ಅಪಾರ್ಟ್‌ಮೆಂಟ್ ಲಿಫ್ಟ್-ಗೆ ಮತ್ತೊಂದು ಬಲಿ; ಆಟವಾಡುತ್ತಿದ್ದಾಗ ಲಿಫ್ಟ್‌ಗೆ ಸಿಲುಕಿ ಅಪ್ಪಚ್ಚಿಯಾದ ಬಾಲಕ ಸ್ಥಳದಲ್ಲೇ ಸಾವು.!

0
305

ಸಾಮಾನ್ಯವಾಗಿ ನಗರಗಳಲ್ಲಿ ಅಪಾರ್ಟ್ಮೆಂಟ್ -ನಲ್ಲಿ ವಾಸಿಸುವುದು ಹೆಚ್ಚಾಗುತ್ತಿದೆ. ಬಾಡಿಗೆ ಅಥವಾ ಸ್ವಂತ ಮನೆಯಲ್ಲಿ ಲಿಫ್ಟ್ ಬಳಕೆ ಕೂಡ ಹೆಚ್ಚಾಗುತ್ತಿದ್ದು, ಇದರ ಬಗ್ಗೆ ಪಾಲಕರು ಹೆಚ್ಚಿನ ಎಚ್ಚರಿಕೆ ವಹಿಸುವುದು ಒಳ್ಳೆಯದು ಏಕೆಂದರೆ ಮಕ್ಕಳು ಲಿಫ್ಟ್-ಗಳಲ್ಲಿ ಹೋಗುವಾಗ ಅಪಾಯಗಳು ಹೆಚ್ಚಾಗಿ ನಡೆಯುತ್ತಿವೆ, ಇದಕ್ಕೆ ಸಾಕ್ಷಿಯಾಗಿ ನಿನ್ನೆ ಒಂದು ಘಟನೆ ನಡೆದಿದ್ದು. ಅಪಾರ್ಟ್​ಮೆಂಟ್‌ ಲಿಫ್ಟ್ ಮಧ್ಯೆ ಸಿಲುಕಿ ಜಜ್ಜಿಹೋಗಿ ಸಾವನ್ನಪಿದ್ದು, ಭಯ ಹುಟ್ಟಿಸುವಂತಿದೆ, ಅದಕ್ಕಾಗಿ ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸುವುದು ಒಳ್ಳೆಯದು.

Also read: ಪಾಲಕರೇ ನಿಮ್ಮ ಮಕ್ಕಳನ್ನು ಅಡುಗೆ ಮನೆಗೆ ಕಳುಹಿಸುವ ಮುನ್ನ ಎಚ್ಚರ; ಅಮ್ಮನಿಗೆ ಮ್ಯಾಗಿ ಮಾಡಲು ಹೋಗಿ ಶವವಾದ ಬಾಲಕ.!

ಹೌದು ಆಂಧ್ರಪ್ರದೇಶದ ರಾಯದುರ್ಗಂನ ಅಪಾರ್ಟ್​ಮೆಂಟ್‌ ಒಂದರಲ್ಲಿ 9 ವರ್ಷದ ಬಾಲಕನೋರ್ವ ಆಟವಾಡುತ್ತ ಲಿಫ್ಟ್ ಮಧ್ಯೆ ಸಿಲುಕಿ ಜಜ್ಜಿಹೋಗಿ ಸಾವನ್ನಪಿದ್ದಾನೆ. ಧನುಷ್(9) ಮೃತ ಬಾಲಕ. ರಾಯದುರ್ಗಂನ ಪಂಚವತಿ ಕಾಲೋನಿಯ ಅಪಾರ್ಟ್​ಮೆಂಟ್‌ನಲ್ಲಿ ಬಾಲಕ ಕುಟುಂಬಸ್ಥರೊಂದಿಗೆ ವಾಸಿಸುತ್ತಿದ್ದನು. ಬಾಲಕ ತಂದೆ ಹೆಸರು ಶೇಷಾ ಭಟ್ಟಾಚಾರ್ಯ, ಧನುಷ್ ಸೇರಿ ಅವರಿಗೆ ಒಟ್ಟು 4 ಮಂದಿ ಮಕ್ಕಳು. ಧನುಷ್ ಮನೆ ಮೂರನೇ ಮಹಡಿಯಲ್ಲಿ ಇದೆ. ಆದರೆ ಬಾಲಕ ತನ್ನ ಸಹೋದರಿ ಜೊತೆಗೆ ಕಟ್ಟಡದ 4ನೇ ಮಹಡಿಯಲ್ಲಿ ಆಟವಾಡುತ್ತಿದ್ದನು.

Also read: ಟಿಕ್ ಟಾಕ್‍ನಲ್ಲಿ ಮೋಹದ ಆಂಟಿ ಬಲೆಗೆ ಬಿದ್ದು ಲಕ್ಷಾಂತರ ಹಣ ಕಳೆದುಕೊಂಡ ವ್ಯಕ್ತಿ.!

