ರಾಕಿಂಗ್ ಸ್ಟಾರ್ ಯಶ್ ಬರಿ ಸಿನಿಮಾದಲ್ಲಿ ಮಾತ್ರವಲ್ಲ ರೈತರ ಪಾಲಿಗೆ ಆಧುನಿಕ ‘ಭಗೀರಥ’..!!

0
657

ಕೆ.ಜಿ.ಎಫ್ ರಾಕಿಂಗ್ ಸ್ಟಾರ್ ಯಶ್ ದೇಶದೆಲ್ಲಡೆ ಮಿಚ್ಚುತ್ತಿದ್ದಾರೆ. ಇವರು ಬರಿ ಚಿತ್ರರಂಗದಲ್ಲಿ ಮಾತ್ರವಲ್ಲ ರೈತರ ಪಾಲಿಗೆ ಆಧುನಿಕ ‘ಭಗೀರಥ’ ನಾಗಿದ್ದಾರೆ. ಇವರು ರಾಜ್ಯದ ಬಡ ಹಳ್ಳಿಗಳಲ್ಲಿ ಕೆರೆಗಳ ಅಭಿವೃದ್ದಿಗಾಗಿ ಸ್ವಂತ ಹಣದಿಂದ ನೀರು ತರುವ ಸಾಹಸಕ್ಕೆ ಕೈ ಹಾಕಿ ಫಲ ಸಿಕ್ಕಿರುವ ಸಾರ್ಥಕತೆಯಲ್ಲಿ ನಟ ಯಶ್ ಮತ್ತು ರಾಧಿಕಾ ಪಂಡಿತ್ ಕೊಪ್ಪಳದ ತಲ್ಲೂರು ಕೆರೆಗೆ ಬಾಗಿನ ಅರ್ಪಿಸಿ ರಾಜ್ಯದ ಜನರ ಮನದಲ್ಲಿ ಮನೆಮಾಡಿದ್ದಾರೆ. ಅಭಿನಯವಷ್ಟೇ ಅಲ್ಲದೆ ರೈತರ ಕಷ್ಟಕ್ಕೆ ಸಹಾಯ ಮಾಡಲು ಮುಂದಾಗಿದ್ದ ಆಧುನಿಕ ‘ಭಗೀರಥ’ನ ಪ್ರಾಮಾಣಿಕ ಪ್ರಯತ್ನಕ್ಕೆ ಪ್ರಕೃತಿ ಮಾತೆ ಅಸ್ತು ಎಂದಿದ್ದಾಳೆ. ಹತ್ತು ತಿಂಗಳಿಂದ ಯಶ್ ಮತ್ತು ತಂಡ ಶ್ರಮಿಸಿದಕ್ಕೆ ಪ್ರತಿಫಲ ಸಿಕ್ಕಿತ್ತು , ಈಗ ಬರದಿಂದ ಬಿಕ್ಕಳಿಸುತ್ತಿದ ರೈತರ ಮುಖದಲ್ಲಿ ಹಸಿರಿನ ಉಸಿರು ಮೂಡಿದೆ.

ಹೌದು ನಟ ಯಶ್‌ ಸುಮಾರು 1.5 ಕೋಟಿಗೂ ಹೆಚ್ಚು ಹಣ ಕರ್ಚುಮಾಡಿ ತಮ್ಮ ಯಶೋಮಾರ್ಗ ಸಂಸ್ಥೆಯ ಮೂಲಕ ತಲ್ಲೂರು ಕೆರೆಯ ಹೂಳು ತೆಗೆಸಿದ್ದರು. ಆ ಸಮಯದಲ್ಲಿ ದೇವರ ಪವಾಡಯೋ ಇಲ್ಲ ಯಶ್ ಅವರ ದೈವಯೋ ಗೊತ್ತಿಲ್ಲ 2017ರ ಏಪ್ರಿಲ್‌ ನಲ್ಲಿ ಹೂಳು ತೆಗೆಯುವ ವೇಳೆಯಲ್ಲಿಯೇ ಬಿರು ಬೇಸಿಗೆಯಲ್ಲಿಯೇ ಕೆರೆಯ ಅಡಿಯಲ್ಲಿ ನೀರು ಬಂದು, ಅಚ್ಚರಿ ಮೂಡಿಸಿತ್ತು. ಇದರಿಂದ ಸುತ್ತ ಹತ್ತಾರು ಗ್ರಾಮಗಳ ಬಾಯಾರಿಕೆ ನೀಗಿದೆಯಲ್ಲದೆ ಅಂತರ್ಜಲ ವೃದ್ಧಿಯಾಗಿದ್ದರಿಂದ ಬೆಳೆಗಳು ಕಂಗೊಳಿಸುತ್ತಿವೆ.

ಯಶ್ ಅವರನ್ನು ಕೊಂಡಾಡುತ್ತಿರುವ ರೈತರು:

ಸತತ ಮೂರು-ನಾಲ್ಕು ವರ್ಷದಿಂದ 96 ಎಕರೆಯ ತಲ್ಲೂರು ಕೆರೆ ಬತ್ತಿ ಹೋಗಿತ್ತು. ಸಂಪೂರ್ಣವಾಗಿ ಹೂಳಿನಿಂದ ತುಂಬಿದ್ದ ಕೆರೆಯ ಹೂಳನ್ನ ಕಳೆದ ಫೆಬ್ರವರಿಯಲ್ಲಿ ತೆಗೆಯಲು ಪ್ರಾರಂಭಿಸಲಾಗಿತ್ತು. ಅಂದು ಪ್ರಾರಂಭಿಸಿದ ಕೆರೆಯ ಕಾಯಕಕ್ಕೆ ಯಶ್ ರಿಂದ ಯಶಸ್ಸು ಸಿಕ್ಕಿತ್ತು. ಕೆರೆಯ ಹೂಳೆತ್ತುವ ಕಾಯಕದ ಬೆನ್ನಲ್ಲೇ ಜಲವು ಕಂಡು ಮಳೆಯೂ ಚೆನ್ನಾಗಿ ಆಗಿತ್ತು. ಆದ್ದರಿಂದ ಕೆರೆಯ ನೀರು ಹಾಗೂ ಮಳೆಯ ನೀರು ಎರಡು ಸೇರಿ ಸದ್ಯ ಹತ್ತು ಗ್ರಾಮಗಳಿಗೆ ತಲ್ಲೂರು ಕೆರೆಯಿಂದ ನೀರಿನ ವ್ಯವಸ್ಥೆಯಾಗಿದೆ. ಇದರಿಂದ ಖುಷಿಯಾಗಿರುವ ರೈತರಿಗೆ ಸದ್ಯ ಯಶ್- ಅವರು ಅಲ್ಲಿನ ಆಧುನಿಕ “ಭಗೀರಥ” ಎಂದು ಕೊಂಡಾಡುತ್ತಿದ್ದಾರೆ.

ಎಂದೂ ಭತ್ತದ ಕೆರೆ:

ಕಳೆದ ವರ್ಷದಲ್ಲಿ ಭೀಕರ ಬರ ಆವರಿಸಿದರೂ ಕೆರೆಯ ನೀರು ಬತ್ತಿಲ್ಲ. ಸುತ್ತಮುತ್ತಲ ಪ್ರದೇಶದಲ್ಲಿ ಅಂತರ್ಜಲ ಹೆಚ್ಚಳವಾಗಿದೆ. ಗೆದಗೇರಿ ಗ್ರಾಮದಲ್ಲಿ ಭತ್ತಿದ ಅವರ ಬೋರ್‌ವೆಲ್‌ನಲ್ಲಿ 8 ವರ್ಷಗಳಿಂದಲೂ ನೀರಿಲ್ಲದೆ ಬೆಳೆದಿರುವ ಬೆಳೆ ಒಣಗಿ ಹೋಗಿತ್ತು. ತಲ್ಲೂರು ಕೆರೆಯ ಹೂಳು ತೆಗೆದು, ನೀರು ತುಂಬಿಕೊಳ್ಳುತ್ತಿದ್ದಂತೆ ರೈತರ ಬೋರ್‌ವೆಲ್‌ ಮತ್ತೆ ನೀರು ತುಂಬಿಕೊಂಡಿದೆ. ಈಗ ಪುನಃ ನೀರಾವರಿ ಮಾಡುತ್ತಿದ್ದು, ಹಲವಾರು ಬೆಳೆಗಳನ್ನು ಬೆಳೆದಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಯಶ್‌ ಅವರು ನಟಿಸಿರುವ ‘ಕೆಜಿಎಫ್‌’ ಚಿತ್ರದ ಸದ್ದು ಜೋರಾಗಿಯೇ ಇರುವ ವೇಳೆಯಲ್ಲಿಯೇ ಅವರ ಸಮಾಜಿಮುಖಿ ಕಾರ್ಯವೂ ವ್ಯಾಪಕ ಪ್ರಶಂಸೆಗೆ ಪಾತ್ರವಾಗುತ್ತಿದ್ದು, ಅನೇಕ ರೈತರ ಬದುಕಿಗೆ ದಾರಿದ್ವಿಪವಾಗಿದ, ಯಶ್ ಅವರ ಕೆಜಿಎಫ್‌ ಸಿನಿಮಾಕ್ಕೆ ತಲ್ಲೂರು ಕೆರೆಯ ಭಾಗದ ರೈತರು ಶುಭ ಹಾರೈಸಿದ್ದಾರೆ.

ಯಶ್ ಅವರ ಕೊಡುಗೆ ಸರಕಾರಕ್ಕೆ ಮಾದರಿ:

ನಟ ಯಶ್‌ ಅವರು ಹೂಳು ತೆಗೆಸಿದ ಕೆರೆ ಭೀಕರ ಬರದಲ್ಲಿಯೂ ತುಂಬಿದ್ದು, ಅಂತರ್ಜಲ ವೃದ್ಧಿಯಾಗಲು ಸಹಾಯವಾಗಿದೆ. ಹತ್ತಾರು ಹಳ್ಳಿಗಳ ಬಾಯಾರಿಕೆ ನೀಗಿದೆ. ಇಂಥ ಬರದಲ್ಲಿಯೂ ತಲ್ಲೂರು ಕೆರೆ ಜನ, ಜಾನುವಾರುಗಳಿಗೂ ಆಸರೆಯಾಗಿರುವುದಂತೂ ಸತ್ಯ ಇದೆ ಮಾದರಿಯನ್ನು ರೈತರಿಗೆ ಸರ್ಕಾರ ಬರ ಪರಿಹಾರ ನೀಡುವ ಬದಲು ಇಂಥ ಶಾಶ್ವತ ಪರಿಹಾರವನ್ನು ಮಾಡಿದರೆ ಎಲ್ಲಿವೂ ನೀರಿನ ಸಮಸ್ಯೆ ಕಂಡು ಬರುವುದಿಲ್ಲ.

Also read: ಬತ್ತಿ ಬರಿದಾಗಿದ್ದ ತಲ್ಲೂರು ಕೆರೆಗೆ ಜೀವ ತುಂಬಿದ ಯಶ್ ನಿಜ ಜೀವನದ ಹೀರೋ.. ಯಶ್ ರವರ ರಾಜಕೀಯ ಪ್ರವೇಶ ನಿಜಾನಾ??