ತಲೆನೋವಿಗೆ ಮಾತ್ರೆ ಸೇವಿಸುವ ಬದಲು ಈ ಸುಲಭ ಸಲಹೆಗಳನ್ನು ಪಾಲಿಸಿ, ತಲೆನೋವು ನಿಮ್ಮ ಹತ್ತಿರವು ಸುಳಿಯುವುದಿಲ್ಲ…!!

0
6071

ಈಗಿನ ಡಿಜಿಟಲ್ ಯುಗದಲ್ಲಿ ಟಿವಿ, ಮೊಬೈಲ್ ಮತ್ತು ಕಂಪ್ಯೂರ್ಗಳು ಏನೋ ಸ್ಮಾರ್ಟ್ ಆಗುತ್ತಿವೆ. ಆದರೆ, ಇವನ್ನು ಅತಿಯಾಗಿ ಬಳಸಿ ಮನುಷ್ಯ ಇಲ್ಲದ ರೋಗಗಳಿಗೆ ತುತ್ತಾಗುತ್ತಿದ್ದಾನೆ. ಇವುಗಳ ಅತಿಯಾದ ಬಳಕೆ ಮತ್ತು ಬದಲಾದ ಜೀವನಶಾಲಿ ಮತ್ತು ಆಹಾರ ಕ್ರಮಗಳಿಂದ ಹಲವು ರೋಗಗಳು ಬರುತ್ತಿವೆ ಅವುಗಳಲ್ಲಿ ಪ್ರಮುಖ ಮತ್ತು ಸಾಮಾನ್ಯವಾಗಿ ಕಾಡುವ ಕಾಯಿಲೆಯೆಂದರೆ ಅದು ತಲೆನೋವು.

ತಲೆ ನೋವು, ಇದು ಯಾವ ಶತ್ರುವಿಗೂ ಬರಬಾರದು ಎಂದು ಕೊಳ್ಳುತೇವೆ ಅಷ್ಟರ ಮಟ್ಟಿಗಿರುತ್ತದೆ ಇದರ ಪರಿಣಾಮ. ಸಾಮಾನ್ಯವಾಗಿ ತಲೆನೋವು ಶೀತದಿಂದ, ಪ್ರಧೂಷಣೆಯಿಂದ ಮತ್ತು ಅತಿ ಒತ್ತಡದಿಂದ ಬರುವ ಕಾಯಿಲೆಯಾಗಿದೆ. ನೀವು ಯಾವುದೇ ಮಾತ್ರೆ ತೆಗೆದುಕೊಂಡರು ಸಹ ಇದು ಅಷ್ಟು ಬೇಗ ವಾಸಿಯಾಗುವುದಿಲ್ಲ.

ಇಂತಹ ಬಿಡದೆ ಬಾಡಿಸುವ ತಲೆನೋವಿಗೆ, ಜನ ಸಾಮಾನ್ಯವಾಗಿ ಪೈನ್ ಕಿಲ್ಲರ್ ಮಾತ್ರೆ ಅಥವಾ ಝಣ್ದು ಬಾಮ್, ಚಹಾ ಅಥವಾ ಕಾಫಿ ಕುಡಿಯುತ್ತಾರೆ. ಆದರೆ, ಇವೆಲ್ಲ ತಾತ್ಕಾಲಿಕ ಪರಿಹಾರವಷ್ಟೇ. ಇಂದು ನಾವು ನಿಮಗೆ ತಲೆ ನೋವೇ ಬಾರದಿರುವ ಹಾಗೆ ಮಾಡುವ ಕೆಲವು ಉಪಯುಕ್ತ ಸಹಳೆಗಳನ್ನು ನೀಡುತ್ತೇವೆ. ಅವನ್ನು ಪಾಲಿಸಿಕೊಂಡು ಬಂದರೆ ತಲೆನೋವು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ.

