ನೆರೆಯ ಪಾಕಿಸ್ತಾನ, ಚೀನಾ ಅಲ್ಲದೇ ಏಷ್ಯಾದ ಯಾವುದೇ ಮೂಲೆಯಲ್ಲಿರುವ ರಾಷ್ಟ್ರವನ್ನೂ ಅಲ್ಲದೇ ಯುರೋಪ್ವರೆಗೂ ನ್ಯುಕ್ಲಿಯರ್ ಹೊತ್ತು ಚಿಮ್ಮಬಲ್ಲ ಭಾರತದ ಸ್ವದೇಶೀ ನಿರ್ಮಿತ ಅಗ್ನಿ-5 ಕ್ಷಿಪಣಿ ಪರೀಕ್ಷೆ ಯಶಸ್ವಿಗೊಂಡಿದೆ.
ಸೋಮವಾರ ಬೆಳಗ್ಗೆ ಒಡಿಶಾದ ಕರಾವಳಿ ತೀರವಾದ ಕಲಾಂ ದ್ವೀಪದಲ್ಲಿ ಯಶಸ್ವಿಯಾಗಿ ಅಗ್ನಿ—5 ಕ್ಷಿಪಣಿ ಪರೀಕ್ಷೆ ನಡೆಯಿತು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಅಭಿವೃದ್ಧಿಪಡಿಸಿದ ಅತ್ಯಂತ ದೂರ ಚಿಮ್ಮಬಲ್ಲ ಸ್ವದೇಶೀ ನಿರ್ಮಿತ ಕ್ಷಿಪಣಿ ಇದಾಗಿದೆ. ಇದು 5 ಸಾವಿರ ಕಿ.ಮೀ.ವರೆಗೂ ಭೂಮಿಯಿಂದ ಭೂಮಿಗೆ ಗುರಿಯನ್ನು ನಿಖರವಾಗಿ ತಲುಪಲಿದೆ. ದೇಶದ ರಕ್ಷಣಾ ವಿಭಾಗದ ಬಲ ಹೆಚ್ಚಿಸಲಿರುವ ಈ ಕ್ಷಿಪಣಿ ಶೀಘ್ರದಲ್ಲೇ ಭಾರತೀಯ ಸೇನೆಗೆ ಸೇರ್ಪಡೆಗೊಳ್ಳಲಿದೆ.
35 ರಾಷ್ಟ್ರಗಳು ಮಾತ್ರ ಇರುವ ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಸಂಘಟನೆಯ ಸದಸ್ಯ ರಾಷ್ಟ್ರವಾಗಿ ಭಾರತ ಗುರುತಿಸಿಕೊಂಡ ನಂತರ ನಡೆಸಿದ ಮೊದಲ ಕ್ಷಿಪಣಿ ಪರೀಕ್ಷೆ ಇದಾಗಿದೆ.
ಅಗ್ನಿ- ಕ್ಷಿಪಣಿ ವಿಶೇಷ
- 5000 ಕಿ.ಮೀ. ಚಿಮ್ಮಬಲ್ಲದು
- ಶಿರದಲ್ಲಿ 1000 ಕೆಜಿ ತೂಕ ಹೊರುವ ಸಾಮರ್ಥ್ಯ ಹೊಂದಿದೆ.
- 17 ಮೀ. ಉದ್ದ, 50 ಟನ್ ತೂಕದ ಕ್ಷಿಪಣಿ
- ಪಾಕ್, ಚೀನಾ ಅಲ್ಲದೇ ಏಷ್ಯಾ ಹಾಗೂ ಯುರೋಪ್ವರೆಗೂ ಚಿಮ್ಮಬಲ್ಲದು
- ನ್ಯೂಕ್ಲಿಯರ್ ಹೊತ್ತೊಯ್ಯುವ ಸಾಮರ್ಥ್ಯ
- ಯಾವುದೇ ಹವಾಮಾನ ಪರಿಸ್ಥಿತಿಯಲ್ಲೂ ಗುರಿ ತಲುಪುತ್ತದೆ
- ಹೊಸ ನೇವಿಗೇಷನ್ ಮುಂತಾದ ಆಧುನಿಕ ತಂತ್ರಜ್ಞಾನ ಅಳವಡಿಕೆ
- ಭೂಮಿಯಿಂದ ಭೂಮಿಗೆ ಚಿಮ್ಮುತ್ತದೆ
- ಯಾವುದೇ ತಂತ್ರಜ್ಞಾನದಿಂದಲೂ ಪತ್ತೆ ಹಚ್ಚಲು ಸಾಧ್ಯವಾಗದಷ್ಟು ವೇಗ ಹೊಂದಿದೆ.
- 1989ರಲ್ಲಿ ಅಗ್ನಿ ಕ್ಷಿಪಣಿ ಸರಣಿಯ ಮೊದಲ ಪರೀಕ್ಷೆ ನಡೆಯಿತು.
ಅಗ್ನಿ-1= 700 ಕಿ.ಮೀ., ಅಗ್ನಿ-2=2000 ಕಿ.ಮೀ., ಅಗ್ನಿ-3=2500, ಅಗ್ನಿ-4=3500 ಕಿ.ಮೀ. ದೂರ ಹಾರುವ ಸಾಮರ್ಥ್ಯ ಹೊಂದಿವೆ.
8000- 10,000 ಕಿ.ಮೀ. ದೂರ ಹಾರುವ ಅಗ್ನಿ-6 ಕ್ಷಿಪಣಿ ಪರೀಕ್ಷೆಗೆ ಸಿದ್ಧತೆಗಳು ಆರಂಭಗೊಂಡಿವೆ. ಇದು ಜಗತ್ತಿನ ಯಾವುದೇ ದೇಶವನ್ನೂ ತಲುಪಬಲ್ಲ ಸಾಮರ್ಥ್ಯ ಹೊಂದಲಿದೆ.