ಆಧಾರ್-ನಲ್ಲಿರೋ ಬೆರಳಚ್ಚು ಸರಿಯಾಗಿ ಹೊಂದಾಣಿಕೆ ಆಗಿಲ್ಲವೆಂದು ನೂರಾರು ಕುಟುಂಬಗಳಿಗೆ ಆಹಾರ ನಿರಾಕರಿಸುತ್ತಿರುವ ಸರ್ಕಾರ!!

0
615

Kannada News | Karnataka News

ನಿಮಗೆ ನಿತ್ಯ ಬಳಕೆಯಾಗುವ ಸಾಮಾನ್ಯ ದಾಖಲಾತಿಯೆಂದರೆ ಅದು “ಆಧಾರ್ ಕಾರ್ಡ್”. ನಕಲಿ ದಾಖಲೆಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಈ ವಿಶೇಷ ಗುರುತಿನ ಚೀಟಿಯನ್ನು ಹೊರತಂದಿತ್ತು. ಆದರೆ, ಇದರಿಂದ ಎಷ್ಟೋ ಪರಿವಾರಗಳು ತೊಂದರೆಗೊಳಗಾಗಿವೆ ಕೆಲವು ಪರಿವಾರಗಳನ್ನು ಉಪವಾಸಕ್ಕೆ ಕೆಡವಿದೆ ಗೊತ್ತೇ.

ಸರ್ಕಾರದ ಸೌಲಭ್ಯ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ, ರೇಷೆನ್ ಕಾರ್ಡ್, ಪಾನ್ ಕಾರ್ಡ್, ವೋಟರ್ id ಕಾರ್ಡ್, ಜನ್ಮ ಪ್ರಮಾಣ ಪಾತ್ರ, ಚಾಲನಾ ಪರವಾನಗಿ, ಬ್ಯಾಂಕ್ ಅಕೌಂಟ್, ಸಿಮ್ ಕಾರ್ಡ್ ಹೀಗೆ ಹೇಳುತ್ತಾ ಹೋದರೆ ಪಟ್ಟಿ ದೊಡ್ಡದಾಗುತ್ತದೆ, ಇವೆಲಾದಕ್ಕೂ ಆಧಾರ್ ಬೇಕು. ಆದರೆ, ದೇಶದ ಕೆಲ ಜನರ ಹತ್ತಿರ ಆಧಾರ್ ಕಾರ್ಡ್ ಇಲ್ಲ ಇನ್ನು ಕೆಲವರ ಬಳಿ ಇದ್ದರೂ ಅದರಲ್ಲಿ ಮಾಹಿತಿ ದೋಷವಿದೆ.

ಇನ್ನು ವಿಪರ್ಯಾಸವೆಂದರೆ ಅಂಗವಿಕಲರಿಗೆ, ದೃಷ್ಟಿಹೀನ ವ್ಯಕ್ತಿಗಳಿಗೆ ಆಧಾರ್ ಪಡೆಯುವುದು ತುಂಬಾನೇ ಕಷ್ಟ ಏಕೆಂದರೆ ಅವರ ಬಯೋ ಮೆಟ್ರಿಕ್ ಪಡೆಯಲು ಸಾಧ್ಯವಿಲ್ಲ ಹಾಗು ಪಡೆದರು ಕೆಲವು ದೋಷಗಳು ಬರುತ್ತವೆ ಇದರಿಂದಾಗಿ ಮೊದಲೇ ಜೀವನದಲ್ಲಿ ಸಂಘರ್ಷ ಮಾಡುತ್ತಿರುವ ಇಂತವರಿಗೆ ಇನ್ನೊಂದು ಶಾಕ್ ಆಗಿದೆ ಆಧಾರ್ ಕಾರ್ಡ್.

ತಾಂತ್ರಿಕ ತೊಂದರೆಗಳಿಂದಾಗಿ ಸೇವಾ ಕೇಂದ್ರಗಳಲ್ಲಿ ಕೆಲವೊಮ್ಮೆ ತಡವಾಗುತ್ತಿತು, ಕೆಲವೊಮ್ಮೆ ಅಂತ ಸರ್ವರ್ ಡೌನ್ ಅಂತಹ ಸಮಸ್ಯೆಯಿಂದ ಆಧಾರ್ ಲಿಂಕ್ ಆಗುವುದಿಲ್ಲ. ಇಂತಹ ಸಮಯದಲ್ಲಿ ಜನ ಎಲ್ಲ ಕೆಲಸ ಬಿಟ್ಟು ಇದನ್ನೇ ಮಾಡಬೇಕಾಗುತ್ತದೆ. ಅಲ್ಲದೆ ಅಂಗವಿಕಲರಿಗೆ ಇದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.

ಆಧಾರ್ ಕಾರ್ಡ್ ಲಿಂಕ್ ಮಾಡುವುದರಿಂದ ಪಡಿತರವನ್ನು ಫಲಾನುಭವಿಗಳಿಗೆ ಸರಿಯಾಗಿ ತಲುಪುತ್ತದೆ ಎಂದು ಸರ್ಕಾರವೇನೋ ನಿಯಮ ಮಾಡಿತು. ಆದರೆ, ಅದು ಸಮಗ್ರವಾಗಿ ಕೆಲಸ ಮಾಡುತ್ತಿದೆಯೋ ಇಲ್ಲವೋ, ಯಾವ ಜನರಿಗೆ ಯಾವ-ಯಾವ ರೀತಿಯಲ್ಲಿ ತೊಂದರೆಯಾಗುತ್ತಿದೆ ಎಂದು ಪರಿಶೀಲನೆ ಮಾಡುವವರು ಯಾರು ಎಂಬುದು ಜನರ ಪ್ರಶ್ನೆ.

ಒಟ್ಟಿನಲ್ಲಿ ಜನರಿಗೆ ನಿತ್ಯ ಅಗತ್ಯವಿರುವ ದಿನಸಿ ಪಡೆಯಲು, ರೇಷೆನ್ ಕಾರ್ಡ್ ಗೆ, ಆಧಾರ್ ಕಾರ್ಡ್ ಲಿಂಕ್ ಮಾಡಿರುವುದು ಕಡ್ಡಾಯ ಮಾಡಿರುವ ರೀತಿಯಲ್ಲಿ ಜನರ ಬಳಿ ಆಧಾರ್ ಕಾರ್ಡ್ ಕಡ್ಡಾಯವಾಗಿ ಆಧಾರ್ ಕಾರ್ಡ್ ಇರುವಂತೆ ನೋಡಿಕೊಳ್ಳಬೇಕಾಗಿರುವುದು ಸರ್ಕಾರದ ಕರ್ತವ್ಯ ಹಾಗು ಆಧಾರ್ ಕಾರ್ಡ್ ಮಾಡಿಸುವ ಕೇಂದ್ರಗಳನ್ನು ಇನ್ನು ಜನ ಸ್ನೇಹಿ ಮಾಡಿ ಹೆಚ್ಚು-ಹೆಚ್ಚು ಕೇಂದ್ರಗಳನ್ನು ಮಾಡಿದರೆ ಈ ಸಮಸ್ಯೆ ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗಬಹುದು.

Also Read: ಕನಿಷ್ಠ ಬ್ಯಾಲನ್ಸ್ ಇಲ್ಲವೆಂದು ಗ್ರಾಹಕರಿಗೆ ದಂಡ ಹಾಕಿ ಸಾವಿರಾರು ಕೋಟಿ ದುಡ್ಡು ಮಾಡಿಕೊಂಡ ಎಸ್.ಬಿ.ಐ.