ಬೆಂಗಳೂರಿನ ವಾಯು ಮಾಲಿನ್ಯ ಭ್ರೂಣಗಳ ಮೇಲೆ ಹೇಗೆಲ್ಲ ಪರಿಣಾಮ ಬೀರುತ್ತಿದೆ ಗೊತ್ತಾ.?

0
552

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯವು ಸಾಮಾನ್ಯ ಜೀವನದ ವಿಧಾನದ ಮೇಲೆ ಪರಿಣಾಮ ಬೀರುವಂತೆ ಭ್ರೂಣಗಳ ಮೇಲಿಯೂ ಪರಿಣಾಮ ಬೀರುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಏಕೆಂದರೆ ಆಟೋಮೊಬೈಲ್ ನಿಷ್ಕಾಸ ಹೊರಸೂಸುವಿಕೆಯಿಂದ ವಾಯು ಮಾಲಿನ್ಯ ಹೆಚ್ಚಾಗುತ್ತಿದೆ. ಇದರಿಂದ ಗರ್ಭಪಾತಗಳು ಕೂಡ ಹೆಚ್ಚಾಗುತ್ತಿದೆ ಎಂಬ ಆಘಾತಕಾರಿ ವಿಷಯ ಇತ್ತೀಚೆಗೆ ಬೆಳೆಕಿಗೆ ಬಂದಿದ್ದು. ಭ್ರೂಣಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದೆ ಎಂದು ಮಕ್ಕಳ ಶ್ವಾಸಕೋಶಶಾಸ್ತ್ರಜ್ಞ ಮತ್ತು ಭಾರತೀಯ ವಿಜ್ಞಾನ ಸಂಸ್ಥೆಯ ದಿವೆಚಾ ಸೆಂಟರ್ ಫಾರ್ ಕ್ಲೈಮೇಟ್ ಚೇಂಜ್ ಪ್ರಾಧ್ಯಾಪಕ ಡಾ.ಎಚ್.ಪರಮೇಶ್ ಹೇಳಿದ್ದಾರೆ.

ಹೌದು ಗರ್ಭಿಣಿ ವಾಸಿಸುವ ಮನೆಯ ವಾತಾವರಣ, ಸುತ್ತ ಮುತ್ತಲಿನ ಪರಿಸರ ಭ್ರೂಣದ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಶುದ್ಧವಾದ ಗಾಳಿ, ನೀರು, ಆಹಾರ ಸೇವಿಸಿದಷ್ಟೂ ಮಗು ಆರೋಗ್ಯಕರವಾಗಿ ಬೆಳೆಯುತ್ತದೆ. ಕಲುಷಿತ ಪರಿಸರ ಮಗುವಿನ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಗರ್ಭಪಾತವಾಗುವ ಸಾಧ್ಯತೆ ಕೂಡ ಇರುತ್ತದೆ. ಇತ್ತೀಚೆಗೆ ವಾಯು ಮಾಲಿನ್ಯ ಹೆಚ್ಚಾಗುತ್ತಿದೆ. ಬೆಳೆಯುತ್ತಿರುವ ನಗರಗಳು ಕಡಿಮೆಯಾಗುತ್ತಿರುವ ಕಾಡುಗಳು ವಾಯು ಮಾಲಿನ್ಯ ಹೆಚ್ಚಲು ಕಾರಣವಾಗಿದೆ. ವಾಯು ಮಾಲಿನ್ಯ ಹೆಚ್ಚಾಗುತ್ತಿದ್ದಂತೆ ಗರ್ಭಪಾತ ಕೂಡ ಹೆಚ್ಚಾಗುತ್ತಿದೆ ಎಂಬ ಆಘಾತಕಾರಿ ವಿಷಯ ಇತ್ತೀಚೆಗೆ ನಡೆಸಿದ ಸಂಶೋಧನೆಯಿಂದ ತಿಳಿದು ಬಂದಿದೆ.

ಅದರಂತೆ ಸೀಸ, ಸತು, ಪಾದರಸ, ಆರ್ಸೆನಿಕ್ ಮತ್ತು ಕ್ರೋಮಿಯಂನಂತಹ ಭಾರ ಲೋಹಗಳ ಬಳಕೆ ಕೈಗಾರಿಕೆಗಳಲ್ಲಿ ಹೆಚ್ಚುತ್ತಿದ್ದು. ಪರಿಸರ ಮಾಲಿನ್ಯ ಹೆಚ್ಚುತ್ತಿದೆ, ಬೆಂಗಳೂರಿನಲ್ಲಿ, ಕೈಗಾರಿಕಾ ಪ್ರದೇಶಗಳಾದ ಬೀಡಾಡಿ, ರಾಜಾಜಿ ನಗರ, ಪೀನ್ಯಾ, ನೆಲಮಂಗಲ ಮತ್ತು ವೈಟ್‌ಫೀಲ್ಡ್ ಏರಿಯಾಗಳಲ್ಲಿ ಮಾಲಿನ್ಯ ಹೆಚ್ಚುತ್ತಿದೆ. ಅದರಂತೆ ಗಾಳಿಯಲ್ಲಿ ಭಾರವಾದ ಲೋಹಗಳ ಹೆಚ್ಚಿನ ಸಾಂದ್ರತೆ. ಕಸವನ್ನು ಸುಡುವುದೂ ಮಕ್ಕಳ ಮತ್ತು ತಾಯಿ ಹೊಟ್ಟೆಯಲ್ಲಿರುವ ಭ್ರೂಣದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಡಾ.ಗಂಗಯ್ಯ ವಿವರಿಸಿದ್ದಾರೆ.

