ಕೆರೆ ನದಿಗಳಲ್ಲಿ ಆಟವಾಡಲು ಅಥವಾ ಈಜಾಡಲು ಹೋಗುವವರೇ ಹುಷಾರ್, ಈ ಯುವಕ ಮೆದುಳು ತಿನ್ನುವ ಅಮೀಬದಿಂದ ಸಾವನಪ್ಪಿದ ಕಥೆ ಕೇಳಿದರೆ ಶಾಕ್ ಆಗುತ್ತೆ!!

0
487

ಫ್ಲೊರಿಡಾದಲ್ಲಿ ಮಿದುಳು ತಿನ್ನುವ ಅಪರೂಪದ ಅಮೀಬಾ ಪ್ರಕರಣ ಪತ್ತೆಯಾಗಿದೆ. ಮೆದುಳನ್ನೇ ತಿಂದು ತೇಗುವ ವಿಶ್ವದಲ್ಲೇ ಅತ್ಯಂತ ಅಪರೂಪದ ಮಾರಕ ಅಮೀಬಾಕ್ಕೆ (ಏಕಕೋಶ ಜೀವಿ) ಹತ್ತು ವರ್ಷದ ಬಾಲಕನೊಬ್ಬ ಬಲಿಯಾದ ಘಟನೆ ಅಮೆರಿಕದಲ್ಲಿ ವರದಿಯಾಗಿದೆ.

ನಾರ್ತ್ ಫ್ಲೋರಿಡಾ 13 ವರ್ಷದ ಟ್ಯಾನರ್ ಎಂಬ ಬಾಲಕ ನದಿಯಲ್ಲಿಈಜುವಾಗ ‘ನಯೆಗ್ಲೇರಿಯಾ ಫೊವ್ಲೇರಿ’ ಹೆಸರಿನ ಈ ಏಕಕೋಶ ಜೀವಿ ಮೂಗಿನ ಮೂಲಕ ಆತನ ದೇಹ ಪ್ರವೇಶಿಸಿ, ಮೆದುಳಿನ ಕೋಶಗಳನ್ನು ತಿಂದು ಹಾಕಿದೆ. ಬಾಲಕ ಕರೆಯಲ್ಲಿ ಈಜಾಡಿದ ಬಳಿಕ ಅಸ್ವಸ್ಥಗೊಂಡಿದ್ದ. ಎರಡು ದಿನಗಳ ಬಳಿಕ ಆತನಿಗೆ ತಲೆ ಸುತ್ತು ವಾಕರಿಕೆ ಹಾಗೂ ತೀವ್ರ ತಲೆ ನೋವು ಕಾಣಿಸಿಕೊಂಡಿತ್ತು. ಅಲ್ಲದೆ ಆತನ ಕುತ್ತಿಗೆಯ ಭಾಗ ಗಟ್ಟಿಯಾಗಿತ್ತು. ಎರಡು ಮೂರು ಆಸ್ಪತ್ರೆಗೆ ಕರೆದುಕೊಂಡು ಹೋದ ಬಳಿಕ ಆತನಲ್ಲಿ ಪ್ಯಾರಾಸಿಟಿವ್ ಅಮೀಬಾ ಇದೆ ಎಂದು ವೈದ್ಯರು ಹೇಳಿದ್ರು. ಅದಕ್ಕೆ ಯಾವುದೇ ಚಿಕಿತ್ಸೆ ಇಲ್ಲ ಅಂತ ತಿಳಿಸಿದ್ರು ಎಂದು ಪೋಷಕರು ಹೇಳಿದ್ದಾರೆ.

ಆಗಸ್ಟ್ 2ರಂದು ಟ್ಯಾನರ್ ಸಾವನ್ನಪ್ಪಿದ್ದಾನೆ. ಅಮೆರಿಕಾದಲ್ಲಿ ನೈಗ್ಲೇರಿಯಾ ಫ್ಲೋಲೆರಿ ಎನ್ನುವ ಏಕಕೋಶ ಜೀವಿಯಿಂದ ಮನುಷ್ಯರು ಸಾವನ್ನಪ್ಪಿರುವ ಮೂರನೇ ಪ್ರಕರಣ ಇದಾಗಿದೆ. ಈ ಜೀವಿಯು ಕೆರೆ, ನದಿ ಹಾಗೂ ಹಳ್ಳಕೊಳ್ಳದಲ್ಲಿ ಹರಿವ ನೀರಿನಲ್ಲಿ ಇರುತ್ತೆ ಅಂತಾ ವಿಜ್ಞಾನಿಗಳು ತಿಳಿಸಿದ್ದಾರೆ.

ನೆಗ್ಲೇರಿಯಾ ಫೌಲೆರಿ ಮೆದುಳಿನ ಅಪರೂಪದ ಮತ್ತು ವಿನಾಶಕಾರಿ ಸೋಂಕನ್ನು ಉಂಟುಮಾಡುತ್ತದೆ. ಮೆದುಳಿನ ಅಂಗಾಂಶದ ಮೇಲೆ ದಾಳಿ ಮಾಡುವ ಮೆದುಳು ತಿನ್ನುವ ಅಮೀಬಾ (ಏಕಕೋಶೀಯ ಜೀವಂತ ಜೀವಿ) ಎಂದು ಕರೆಯಲ್ಪಡುವ ನೇಗ್ಲೆರಿಯಾ ಫೌಲೆರಿ ಸೋಂಕು ಅಪರೂಪ, ಆದರೆ ಅವು ಅತ್ಯಂತ ಮಾರಕವಾಗಿವೆ.

ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆಯಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಾರ, ಅಮೀಬಾ ಸಾಮಾನ್ಯವಾಗಿ ಬೆಚ್ಚಗಿನ ಸಿಹಿನೀರಿನಲ್ಲಿ (ಸರೋವರಗಳು, ನದಿಗಳು ಮತ್ತು ಬಿಸಿನೀರಿನ ಬುಗ್ಗೆಗಳು) ಮತ್ತು ಮಣ್ಣಿನಲ್ಲಿ ಕಂಡುಬರುತ್ತದೆ. ಕಲುಷಿತ ನೀರು ಮೂಗಿನ ಮೂಲಕ ಮಾನವ ದೇಹ ಸೇರಿದಾಗ ವ್ಯಕ್ತಿಗೆ ನೆಗ್ಲೆರಿಯಾ ಫೌಲೆರಿ ತಗಲಬಹುದು, ಇದು ಮೆದುಳಿನ ಉರಿಯೂತ ಮತ್ತು ಮೆದುಳಿನ ಅಂಗಾಂಶಗಳ ನಾಶಕ್ಕೆ ಕಾರಣವಾಗುತ್ತದೆ.

ನೇಗ್ಲೆರಿಯಾ ಫೌಲೆರಿ ಸೋಂಕಿನ ಚಿಹ್ನೆಗಳು ಮತ್ತು ಲಕ್ಷಣಗಳು ಯಾವುವು? :

ನೇಗ್ಲೆರಿಯಾ ಫೌಲೆರಿಯೊಂದಿಗಿನ ಸೋಂಕು ಪ್ರೈಮರಿ ಅಮೆಬಿಕ್ ಮೆನಿಂಗೊಎನ್ಸೆಫಾಲಿಟಿಸ್ (ಪಿಎಎಂ) ಎಂಬ ಕಾಯಿಲೆಯನ್ನು ಉಂಟುಮಾಡುತ್ತದೆ, ಇದರ ಪರಿಣಾಮ ಮೆದುಳಿನ ಉರಿಯೂತ ಮತ್ತು ಮೆದುಳಿನ ಅಂಗಾಂಶಗಳ ನಾಶವಾಗುತ್ತದೆ. ನೇಗ್ಲೆರಿಯಾ ಫೌಲೆರಿ ಸೋಂಕಿನ ಲಕ್ಷಣಗಳು ಬ್ಯಾಕ್ಟೀರಿಯಾದ ಸೋಂಕಿನಂತೆಯೇ ಇರುತ್ತವೆ, ಇದರಿಂದಾಗಿ ಆರಂಭದಲ್ಲಿ ಪಿಎಎಂ ರೋಗನಿರ್ಣಯ ಮಾಡುವುದು ಕಷ್ಟವೆಂದೇ ಹೇಳಬಹುದು. ಈ ಅಮೀಬಾ ಕಾಣಿಸಿಕೊಂಡ 2 ರಿಂದ 15 ದಿನಗಳಲ್ಲಿ ರೋಗಲಕ್ಷಣಗಳು ಹೆಚ್ಚಾಗಬಹುದು.

ಸೋಂಕಿನ ಸಾಮಾನ್ಯ ಲಕ್ಷಣಗಳು :

ಜ್ವರ, ಹಠಾತ್, ತೀವ್ರ ಮುಂಭಾಗದ ತಲೆನೋವು, ವಾಸನೆ ಮತ್ತು ರುಚಿ ಅನುಭವದಲ್ಲಿ ಬದಲಾವಣೆ, ಕುತ್ತಿಗೆ ಸ್ಥಿರವಾಗಿ ಉಳಿದಂತಹ ಸ್ಥಿತಿ, ಮಾನಸಿಕ ಸ್ಥಿತಿಯಲ್ಲಿ ಬದಲಾವಣೆ, ರೋಗಗ್ರಸ್ತವಾಗುವಿಕೆ, ವಾಕರಿಕೆ, ವಾಂತಿ, ನಿದ್ರೆ, ಕೋಮಾದಂತಹ ಲಕ್ಷಣಗಳು ಕಂಡುಬರುತ್ತವೆ.

ಈ ಚಿಹ್ನೆಗಳು ಮತ್ತು ಲಕ್ಷಣಗಳು ವೇಗವಾಗಿ ಹೆಚ್ಚಾಗಿ, ಒಂದು ವಾರದೊಳಗೆ ರೋಗಿ ಸಾವಿಗೆ ಕಾರಣಬಾಗಬಹುದು. ಆದ್ದರಿಂದ, ಈ ರೋಗಲಕ್ಷಣಗಳು ಕಂಡುಬಂದಲ್ಲಿ, ವಿಶೇಷವಾಗಿ ಇತ್ತೀಚೆಗೆ ಬೆಚ್ಚಗಿನ, ಸಿಹಿನೀರಿನ ಸಂಪರ್ಕದಲ್ಲಿದ್ದವರು ತಕ್ಷಣ ವೈದ್ಯಕೀಯ ಸಹಾಯ ಪಡೆಯಬೇಕು.