ಏರ್ ಇಂಡಿಯಾ ಲಿಮಿಟೆಡ್ ಫ್ಲೈಟ್ ಡಿಸ್ಪ್ಯಾಚರ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

0
441

ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಏರ್ ಇಂಡಿಯಾ ಲಿಮಿಟೆಡ್ ಫ್ಲೈಟ್ ಡಿಸ್ಪ್ಯಾಚರ್ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಕಟಣೆ ಹೊರಡಿಸಿ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು May 6, 2019 ಒಳಗೆ ಅರ್ಜಿ ಸಲ್ಲಿಸಬೇಕು.

Also read: SSLC ಪಾಸಾದ ಅಭ್ಯರ್ಥಿಗಳಿಗೆ ಏರ್‌ಫೋರ್ಸ್ ನಲ್ಲಿ ಕುಕ್ ಮತ್ತು ಹೌಸ್ ಕೀಪಿಂಗ್ ಸ್ಟಾಫ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಹುದ್ದೆಗೆ ಸಂಬಂಧಪಟ್ಟ ಮಾಹಿತಿ:

ಹುದ್ದೆಯ ಹೆಸರು: (Name Of The Posts): ಫ್ಲೈಟ್ ಡಿಸ್ಪ್ಯಾಚರ್

ಸಂಸ್ಥೆ (Organisation): ಏರ್‌ ಇಂಡಿಯಾ ಲಿಮಿಟೆಡ್

ವಿದ್ಯಾರ್ಹತೆ (Educational Qualification): ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10+2ಅಥವಾ ಅದಕ್ಕೆ ಸಮನಾದ ವಿದ್ಯಾರ್ಹತೆಯನ್ನು ಭೌತಶಾಸ್ತ್ರ ಮತ್ತು ಗಣಿತ ವಿಷಯದಲ್ಲಿ ಹೊಂದಿರಬೇಕು ಅಥವಾ ಅದಕ್ಕೆ ಸಮನಾದ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್ / ವಿಶ್ವವಿದ್ಯಾಲಯದಿಂದ ಹೊಂದಿರಬೇಕು.

ಉದ್ಯೋಗ ಸ್ಥಳ (Job Location): ಭಾರತದೆಲ್ಲೆಡೆ

ವಯೋಮಿತಿ: ಮಾರ್ಚ್ 31,2019ರ ಅನ್ವಯ ಗರಿಷ್ಟ 35 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ: ಅರ್ಜಿದಾರರು ಆರ್ಜಿ ಶುಲ್ಕವನ್ನು ಪಾವತಿಬೇಕಿದ್ದು,ಸಾಮಾನ್ಯ / ಓಬಿಸಿ ಅಭ್ಯರ್ಥಿಗಳು 1000/-ರೂ. ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿರುವುದಿಲ್ಲ.

ಸಂದರ್ಶ ದಿನಾಂಕ:

ಈ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಮೇ 6 ಮತ್ತು 9 ರಂದು ನಡೆಯುವ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ಸಂದರ್ಶನ ನಡೆಯುವ ಸ್ಥಳ ಮತ್ತು ದಿನಾಂಕದ ವಿವರ ಕೆಳಗಿನಂತಿವೆ

ಸಂದರ್ಶನ 1: ದಿನಾಂಕ ಮೇ 6,2019 ರಂದು ಬೆಳಗ್ಗೆ 10:30 ರಿಂದ ಮಧ್ಯಾಹ್ನ 12:30ರವರೆಗೆ ಏರ್ ಇಂಡಿಯಾ ಲಿಮಿಟೆಡ್, ಮುಖ್ಯ ಕಚೇರಿ,ದೆಹಲಿಯಲ್ಲಿ ಸಂದರ್ಶನವಿರುತ್ತದೆ.

ಸಂದರ್ಶನ 2: ದಿನಾಂಕ ಮೇ 9,2019 ರಂದು ಬೆಳಗ್ಗೆ 10:30 ರಿಂದ ಮಧ್ಯಾಹ್ನ 12:30 ರವರೆಗೆ ಏರ್ ಇಂಡಿಯಾ ಲಿಮಿಟೆಡ್ , ಮುಂಬೈ ಕಚೇರಿಯಲ್ಲಿ ಸಂದರ್ಶನವಿರುತ್ತದೆ.

ಹೆಚ್ಚಿ ಮಾಹಿತಿಗಾಗಿ: https://drive.google.com/file/d/17bEm-gjp2jaoijEBQ6YOzA23g-vLWAW1/view ಕ್ಲಿಕ್ ಮಾಡಿ.