ಎಸ್ಪಿಬಿ ಕುಟುಂಬದವರಿಗೆ ಎಂಜಿಎಂ ಆಸ್ಪತ್ರೆ ಕೊಟ್ಟ ಬಿಲ್ ಬಗ್ಗೆ ಅವರ ಪುತ್ರ ಹೇಳಿದ್ದೇನು ಗೊತ್ತಾ..?

0
427

ಎಸ್ಪಿಬಿ ಅವರು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ಆಗಸ್ಟ್ 4 ರಂದು ದಾಖಲಾಗಿದ್ದರು, ಅಂದಿನಿಂದಲೂ ಎಸ್ಪಿಬಿ ಅವರು ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರನ್ನು ತೀವ್ರ ನಿಗಾ ಘಟಕದಲ್ಲಿ, ವೆಂಟಿಲೇಟರ್ ವ್ಯವಸ್ಥೆಯಲ್ಲಿ ಇಡಲಾಗಿತ್ತು.

ಇದೀಗ ಎಸ್ಪಿಬಿ ಅವರ ನಿಧನದ ಬಳಿಕ, ಅವರ ಆಸ್ಪತ್ರೆ ಬಿಲ್ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ಎಂಜಿಎಂ ಆಸ್ಪತ್ರೆಯು ಭಾರಿ ದೊಡ್ಡ ಮೊತ್ತದ ಬಿಲ್ ಅನ್ನು ಎಸ್ಪಿಬಿ ಕುಟುಂಬಕ್ಕೆ ನೀಡಿದೆ ಎನ್ನಲಾಗುತ್ತಿದೆ. ಎಸ್ ಪಿ ಬಿ 51 ದಿನಗಳ ಕಾಲ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆದಿದ್ದರು. ಈ ಬಗ್ಗೆ ಎಂಜಿಎಂ ಆಸ್ಪತ್ರೆ ಅವರಿಗೆ ದುಬಾರಿ ಮೊತ್ತದ ಬಿಲ್ ನೀಡಿದೆ. ಸುಮಾರು 3ಕೋಟಿ ರೂಪಾಯಿಯಷ್ಟು ಬಿಲ್ ನೀಡಿದೆ. ಅದರಲ್ಲಿ ಎಸ್ಪಿಬಿ ಅವರ ಪುತ್ರ 1.85 ಕೋಟಿ ರೂ.ನಷ್ಟು ಬಿಲ್ ಪಾವತಿಸಿದ್ದು, ಇನ್ನುಳಿದದ್ದನ್ನು ರಾಜ್ಯ ಸರ್ಕಾರ ಭರಿಸಲಿದೆ ಎಂಬ ಸುದ್ದಿ ಹರಡಿತ್ತು.

ಭಾರಿ ದೊಡ್ಡ ಮೊತ್ತದ ಬಿಲ್ ಅನ್ನು ಎಸ್ಪಿಬಿ ಕುಟುಂಬಕ್ಕೆ ಎಂಜಿಎಂ ಆಸ್ಪತ್ರೆ ನೀಡಿತ್ತು, ಬಿಲ್ ಪಾವತಿಸುವಂತೆ ಎಸ್ಪಿಬಿ ಕುಟುಂಬದವರು ತಮಿಳುನಾಡು ಸರ್ಕಾರಕ್ಕೆ ಮನವಿ ಮಾಡಿಕೊಂಡರು, ಆದರೆ ಅಲ್ಲಿ ಆಗದ ಕಾರಣ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಬಳಿ ಮನವಿ ಮಾಡಿದರು. ಆಗ ಅವರು ಬಿಲ್ ಅನ್ನು ಸರ್ಕಾರದ ವತಿಯಿಂದ ಪಾವತಿಸಿದರು ಎಂಬ ಸುದ್ದಿ ಹರಿದಾಡುತ್ತಿದೆ.

ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಎಸ್ಪಿ ಬಾಲಸುಬ್ರಹ್ಮಣ್ಯಂ ಪುತ್ರ ಎಸ್.ಪಿ.ಚರಣ್, ಇದೆಲ್ಲವೂ ಸುಳ್ಳು ಸುದ್ದಿಗಳು, ಎಂಜಿಎಂ ಆಸ್ಪತ್ರೆ ನಮಗೆ ಭಾರಿ ದೊಡ್ಡ ಬಿಲ್ ನೀಡಿಲ್ಲ, ಬಿಲ್ ನೀಡದೆ ಬಾಡಿ ಕೊಡುವುದಿಲ್ಲ ಎಂದು ಸಹ ಹೇಳಿರಲಿಲ್ಲ. ನಾವು ಸರ್ಕಾರಗಳನ್ನು ಸಂಪರ್ಕಿಸಿದ್ದು ಸಹ ಸುಳ್ಳು, ಇಂಥಹಾ ಸುಳ್ಳುಗಳನ್ನು ಕೆಲವರು ಏಕೆ ಹಬ್ಬಿಸುತ್ತಾರೋ ಗೊತ್ತಿಲ್ಲ ಎಂದಿದ್ದಾರೆ ಚರಣ್.

