ATMನಿಂದ ಹಣ ತೆಗೆದುಕೊಳ್ಳುವ ರೂಲ್ಸ್-ನಲ್ಲಿ ಭಾರಿ ಬದಲಾವಣೆ ತಂದ RBI, ಇದನ್ನು ತಿಳಿದುಕೊಳ್ಳದಿದ್ದರೆ ನಿಮಗೆ ನಷ್ಟ ಆದೀತು!!

0
381

ಎಟಿಎಂ ಗ್ರಾಹಕರಿಗೆ ಬಿಗ್ ಶಾಕ್ ಒಂದು ಎದುರಾಗಿದೆ. ಎಟಿಎಂನಿಂದ 5 ಸಾವಿರ ರೂ.ಕ್ಕಿಂತ ಹೆಚ್ಚು ಹಣ ತೆಗೆದರೆ ಶುಲ್ಕ ವಿಧಿಸಲು ಸಿದ್ಧತೆ ನಡೆದಿವೆ.

ವಿತ್ ಭಾರತೀಯ ರಿಸರ್ವ್ ಬ್ಯಾಂಕ್, ಬಹಳ ವರ್ಷಗಳ ನಂತರ ಎಟಿಎಂ ಡ್ರಾ ಮೇಲಿನ ಶುಲ್ಕ ವಿಧಿಸುವ ನಿಯಮದಲ್ಲಿ ಕೆಲ ಮಹತ್ವದ ಬದಲಾವಣೆ ತರಲು ಮುಂದಾಗಿದೆ.ಹೀಗಾಗಿ ಎಟಿಎಂನಿಂದ ಹಣ ತೆಗೆಯಲು ಈಗಿರುವ ನಿಯಮದಲ್ಲಿ ಬದಲಾವಣೆ ಮಾಡಲು ಸಿದ್ಧತೆ ನಡೆಸಲಾಗಿದೆ. ಹೊಸ ನಿಯಮ ಜಾರಿಯಾದರೆ ತಿಂಗಳಿಗೆ 5 ಬಾರಿ ಉಚಿತ ಹಣ ತೆಗೆಯುವ ಆಯ್ಕೆ ರದ್ದಾಗಲಿದೆ. 5 ಸಾವಿರ ರೂ.ಕ್ಕಿಂತ ಹೆಚ್ಚಿನ ಹಣವನ್ನು ತೆಗೆದರೆ ಅದಕ್ಕೆ ಪ್ರತ್ಯೇಕವಾಗಿ 24 ರೂ. ಶುಲ್ಕ ವಿಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಸದ್ಯ ಎಟಿಎಂನಿಂದ ತಿಂಗಳಿಗೆ 5 ಬಾರಿ ಉಚಿತವಾಗಿ ಹಣ ತೆಗೆಯಲು ಅವಕಾಶ ಇದೆ. ಆರ್ ಬಿಐ ನೇಮಿಸಿದ್ದ ಸಮಿತಿಯ ಶಿಫಾರಸಿನ ಮೇರೆಗೆ ಎಟಿಎಂನಿಂದ ಹಣ ತೆಗೆಯಲು ಹೊಸ ನಿಯಮಳನ್ನು ರೂಪಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಎಟಿಎಂನಿಂದ 5000 ರೂಪಾಯಿಗಿಂತ ಹೆಚ್ಚು ಹಣ ಡ್ರಾ ಮಾಡಿದರೆ, ಈ ಮೊತ್ತಕ್ಕೆ ನೀವು ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ. ಎಂಟು ವರ್ಷಗಳ ನಂತರ ಎಟಿಎಂ ವಿತ್ ಡ್ರಾ ನಿಯಮ ಬದಲಿಸಲು ಸಿದ್ಧತೆ ಮಾಡಿದೆ. ಈ ಹೊಸ ನಿಯಮ ಎಟಿಎಂಗಳಿಂದ ತಿಂಗಳಿಗೆ ಐದು ಬಾರಿ ಉಚಿತ ಹಣ ಪಡೆಯುವುದಕ್ಕೆ ಅನ್ವಯಿಸುವುದಿಲ್ಲ.

ಎಟಿಎಂನಿಂದ 5000 ರೂಪಾಯಿಗಿಂತ ಹೆಚ್ಚು ಹಣವನ್ನು ಹಿಂತೆಗೆದುಕೊಳ್ಳುವ ಗ್ರಾಹಕರು ಹೆಚ್ಚುವರಿ 24 ರೂಪಾಯಿ ಪಾವತಿಸಬೇಕಾಗಲಿದೆ. ಎಟಿಎಂಗಳಿಂದ ನಗದು ವಿತ್ ಡ್ರಾ ಮಾಡುವ ನಿಯಮಗಳ ಪ್ರಕಾರ, ತಿಂಗಳಿಗೆ ಐದು ಬಾರಿ ಹಣ ಡ್ರಾ ಮಾಡಬಹುದು. ಒಂದು ವೇಳೆ ಒಂದು ತಿಂಗಳಲ್ಲಿ ಐದಕ್ಕಿಂತ ಹೆಚ್ಚು ಬಾರಿ ನಗದು ಹಿಂತೆಗೆತ ಮಾಡಿದರೆ, ಆರನೇ ವಿತ್ ಡ್ರಾಗೆ 20 ರೂಪಾಯಿ ಶುಲ್ಕ ಪಾವತಿಸಬೇಕು.

ಭಾರತೀಯ ರಿಸರ್ವ್ ಬ್ಯಾಂಕ್ ಸಮಿತಿ ಮಾಡಿರುವ ಶಿಫಾರಸುಗಳ ಆಧಾರದ ಮೇಲೆ ಎಟಿಎಂಗಳಿಂದ ಹಣ ಡ್ರಾ ಮಾಡುವ ನಿಯಮ ಬದಲಿಸಲಾಗಿದೆ. ಆದರೆ, ಸಮಿತಿಯ ವರದಿ ಇನ್ನೂ ಬಹಿರಂಗಗೊಂಡಿಲ್ಲ. ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಕೇಳಲಾದ ಮಾಹಿತಿಯಲ್ಲಿ ಈ ವಿವರ ನೀಡಲಾಗಿದೆ.

Also read:
ಉದ್ಯೋಗ ಸೃಷ್ಟಿ ಮಾಡಿಕೊಡದಿದ್ದರೆ ಯುವಕ/ಯುವತಿಯರು ಬೀದಿಗಿಳಿದು ಉಗ್ರ ಹೋರಾಟ ಮಾಡುವ ದಿನ ದೂರವಿಲ್ಲ : ರಘುರಾಮ್ರಾಜನ್!!