ಪೆಟ್ರೋಲ್ ಬಂಕ್-ನಲ್ಲಿ ಕೆಲಸ ಮಾಡುವ ಈ ಹುಡುಗನ ಸಾಧನೆಯಿಂದ ಎಲ್ಲರೂ ಪ್ರೇರೇಪಿತರಾಗಲೇಬೇಕು..

0
1777
ಮಾಡುವ ಆಸೆ ಮತ್ತು ಕನಸು ಇದ್ದವರೂ ಏನನ್ನಾದರೂ ಸಾಧಿಸಬಲ್ಲರು. ಸಾಮಜಮುಖಿ ಕಾರ್ಯಗಳನ್ನು ಮಾಡುತ್ತ ಜನರ ಸಮಸ್ಯೆಗಳಿಗೆ ಸ್ಪಂದಿಸುವರು ಬೆಂಗಳೂರಿನಲ್ಲಿ ವಿರಳ. ಆದರೆ ಇವರ ನಡುವೆಯೂ ಮರ ಭೂಮಿಯಲ್ಲಿ ಓಯಾಸಿಸ್ ಇದ್ದಂತೆ ಬೆರೆಯವರಿಗೆ ಕಾಣದೆ ಕಾರ್ಯ ಮಾಡುವ ತೆರೆಯ ಹಿಂದಿನ ಕಾಯಿಗಳನ್ನು ಪರಿಚಯ ಸಾಮನ್ಯ ಜನರಿಗೆ ಇರುವುದಿಲ್ಲ. ನೀವು ಇವರನ್ನು ನೋಡಿರುತ್ತಿರಾ ಮಾತನಾಡಿಸುತ್ತೀರಾ ಆದರೆ ಇವರಲ್ಲಿನ ಮನಸ್ಸನ್ನು, ಹಾಗೂ ಸಹಾಯ ಮಾಡುವ ಬುದ್ಧಿಯನ್ನು ಗುರುತಿಸಿರಲ್ಲ.
ಬೆಂಗಳೂರಿನಲ್ಲಿ ಅಪಘಾತಗಳ ದಿನಂಪ್ರತಿ ನಡೆಯುತ್ತಲೇ ಇರುತ್ತವೆ. ಈ ಅಪರಾಧಗಳನ್ನು ತಡೆಗೆ ಪೊಲೀಸ್ ಹಾಗೂ ಸರ್ಕಾರ ಯೋಜನೆಗಳನ್ನು ಹಮ್ಮಿಕೊಳ್ಳುತ್ತವೆ. ಆದರೆ ಜನ ಸಮಾನ್ಯ ಮಾತ್ರ ಇದು ತನಗೆ ಸಂಬಂಧ ಪಟ್ಟ ವಿಷಯವೇ ಅಲ್ಲ ಎಂದು ಸುಮ್ಮನಿರುತ್ತಾನೆ. ಇವರು ಎಲ್ಲರ ಹಾಗೆ ಇದ್ದು ಕೊಂಡಿದ್ದರೆ, ಇವರನ್ನು ವರ್ಷದ ವ್ಯಕ್ತಿ ಆಯ್ಕೆಗೆ ಪರಿಗಣಿಸುತಲ್ಲೇ ಇರಲಿಲ್ಲ. ಇವರ ಪರಿಶ್ರಮ ಇವರನ್ನು ಈ ಪ್ರಶಸ್ತಿಯ ಹೊಸ್ತಿಲಲ್ಲಿ ತಂದು ನಿಲ್ಲಿಸಿತ್ತು.