ಆಕ್ಯುಪ್ರೆಶರ್, ಈ ವಿಧಾನವನ್ನು ಹಲವಾರು ವರ್ಷಗಳಿಂದ ನಮ್ಮ ಹಿರಿಯರು ಪಾಲಿಸಿಕೊಂಡು ಬರುತ್ತಿದ್ದಾರೆ. ಸುಮಾರು 2000 ವರ್ಷಗಳಷ್ಟು ಪ್ರಾಚೀನವಾಗಿದೆ ಈ ವಿಧಾನ. ಹಾಗಾದರೆ ತಲೆನೋವು ನಿವಾರಣೆಗಾಗಿ ಯಾವ ಆಕ್ಯುಪ್ರೆಶರ್ ಪೋಯಿನ್ಗಳನ್ನು ಒತ್ತಬೇಕು ಅಥವಾ ಮಸಾಜ್ ಮಾಡಬೇಕು ಎಂಬುದನ್ನು ನಾವು ತಿಳಿಸುತ್ತೇವೆ.

ಎರಡು ಹುಬ್ಬಿನ ಒಳಗಡೆ:

acupressure point_1

ಈ ಎರಡು ಪಾಯಿಂಟ್ಗಳು ಕಣ್ಣಿನ ಮೇಲಿರುವ ಎರಡು ಹುಬ್ಬುಗಳ ಒಳಗಿರುತ್ತವೆ. ಇವನ್ನು ನಿತ್ಯ ಒಂದು ನಿಮಿಷದ ಕಾಲ ಎಚ್ಚರಿಕೆಯಿಂದ ಮಸಾಜ್ ಮಾಡಿದರೆ ತಲೆನೋವು ನಿವಾರಣೆಯಾಗಿತ್ತದೆ.

ಮೂಗಿನ ನಾಳದ ಹೊರಗೆ:

acupressure point_4

ಈ ಎರಡು ಪಾಯಿಂಟ್ಗಳು ಮೂಗಿನ ನಾಳದ ಹೊರಗೆ ಹೊರಗಿರುತ್ತವೆ . ಇವನ್ನು ನಿತ್ಯ ಒಂದು ನಿಮಿಷದ ಕಾಲ ಒತ್ತಡ ಅಥವಾ ಮಸಾಜ್ ಮಾಡಿದರೆ ತಲೆನೋವು ಮತ್ತು ಸೈನಸ್ ದೂರವಾಗುತ್ತವೆ.

ಹುಬ್ಬುಗಳ ಮದ್ಯೆ:

acupressure point_2

ಎರಡು ಹುಬ್ಬುಗಳ ಮದ್ಯೆ ಸಾಮಾನ್ಯವಾಗಿ ಕುಂಕುಮ ಇಡುವ ಜಾಗದಲ್ಲಿರುತ್ತದೆ ಈ ಪಾಯಿಂಟ್. ಇದನ್ನು ನಿತ್ಯ ಒಂದು ನಿಮಿಷ ಒತ್ತಿರಿ ಎಲ್ಲ ರೀತಿಯ ತಲೆನೋವ್ವಿನಿಂದ ಮುಕ್ತಿ ಪಡೆಯಿರಿ.

ಕಿವಿಯ ಮೇಲ್ಭಾಗದಲ್ಲಿ:

acupressure point_3

ಕಿವಿಯ ಸುಮಾರು ಎರಡು ಬೆರೆಳುಗಷ್ಟು ಮೇಲೆ ಈ ಆಕ್ಯುಪ್ರೆಶರ್ ಪಾಯಿಂಟ್-ಗಳು ಇರುತ್ತವೆ. ಇವನ್ನು ತಲೆನೋವು ಬಂದಾಗ ನಿಧಾನವಾಗಿ ಒತ್ತಿದ್ದಾರೆ ಬಹುಬೇಗನೆ ಆರಾಮಸಿಗುತ್ತದೆ.

ತಲೆಯ ಹಿಂದೆ:

acupressure point_5

ತಲೆಯ ಹಿಂದೆ ಮತ್ತು ಕಿವಿಗಳಿಂದ ಸ್ವಲ್ಪ ದೂರದಲ್ಲಿ ಈ ಆಕ್ಯುಪ್ರೆಶರ್ ಪಾಯಿಂಟಗಳಿರುತ್ತವೆ. ಈ ಪಾಯಿಂಟ್-ಗಳ ಮೇಲೆ ಒತ್ತಡ ಹಾಕುವುದರಿಂದ ಇಂತಹ ತಲೆನೋವಿದ್ದರೂ ನಿವಾರಣೆಯಾಗುತ್ತದೆ.