ನಟ ರವಿಚಂದ್ರನ್ ಪುತ್ರನ ಸಿನ್ಮಾ ಶೂಟಿಂಗ್ ವೇಳೆ ಸಹನಟಿ ಸಾವು

0
4514

ಬೆಂಗಳೂರು: ರವಿಚಂದ್ರನ್ ಪುತ್ರ ಮನೋರಂಜನ್ ನಟಿಸುತ್ತಿರುವ ವಿಐಪಿ ಚಿತ್ರದ ಶುಟಿಂಗ್ ನಡೆಯುವಾಗ ಕಾಲು ಜಾರಿ ಬಿದ್ದು ಸಹ ಕಲಾವಿದೆ ಪದ್ಮಾವತಿ ಎಂಬುವವರು ಮೃತಪಟ್ಟ ಘಟನೆ ಬೆಂಗಳೂರಿನ ಯಲಹಂಕದ ಆವಲಹಳ್ಳಿಯಲ್ಲಿ ನಡೆದಿದೆ. ಸೋಮವಾರ ಸಂಜೆ 6 ಗಂಟೆಗೆ ಚಿತ್ರೀಕರಣದ ವೇಳೆ 150 ಕಲಾವಿದರಿದ್ದರು. ಈ ಸಂದರ್ಭದಲ್ಲಿ ಘಟನೆ ಸಂಭವಿಸಿದೆ. ಆದರೆ ಚಿತ್ರೀಕರಣದ ವೇಳೆ ಯಾವುದೇ ದುರಂತ ನಡೆದಿಲ್ಲ ಎಂದು  ವಿಐಪಿ ಚಿತ್ರದ ನಿರ್ದೇಶಕ ನಂದಕಿಶೋರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

%e0%b2%a8%e0%b2%9f-%e0%b2%b0%e0%b2%b5%e0%b2%bf%e0%b2%9a%e0%b2%82%e0%b2%a6%e0%b3%8d%e0%b2%b0%e0%b2%a8%e0%b3%8d-%e0%b2%aa%e0%b3%81%e0%b2%a4%e0%b3%8d%e0%b2%b0%e0%b2%a8-%e0%b2%b8%e0%b2%bf%e0%b2%a8

ಚಿತ್ರೀಕರಣದ ವೇಳೆ ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ತಮಿಳಿನ ಯಶಸ್ವಿಯಾದ ಧನುಷ್ ಅಭಿನಯದ ‘ವೇಲೈ ಇಲ್ಲಾದ ಪಟ್ಟಧಾರಿ’ (ವಿಐಪಿ) ಚಿತ್ರ ಕನ್ನಡ ರಿಮೇಕ್ ನಲ್ಲಿ ರವಿಚಂದ್ರನ್ ಅವರ ಪುತ್ರ ಮನೋರಂಜನ್ ಹೀರೋ ಆಗಿದ್ದಾರೆ.

ನಂದಕಿಶೋರ್ ನಿರ್ದೇಶಿಸುತ್ತಿರುವ ‘ವಿಐಪಿ’ ಚಿತ್ರದ ಶೂಟಿಂಗ್, ಬೆಂಗಳೂರಿನ ಹೊರವಲಯದಲ್ಲಿರುವ ರಾಜಾನುಕುಂಟೆ ಬಳಿ ನಡೆಯುವಾಗ ಈ ದುರಂತ ಸಂಭವಿಸಿದೆ. ಸಿವಿಲ್ ಇಂಜಿನಿಯರ್ ಆಗಿರುವ ಹೀರೋ ಎಂಟ್ರಿ ಸೀನ್ ಚಿತ್ರೀಕರಣವನ್ನು ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ನಡೆಸಲಾಗುತ್ತಿತ್ತು. ಹೊಡೆದಾಟ ಸೀನ್ ಶೂಟಿಂಗ್ ಮುಗಿಸಿದ ಚಿತ್ರತಂಡ ಪ್ಯಾಕಪ್ ಮಾಡಿ ತೆರಳಿದೆ.

ಆ ನಂತರ ಕಟ್ಟಡ ಕಾಮಗಾರಿ ಕೂಲಿಗಳ ಪಾತ್ರ ನಿರ್ವಹಿಸುತ್ತಿದ್ದ ಜ್ಯೂನಿಯರ್ ಆರ್ಟಿಸ್ಟ್ ಗಳ ಲೆಕ್ಕ ಹಾಕುವಾಗ ಒಬ್ಬರು ನಾಪತ್ತೆಯಾಗಿರುವುದು ತಿಳಿದು ಬಂದಿದೆ. ನಂತರ ಹುಡುಕಾಟ ನಡೆಸಿದಾಗ ಕಟ್ಟಡದ ಸಂದಿಯೊಂದರಲ್ಲಿ ಶವ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಬಂದ ರಾಜಾನುಕುಂಟೆ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಘಟನೆ ನಡೆದಿದ್ದು ಹೇಗೆ? ಶೂಟಿಂಗ್ ಸಂದರ್ಭದಲ್ಲೇ ಸಾವು ಸಂಭವಿಸಿತೇ? ಶೂಟಿಂಗ್ ನಂತರ ಆಕೆ ಕಟ್ಟಡದ ಬಳಿ ಇದ್ದಿದ್ದು ಏಕೆ? ಎಂಬ ಪ್ರಶ್ನೆಗಳು ಕಾಡುತ್ತಿವೆ ಈ ಪ್ರಕರಣದ ಬಗ್ಗೆ ಪೊಲೀಸರು ತನಿಖೆಯನ್ನು ಮಾಡಲಿದ್ದಾರೆ.

ಪದ್ಮಾವತಿ ಆಯತಪ್ಪಿ ಬಿದ್ದರೇ ಅಥವಾ ಬೇರೆ ಕಾರಣಗಳೇನಾದರೂ ಇವೆಯೇ ಎಂಬ ದಿಸೆಯಲ್ಲಿ ಪೊಲೀಸ್‌ ತನಿಖೆ ನಡೆದಿದೆ. ಮೃತ ಪದ್ಮಾವತಿ ಅವರು ಹಲವು ದಿನಗಳಿಂದ ಸಹ ಕಲಾವಿದರಾಗಿ ನಟಿಸುತ್ತಿದ್ದು, ಜಕ್ಕೂರು ಲೇಔಟ್‌ನಲ್ಲಿ ಅವರು ಕುಟುಂಬದ ಜತೆ ವಾಸವಾಗಿದ್ದರು.

%e0%b2%aa%e0%b2%a6%e0%b3%8d%e0%b2%ae%e0%b2%be%e0%b2%b5%e0%b2%a4%e0%b2%bf

ಕಳೆದ ಮೂರು ದಿನಗಳ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಅವರು, ದಿನಗೂಲಿ ಲೆಕ್ಕದಲ್ಲಿ ಸಂಭಾವನೆ ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ. ಈ ಘಟನೆ ಸಂಬಂಧ ರಾಜಾನುಕುಂಟೆಯಲ್ಲಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.