ನಾವೇನು ಅಂಟಾರ್ಟಿಕಾ, ಪಾಕಿಸ್ತಾನದಿಂದ ಬಂದಿಲ್ಲ. ಮೈಸೂರಲ್ಲಿ ಹುಟ್ಟಿ ಮಂಡ್ಯವನ್ನು ದಾಟಿ ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡಿದ್ದೇವೆ; ಜೆ.ಡಿ.ಎಸ್.ಗೆ ತಿರುಗೇಟು ನೀಡಿದ ಯಶ್..

0
404

ಸುಮಲತಾ ಪರ ಬೆಂಬಲಕ್ಕೆ ನಿಂತ ಸ್ಟಾರ್ ನಟರ ವಿರುದ್ದ ಹಲವು ಎಚ್ಚರಿಕೆಗಳು, ಟೀಕೆಗಳು ಕೇಳಿ ಬರುತ್ತಿದವು. ಅದರಂತೆ ದರ್ಶನ್‌, ಯಶ್‌ ಸೇರಿದಂತೆ ಚಿತ್ರನಟರು ರಾಜಕೀಯಕ್ಕೆ ಬರುವುದಾದರೆ ನೇರವಾಗಿ ಪಕ್ಷ ರಾಜಕಾರಣ ಮಾಡಬೇಕು. ಬೇರೊಬ್ಬರ ಪರವಾಗಿ ವಕಾಲತು ವಹಿಸಬಾರದು. ಇಂತಹ ನಟರಿಂದಾಗಿ ಇಡೀ ಚಿತ್ರೋದ್ಯಮದ ಮೇಲೆ ಹೊಡೆತ ಬೀಳುತ್ತದೆ. ದರ್ಶನ್‌ ಮತ್ತು ಯಶ್‌ ಚಿತ್ರಗಳನ್ನು ಜನ ಹಣಕೊಟ್ಟು ಪಕ್ಷಾತೀತವಾಗಿ ನೋಡುತ್ತಾರೆ. ಇವರು ತಮ್ಮ ಮೂಗಿನ ನೇರಕ್ಕೆ ಮಾತನಾಡುವುದನ್ನು ಮುಂದುವರಿಸಿದರೆ ಇವರ ಚಿತ್ರಗಳನ್ನು ಬಹಿಷ್ಕರಿಸಬೇಕಾಗುತ್ತದೆ” ಎಂದು ನಾರಾಯಣಗೌಡ ಎಚ್ಚರಿಕೆ ನೀಡಿದರು.

Also read: ಸುಮಲತಾ ಬೆಂಬಲಕ್ಕೆ ನಿಂತ ಸ್ಟಾರ್ ನಟರಿಬ್ಬರ ವಿರುದ್ದ ಚುನಾವಣಾ ಆಯೋಗಕೆ ದೂರು; ಜೆಡಿಎಸ್ ಶಾಸಕರಿಂದ ಯಶ್, ದರ್ಶನ್ ಗೆ ಎಚ್ಚರಿಕೆ??

ಈ ಹಿನ್ನೆಲೆಯಲ್ಲಿ ಸುಮಲತಾ ಪರ ನಡೆದ ಪ್ರಚಾರ ಸಭೆಯಲ್ಲಿ ಯಶ್ ಮಾತನಾಡಿದ ಅವರು, ”ನಾವೇನು ಅಂಟಾರ್ಟಿಕಾ, ಪಾಕಿಸ್ತಾನದಿಂದ ಬಂದಿಲ್ಲ. ಮೈಸೂರಲ್ಲಿ ಹುಟ್ಟಿ ಮಂಡ್ಯವನ್ನು ದಾಟಿ ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡಿದ್ದೇವೆ. ಪಾಲಹಳ್ಳಿ, ಪಂಪ್‌ಹೌಸ್‌, ಕೆಆರ್‌ಎಸ್‌ನಲ್ಲಿ ಈಜಾಡಿದ್ದೇವೆ. ಮಂಡ್ಯದ ಬೆಲ್ಲ ತಿಂದಿದ್ದೇವೆ. ಕಬ್ಬಿನ ಹಾಲು, ಕಾವೇರಿ ನೀರು ಕುಡಿದಿದ್ದೇವೆ. ಜನ ನಮ್ಮನ್ನು ಬೆಳೆಸಿದ್ದಾರೆ” ಎಂದು ಸಿನಿಮಾ ಸ್ಟೈಲ್‌ನಲ್ಲೇ ಟೀಕಾಕಾರರಿಗೆ ಎದಿರೇಟು ನೀಡಿದ ಅವರು ನಾವು ನಮ್ಮ ಹೊಟ್ಟೆಪಾಡನ್ನು ನೋಡುತ್ತಿದ್ದೇವೆ. ಅನುಕೂಲಕ್ಕಾಗಿ ರಾತ್ರಿ, ಹಗಲು ಬದಲಾಗಲ್ಲ.