ಅಷ್ಟೇ ಅಲ್ಲದೆ ಗರ್ಭಪಾತಕ್ಕೆ ಪ್ರಮುಖ ಕಾರಣ ಗಾಳಿಯಲ್ಲಿರುವ ರಂಜಕದ ಡೈಯಾಕ್ಸೈಡ್ ಆಗಿದೆ. ಸಲ್ಫರ್ ಅಥವಾ ರಂಜಕದ ಡಯಾಕ್ಸೈಡ್ ಕಾರ್ಖಾನೆಗಳು ಹಾಗೂ ವಾಹನಗಳಿಂದ ವಾತಾವರಣವನ್ನು ಸೇರುತ್ತದೆ, ಈ ರಂಜಕದ ಡಯಾಕ್ಸೈಡ್‌ ಅಧಿಕವಿರುವ ಗಾಳಿಯನ್ನು ಸೇವಿಸಿದಾಗ ಗರ್ಭಪಾತ ಉಂಟಾಗುವುದು. ಸೇ. 41ರಷ್ಟು ಗರ್ಭಪಾತ ಈ ರೀತಿ ಉಂಟಾಗುತ್ತದೆ, ಉಳಿದಂತೆ ಗಾಳಿಯಲ್ಲಿ ಕಾರ್ಬನ್ ಮಾನಾಕ್ಸೈಡ್‌ ಹೆಚ್ಚಿದ್ದರೆ, ಓಝೋನ್ ಪದರಗಳು ತೆಳುವಾದರೆ ಗರ್ಭಪಾತವಾಗುವ ಸಾಧ್ಯತೆ ಇದೆ. ವ್ಯೆದ್ಯರು ತಿಳಿಸಿದ್ದಾರೆ.

ಡಾ.ಪರ್ಮೇಶ್ ಅವರ ಅಧ್ಯಯನದ ಪ್ರಕಾರ, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ 77% ಕ್ಕಿಂತ ಹೆಚ್ಚು ಮತ್ತು 26% ಕ್ಕಿಂತ ಹೆಚ್ಚು ಮಕ್ಕಳು ಪ್ರಸವಪೂರ್ವ ಮಾಲಿನ್ಯಕ್ಕೆ ಒಡ್ಡಿಕೊಳ್ಳುವುದರಿಂದ ಉಬ್ಬಸದಿಂದ ಒಂದು ವಯಸ್ಸಿನೊಳಗಿನ ಮಕ್ಕಳು ಅಪಾಯಕಾರಿ ಎದುರಿಸಬೇಕಾಗುತ್ತದೆ. ಆಕ್ಸಿಡೇಟಿವ್‌ಗೆ ಕಾರಣವಾಗುವುದರಿಂದ ಕಣಗಳ ವಿಷಯವನ್ನು ಉಸಿರಾಡಿದ ಮಕ್ಕಳಲ್ಲಿ ಅಪಕ್ವ ಸಾವು ಸಾಮಾನ್ಯವಾಗಿದೆ. ಮತ್ತು ವಯಸ್ಕರ ಉಸಿರಾಟದ ಸಾಮರ್ಥ್ಯಕ್ಕಿಂತ ಮಕ್ಕಳ ಉಸಿರಾಟದ ಮೇಲೆ 120 ಪಟ್ಟು ಪರಿಣಾಮ ಬಿರುತ್ತೆ. ವಾಯು ಮಾಲಿನ್ಯದಿಂದ ಗರ್ಭಿಣಿ ಹಾಗೂ ಭ್ರೂಣದಲ್ಲಿರುವ ಮಗುವಿನ ಮೇಲೆ ಅನೇಕ ಅಡ್ಡ ಪರಿಣಾಮಗಳು ಉಂಟಾಗುತ್ತಿವೆ ಎಂದು ಅಧ್ಯಯನಗಳು ಹೇಳುತ್ತಿವೆ.

ಇನ್ನು ವಾಯು ಮಾಲಿನ್ಯದಿಂದಾಗಿ ಉಸಿರಾಟದ ತೊಂದರೆ, ಕೆಮ್ಮು, ತಲೆಸುತ್ತು, ರೋಗ ನಿರೋಧಕ ಶಕ್ತಿ ಕಡಿಮೆಯಾಗಿರುವುದು ಮುಂತಾದ ಸಮಸ್ಯೆಗಳು ಎದುರಾಗುತ್ತವೆ. ಮುಂದಿನ ಪೀಳಿಗೆ ಆರೋಗ್ಯಕರವಾಗಿರಲು ಈಗಲೇ ಎಚ್ಚೆತ್ತುಕೊಂಡರೆ ಒಳ್ಳೆಯದು. ಅದರಂತೆ ಕೈಗಾರಿಕಾ ಪ್ರದೇಶಗಳ ಅಕ್ಕ ಪಕ್ಕದ ವಾಸಿಗಳು ಹೆಚ್ಚು ಜಾಗೃತಿವಹಿಸುವುದು ಒಳ್ಳೆಯದು.

Also read: ಧಾರಾವಾಹಿಗಳು ಮತ್ತು ರಿಯಾಲಿಟಿ ಶೋಗಳು ಮಧ್ಯಮ ವರ್ಗದವರನ್ನು ಟಾರ್ಗೆಟ್ ಮಾಡಿ ಕೋಟಿಗಟ್ಟಲೆ ಹಣ ಗಳಿಸುವುದು ಹೇಗೆ ಗೊತ್ತಾ??