ಇವರ ಹೆಸರು ಕಿರಣ್… ಬಿಕಾಂ ಪದವಿಧರರು.. ಪ್ರಥಮ ಚಿಕಿತ್ಸೆಯ ಬಗ್ಗೆ ಗೊತ್ತಿರಲಿಲ್ಲ. ಆದ್ರೆ ತಾನು ಕೆಲಸ ಮಾಡುತ್ತಿದ್ದ ಪೆಟ್ರೋಲ್ ಬಂಕ್‌ನಲ್ಲಿ ಹೆಚ್ಚುಕಡಿಮೆ ಆದ್ರೆ ತುರ್ತಾಗಿ ಏನು ಮಾಡಬೇಕು ಅನ್ನುವುದನ್ನು ಬೇರೆಯವರಿಗೆ, ಈಗ ತನ್ನದೇ ಶೈಲಿಯಲ್ಲಿ ಬಳಸಿಕೊಂಡಿದ್ದಾರೆ. ತಮಗೆ ಬರುವ ೧೦ ಸಾವಿರ ಸಂಬಳ ಬರುತ್ತಿದ್ದು, ಇದರ ನೆರವಿನಿಂದ ಇವರ ದೊಡ್ಡ ಕಾರ್ಯವನ್ನು ಮಾಡುತ್ತಿದ್ದಾರೆ. ಕರ್ನಾಟಕ ಬಂದ್ ನಿಮಿತ್ತ ಕಿರಣ್ ಕೆಲಸ ಮಾಡುತ್ತಿದ್ದ ಪೆಟ್ರೋಲ್ ಬಂಕ್‌ಗೆ ರಜಾ. ಅಂದು ಪೆಟ್ರೋಲ್ ಬಂಕ್ ಮುಂದಿನ ಸ್ಥಳಗಳಲ್ಲಿ ನಡೆದ ಅಪಘಾತಗಳ ಫೋಟೋಗ್ರಾಫ್‌ಗಳ ಜೊತೆ ಚಾಮರಾಜಪೇಟೆ ಪೊಲೀಸ್ ಠಾಣೆಗೆ ಬೇಟಿ ನೀಡಿ ಪರಿಸ್ಥಿತಿಯನ್ನು ವಿವರಿಸಿದ್ದರು. ಅಷ್ಟೇ ಅಲ್ಲ ಸೈನ್ ಬೋರ್ಡ್‌ಗೆ ಮನವಿ ಸಲ್ಲಿಸಿ, ಅದನ್ನು ಪಡೆದು, ತನ್ನದೇ ಖರ್ಚಿನಿಂದ ಅಳವಡಿಸಿದ್ದಾರೆ.
Image result for shell petrol bunk
ನಾನು ಹಲವು ವ್ಯಕ್ತಿಗಳನ್ನು ರಕ್ಷಿಸಿದ್ದೇನೆ. ರಾತ್ರಿ ಹೊತ್ತು ಊಟ ಬಿಟ್ಟುಸ ಸಹಾಯ ಮಾಡಿದ್ದೇನೆ. ಸರಕಾರ ಮಾಡದೇ ಇದ್ದ ಕೆಲಸ ನಾನು ಮಾಡಿರುವುದಕ್ಕೆ ಹಲವರು ನನಗೆ ಧನ್ಯವಾದ ಹೇಳಿದ್ದಾರೆ. ಇಂತಹ ಕೆಲಸಗಳನ್ನು ಮಾಡಲು ನನಗೆ ಇನ್ನಷ್ಟು ಸ್ಫೂರ್ತಿ ಸಿಕ್ಕಿದೆ ಎಂದು ಕೀರಣ್ ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಅಪಘಾತಗಳು ನಡೆಯುತ್ತಿದ್ದವು. ಗಾಯಗೊಂಡವರಿಗೆ ಸಹೋದ್ಯೋಗಿಗಳೊಂದಿಗೆ ಪ್ರಥಮ ಚಿಕಿತ್ಸೆಯನ್ನು ನೀಡುತ್ತಿದ್ದೆವು. ಕೆಲವೊಂದು ಸಂದರ್ಭದಲ್ಲಿ ಪಕ್ಕದಲ್ಲಿದ್ದ ಆಸ್ಪತ್ರೆಗೆ ಗಾಯಾಳುಗಳನ್ನು ಚಿಕಿತ್ಸೆಗಾಗಿ ಕರೆದುಕೊಂಡು ಹೋಗುತ್ತಿದ್ದೆವು. ವಾಹನಕ್ಕಾದ ಡ್ಯಾಮೇಜ್‌ಗಳನ್ನು ಸರಿಪಡಿಸಲು ಪಕ್ಕದಲ್ಲಿದ್ದ ಗ್ಯಾರೇಜ್‌ಗೆ ತೆಗೆದುಕೊಂಡು ಹೋಗುತ್ತಿದ್ದೆವು. ಇಲ್ಲಿ ನಡೆಯುತ್ತಿರುವ ಅಪಘಾತಗಳನ್ನು ಹೇಗಾದ್ರೂ ಮಾಡಿ ತಡೆಯಬೇಕು ಅನ್ನುವುದು ನಮ್ಮ ಉದ್ದೇಶವಾಗಿತ್ತು.