ಸಿನಿಮಾದವರ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ. ಜನರು ಯಾರನ್ನೂ ಸುಮ್ಮನೆ ಎದೆಯಲ್ಲಿಟ್ಟುಕೊಂಡು ಮೆರೆಸೋಲ್ಲ. ನಮ್ಮ ಯೋಗ್ಯತೆಯೂ ಜನರಿಗೆ ಗೊತ್ತಿದೆ. ಹಣಕ್ಕೋ,
ಬಲವಂತಕ್ಕೋ ಅಥವಾ ತೋರಿಕೋ ಇಂದು ಜನ ಬಂದಿಲ್ಲ. ಮಂಡ್ಯದ ಜನರ ಬಗ್ಗೆ ಹಗುರವಾಗಿ ಮಾತನಾಡಬೇಡಿ. ಮನೆ, ಮಠ ಕಳೆದುಕೊಂಡರೂ ಸ್ವಾಭಿಮಾನ ಬಿಡೋರಲ್ಲ ಮಂಡ್ಯದವರು. ಈ ಸ್ವಾಭಿಮಾನಕ್ಕಾಗಿ ಸುಮಲತಾ ಅವರನ್ನು ಜನರು ಬೆಂಬಲಿಸಲಿದ್ದಾರೆ” ಎಂದು ತಿರುಗೇಟು ನೀಡಿದ್ದಾರೆ.

Also read: ಮನೆ ಮಕ್ಕಳಾಗಿ ಸುಮಲತಾ ಬೆಂಬಲಕ್ಕೆ ಕನ್ನಡ ಚಿತ್ರರಂಗದ ಸ್ಟಾರ್ ನಟರು; ಅಂಬಿ ಅಣ್ಣನ ಮೇಲಿನ ಅಭಿಮಾನದ ಎದುರು ನಿಖಿಲ್-ಗೆ ಗೆಲ್ಲೋಕ್ಕಾಗುತ್ತಾ??

ನಾವು ಸಾಯೋವರಿಗೂ ತಪ್ಪೇ ಮಾಡೋದು;

ಯಶ್ ಮಾತನಾಡುತ್ತಾ ಬೆಳಿಗ್ಗೆ ನಾಮಪತ್ರ ಸಲ್ಲಿಸಲು ಬಂದಾಗ ಅಕ್ಕನ ಕಣ್ಣಲ್ಲಿ ನೀರಿತ್ತು. ಯಾಕೆ ಅಕ್ಕ ಏನಾದರೂ ಆಯ್ತಾ ಎಂದು ಕೇಳಿದೆ. ಇಲ್ಲಾಪಾ, ನನ್ನಿಂದ ನಿಮಗೆಲ್ಲಾ ತೊಂದರೆ ಆಗುತ್ತಿದೆ. ನಿನ್ನ ಮತ್ತು ದರ್ಶನ್ ಬಗ್ಗೆ ತುಂಬಾ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ನನಗಾದರೆ ಪರವಾಗಿಲ್ಲ ನನ್ನಿಂದ ನಿಮಗೆಲ್ಲಾ ತೊಂದರೆ ಆಗುತ್ತಿದೆಯಲ್ಲಾ ಅಂದರು. ಈಗ ನಾ ಹೇಳ್ತಿದ್ದೀನಿ, ಇದು ನಾವು ಮಾಡುತ್ತಿರುವುದು ತಪ್ಪಲ್ಲ ಅಂತ ನಮ್ಗೆಲ್ಲರಿಗೂ ಗೊತ್ತು. ಇದು ಯಾವುದೊ ಅಧಿಕಾರದ ಆಸೆಗೋ, ಮತ್ತೊಂದಕ್ಕೆ ಬಂದು ನಿಂತಿರುವುದಲ್ಲ ನಾವು. ಇದು ತಪ್ಪು ಅಂತ ಕೆಲವು ಅಂದ್ಕೊಂಡಿದ್ರೆ, ಅಂತವರಿಗೆ ನಾವು ಒಂದು ಹೇಳ್ತಿನಿ. ನಾವು ತಪ್ಪೇ ಮಾಡ್ತೀವಿ. ಆ ತಪ್ಪು ಸಾಯೋವರೆಗೂ ಮಾಡ್ತೀನಿ ಎಂದು ಸುಮಲತಾ ಅವರಿಗೆ ಯಶ್ ಸಮಾಧಾನ ಮಾಡಿದರು.

