ಅಧಿಕ ಬಿಪಿ ಸಮಸ್ಯೆಯಿಂದ ಬಳಲುತ್ತಿದ್ದಿರ? ಇನ್ಮುಂದೆ ಆ ಚಿಂತೆ ಬಿಡಿ ನಾವ್ ಹೇಳುವ ರೀತಿ ಅಕ್ಯುಪ್ರೆಶರ್ ಮಾಡಿನೋಡಿ..

0
2133

ಆಧುನಿಕ ಜೀವನ ಶೈಲಿಯಿಂದ ಮಾನವನು ಬದಲಾವಣೆಯಾದಂತೆ ಹಲವು ಆರೋಗ್ಯದ ತೊಂದರೆಗಳಿಗೆ ಒಳಗಾಗುತ್ತಿದ್ದಾನೆ. ಇವುಗಳ ಸಾಲಿನಲ್ಲಿ ಬಿಪಿ ಕೂಡ ಏರುಪೇರು ಕಂಡು ಬರುತ್ತಿದೆ. ಇದರಿಂದ ಹೃದಯ ಸಂಬಧಿ ಖಾಯಿಲೆಗಳು ಬರುತ್ತಿವೆ. ಕೆಲವೊಂದು ಸಮಯದಲ್ಲಿ ಸಾವನ್ನು ಕೂಡ ತರುತ್ತದೆ. ಇದೆ ಭಯದಲ್ಲಿ ಔಷಧಿಗಳ ಮೊರೆ ಹೋದರು ಕೂಡ ಯಾವುದೇ ಪ್ರಯೋಜನೆಗಳು ಸಿಗದೇ ಹಣದ ಜೊತೆಗೆ ಗುಣವು ಕಳೆದುಕೊಳ್ಳುವ ಜನರು ಹಲವು ಯೋಚನೆಯಲ್ಲಿ ಮುಳುಗಿರುತ್ತಾರೆ. ಇಂತಹ ಸಮಸ್ಯೆಗಳಿಂದ ಬಳಲುವವರಿಗೆ ಒಂದು ಉತ್ತಮ ಚಿಕಿತ್ಸೆ ಅಂದರೆ ಅಕ್ಯುಪ್ರೆಶರ್.

Also read: ಅಧಿಕ ರಕ್ತದೊತ್ತಡ ಹೃದಯಾಘಾತಕ್ಕೆ ಕಾರಣವಾಗಬಹುದು, ಈ ಮನೆಮದ್ದುಗಳನ್ನು ಪಾಲಿಸಿ ರಕ್ತದೊತ್ತಡ ನಿಯಂತ್ರಿಸಿಕೊಳ್ಳಿ!!

ಹೌದು ಇನ್ನು ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸೇವಿಸುವ ಮಾತ್ರೆಗಳಿಂದ ಸಹ ಅನೇಕ ಅಡ್ಡ ಪರಿಣಾಮಗಳು ಕಂಡು ಬರುತ್ತವೆ. ಬಿಪಿ ನಿಯಂತ್ರಣಕ್ಕೆ ಹೆಚ್ಚು ಔಷಧಿ ಸೇವಿಸುವುದರಿಂದ ನರಮಂಡಲಕ್ಕೆ ಹಾನಿಯಾಗಬಹುದು ಅಥವಾ ಲೈಂಗಿಕ ಜೀವನ ಹಾಳಾಗಲೂಬಹುದು. ಹೀಗಾಗಿ ಇದಕ್ಕೆ ಅಡ್ಡಪರಿಣಾಮಗಳಿಲ್ಲದ ಪರ್ಯಾಯ ಚಿಕಿತ್ಸೆಯತ್ತ ಗಮನಹರಿಸುವುದು ಅಗತ್ಯವಾಗಿದೆ. ಚೀನಾ ದೇಶದ ಪುರಾತನ ಚಿಕಿತ್ಸಾ ಪದ್ಧತಿಗಳಲ್ಲೊಂದಾಗಿರುವ ಅಕ್ಯುಪ್ರೆಶರ್ ಥೆರಪಿ ಮೂಲಕ ಅಧಿಕ ರಕ್ತದೊತ್ತಡವನ್ನು ಸಹಜವಾಗಿ ಹಾಗೂ ಯಾವುದೇ ಅಡ್ಡಪರಿಣಾಮಗಳಿಲ್ಲದೆ ನಿಯಂತ್ರಿಸಬಹುದು ಎಂಬುದು ತಿಳಿಸಿದೆ. ಅದರಂತೆ ದೇಹದಲ್ಲಿನ ಪ್ರಮುಖ ಅಕ್ಯುಪ್ರೆಶರ್ ಕೇಂದ್ರಗಳ ಬಗ್ಗೆ ತಿಳಿದುಕೊಂಡರೆ ಬಿಪಿ ರೋಗಿಗಳು ತಾವಾಗಿಯೇ ಬಿಪಿ ನಿಯಂತ್ರಣ ಮಾಡಿಕೊಳ್ಳಬಹುದು.

