳು?

ಇದು ಅಷ್ಟೇ ಅಲ್ಲದೆ ನೀವು ಇಂಡಿಯನ್ ಆಯಿಲ್ ಶಾಖೆಯಿಂದ 150 ರೂ.ಗೆ ತೈಲವನ್ನು ಖರೀದಿಸಿದರೆ 4 ಅಂಕಗಳ ಟರ್ಬೊ ಪಾಯಿಂಟ್​ಗಳು ಲಭಿಸಲಿದೆ. ಅದೇ ರೀತಿ ಸೂಪರ್ ಮಾರ್ಕೆಟ್​ನಲ್ಲಿ ದಿನಸಿ ಖರೀದಿ ಮಾಡಿದರೆ 2 ಟರ್ಬೊ ಪಾಯಿಂಟ್​ ಸಿಗಲಿದೆ. ಶಾಪಿಂಗ್ ಹಾಗೂ ರೆಸ್ಟೋರೆಂಟ್​ ಬಿಲ್​ಗಳ ಮೇಲೆ ಪ್ರತಿ 150 ರೂ.ಗೆ 1 ಪಾಯಿಂಟ್​​ಗಳು ಲಭಿಸುತ್ತದೆ. ಇಲ್ಲಿ ಒಂದು ಟರ್ಬೋ ಪಾಯಿಂಟ್​ ಅಂದರೆ 1 ರೂ.ಗೆ ಸಮವಾಗಿರುತ್ತದೆ.

ಈ ಟರ್ಬೋ ಪಾಯಿಂಟ್​ಗಳನ್ನು ಬಳಸಿ ದೇಶದ 1200 ಇಂಡಿಯನ್ ಆಯಿಲ್ ಪಂಪ್​ಗಳಿಂದ ತೈಲ ಖರೀದಿಸಬಹುದಾಗಿದೆ. ಈ ಮೂಲಕ ಸಿಟಿ ಬ್ಯಾಂಕ್ ನೀಡುತ್ತಿರುವ ಈ ಉಚಿತ ಪ್ಲಾಟಿನಮ್ ಕಾರ್ಡ್​ ಪಾಯಿಂಟ್​ಗಳ ಮೂಲಕ ಒಂದು ವರ್ಷದಲ್ಲಿ 71 ಲೀಟರ್ ಪೆಟ್ರೋಲ್​ ಅಥವಾ ಡಿಸೇಲ್​ ಖರೀದಿಸಬಹುದು ಎಂದು ಬ್ಯಾಂಕಿನ ಅಧಿಕೃತ ವೆಬ್​​ಸೈಟ್​ನಲ್ಲಿ ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಲಿಂಕ್​ ಕ್ಲಿಕ್ ಮಾಡಿ.