ಕರ್ನಾಟಕದ ಕುಳ್ಳ ದ್ವಾರಕೀಶ್ ಇನ್ನಿಲ್ಲ, ಎನ್ನುವ ಸುಳ್ಳು ಸುದ್ದಿಗೆ ಖುದ್ದು ದ್ವಾರಕೀಶ್ ಅವರೇ ವಿಡಿಯೋ ಒಂದನ್ನು ಹರಿ ಬಿಟ್ಟು ಹೇಳಿದ್ದು ಏನು ಗೊತ್ತಾ??

0
649

ಹಿರಿಯ ನಟ, ನಿರ್ಮಾಪಕ ಕರ್ನಾಟಕದ ಕುಳ್ಳ ದ್ವಾರಕೀಶ್ ಇನ್ನಿಲ್ಲ, ಎನ್ನುವ ಸುದ್ದಿ ಇಡಿ ಕರ್ನಾಟಕಕ್ಕೆ ಆಘಾತ ನೀಡಿತ್ತು. ನಿನ್ನೆಯಿಂದ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ವಾಟ್ಸ್ ಅಪ್ ನಲ್ಲಿ RIP ದ್ವಾರಕೀಶ್ ಸರ್ ಎನ್ನುವ ಪೋಸ್ಟ್ ಗಳು ಕಾಣುತ್ತಿದ್ದವು. ಆದರೆ ದ್ವಾರಕೀಶ್ ಅವರ ಬಗ್ಗೆ ಬಂದ ಈ ಸುದ್ದಿ ಕೇಳಿ ಅನೇಕರು ಆಘಾತಗೊಂಡಿದ್ದರು. ಈ ಸುದ್ದಿ ನಿಜನಾ..?, ಸುಳ್ಳಾ..? ಎನ್ನುವ ಗೊಂದಲ ಇನ್ನು ಕೆಲವರಿಗೆ ಇತ್ತು. ಈ ಕುರಿತು ನೋಡಿದ್ದಾಗ, ದ್ವಾರಕೀಶ್ ಅವರೇ ಮಾತನಾಡಿ ನಾನು ಅರಾಮವಾಗಿದ್ದೇನೆ ಎಂದು ಹೇಳಿದ್ದಾರೆ.

ಹೌದು ಕಿಡಿಗೇಡಿಗಳು ಸರಿಯಾಗಿ ತಿಳಿಯದೆ. ದ್ವಾರಕೀಶ್ ಅವರು ಆಸ್ಪತ್ರೆಗೆ ಹೋಗುವುದನ್ನು ನೋಡಿ ಅವರು ಮೃತ ಪಟ್ಟಿದ್ದಾರೆ ಎಂದು ಸುದ್ದಿ ಹಬ್ಬಿಸಿದ್ದರು, ನಂತರ ಈ ಘಟನೆಯ ಬಗ್ಗೆ ಮಾತನಾಡಿರುವ ನಿರ್ದೇಶಕ ಚೈತನ್ಯ ”ನನಗೆ ನಿನ್ನೆ ಮಧ್ಯರಾತ್ರಿ ಈ ವಿಷಯ ತಿಳಿಯಿತು. ಆಗ ತಕ್ಷಣ ಅವರ ಮಗನ ಜೊತೆಗೆ ಮಾತನಾಡಿದೆ. ದ್ವಾರಕೀಶ್ ಸರ್ ಗೆ ಏನು ಆಗಿಲ್ಲ ವಯಸ್ಸಾಗಿರುವ ಕಾರಣ ಆಗಾಗ ಆಸ್ಪತ್ರೆಗೆ ಹೋಗಬೇಕಾಗುತ್ತದೆ ಅಷ್ಟೇ.” ಎಂದು ತಿಳಿಸಿದ್ದಾರೆ. ಸದ್ಯ, ದ್ವಾರಕೀಶ್ ಆರೋಗ್ಯ ಸ್ಥಿತಿ ಸಹಜವಾಗಿದ್ದು ಅವರು ಮನೆಯಲ್ಲಿಯೇ ಇದ್ದಾರಂತೆ.