ದೇಹದಲ್ಲಿನ ಪ್ರಮುಖ ಅಕ್ಯುಪ್ರೆಶರ್ ಕೇಂದ್ರಗಳು:

1. ಲಿವರ್ 3 ಅಥವಾ ಎಲ್‌ವಿ3

ಕಾಲಿನ ಪಾದವು ದೇಹದ ಅತಿ ಪ್ರಮುಖ ಅಂಗವಾಗಿದೆ. ಪಾದಗಳಲ್ಲಿ ಅಡಗಿರುವ ಕೆಲ ಪ್ರಮುಖ ಒತ್ತಡ ಕೇಂದ್ರಗಳನ್ನು ಒತ್ತಿದಾಗ ಆರೋಗ್ಯಕ್ಕೆ ಅನೇಕ ರೀತಿಯ ಲಾಭಗಳು ಸಿಗುತ್ತವೆ. ಪಾದದ ಹೆಬ್ಬೆರಳು ಹಾಗೂ ಎರಡನೇ ಬೆರಳಿನ ನಡುವಿನ ಜಾಗವನ್ನು ಲಿವರ್ 3 ಅಥವಾ ಎಲ್‌ವಿ 3 ಕೇಂದ್ರವೆಂದು ಕರೆಯಲಾಗುತ್ತದೆ. ಈ ಸ್ಥಳದಲ್ಲಿ ಒಂದು ನಿಮಿಷದವರೆಗೆ ಒತ್ತಿ ಹಿಡಿದಲ್ಲಿ ದೇಹ ನಿರಾಳವಾಗಿ ಅಧಿಕ ರಕ್ತದೊತ್ತಡ ತನ್ನಿಂತಾನೇ ನಿಯಂತ್ರಣಕ್ಕೆ ಬರತೊಡಗುತ್ತದೆ. ಹೀಗೆ ಬಿಪಿ ಜಾಸ್ತಿಯಾಗಿ ಆರೋಗ್ಯದಲ್ಲಿ ಏರುಪೇರು ಆದರೆ ಈ ವಿಧಾನವನ್ನು ಅನುಸರಿಸುವುದು ಉತ್ತಮವಾಗಿದೆ.

2. ದೊಡ್ಡ ಕರುಳು 4 ಅಥವಾ ಎಲ್ ಐ 4

ಬಿಪಿ ಗೆ ಮದ್ದು ಎನ್ನುವ ರೀತಿಯಲ್ಲಿ ಕೈಯಲ್ಲಿ ಕೂಡ ಹಲವು ಚಿಕಿತ್ಸೆಗಳಿವೆ, ಮುಂಗೈ ಮೇಲಿನ ಹೆಬ್ಬೆರಳು ಹಾಗೂ ತೋರುಬೆರಳಿನ ಮಧ್ಯದ ಭಾಗವನ್ನು ದೊಡ್ಡ ಕರುಳು 4 ಅಥವಾ ಎಲ್ ಐ 4 ಎಂದು ಕರೆಯಲಾಗುತ್ತದೆ. ಮತ್ತೊಂದು ಕೈನ ಹೆಬ್ಬೆರಳಿನಿಂದ ಈ ಸ್ಥಾನದಲ್ಲಿ ಒತ್ತುವುದರಿಂದ ಅಥವಾ ನಿಧಾನವಾಗಿ ತಟ್ಟುವುದರಿಂದ ಅಧಿಕ ರಕ್ತದೊತ್ತಡ ಕಡಿಮೆಯಾಗಲಾರಂಭಿಸುತ್ತದೆ. ಹೀಗೆ ಮಾಡುವುದರಿಂದ ದೇಹದ ಇತರ ಭಾಗಗಳಲ್ಲಿನ ನೋವು ಸಹ ಕಡಿಮೆಯಾಗಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