ಮಂಡ್ಯದ ಜನರು ಪಂಚೆ ಎತ್ತಿಕಟ್ಟಿ

Also read: ಮಂಡ್ಯದಲ್ಲಿ ಹೈವೋಲ್ಟೇಜ್ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಕಣಕ್ಕೆ; ದರ್ಶನ್, ಯಶ್ ಸೇರಿ ಚಿತ್ರರಂಗದ ಗಣ್ಯರು ಸುಮಕ್ಕನ ಬೆಂಬಲಕ್ಕೆ..

ಸುಮಲತಾ ಅಮ್ಮನ ಪರವಾಗಿ ನಮ್ಮ ಪರೇಡ್‌ ಶುರುವಾಗಿದ್ದು, ಏ. 18ರವರೆಗೆ ಮುಂದುವರೆಯಲಿದೆ. ನಿಮ್ಮ ಸೌಂಡ್‌ ಹೀಗೆಯೇ ಇರಲಿ. ನಿಮ್ಮೊಂದಿಗೆ ನಾನು ಸದಾ ಇರುತ್ತೇನೆ. ಪ್ರಚಾರದಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುತ್ತೇನೆ ಎಂದು ಚಿತ್ರನಟ ದರ್ಶನ್‌ ಅಭಿಮಾನಿಗಳಿಗೆ ಹೇಳಿದ ಅವರು ಮಂಡ್ಯ ಜನರು ಪಂಚೆ ಎತ್ತಿಕಟ್ಟಿ ನಿಂತರೆ ಏನೆಲ್ಲಾ ಆಗುತ್ತದೆ ಎಂಬುದನ್ನು ನಾನು ಬಲ್ಲೆ. ನಾವಿಲ್ಲಿಗೆ ಯಾವುದೇ ಪಕ್ಷವಾಗಿ ಬಂದಿಲ್ಲ. ನಮ್ಮ ಬಗ್ಗೆ ಯಾರು ಏನೇ ಮಾತನಾಡಲಿ. ನಮಗೆ ಕೋಪವಿಲ್ಲ. ಬೇಜಾರು ಮಾಡಿಕೊಳ್ಳಲ್ಲ. ನೊಂದುಕೊಳ್ಳಲ್ಲ. ಯಾರಿಗೂ ಏನೂ ಅನ್ನೋದಿಲ್ಲ. ಟೀಕಾಕಾರರು ಆಡುವ ಮಾತುಗಳಿಗೆ ಒಂದೊಂದು ಮತವೂ ಉತ್ತರವಾಗಲಿದೆ. ನಿಮ್ಮ ಪ್ರೀತಿ, ವಿಶ್ವಾಸ, ಬೆಂಬಲ, ಆಶೀರ್ವಾದ ಸುಮಮ್ಮನ ಮೇಲಿರಲಿ. ಮೈಯಲ್ಲಿನ ರಕ್ತವನ್ನು ತೆಗೆದು ನಿಮ್ಮ ಕಾಲು ತೊಳೆದರೂ ಕಡಿಮೆಯೇ” ಎಂದರು.