ನಾನು ಬದುಕಿದ್ದೇನೆ

ಈ ಸುಳ್ಳು ವಂದತಿಗಳಿಗೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ದ್ವಾರಕೀಶ್ ದೇವರ ಪೂಜೆ ಮಾಡುತ್ತಾ ಇರುವ ವಿಡಿಯೋ ಒಂದನ್ನು ಹರಿ ಬಿಟ್ಟಿದ್ದಾರೆ. “ನಾನು ನಿಮ್ಮ ಕರ್ನಾಟಕದ ಕುಳ್ಳ. ನಾನು ಆರೋಗ್ಯವಾಗಿದ್ದೇನೆ. ವದಂತಿಗೂ ಕಿವಿಕೊಡಬೇಡಿ. ನಿಮ್ಮ ಆಶೀರ್ವಾದಿಂದ ಈ ದ್ವಾರಕೀಶ್​ ಚೆನ್ನಾಗಿದ್ದಾನೆ, ಮುಂದೆಯೂ ಚೆನ್ನಾಗಿಯೇ ಇರುತ್ತಾನೆ. ಎಲ್ಲವೂ ಆ ರಾಘವೇಂದ್ರ ಸ್ವಾಮಿಗಳ ಕೃಪೆ,” ಎಂದಿ ವಿಡಿಯೋದಲ್ಲಿ ತಿಳಿಸಿದ್ದಾರೆ. ದ್ವಾರಕೀಶ್​ ಅವರಿಗೆ ಇತ್ತೀಚೆಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಹೀಗಾಗಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಈ ಮಧ್ಯೆ ಕೆಲ ಕಿಡಿಗೇಡಿಗಳು ದ್ವಾರಕೀಶ್​ ಫೋಟೋವನ್ನು ಎಡಿಟ್​ ಮಾಡಿ ಸೋಷಿಯಲ್​ ಮೀಡಿಯಾದಲ್ಲಿ ಹರಿ ಬಿಟ್ಟಿದ್ದರು.

ಇದನ್ನು ನಂಬಿ ಅನೇಕರು ದ್ವಾರಕೀಶ್​ ಇನ್ನಿಲ್ಲ ಎನ್ನುವ ಪೋಸ್ಟ್​ ಶೇರ್​ ಮಾಡಿಕೊಂಡಿದ್ದರು. ಈಗ ದ್ವಾರಕೀಶ್​ ಅವರಿಂದಲೇ ಇದಕ್ಕೆ ಸ್ಪಷ್ಟನೆ ಸಿಕ್ಕಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ. ಅದರಂತೆ ಕರ್ನಾಟಕ ಸಿನಿಮಾ ರಂಗಕ್ಕೆ ದ್ವಾರಕೀಶ್ ನೀಡುವ ಕೊಡುಗೆ ಅಪಾರವಾಗಿದ್ದು “ನೀ ಬರೆದ ಕಾದಂಬರಿ ಇವರ ನಿರ್ದೇಶನದ ಮೊದಲ ಚಿತ್ರ. ಸಿಂಗಾಪುರದಲ್ಲಿ ರಾಜಾ ಕುಳ್ಳ ಸಿನಿಮಾದಲ್ಲಿ ವಿಷ್ಣುವರ್ಧನ್ ಜೊತೆ ಅಭಿನಯಿಸಿದ್ದರು. ಕನ್ನಡ ಚಿತ್ರರಂಗದಲ್ಲಿ ಈ ಸಿನಿಮಾ ಸಿಕ್ಕಾಪಟ್ಟೆ ಫೇಮಸ್. ಗುರು ಶಿಷ್ಯರು, ಪ್ರಚಂಡ ಕುಳ್ಳ, ಮಾತು ತಪ್ಪದ ಮಗ, ಆಟೋ ರಾಜಾ. ಸಿಂಹದ ಮರಿ ಸೈನ್ಯ ಸೇರಿದಂತೆ 300 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 50 ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.