ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ಅಭಿಯಾನವಲ್ಲ, ಪ್ಲಾಸ್ಟಿಕ್ ನಿಷೇಧ ಕುರಿತು ಗೊಂದಲದಲ್ಲಿದ್ದ ದೇಶದ ಜನರಿಗೆ ಪ್ರಧಾನಿ ಮೋದಿ ಸ್ಪಷ್ಟನೆ.!

0
449

ದೇಶದಲ್ಲಿ ಪ್ಲಾಸ್ಟಿಕ್ ಮುಕ್ತ ಗೊಳಿಸಲು ಪ್ರಧಾನಿ ನರೇಂದ್ರ ಮೋದಿಯವರು ಅಭಿಯಾನ ಶುರುಮಾಡಿದ್ದು ಎಲ್ಲರಲ್ಲಿ ಗೊಂದಲ ಹುಟ್ಟುಹಾಕಿತ್ತು, ಏಕೆಂದರೆ ಸಂಪೂರ್ಣವಾಗಿ ದೇಶದಲ್ಲಿ ಪ್ಲಾಸ್ಟಿಕ್ ಇಲ್ಲದಂತೆ ಮಾಡಿದರೆ ಒಂದು ರೀತಿಯಲ್ಲಿ ಒಳ್ಳೆಯದು ಇನ್ನೊಂದು ರೀತಿಯಲ್ಲಿ ಕೆಟ್ಟದು ಎನ್ನುವ ಮಾತುಗಳು ಕೇಳಿಬರುತ್ತಿದ್ದವು,ಅದರಂತೆ ಇಡಿ ದೇಶದ ಜನರು ಪ್ಲಾಸ್ಟಿಕ್ ಬಳಕೆಯನ್ನು 90 ರಷ್ಟು ಕಡಿಮೆ ಮಾಡಿದ್ದಾರೆ ಆದರೆ ಜನರಲ್ಲಿ ಉಳಿದ ಗೊಂದಲಕ್ಕೆ ಇಂದು ಪ್ರಧಾನಿ ಮೋದಿಯವರು ಸ್ವಷ್ಟತೆ ನೀಡಿದ್ದು ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ಅಲ್ಲ, ಏಕ ಬಳಕೆ ಪ್ಲಾಸ್ಟಿಕ್ ನಿಷೇಧಕ್ಕೆ ಅಭಿಯಾನ ಎಂದು ಹೇಳಿದ್ದಾರೆ.

Also read: ಕೇಂದ್ರದ ಅಧೀನ ಸಂಸ್ಥೆ ‘ಅಂಚೆ ಬ್ಯಾಂಕ್-ಗಳಲ್ಲಿ ವ್ಯಾವಹಾರಿಕ ಭಾಷೆಯಾಗಿ ಇಂಗ್ಲಿಷ್ – ಹಿಂದಿ ಮಾತ್ರ ಹಾಗಾದ್ರೆ ಕನ್ನಡಕ್ಕೆ ಇಲ್ವಾ ಮರ್ಯಾದೆ??

ಪ್ಲಾಸ್ಟಿಕ್ ನಿಷೇಧಕ್ಕೆ ಸ್ಪಷ್ಟತ್ತೆ ನೀಡಿದ ಮೋದಿ;

ಹೌದು ಒಂದು ಬಾರಿ ಬಳಕೆ ಮಾಡಿದ ಪ್ಲಾಸ್ಟಿಕ್ ಬ್ಯಾಗ್-ಗಳು ಹೆಚ್ಚಿನ ಅಪಾಯವನ್ನು ತರುತ್ತಿದ್ದು ಅದು ಮಣ್ಣಿನಲ್ಲಿ ಕರಗಳು ಸಾವಿರಾರು ವರ್ಷವೇ ಬೇಕಾಗುತ್ತೆ ಎನ್ನುವುದು ಮನವರಿಕೆಯಾಗಿದೆ. ಆದರೆ ಏಕಮುಖ ಯಾವ ರೀತಿಯ ಪಪ್ಲಾಸ್ಟಿಕ್ ನಿಷೇದ ಎನ್ನುವುದರ ಕುರಿತು ಪ್ರಧಾನಿ ಅಭಿಮಾನ ತಿಳಿಸಿದ್ದು, ಒಂದು ಬಾರಿ ಬಳಕೆಯಾಗುವ ಪ್ಲಾಸ್ಟಿಕ್ ನಿಂದ ಪರಿಸರಕ್ಕೆ ತೀವ್ರ ಹಾನಿಯಾಗುವುದರಿಂದ ಅದರ ಬಳಕೆಗೆ ನಿಷೇಧ ಹೇರಬೇಕೆಂದು ಕೇಂದ್ರ ಸರ್ಕಾರ ಅಭಿಯಾನ ಕೈಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Also read: ಮರುಕಳಿಸಿ ಬರುವ ಪಾರ್ಶ್ವವಾಯು ಕಾಯಿಲೆಗೆ ಹೊಸ ಚಿಕಿತ್ಸೆ ಕಂಡು ಹಿಡಿದ ಬೆಂಗಳೂರು ಮಣಿಪಾಲ್ ಆಸ್ಪತ್ರೆ.!

