ಹೆಣ್ಣು ಮಗುವಿಗಾಗಿ ಈ ದಂಪತಿ ಮನೆಯಲ್ಲಿ ಏನಾಯ್ತು ಗೊತ್ತಾ..?

0
149

ಎಲ್ಲರೂ ಗಂಡು ಮಗು ಬೇಕು ಅಂತ ಹೆಣ್ಣು ಭ್ರೂಣ ಹತ್ಯೆ ಮಾಡ್ತಾರೆ. ಎಷ್ಟೇ ಕಾನೂನು ಜಾರಿಗೆ ತಂದ್ರೂ ಹೆಣ್ಣು ಮಗು ಅಂದ್ರೆ ಒಂಥರಾ ತಾತ್ಸಾರ.. ಆದರೆ ಇಲ್ಲೊಂದು ದಂಪತಿ ಹೆಣ್ಣು ಮಗುವಿಗಾಗಿ 14 ಮಂದಿ ಗಂಡು ಮಕ್ಕಳಿ ಜನ್ಮ ನೀಡಿದ್ದಾರೆ. ಆಶ್ಚರ್ಯ ಆಗ್ತಿದ್ಯಾ..? ಈ ಸುದ್ದಿ ಓದಿ..

ಕಟೇರಿ ಶ್ವಾಂಡ್ಟ್ ಎಂಬುವರು ಅಮೆರಿಕದ ಮಿಚಿಗಾನ್ ರಾಜ್ಯದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಕಟೇರಿ ಶ್ವಾಂಡ್ಟ್ ಹಾಗೂ ಜೇ ಗೇಲಾರ್ಡ್ ಎಂಬ ದಂಪತಿ ಈ ಮಗುವಿನ ತಾಯಿ-ತಂದೆಯಾಗಿದ್ದು, ಮಗುವಿಗೆ ಮ್ಯಾಗಿ ಜಯ್ನೆ ಎಂದು ಹೆಸರಿಟ್ಟಿದ್ದಾರೆ. ಗ್ರ್ಯಾಂಡ್ ರಾಪಿಡ್ಸ್ ನ ಮರ್ಸಿ ಹೆಲ್ತ್ ಸೇಂಟ್ ಮೇರಿಸ್ ಆಸ್ಪತ್ರೆಯಲ್ಲಿ ಮ್ಯಾಗಿ ಜನಿಸಿದ್ದಾಳೆ.

30 ವರ್ಷಗಳ ಬಳಿಕ ಜನಿಸಿದ ಮ್ಯಾಗಿಯನ್ನು 14 ಸಹೋದರರೂ ಖುಷಿಯಿಂದ ಸ್ವಾಗತಿಸಿದ್ದಾರೆ. ಮನೆಯವರೆಲ್ಲಾ ಮ್ಯಾಗಿ ಜನಿಸಿದ್ದಕ್ಕೆ ಸಂತಸದಲ್ಲಿ ತೇಲಾಡುತ್ತಿದ್ದಾರೆ.

14 ಮಕ್ಕಳು ಜನಿಸಿದ ಮೇಲೆ ಹೆಣ್ಣು ಮಗು ಜನಿಸುತ್ತದೆ ಎಂದು ನಾವು ಅಂದುಕೊಂಡಿರಲಿಲ್ಲ. ನಮ್ಮ ತಾಯಿ ಮತ್ತೆ ಪಿಂಕ್ ಉಡುಗೆ ತೊಡುತ್ತಾರೆ ಎಂದುಕೊಂಡಿರಲಿಲ್ಲ ಎಂದು ಮ್ಯಾಗಿಯ 28 ವರ್ಷದ ಅಣ್ಣ ಟೈಲರ್ ಸಂತಸ ವ್ಯಕ್ತಪಡಿಸಿದ್ದಾರೆ. ಟೈಲರ್ ಸಹ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಮ್ಯಾಗಿಯನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸಲು ಕಾತುರದಿಂದ ಕಾಯುತ್ತಿದ್ದೆವು. ಈ ವರ್ಷ ನಮಗೆ ಹಲವು ಕಾರಣಗಳಿಂದಾಗಿ ತುಂಬಾ ನೆನಪಿನಲ್ಲಿ ಇರುತ್ತದೆ. ಮ್ಯಾಗಿ ನಮಗೆ ಬಹುದೊಡ್ಡ ಉಡುಗೊರೆ. ನಾವು ಇದನ್ನು ಊಹಿಸಿರಲಿಲ್ಲ ಎಂದು ಜೇ ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನು ಕಟೇರಿ ಹಾಗೂ ಜೇ ಗೇಲಾರ್ಡ್ ಹೈ ಸ್ಕೂಲ್ ಹಾಗೂ ಗೇಲಾರ್ಡ್ ಸೇಂಟ್ ಮೇರಿಸ್ ಹೈ ಸ್ಕೂಲ್ ನಿಂದ ಡೇಟಿಂಗ್ ಮಾಡುತ್ತಿದ್ದರು. 1993ರಲ್ಲಿ ಇಬ್ಬರೂ ಫೇರಸ್ ಸ್ಟೇಟ್ ವಿಶ್ವವಿದ್ಯಾಲಯಕ್ಕೆ ಸೇರಿದ್ದಾರೆ. ಪದವೀಧರರಾಗುವ ಮೊದಲೇ ಅವರಿಗೆ ಮೂವರು ಗಂಡು ಮಕ್ಕಳು ಜನಿಸಿದ್ದರು. ಕುಟುಂಬ ಬೆಳೆಯುತ್ತಿದ್ದರೂ ದಂಪತಿ ಮಾತ್ರ ಓದನ್ನು ಮುಂದುವರಿಸಿದ್ದರು. ಜೇ ವೃತ್ತಿಯಲ್ಲಿ ವಕೀಲರಾಗಿದ್ದು ಭೂ ಸಮೀಕ್ಷೆ ವ್ಯವಹಾರ ಹೊಂದಿದ್ದಾರೆ.