ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡಬೇಕಾದ ಅಗ್ನಿ ಕ್ಷಿಪಣಿಗಳ ವಿವರಗಳು!!

0
809

ಭಾರತದ ಅಗ್ನಿ ಪ್ರತಾಪ

ಭಾರತ ತನ್ನ ಸ್ವತಂತ್ರವಾಗಿ, ಸಂಶೋಧನೆಮಾಡಿ ಸ್ವದೇಶದಲ್ಲಿ ತಂತ್ರಜ್ಞಾನ ಅಭಿವೃದ್ಧಿಗೊಳಿಸಿ ನಿರ್ಮಿಸಿದ ಅಂತರ್ ಭೂಖಂಡ ಸುತ್ತಾಟದ ಅಂತರಿಕ್ಷ ಕ್ಷಿಪಣಿ ಅಗ್ನಿ-5ರ ನಾಲ್ಕನೇಯ ಮತ್ತು ಅಂತಿಮ ಪ್ರಯೋಗಾರ್ಥ ಉಡಾವಣಾ ಪರೀಕ್ಷೆಯನ್ನು ಒಡಿಸ್ಸಾ ಕರಾವಳಿಯ ವೀಲ್ಹರ್ ದ್ವೀಪದಲ್ಲಿ 26ನೇ ಡಿಸೆಂಬರ್ 2016ರಂದು ಅತ್ಯಂತ ಯಶಸ್ವಿಯಾಗಿ ನಡೆಸಿತು. ಇದರ ದಾಳಿಯ ದೂರ ಸುತ್ತಳತೆ 5000 ಕಿ.ಮೀ ಆಗಿದೆ.

ಭಾರತದ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ 17.5 ಮೀಟರ್ ಉದ್ದದ 50 ಟನ್ ಭಾರದ ಮೂರು ಸ್ಥರದ ಘನರೂಪದ ರೆಕ್ಕೆಗಳ ಎಲ್ಲಿಂದ ಎಲ್ಲಿಗೆ ಬೇಕಾದರೂ ಸುಲಭದಲ್ಲಿ ಸಾಗಿಸ ಬಹುದಾದ ಸ್ವದೇಶಿ ನಿರ್ಮಿತ ಯುದ್ಧ ಮಿಸ್ಸಾಯಿಲ್ ಅಗ್ನಿ-5ರ ಹಾರಾಟದಲ್ಲಿ ಯಶಸ್ಸು ಕಂಡಿದೆ.
ಭೂ ಸ್ಥರದಿಂದ ಭೂ ಸ್ಥರಕ್ಕೆ, ವಾಯು, ಜಲ ಮತ್ತು ವಾತಾವರಣದ ಪ್ರತಿಕೂಲಗಳಿಗೆ ಹೊಂದಿಕೊಳ್ಳುವ ಅತ್ಯಾಧುನಿಕವಾಗಿ ನಿರ್ಮಿತ ಅಗ್ನಿ ಸರಣಿಯಲ್ಲಿ “ಕೊಲ್ಲುವ ಶಕ್ತಿಯ” ಅತಿ ನೂತನ ಸೇರ್ಪಡೆ ಅಗ್ನಿ-5 ಆಗಿದೆ. ಅತಿ ಕನಿಷ್ಠ ರಕ್ಷಣಾ ಸಾಧನಗಳ ಬಳಕೆಯಿಂದ ಅತೀ ಹೆಚ್ಚು ಪರಿಣಾಮ ಉಂಟು ಮಾಡಬಹುದಾದ ವಿಶೇಷ ವಿನ್ಯಾಸದ ಯುದ್ಧ ಸಲಕರಣೆ ಇದಾಗಿದೆ.
ಭಾರತ ಈಗಾಗಲೇ ಅಗ್ನಿ-6ರ ಕಾರ್ಯಾರಂಭ ಮಾಡಿದೆ. ಇದು ಭೂ ತಲ ಮತ್ತು ಸಾಗರದೊಳಗೆ ಜಲಾಂತರ್ಗಾಮಿಯಾಗಿ ಕೂಡಾ 8000-10000 ವಿಸ್ತೀರ್ಣ ಸುತ್ತಳತೆಗೆ ದಾಳಿ ನಡೆಸಲು ಉಡಾವಣೆ ಮಾಡಬಹುದಾಗಿದೆ.

