ಮಕ್ಕಳನ್ನೂ ನೋಡಿಕೊಂಡ ಹಾಗೆ ಇರುತ್ತೆ, ವೃತ್ತಿಯೂ ಜೊತೆಜೊತೆಯಲ್ಲೇ ಸಾಗುತ್ತೆ, ಎಲ್ಲಾ ಕಂಪನಿಯಲ್ಲೂ ಬೇಕು ಈ ಡೇ-ಕೇರ್

0
854

ಡೇ ಕೇರ್ ಕಂಪನಿಗಳು ಹೆಚ್ಚಾಗಲು ಕಾರಣವೇನು..?

ದಿನದಿನಕ್ಕೂ ಲೈಪ್ ಸ್ಟೈಲ್ ಚೇಂಜ್ ಆಗ್ತಾನೇ ಇದೆ. ಲೈಪ್ ಸ್ಟೈಲ್ ಜೊತೆಗೆ ಕಾಸ್ಟ್ ಆಫ್ ಲಿವಿಂಗ್ ಕೂಡ ಏರ್ತಾನೆ ಇದೆ. ಆದ್ರೆ ಮನೆಯಲ್ಲಿ ಒಬ್ಬರ ದುಡಿಮೆ ಸಾಕಾಗಲ್ಲ. ಇನ್ನು ಸಿಲಿಕಾನ್ ಸಿಟಿಯಂತಾ ಮಹಾನಗರಗನಲ್ಲಿ ಕೇಳ್ಬೇಕಾ.. ಒಬ್ಬರ ದುಡಿಮೆ ಅವರೊಬ್ಬರಿಗೇ ಸಾಕಾಗಲ್ಲ. ಗಂಡ ಹೆಂಡತಿ ಇಬ್ರೂ ಕೆಲಸಕ್ಕೆ ಹೋಗೋಣ ಅಂದ್ರೆ ಮನೆಯಲ್ಲಿ ಮಕ್ಕಳ ಆರೈಕೆ ಮಾಡೋದ್ಯಾರು ಅನ್ನೋ ತಲೆನೋವು ಶುರುವಾಗುತ್ತೆ. ಇದಕ್ಕೆ ಪರಿಹಾರ ಮಕ್ಕಳನ್ನ ಡೇ ಕೇರ್ ಗೆ ಬಿಡೋದು.

ದುಡಿಯೋ ದಂಪತಿ ಮಕ್ಕಳನ್ನ ಡೇ ಕೇರ್ ಗೆ ಬಿಡೋಣ ಅಂದ್ರೆ ಬೆಳಗಿನಿಂದ ಸಂಜೆವರೆಗೆ ನೋಡಿಕೊಳ್ಳುವ ಡೇ ಕೇರ್‌ ಸಿಗುವುದು ಕಷ್ಟ. ಫೀಸ್‌ ಕೂಡ ದುಬಾರಿ. ದುಡಿದ ದುಡ್ಡನ್ನೆಲ್ಲಾ ಡೇ ಕೇರ್ ಗೆ ಕೊಡಬೇಕು ಅನ್ನೋದೆ ದಂಪತಿಯ ಸಮಸ್ಯೆಯಾಗಿದೆ.

ಇನ್ವು ಮನೆಯಲ್ಲಿ ಕೆಲಸದಾಳನ್ನಿಟ್ಟರೆ ಮಕ್ಕಳನ್ನು ನೋಡಿಕೊಳ್ತಾರೆ ಅಂದ್ರೆ ಕೆಲಸದವರು ಸಿಗುವುದು ಕಷ್ಟ. ಸಿಕ್ಕರೆ ಅವರು ಹೇಗೆ ನೋಡಿಕೊಳ್ಳುತ್ತಾರೆ ಎಂಬ ಅಳುಕು ಬೇರೆ. ಅಲ್ಲದೇ ಇತ್ತೀಚೆಗೆ ಮಕ್ಕಳನ್ವು ಕದ್ದು ಭಿಕ್ಷಾಟನೆ ಮಾಡುವವರಿಗೆ ಮಾರಾಟ ಜಾಲಗಳ ಬಗ್ಗೆ ಸುದ್ದಿ ಕೇಳೋದ್ರಿಂದ ಅದೂ ಕೂಡ ಪೋಷಕರ ಆತಂಕವನ್ನ ಹೆಚ್ಚು ಮಾಡುತ್ತೆ.