3. ಹೃದಯಕೋಶ 6 (Parricarium 6) ಅಥವಾ ಪಿಸಿ 6

ಇದು ದೇಹದ ತೋಳಿನ ಒಳಭಾಗದಲ್ಲಿರುವ ಸ್ಥಳವಾಗಿದೆ. ಇದನ್ನು ಇನ್ನರ್ ಗೇಟ್ ಎಂದೂ ಹೇಳಲಾಗುತ್ತದೆ. ಮುಂಗೈ ಮಣಿಕಟ್ಟಿನಿಂದ ಮೂರು ಬೆರಳುಗಳ ಅಂತರ ಬಿಟ್ಟು ಸರಿಯಾಗಿ ಮಧ್ಯಭಾಗದಲ್ಲಿ ಈ ಕೇಂದ್ರವಿರುತ್ತದೆ. ಈ ಸ್ಥಳದಲ್ಲಿ ಮೃದುವಾಗಿ ಒತ್ತುವುದರಿಂದ ಹೃದಯ ಬಡಿತ ಸಹಜಗೊಂಡು ರಕ್ತ ಪರಿಚಲನೆ ಸುಧಾರಿಸುತ್ತದೆ. ಇದು ವಾಕರಿಕೆ, ತಲೆನೋವು ಹಾಗೂ ಚಲನೆಯ ಅನಾರೋಗ್ಯವನ್ನು ಸಹ ವಾಸಿ ಮಾಡುತ್ತದೆ.

4. ಪಿತ್ತಕೋಶ (Gall blader 20) ಅಥವಾ ಜಿಬಿ 20

ವಿಂಡ್ ಪೂಲ್ ಎಂದೂ ಕರೆಯಲಾಗುವ ಜಿಬಿ 20 ಎರಡು ಕೇಂದ್ರಗಳು ಕತ್ತಿನ ಹಿಂಭಾಗದಲ್ಲಿರುತ್ತವೆ. ತಲೆಯ ಕೆಳಭಾಗದಲ್ಲಿ ಬೆನ್ನುಮೂಳೆ ಆರಂಭವಾಗುವ ಭಾಗದಲ್ಲಿ ಬೆನ್ನುಮೂಳೆಯ ಎರಡೂ ಬದಿಗಳಲ್ಲಿ ಈ ಕೇಂದ್ರಗಳಿರುತ್ತವೆ. ಈ ಭಾಗವನ್ನು ಪ್ರಚೋದಿಸುವುದರಿಂದ ಅಧಿಕ ರಕ್ತದೊತ್ತಡ ನಿವಾರಿಸಬಹುದು ಹಾಗೂ ಕುತ್ತಿಗೆ ನೋವು, ಜ್ವರ ಮತ್ತು ಕಣ್ಣು ಬೇನೆಗಳನ್ನು ಸಹ ಉಪಶಮನಗೊಳಿಸಲು ಸಾಧ್ಯ. ಈ ಎರಡೂ ಒತ್ತಡ ಕೇಂದ್ರಗಳ ಮೇಲೆ ಸಾಧಾರಣ ಶಕ್ತಿಯಿಂದ ಒಂದು ನಿಮಿಷದವರೆಗೆ ಒತ್ತಬೇಕು. ಹೆಬ್ಬೆರೆಳಿನಿಂದ ಈ ಸ್ಥಳದಲ್ಲಿ ಒತ್ತುವಾಗ ಭುಜಗಳನ್ನು ಅಲ್ಲಾಡಿಸಬಾರದು.

5. ಜಿವಿ 20 (Governing Vessel 20)

ಸರಿಯಾಗಿ ತಲೆಯ ಮಧ್ಯಭಾಗದಲ್ಲಿರುವ ಈ ಸ್ಥಳವನ್ನು ‘ಹಂಡ್ರೆಡ್ ಕಾನ್ವರ್ಜೆನ್ಸ್’ಎಂದೂ ಕರೆಯಲಾಗುತ್ತದೆ. ಒಂದು ಕಿವಿಯಿಂದ ಇನ್ನೊಂದು ಕಿವಿಗೆ ತಲೆಯ ಮೇಲ್ಭಾಗದಿಂದ ಹಾದು ಹೋಗುವಂತೆ ಒಂದು ರೇಖೆಯನ್ನು ಊಹಿಸಿ. ಹೀಗೆ ರೇಖೆ ತಲೆಯ ಮೇಲಿಂದ ದಾಟುವಾಗ ಮಧ್ಯದ ಸ್ಥಳವೇ ಜಿವಿ 20 ಆಗಿದೆ. ಈ ಕೇಂದ್ರದಲ್ಲಿ ನಿಧಾನವಾಗಿ ಒತ್ತುವುದರಿಂದ ಅಧಿಕ ರಕ್ತದೊತ್ತಡ ನಿವಾರಿಸಬಹುದು. ಜೊತೆಗೆ ಈ ವಿಧಾನದಿಂದ ತಲೆ ಸುತ್ತುವಿಕೆ ಹಾಗೂ ಮಾನಸಿಕ ಒತ್ತಡಗಳನ್ನೂ ನಿಯಂತ್ರಿಸಬಹುದು.

Also read: ಹೈ ಬಿಪಿಯಿಂದ ಬಳಲುತ್ತಿದ್ದೀರ? ಕೇವಲ 30 ನಿಮಿಷದಲ್ಲಿ ನಿಮ್ಮ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತೆ ಈ ವಿಧಾನ…!