ಭಾರತೀಯ ರಕ್ಷಣಾ ಆಯೋಜಕರು 1980ರಲ್ಲಿ ರೂಪಿಸಲಾದ ಸಂಕಲ್ಪಿಸಿದ ಅಗ್ನಿ ಸರಣಿಯ ಕ್ಷಿಪಣಿ ಯೋಜನೆ, ನೆರೆ ರಾಷ್ಟ್ರಗಳ ದೃಷ್ಠಿ ಕೋನದಲ್ಲಿ ಮೂರು ಭಾರತದ ಸಂರಕ್ಷಣಾ ವಿಷಯ ಹೊಂದಿತ್ತು, ಘನ-ಇಂಧನ ಮೊದಲ ಹಂತ. ಇದರ ಪರೀಕ್ಷೆ 1989ರಲ್ಲಿ ಚಾಂದಿಪುರ್‍ನಲ್ಲಾಯಿತು. ಯುದ್ಧ ಸನ್ನದ್ದತೆಯ 1000 ಕಿಲೋ ಭಾರದ ಉಡಾಣೆಯ ಯಶಸ್ಸಿನ ನಂತರ ಅಗ್ನಿ-1, ಮತ್ತು ಅಗ್ನಿ-2 ಕ್ಷಿಪಣಿ ತಯಾರಿ ಸುಮಾರು 700ರಿಂದ 1250 ಕಿ.ಮೀ ಸುತ್ತಳತೆಯ ಹಳಿ ಮತ್ತು ರಸ್ತೆ ಸಾಗಾಟ ಶಕ್ತಿಯ ಅಗ್ನಿ-1 ಪರೀಕ್ಷೆ ಜನವರಿ 2002ರಲ್ಲಿ ಆಯಿತು. ನಂತರ 2000-2500 ಕಿ.ಮೀ ಸುತ್ತಳತೆಯ ಯುದ್ಧ ಕ್ಷಿಪಣಿ ಅಗ್ನಿ-2, 3000-3500 ಕಿ.ಮೀ ಸುತ್ತಳತೆಯ ಅಗ್ನಿ-3, ಯುದ್ಧ ಕ್ಷಿಪಣಿಗಳು ಚೀನಾ ಮತ್ತು ಪಾಕಿಸ್ತಾನ ವಿರುದ್ಧ ಸಶಕ್ತವಾಗಿಸಿತು.

ಈ ಮೂರು ಯುದ್ಧ ಕ್ಷಿಪಣಿಗಳು ಭಾರತೀಯ ಸೇನಿಕರ ಸೇವೆಯಲ್ಲಿ ತೊಡಗಿಕೊಂಡಿವೆ. 2014 ಜನವರಿ 20ರಲ್ಲಿ 3000-4000 ಕಿ.ಮೀ ಸುತ್ತಳತೆಯ ಅಗ್ನಿ-4, ಕ್ಷಿಪಣಿ ಪರೀಕ್ಷೆ ಭಾರತದ ಅತ್ಯಾಧುನಿಕ ಯುದ್ಧ ಸವಲತ್ತು, ಅತ್ಯಂತ ಅನುಕೂಲಕರ ಲೇಸರ್ ಗಿರೋ ಮತ್ತು ರೋಕೆಟ್ ಮೋಟರ್ ಎರಡು ರೇಂಜ್ ಬ್ಯಾಲೆಸ್ಟಿಕ್ ಮಿಸ್ಸೈಲ್ ವ್ಯವಸ್ಥೆ ಹೊಂದಿದೆ. ಯುದ್ಧ ಪೂರ್ವ ಸಶಸ್ತ್ರ ಸೇನಾ ಪಡೆ ಸೇರುವ ಮುನ್ನ ಅಗ್ನಿ-4, ಕ್ಷಿಪಣಿಯ ಪ್ರಯೋಗಾರ್ಥ ಯುದ್ಧ ಮಾದರಿ ಕ್ಷೇತ್ರ ಪರೀಕ್ಷೆ ನಡೆಯುತ್ತಿದೆ.