ಇಂಥಾ ಸಮಸ್ಯೆಗಳಿರೋದ್ರಿಂದಾನೆ ಇತ್ತೀಚೆಗೆ ಪ್ರತಿಯೊಬ್ಬರೂ ಡೇ ಕೇರ್ ಇರುವ ಆಫೀಸ್ ಗಳನ್ನೇ ಜನ ಬಯಸ್ತಾರೆ.

ದೊಡ್ಡ-ದೊಡ್ಡ ಆಫೀಸ್‌ ಗಳಲ್ಲೇನೋ ಡೇ ಕೇರ್‌ ಸೌಲಭ್ಯವಿದೆ. ಪೋಷಕರು ಮಕ್ಕಳನ್ನು ತಮ್ಮ ಜತೆ ಆಫೀಸ್‌ಗೆ ಕರ್ಕೊಂಡು ಬರುತ್ತಿದ್ದಾರೆ. ಆಫೀಸ್ ನಲ್ಲಿ ಕಣ್ಣೆದುರೇ ತಮ್ಮ ಮಕ್ಕಳು ಆಡಿಕೊಂಡಿರೋದನ್ನ ನೋಡಿಕೊಂಡು ತಾಯಂದಿರು ನೆಮ್ಮದಿಯಾಗಿ ಕೆಲಸ ಮಾಡ್ತಾರೆ. ತಾಯಂದಿರಷ್ಟೇ ಅಲ್ಲದೆ ಈಗ ತಂದೆಯಂದಿರು ಕೂಡ ತಮ್ಮ ಮಕ್ಕಳನ್ನು ಆಫೀಸ್‌ ಡೇ ಕೇರ್ ‌ಗೆ ಕರೆದುಕೊಂಡು ಬಂದು ನೋಡಿಕೊಳ್ಳುತ್ತಿದ್ದಾರೆ.

ಇನ್ನೊಂದ್ ವಿಷ್ಯ ಗೊತ್ತಾ… ನಿರ್ಮಾಪಕ ಕರಣ್ ಜೋಹಾರ್ ಕೂಡ  ತಮ್ಮ ಧರ್ಮ ಪ್ರೊಡೆಕ್ಷನ್‌ ಆಫೀಸ್ ನಲ್ಲೀಗ ಡೇ ಕೇರ್ ಓಪನ್ ಮಾಡಿದ್ದಾರೆ. ಸಿಂಗಲ್‌ ಪೇರೆಂಟ್‌ ಆಗಿರುವ ಜೋಹಾರ್ ತಮ್ಮ ಅವಳಿ ಮಕ್ಕಳನ್ನು ನೋಡಿಕೊಳ್ಳುವ ಸಲುವಾಗಿ ಡೇ ಕೇರ್ ತೆರೆದಿದ್ದಾರೆ. ಅವರಿಗಷ್ಟೇ ಅಲ್ಲದೇ ಅವರ ಕಚೇರಿಗೆ ಬರುವ ಸಿಬ್ಬಂದಿಯೂ ತಮ್ಮ ತಮ್ಮ ಮಕ್ಕಳನ್ನು ಈ ಡೇ ಕೇರ್ ಗೆ ಕರೆದುಕೊಂಡು ಬರಬಹುದು.

ಒಟ್ನಲ್ಲಿ ಕೆಲಸ ಮಾಡುವ ಆಫೀಸ್ ನಲ್ಸೇ ಡೇ ಕೇರ್ ಇದ್ರೆ ಸಿಬ್ಬಂಗೆ ತುಂಬಾ ಹೆಲ್ಪ ಆಗುತ್ತೆ ಅನ್ನೋದಂತೂ ಸತ್ಯ.