ವಸ್ತುಗಳ ಗುಣಮಟ್ಟ ನಿರ್ಧರಿಸುವ ಚಿಹ್ನೆಗಳು

0
729

ಅಗ್ ಮಾರ್ಕ್(Agmark): ಭಾರತದಲ್ಲಿ ಭಾರತ ಸರ್ಕಾರದ ಮಾರುಕಟ್ಟೆಯಲ್ಲಿ ಮತ್ತು ವೀಕ್ಷಕ ನಿರ್ದೇಶನಾಲಯವು ಕೃಷಿ ಉತ್ಪನ್ನಗಳ ಗುಣಮಟ್ಟವನ್ನು ಪ್ರಮಾಣಿಕರಿಸಿ ನೀಡುವ ಮುದ್ರಯೇ ಅಗ್ ಮಾರ್ಕ್. 1937ರಲ್ಲಿ ಇದನ್ನು ಕಾಯ್ದೆಯ ಮೂಲಕ ಜಾರಿಗೆ ತರಲಾಗಿದ್ದು, 1986ರಲ್ಲಿ ಅದಕ್ಕೆ ತಿದ್ದುಪಡಿ ತರಲಾಗಿತ್ತು. ಅಗ್’ಮಾರ್ಕ್ ಕೇಂದ್ರ ಕಚೇರಿ ನಾಗ್ಪುರದಲ್ಲಿದೆ.

ಐಎಸ್’ಐ ಮಾರ್ಕ್: ಭಾರತದ ನ್ಯಾಷನಲ್ ಸ್ಯ್ಟಾಂಡರ್ಡ್ ಆರ್ಗನೈಸೇಷನ್’ನ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ವಿಭಾಗವು ಕೈಗಾರಿಕಾ ಉತ್ಪನ್ನಗಳ ಗುಣಮಟ್ಟವನ್ನು ಪರಿಶೀಲಿಸಿ ನೀಡುವ ಮುದ್ರೆಯಾಗಿದೆ. 1955ರಲ್ಲಿ ಜಾರಿ ಮಾಡಲಾಯಿತು. ಭಾರದಲ್ಲಿ ವಿದ್ಯುತ್ ಗೆ ಸಂಬಂಧಿಸಿದ ಯಾವುದೇ ವಸ್ತುಗಳನ್ನು ಮಾರಾಟ ಮಾಡಬೇಕಾದರೆ ಐಎಸ್’ಐ ಮಾರ್ಕ್ ಕಡ್ಡಾಯ (ಕೆಲವೊಂದು ವಸ್ತುಗಳಿಗೆ ಇದು ಅತ್ಯಂತ ಕಡ್ಡಾಯ).

ಬಿಐಎಸ್ ಹಾಲ್ ಮಾರ್ಕ್: ಈ ಚಿಹ್ನೆಯು ಮೂರು ಅಂಕೆಯ ಸಂಖೆಗಳನ್ನು ಹೊಂದಿದ್ದು, ಚಿನ್ನ ಮತ್ತು ಬೆಳ್ಳಿ ಒಡನೆಗಳ ಗುನಮಟ್ಟ ಪರಿಶೀಲಿಸಿ ನೀಡಲಾಗುವ ಮುದ್ರೆ. 1999 ರಿಂದ ಜಾರಿ. 2012ರಿಂದ ಚಿನ್ನವು ಹಾಲ್ ಮಾರ್ಕ್ ಪಡೆಯುವುದು ಕಡ್ಡಾಯ ಮಾಡಲಾಗಿದೆ. ಹಾಲ್ ಮಾರ್ಕ್ ಎಂದರೆ ಸಾವಿರ ಭಾಗದಲ್ಲಿ ಚಿನ್ನದ ಶುದ್ಧತೆಯ ಪ್ರಮಾಣವನ್ನು ಸೂಚಿಸಲಾಗುತ್ತದೆ. ಉದಾಹರಣೆಗೆ ಬಿಐಎಸ್ 958 ಹಾಲ್ ಮಾರ್ಕ್ ಎಂದರೆ, ಸಾವಿರ ಭಾಗದಲ್ಲಿ ಚಿನ್ನವು 958 ಭಾಗಷ್ಟು ಶುದ್ಧತೆಯನ್ನು ಹೊಂದಿದೆ ಎಂದರ್ಥ.

ಎಕೋಮಾರ್ಕ್: ಪರಿಸರದ ಹಾನಿಯನ್ನು ತಡೆಯುವ ಉದ್ದೇಶದಿಂದ ಜೀವವ್ಯವಸ್ಥೆಗೆ ಕಡಿಮೆ ಪ್ರಮಾಣದಲ್ಲಿ ಪರಿಣಾಮ ಬೀರುವಂಥ ವಸ್ತುಗಳನ್ನು ಪರಿಶೀಲಿಸಿ ಬ್ಯೂರೋ ಆಫ್ ಸ್ಟ್ಯಾಂಡರ್ಡ್ ಈ ಚಿಹ್ನೆ ನೀಡುತ್ತದೆ. 1991ರಿಂದ ಇದು ಜಾರಿಯಾಗಿದೆ.