ಚರಣ್ ಆಸ್ಪತ್ರೆ ಎಷ್ಟು ಬಿಲ್ ನೀಡಿದೆ, ಎಸ್ಪಿಬಿ ಅವರಿಗೆ ಎಂಥಹಾ ಚಿಕಿತ್ಸೆ ನೀಡಲಾಯಿತು ಎಂಬುದೆಲ್ಲದರ ಮಾಹಿತಿ ಇಲ್ಲದೆ ಕೆಲವರು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ನಮ್ಮ ತಂದೆ ಒಂದು ತಿಂಗಳ ಕಾಲದ ಆಸ್ಪತ್ರೆ ಬಿಲ್ ಬಗ್ಗೆ ಕೆಲವರು ಬೇಕೆಂದೇ ವದಂತಿ ಹಬ್ಬಿಸುತ್ತಿದ್ದಾರೆ. ಆಸ್ಪತ್ರೆ ಭಾರೀ ಮೊತ್ತ ನೀಡಿದೆ, ನಾನು ಅರ್ಧದಷ್ಟು ಪಾವತಿಸಿದೆ. ಉಳಿದ ಬಿಲ್ ಗೆ ತಮಿಳುನಾಡು ಸರ್ಕಾರದ ಬಳಿ ಮನವಿ ಮಾಡಿದ್ದೇನೆ ಇತ್ಯಾದಿ. ಇಂತಹವರೆಲ್ಲಾ ನಿಜವಾದ ಎಸ್ ಪಿ ಅಭಿಮಾನಿಗಳಲ್ಲ. ನಮ್ಮ ತಂದೆ ಅಲ್ಲಿರುವಷ್ಟು ದಿನವೂ ಎಂಜಿಎಂ ಆಸ್ಪತ್ರೆ ತಮ್ಮ ಸ್ವಂತ ಕುಟುಂಬ ಸದಸ್ಯನಂತೆ ನೋಡಿಕೊಂಡಿದೆ. ಅವರಿಗೆ ನಾವು ಎಷ್ಟು ಕೃತಜ್ಞತೆ ಹೇಳಿದರೂ ಸಾಕಾಗದು. ಆಸ್ಪತ್ರೆ ಎಷ್ಟು ಚಾರ್ಜ್ ಮಾಡಿದೆ, ನಾನು ಎಷ್ಟು ನೀಡಿದ್ದೇನೆ ಎಂಬುದು ನಮಗೆ ಗೊತ್ತಿದೆ. ಇದನ್ನು ಸದ್ಯದಲ್ಲೇ ನಾವು ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿ ಬಹಿರಂಗಪಡಿಸುತ್ತೇವೆ ಎಂದು ಎಸ್ ಪಿ ಪಿ ಪುತ್ರ ವದಂತಿಕೋರರಿಗೆ ಚಾಟಿಯೇಟು ನೀಡಿದ್ದಾರೆ.

ಇನ್ನು ಬಿಲ್ ನೀಡದೆ ಸುಬ್ರಹ್ಮಣ್ಯಂ ಅವರ ದೇಹವನ್ನು ಕೊಡಲಿಲ್ಲ ಎಂದೂ ಸಹ ಸುದ್ದಿ ಹರಡಿಸಲಾಗಿತ್ತು, ಆಗ ವೆಂಕಯ್ಯನಾಯ್ಡು ಪುತ್ರಿ ದೀಪಾ ವೆಂಕಟ್ ಬಂದು ಆಸ್ಪತ್ರೆ ಬಿಲ್ ಪಾವತಿಸಿದರು ಎಂದು ಸುದ್ದಿಗಳು ಹರಿದಾಡಿದ್ದವು. ಈ ಸುದ್ದಿಗಳೆಲ್ಲಾ ಸುಳ್ಳು ಮತ್ತು ಬೇಸರ ಹುಟ್ಟಿಸುವವಂಥಹವು ಎಂದಿದ್ದಾರೆ ಚರಣ್.

Also read: ಅ.1ರಿಂದ ಚಾಲನಾ ಪರವಾನಗಿ ಹಾಗೂ ಎಸ್ ಬಿ ಐ ಹೊಸ ನಿಯಮಗಳು ಜಾರಿ..!