ಅಗ್ನಿ-5ರ ವ್ಯಾಪ್ತಿಯ ಪರಿಧಿ ಸುತ್ತಳತೆ ಉತ್ತರ ಹಾಗೂ ದೂರದಲ್ಲಿ, ಭೌಗೋಲಿಕವಾಗಿ ಸಂಪೂರ್ಣ ಪಾಕಿಸ್ತಾನ ಮತ್ತು ಚೀನಾದ ಉತ್ತರ ಭಾಗವನ್ನೂ ಕೂಡಾ ಇದು ಕ್ರಮಿಸಬಲ್ಲುದು. ಭಾರತ ಶಾಂತಿ ಕಾಪಾಡುವ ದೇಶ. ತನ್ನ ನೆರೆಹೊರೆಯಲ್ಲೂ ಶಾಂತಿ ಬಯಸುವ ದೇಶ. ಬೀಜಿಂಗ್ 8 ಸುಬ್ ಮೆರಿನ್ ಯುದ್ಧ ನೌಕೆ ಇಸ್ಲಮಾಬಾದ್‍ಗೆ ಮಾರಿದೆ, ಅದೇ ರೀತಿ ಇಸ್ಲಮಾಬಾದ್ ಇನ್ನೂ ಹಲವನ್ನು ಬೀಜಿಂಗ್‍ನಿಂದ ಯುದ್ಧ ಸಲಕರಣೆ ಖರೀದಿಸಬಯಸಿದೆ.

ಇತ್ತೀಚಿಗಿನ ದಿನಗಳಲ್ಲಿ ಚೀನಾ ನಿರಂತರವಾಗಿ ಭಯೋತ್ಪಾದಕರ ನೆಲೆಬೀಡಾದ ಆತಂಕವಾದಿಗಳ ಸ್ವರ್ಗ ಪಾಕಿಸ್ತಾನಕ್ಕೆ ಬೆಂಬಲಿಸುವುದರಿಂದಾಗಿ, ಭಾರತದ ಸುರಕ್ಷಾ ಹಂತದಲ್ಲಿ ಸ್ವಲ್ಪ ಆತಂಕ ಹೆಚ್ಚಿರುವುದು ಸಹಜವಾಗಿತ್ತು, ಆದರೆ ಅಗ್ನಿ-5 ಯಶಸ್ಸಿಯಿಂದಾಗಿ ಇದು ಕಡಿಮೆಯಾಗಿದೆ ಅನ್ನಬಹುದು.

ಭಾರತದ ವಾಯುಸೇನಾ ಮುಖ್ಯಸ್ಥ ಏರ್ ಚೀಫ್ ಮಾರ್ಶಲ್ ಅರುಪ್ ರಹ ಅವರು ನವದೆಹಲಿಯಲ್ಲಿ ಕಳೆದ ಎಪ್ರಿಲ್ ತಿಂಗಳಲ್ಲಿ ನಡೆದ ಉನ್ನತ ಮಟ್ಟದ ಸಶಸ್ತ್ರ ಪಡೆಯ ವಿಚಾರಗೋಷ್ಠಿಯಲ್ಲಿ ಹಲವು ಗಮನಾರ್ಹ ವಿಷಯಗಳನ್ನು ಚರ್ಚಿಸಿದರು, ಇದರಲ್ಲಿ ಭಾರತ ಭೂ ಖಂಡ ಸುತ್ತ ಚೀನಾದ ಪ್ರಭಾವ ಹೆಚ್ಚುತ್ತಿರುವ ಶಂಕೆವ್ಯಕ್ತಪಡಿಸಿದರು. ಭಾರತ-ಚೀನಾದ ಗಡಿ, ಹಿಮಾಲಯ ಮತ್ತು ಯುದ್ಧ ಸಲಕರಣೆಗಳನ್ನು ಹೆಚ್ಚಿಸಿಕೊಳ್ಳಲು ಸಜ್ಜಾಗುತ್ತಿರುವ ಚೀನಾ ಹಾಗೂ ಪಾಕಿಸ್ತಾನ ಮುಖ್ಯವಾದ ವಿಷಯಗಳಾಗಿದ್ದವು.

