ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೂ, ಮೂಗಿಗೆ ಪೈಪ್ ಹಾಕಿಕೊಂಡೇ ಬಜೆಟ್ ಮಂಡಿಸಿದ ಪಾರಿಕರ್!! ಇವರ ಕಾರ್ಯಕ್ಷಮತೆ ಮೆಚ್ಚಲೇಬೇಕು…

0
448

ಗೋವಾ ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್‌ ಅವರು ಅನಾರೋಗ್ಯದ ನಡುವೆಯೂ ಮೂಗಿಗೆ ಪೈಪ್ ಹಾಕಿಕೊಂಡು ಬಜೆಟ್ ಮಂಡಿಸಿದ್ದಾರೆ. ಈ ವೇಳೆ ನಾನು ಅತ್ಯಂತ ಜೋಷ್‌ನಿಂದಲೇ ಬಜೆಟ್‌ ಮಂಡಿಸುತ್ತಿದ್ದೇನೆ. ಹೈ ಆನ್‌ ಜೋಷ್‌, ಫುಲ್ಲಿ ಇನ್ ಹೋಷ್ ಎಂದು ಹೇಳುವ ಮೂಲಕ ಪರಿಕ್ಕರ್‌ ಅವರು ತಮಗೆ ವ್ಯಂಗ್ಯವಾಡಿದ ಗೋವಾ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಚೋಡನ್ಕರ್, ಅವರಿಗೆ ಉತ್ತರ ನೀಡಿದ್ದಾರೆ. ಈ ಹಿಂದೆ ಅವರು ಮೊದಲು ಹುಷಾರಾಗಿ ಬನ್ನಿ, ಆಮೇಲೆ ಜೋಷ್ ಕುರಿತಾಗಿ ಮಾತನಾಡಿ ಎಂದು ವ್ಯಂಗ್ಯವಾಡಿದ್ದರು. ಈ ಮಾತಿಗೆ ಬಜೆಟ್ ಮಂಡನೆಗೂ ಮುನ್ನ ಮಹೋಹರ್ ಪರಿಕ್ಕರ್ ಅವರು, ನಾನು ಅತ್ಯಂತ ಜೋಷ್‍ನಿಂದಲೇ ಬಜೆಟ್ ಮಂಡಿಸುತ್ತಿದ್ದೇನೆ ಎಂದು ಹೇಳುವ ಮೂಲಕ ಗಿರೀಶ್ ಚೋಡನ್ಕರ್ ಅವರಿಗೆ ತಿರುಗೇಟು ನೀಡಿದರು.

ಹೌದು ಖಡಕ್ ಮಂತ್ರಿ ಎಂದು ಹೆಸರು ವಾಸಿಯಾಗಿರುವ ಕಡಲ ತಿರದ ಮಂತ್ರಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಮೂಗಿಗೆ ಪೈಪ್ ಹಾಕಿಕೊಂಡೇ 2019-20ನೇ ಸಾಲಿನ ಬಜೆಟ್ ಮಂಡಿಸುವ ಮೂಲಕ ತಮ್ಮ ಕರ್ತವ್ಯ ನಿಭಾಯಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು ನನ್ನ ಕೊನೆಯ ಉಸಿರು ಇರುವವರೆಗೂ ಗೋವಾದ ರಾಜ್ಯದ ಜನತೆ ಪರವಾಗಿ ದುಡಿಯುತ್ತೇನೆ ಎಂದು ಭಾವನಾತ್ಮಕವಾಗಿ ಮೃದು ದನಿಯಲ್ಲಿ ಬಜೆಟ್ ಭಾಷಣ ಮಾಡಿದರು. ಮಧ್ಯೆ ಮಧ್ಯೆ ಸಿಬ್ಬಂದಿಯನ್ನು ಕರೆದು ನೀರು ತರಿಸಿಕೊಂಡು ಕುಡಿದು ಭಾಷಣ ಮುಂದುವರಿಸಿದರು.