ಚೆನ್ನೈಯಲ್ಲಿ ಇಂದು ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಏಕ ಬಳಕೆ ಪ್ಲಾಸ್ಟಿಕ್ ವಿರುದ್ಧ ಅಭಿಯಾನದ ಬಗ್ಗೆ ಮಾತನಾಡಿದರು. ಕೆಲವರು ತಪ್ಪಾಗಿ ಪ್ಲಾಸ್ಟಿಕ್ ಮುಕ್ತ ಭಾರತಕ್ಕೆ ನಾನು ಕರೆನೀಡಿದ್ದೇನೆ ಎನ್ನುತ್ತಾರೆ. ಆದರೆ ನಾನು ಹೇಳಿರುವುದು ಏಕ ಬಳಕೆ ಪ್ಲಾಸ್ಟಿಕ್ ನ್ನು ನಿಲ್ಲಿಸುವಂತೆ, ಏಕ ಬಳಕೆ ಪ್ಲಾಸ್ಟಿಕ್ ನ್ನು ಒಂದು ಬಾರಿ ಬಳಸಿದ ಮೇಲೆ ಮತ್ತೆ ಬಳಸಲು ಆಗುವುದಿಲ್ಲ, ಹೀಗಾಗಿ ಇದು ಪರಿಸರಕ್ಕೆ ತೀವ್ರ ಹಾನಿಯನ್ನುಂಟುಮಾಡುತ್ತದೆ. ಸರ್ಕಾರದ ಹಲವು ಯೋಜನೆಗಳನ್ನು ಸಾರ್ವಜನಿಕರ ಸಹಭಾಗಿತ್ವದಿಂದ ಯಶಸ್ವಿಯಾಗಿ ಮುನ್ನಡೆಸಲಾಗಿದೆ, ಅಂತಹ ಸಾರ್ವಜನಿಕರು ಕೈಜೋಡಿಸಿ ಸಹಕರಿಸುವ ಕೆಲಸ ಏಕ ಬಳಕೆ ಪ್ಲಾಸ್ಟಿಕ್ ಗೆ ನಿಷೇಧ ಹೇರುವ ವಿಚಾರದಲ್ಲಿ ಕೂಡ ಆಗಬೇಕು ಎಂದು ಹೇಳಿದರು.

Also read: ಪರಿಸರ ಕಾಳಜಿಯಿಂದ 10 ಕಿ.ಮೀ ನಡೆದು ಹೋಗಿ ತರಕಾರಿ ತರುವ ಈ ಐಎಎಸ್ ಅಧಿಕಾರಿ ಪ್ರತಿಯೊಬ್ಬರಿಗೂ ಮಾದರಿ.!

ಇಡೀ ಜಗತ್ತು ಇಂದು ಭಾರತದಿಂದ ಅಪಾರವಾದದ್ದನ್ನು ನಿರೀಕ್ಷಿಸುತ್ತಿದ್ದು, ವಿಶ್ವಕ್ಕೆ ಅನುಕೂಲವಾಗುವ ರೀತಿಯಲ್ಲಿ ಶ್ರೇಷ್ಠತೆಯ ಕಡೆಗೆ ದೇಶವನ್ನು ತಮ್ಮ ನೇತೃತ್ವದ ಸರ್ಕಾರ ಮುನ್ನಡೆಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದರು. ಎರಡನೇ ಬಾರಿ ಪ್ರಧಾನಿಯಾದ ಬಳಿಕ ಇಂದು ಮೊದಲ ಸಲ ತಮಿಳು ನಾಡಿಗೆ ಭೇಟಿ ನೀಡಿದ ಅವರು, ಗಾಂಧಿ ಜಯಂತಿ ಆಚರಣೆ ಹೊಸ್ತಿಲಿನಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ವಿರುದ್ಧ ಅಭಿಯಾನವನ್ನು ಮತ್ತೆ ಒತ್ತಿ ಹೇಳಿದರು. ಕಳೆದ ವಾರ ಅಮೆರಿಕಾ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಇಡೀ ಜಗತ್ತು ಭಾರತದಿಂದ ಅಪಾರವಾದದ್ದನ್ನು ನಿರೀಕ್ಷಿಸುತ್ತಿದೆ ಎಂದು ಗೊತ್ತಾಯಿತು, ಭಾರತ ಇಂದು ಬೆಳೆಯುತ್ತಿದೆ. ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಎಂದು ಹೇಳಿದ್ದರು.

ಒಟ್ಟಾರೆಯಾಗಿ ಜನರಲ್ಲಿ ಗೊಂದಲವನ್ನು ಹುಟ್ಟುಹಾಕಿದ ಪ್ಲಾಸ್ಟಿಕ್ ನಿಷೇಧ ಕುರಿತು ಪ್ರಧಾನಿಯವರು ಸ್ವಷ್ಟನೆ ನೀಡಿದ್ದಾರೆ. ಅದರಂತೆ ಒಂದೇ ಸಲ ಬಳಕೆ ಮಾಡುವ ಪ್ಲಾಸ್ಟಿಕ್ ಅಷ್ಟೇ ನಿಷೇಧ, ಇನ್ನುಳಿದಂತೆ ಮರು ಬಳಕೆಗೆ ಬಳಸುವ ಪ್ಲಾಸ್ಟಿಕ್ ಬಳಕೆಗೆ ಅವಕಾಶ ಇದೆ ಎನ್ನುವುದು ಮೋದಿ ಅವರ ಸ್ಪಷ್ಟತೆಯಿಂದ ತಿಳಿದಿದೆ.