ಈ ಕಟ್ಟಡದಲ್ಲಿದ್ದ ಲಿಫ್ಟ್ ನ ಬಾಗಿಲ ಬಳಿ ಹಾಕುವ ಸೇಫ್ಟಿ ಗ್ರಿಲ್ ಹಾಳಾಗಿತ್ತು. ಅದು ಸರಿಯಾಗಿ ಕಾರ್ಯನಿರ್ವಸುತ್ತಿರಲಿಲ್ಲ. ಈ ವೇಳೆ ಆಟವಾಡುತ್ತಿದ್ದ ಬಾಲಕ ಲಿಫ್ಟ್ ಹತ್ತಲು ಹೋಗಿದ್ದನು. ಲಿಫ್ಟ್ ಮೇಲಿನ ಮಹಡಿಯಲ್ಲಿದ್ದ ಕಾರಣ ಅದನ್ನು ನೋಡಲು ಹತ್ತಿರ ಹೋದ ಬಾಲಕ ಆಯಾತಪ್ಪಿ ಲಿಫ್ಟ್ ಕೆಳಗೆ ಇರುವ ಖಾಲಿ ಜಾಗಕ್ಕೆ ಬಿದ್ದಿದ್ದಾನೆ. ಆಗ ಆತನ ಸಹೋದರಿ ಸಹಾಯಕ್ಕೆ ಬಂದರೂ ಯಾವುದೇ ಪ್ರಯೋಜನವಾಗಿಲ್ಲ. ಬಾಲಕ ಬೀಳುತ್ತಿದ್ದಂತೆ ಲಿಫ್ಟ್ ಕೂಡ ಮೇಲಿಂದ ಕೆಳಗೆ ಬಂದಿದ್ದು. ಲಿಫ್ಟ್ ಮಧ್ಯೆ ಸಿಲುಕಿ ಬಾಲಕನ ದೇಹ ಜಜ್ಜಿಹೋಗಿದ್ದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಲಿಫ್ಟ್ ನ ಸೇಫ್ಟಿ ಗ್ರಿಲ್ ಸರಿಯಿಲ್ಲದ ಕಾರಣದಿಂದ ಈ ಅನಾಹುತ ನಡೆದಿದೆ. ಆದರೆ ಈ ಸಂಬಂಧ ಪೊಲೀಸರು ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಿಸಿದ್ದಾರೆ. ಹೀಗೆ ಲಿಫ್ಟ್‌ಗೆ ಸಿಲುಕಿ ಬಾಲಕ ಸಾವನ್ನಪ್ಪಿರುವುದು ಈ ವರ್ಷದಲ್ಲಿ ಇದು ಮೂರನೇ ಪ್ರಕರಣವಾಗಿದೆ. ಈ ಹಿಂದೆ ಅಕ್ಟೋಬರ್ ತಿಂಗಳಲ್ಲಿ ಹಸ್ತಿನಾಪುರದಲ್ಲಿ 9 ವರ್ಷದ ಬಾಲಕಿ ಲಿಫ್ಟ್‌ಗೆ ಸಿಲುಕಿ ಮೃತಪಟ್ಟಿದ್ದಳು. ಹಾಗೆಯೇ ಫೆಬ್ರವರಿಯಲ್ಲಿ 10 ವರ್ಷದ ಬಾಲಕನೋರ್ವ ಬಾಲಾಜಿ ನಗರದಲ್ಲಿ ಲಿಫ್ಟ್ ಗ್ರಿಲ್ ಬಾಗಿಲಿಗೆ ಸಿಲುಕಿ ಸಾವನ್ನಪ್ಪಿದ್ದನು.

Also read: ಫ್ಯಾಷನ್ ಟ್ರೆಂಡ್ ಎಂದು ಟೈಟ್ ಜೀನ್ಸ್ ಧರಿಸುವ ಮುನ್ನ ಎಚ್ಚರ; ಯಾಕೇ ಅಂತ ಮಿಸ್ ಮಾಡದೇ ಈ ಮಾಹಿತಿ ಓದಿ..!

ನಂತರ ಬಾಗಲಕೋಟೆ ಜಿಲ್ಲೆಯ ಹುನಗುಂದದ ಹೂವಿನಹಡಗಲಿಯ ನೀಲಪ್ಪ ಅವರು ಈ ಅಪಾರ್ಟ್‌ಮೆಂಟ್ ಘಟನೆ ನಡೆದಿದ್ದು, ಲಿಫ್ಟ್ ನೋಡಿಕೊಳ್ಳುವ ಸೆಕ್ಯೂರಿಟಿ ಮಗ ಲಿಫ್ಟ್‌ಗೆ ಸಿಲುಕಿ ಸಾವನ್ನಪ್ಪಿದ್ದ. ಇದು ಹಳೆಯ ಲಿಫ್ಟ್ ಎನ್ನಲಾಗಿದೆ. ಲಿಫ್ಟ್‌ನೊಳಗೆ ಹೋಗುವಾಗ ಬಾಗಿಲು ಹಾಕದೆ ಲಿಫ್ಟ್‌ ಚಾಲನೆ ಮಾಡಿದಾಗ ಈ ದುರ್ಘಟನೆ ನಡೆದಿತ್ತು. ಹೀಗೆ ಲಿಫ್ಟ್ ನಲ್ಲಿ ಸಿಲುಕಿ ಮಕ್ಕಳು ಸಾಯುತ್ತಿರುವುದು ಹೆಚ್ಚಾಗುತ್ತಿದೆ. ಅದಕ್ಕಾಗಿ ಲಿಫ್ಟ್ ಇರುವ ಮನೆಯಲ್ಲಿ ವಾಸಿಸುವ ಪಾಲಕರು ಗಮನ ಎಚ್ಚರಿಕೆ ವಹಿಸುವುದು ಒಳ್ಳೆಯದು.