ಮನೋಹರ್‌ ಪರಿಕ್ಕರ್‌ ಅವರು ಈ ಹಿಂದೆ ಹಲವು ಬಾರಿ ಅನಾರೋಗ್ಯದ ನಡುವೆಯೂ ರಾಜ್ಯದಲ್ಲಿ ಹಲವು ಕಾಮಗಾರಿಗಳ ಪ್ರಗತಿ ಮತ್ತು ಇತರೆ ಕೆಲಸಗಳನ್ನು ಪರಿಶೀಲನೆ ಮಾಡುತ್ತಿದರು ಹೀಗೆ ಯಾವುದೇ ಕೆಲಸವನ್ನು ಬಾಕಿ ಇಡದೆ ಮಾಂಡೊವಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಸೇತುವೆ, ಪಣಜಿಯಿಂದ 15 ಕಿ.ಮೀ. ದೂರದಲ್ಲಿರುವ ಅಗಸೈಮ್‌ ಗ್ರಾಮದ ಬಳಿ ಝುವಾರಿ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿಯನ್ನು ಯಶಸ್ವಿಗೊಳಿಸಿದ್ದಾರೆ. ಇದೆ ರೀತಿ ಪ್ರತಿಯೊಂದು ಕೆಲಸದವನ್ನು ಮಾಡುತ್ತಿದ್ದಾರೆ.

ಕೆಲವು ದಿನಗಳ ಹಿಂದೆ ತೀವ್ರ ಅನಾರೋಗ್ಯದ ಹೊರತಾಗಿಯೂ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿದಿರುವ ಮನೋಹರ ಪರಿಕ್ಕರ್ ತಕ್ಷಣ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸಿ ಕೂಡಲೇ ಸಿಎಂ ಸ್ಥಾನದಿಂದ 48 ಗಂಟೆಗಳೊಳಗೆ ಕೆಳಗಿಳಿಯಬೇಕು ಎಂದು ಹೋರಾಟ ನಡೆಸಿದರು ಇದು ಅಲ್ಲಿನ ದಿಢೀರ್ ರಾಜಕೀಯ ಬೆಳವಣಿಗೆಗಳು ಆರಂಭ ಮಾಡಿದ್ದರು. ಇದರಲ್ಲಿ ಹಲವು ಕಾಂಗ್ರೆಸ್ ಮುಖಂಡರು ಸೇರಿದಂತೆ ನೂರಾರು ಮಂದಿ ಮುಖ್ಯಮಂತ್ರಿಗಳ ಖಾಸಗಿ ನಿವಾಸಕ್ಕೆ ಪಾದಯಾತ್ರೆ ನಡೆಸಿದರು.
ಪರಿಕ್ಕರ್ ತಕ್ಷಣ ರಾಜೀನಾಮೆ ನೀಡಬೇಕು ಮತ್ತು ಅವರ ಸ್ಥಾನದಲ್ಲಿ ಪೂರ್ಣಾವಧಿ ಮುಖ್ಯಮಂತ್ರಿ ಬೇಕು ಎಂದು ಆಗ್ರಹಿಸಿದ್ದರು. ಪಾದಯಾತ್ರೆಗೆ ಕಾಂಗ್ರೆಸ್ ಹೊರತುಪಡಿಸಿ, ಎನ್‌ಸಿಪಿ ಹಾಗೂ ಶಿವಸೇನೆ, ಸಾಮಾಜಿಕ ಕಾರ್ಯಕರ್ತರು ಮತ್ತು ಸ್ವಯಂಸೇವಾ ಸಂಸ್ಥೆಗಳು ಬೆಂಬಲ ಸೂಚಿಸಿ ರಾಜಕೀಯ ದಿಕ್ಕನೆ ಬದಲಿಸಲು ಹೊರಟ್ಟಿದವು, ಇದ್ಯಾವುದಕ್ಕೂ ಬಗ್ಗದ ಮನೋಹರ್ ಅವರು ತಮ್ಮ ಕರ್ತ್ಯವ್ಯದಲ್ಲಿ ನಿರತರಾದರು. ಈಗ 2019-20 ರ ಬಜಟ್ ಘೋಷಣೆ ಮಾಡಿದರು ಈ ವೇಳೆ ಅವರ ಮೂಗಿನಲ್ಲಿ ಪೈಪ್ ಇದ್ದರು ಈ ಉತ್ಸಾಹದಿಂದ ಇರುವ ಮನೋಹರ್‌ ಪರಿಕ್ಕರ್‌ ಅವರ ಈ ಕರ್ತವ್ಯ ಪಾಲನೆಯನ್ನು ಕಂಡು ಹಲವಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Also read: ಈ ವ್ಯಕ್ತಿಯ ಸಮಾಜ ಸೇವೆ ಕೇಳಿದರೆ ಇವರಿಗೆ ಎಷ್ಟೇ ಅಭಿನಂದನೆ ಸಲ್ಲಿಸಿದರು ಕಡಿಮೆ ಅನಿಸುತ್ತೆ; ಏಕೆ ಅಂತ ಈ ಸ್ಟೋರಿ ಓದಿ..