ವಿಶ್ವದ ಅತ್ಯುನ್ನತ, ಅತೀ ಎತ್ತರದ ವಾಯುಸೇನಾ ಯುದ್ಧ ತಾಣ ದೌಚೆಂಗ್ ಯಾಡಿಂಗ್, ವಿಶ್ವದ ಅತೀ ಎತ್ತರದ ರೈಲು ಹಳಿ ಜಿನಿಯಾಂಗ್ ಗಳಿಂದ ಟಿಬೆಟ್ ರಕ್ಷಣಾ ಪಡೆ ಮುಖ್ಯಕೇಂದ್ರಕ್ಕೆ ನೇರ ಸಂಪರ್ಕ, ಪಾಕಿಸ್ತಾನದ ಗ್ವದಾರ್ ಬಂದರು, ಅಭಿವೃದ್ಧಿ, ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮೂಲಕ ಪಾಕಿಸ್ತಾನ ಮತ್ತು ಚೀನಾದ ಆರ್ಥಿಕ ರಹದಾರಿ ಆತಂಕಕಾರಿ ವಿಷಯವಾಗಿದೆ. ಅಲ್ಲದೆ ನೆರೆರಾಷ್ಟ್ರಗಳಾದ ಶ್ರೀಲಂಕಾ, ಬಾಂಗ್ಲಾದೇಶ, ನೇಪಾಲ್, ಭೂತಾನ್ ಮತ್ತು ಮೈನ್ಮಾರ್ ನಂತಹ ಭಾರತದ ನೆರೆಹೊರೆದೇಶಗಳಲ್ಲಿ ಆರ್ಥಿಕ ಮತ್ತು ಸೈನ್ಯದ ಒಪ್ಪಂದಗಳ ಹೆಚ್ಚಳವನ್ನು ಚೀನಾ ಯೋಜನಾರೀತಿಯಲ್ಲಿ ಉದ್ದೇಶ ಪೂರ್ವಕವಾಗಿ ಮಾಡುತ್ತಿದೆ.

ಚೀನಾದ ಸೈನ್ಯ, ಯುದ್ಧ ವಿಮಾನ, ಸೌಕರ್ಯ, ಸವಲತ್ತು ಭಾರತಕ್ಕಿಂತ ಅತ್ಯಾಧುನಿಕವಾಗಿದೆ. ಸೈನಿಕರು ಗಾತ್ರದಲ್ಲಿ ಹೆಚ್ಚಿದ್ದಾರೆ. ಸೈಬರ್, ಆಕಾಶ ವಿಷಯದಲ್ಲಿ ಸಂಶೋಧನೆಯಲ್ಲಿ ಭಾರತಕ್ಕಿಂತ ಬಹಳ ಮುಂದಿದೆ. ಆದುದರಿಂದ ನಮ್ಮಲ್ಲಿ ಆತಂಕ ಇದ್ದೇ ಇರುತ್ತದೆ. ಸ್ಟಾಕ್ಹೋಮ್ ಅಂತರ್ ರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ ಹಾಕಿದ ಲೆಕ್ಕಾಚಾರದಲ್ಲಿ, ರಕ್ಷಣಾ ವೆಚ್ಚದ ಲೆಕ್ಕಾಚಾರದಲ್ಲಿ ಚೀನಾ ವಾರ್ಷಿಕವಾಗಿ 21500 ಕೋಟಿ ಅಮೇರಿಕ ಡಾಲರ್ ವ್ಯಯಿಸುತ್ತಿದೆ. ಆದರೆ, ಭಾರತ ಕೇವಲ 5130 ಕೋಟಿ ಅಮೇರಿಕ ಡಾಲರ್ ವಾರ್ಷಿಕ ಬಜೆಟ್ ರಕ್ಷಣಾ ವೆಚ್ಚ ಹೊಂದಿದೆ. ಇದು ಚೀನಾದ ರಕ್ಷಣಾ ವೆಚ್ಚದ ನಾಲ್ಕರಲ್ಲಿ ಒಂದು ಭಾಗದಷ್ಟಾಗಿದೆ.