ವಾಯು ಮಾಲಿನ್ಯ, ಅವನತಿಯಡೆಗೆ ಮನುಕುಲ???

0
984

ಆಘಾತಕಾರಿ ವಿಷಯ:
ಮರಗಿಡಗಳಲ್ಲಿ ದ್ಯುತಿಸಂಶ್ಲೇಷಣೆ (Photosynthesis) ಕ್ರಿಯೆ ನಿಧಾನವಾದರೆ ಮುಂದಿದೆ ದೊಡ್ಡ ಅನಾಹುತ!!!

ಸಮಸ್ಥ ನಾಗರೀಕ ಬಂಧುಗಳೆ ಸ್ವಲ್ಪ ಇಲ್ಲಿ ಗಮನಿಸಿ;

ಪ್ರತಿನಿತ್ಯ ನಾವು ಸೇವಿಸುವ ಆಹಾರ, ಬಳಸುವ ನೀರು ಮತ್ತು ಉಸಿರಾಡಲು ನೆರವಾಗಿರುವ ಆಮ್ಲಜನಕ ಜಗತ್ತಿನ ಇರುವಿಕೆಯನ್ನು ವ್ಯಕ್ತಪಡಿಸುತ್ತಿದೆ.

ಒಂದು ವೇಳೆ ಸೇವಿಸುವ ಆಹಾರ ತಡವಾದರೆ ಅಥವಾ ಕುಡಿಯುವ ನೀರು ತಡವಾದರೆ ಮನುಷ್ಯ ಹೇಗೋ ತಡೆದುಕೊಳ್ಳುತ್ತಾನೆ, ಆದರೆ ಉಸಿರಾಡುವ ಆಮ್ಲಜನಕವೇ ತೀರಾ ಮಲಿನವಾದರೆ ಮುಂದಿದೆ ದೊಡ್ಡ ಆಘಾತ. ಅದು ಹೇಗೆಂದು ಕೇಳುತ್ತೀರಾ. . . . .

ನಮ್ಮ ದೇಶದಲ್ಲಿ ಬಹುತೇಕ ಕಡೆ ಅಗಲವಾದ, ನೇರವಾದ ಮತ್ತು ಕಿರಿದಾದ ರಸ್ತೆಗಳಿವೆ. ಅನೇಕ ರಸ್ತೆಗಳು ಕಾಂಕ್ರೀಟ್ ಮತ್ತು ಟಾರ್ ನಿಂದ ನಿರ್ಮಿತವಾಗಿವೆ ಆದರೆ ಬಹುತೇಕ ರಸ್ತೆಗಳು ಇಂದಿಗೂ ಸಹ ಮಣ್ಣಿನಿಂದಲೇ ಕೂಡಿವೆ. ಲೆಕ್ಕವಿಲ್ಲದಷ್ಟು ರಸ್ತೆಗಳು ಅದೆಷ್ಟೋ ತಗ್ಗುದಿನ್ನೆಗಳಿಂದ ಕೂಡಿವೆ ಮತ್ತು ಟಾರ್ ಬಿರುಕು ಬಿಟ್ಟು ದೊಡ್ಡ ದೊಡ್ಡ ಕುಳಿಗಳಾಗಿ ವಾಹನ ಸಂಚರಿಸಿದರೆ ಸಾಕು ದಟ್ಟ ದಟ್ಟವಾದ ಮೋಡವೇ ಭೂಮಿಯ ಮೇಲೆ ಹಾದು ಹೋಗುತ್ತದೆಯೇನೋ ಎನಿಸುವಂತೆ ದೂಳೆದ್ದು ಗಾಳಿಯಲ್ಲಿ ತೇಲುತ್ತಿರುತ್ತದೆ. ಅದೆಷ್ಟೋ ಚಿಕ್ಕ ಪುಟ್ಟ ಕಾರ್ಖಾನೆಗಳು, ಇಂಡಸ್ಟ್ರೀಗಳು ಇಂದಿಗೂ ಸಹ (Air Purifier) ಗಾಳಿ ಶುದ್ಧೀಕರಣ ವಿಧಾನವನ್ನು ಅನುಸರಿಸಿಯೇ ಇಲ್ಲ, ಪರಿಣಾಮವಾಗಿ ಮಣ್ಣಿನ ರಸ್ತೆಯಲ್ಲಿ ಏಳುವ ವಿಪರೀತ ದೂಳು ಮರಗಿಡಗಳ, ಬಳ್ಳಿ ಇತ್ಯಾದಿ ಎಲೆಗಳ ಮೇಲೆ ಶೇಖರವಾಗುವುದರಿಂದ ಸೂರ್ಯನ ಕಿರಣಗಳು ನೇರವಾಗಿ ಎಲೆಗಳ ಮೇಲೆ ಬಿದ್ದರೂ ಸಹ ದೂಳಿನ ಪರಿಣಾಮವಾಗಿ ದ್ಯತಿಸಂಶ್ಲೇಷಣೆ ಕ್ರಿಯೆ ಬಹಳ ನಿಧಾನವಾಗುತ್ತದೆ, ಕೆಲವು ಸಲ ಎಲೆಗಳು ದೂಳಿನಲ್ಲಿರುವ ಬೇಡವಾದ ಅನಿಲಗಳಿಂದ ನಂಜಿಗೊಳಗಾಗಿ ಒಣಗಿ ಹೋಗುತ್ತವೆ, ಇದರಿಂದಾಗಿ ಇಂಗಾಲದ ಡೈ ಆಕ್ಸೈಡ್ ಎನ್ನುವ ವಿಷಕಾರಿ ಅನಿಲವನ್ನು ಹಸಿರೆಲೆಗಳು ಬಳಸಿಕೊಳ್ಳಲು ಸಾಧ್ಯವಾಗದೆ ಆಮ್ಲಜನಕ ಉತ್ಪತ್ತಿ ಮಾಡುವಲ್ಲಿ ವಿಫಲವಾಗುತ್ತಿವೆ.

ಈ ರೀತಿಯ ಒಣಗಿದ ಅಥವಾ ನಂಜಿಗೊಳಗಾದ ಮರಗಿಡಗಳನ್ನು ನೀವು ರಸ್ತೆಯ ಇಕ್ಕೆಲಗಳಲ್ಲಿ ಬಹಳೇ ಸಾಮಾನ್ಯವಾಗಿ ನೋಡುತ್ತೀರ. ಸ್ನೇಹಿತರೆ ನಾವು ಪ್ರತಿನಿತ್ಯ ಇಂತಹವುಗಳನ್ನು ಗಮನಿಸುತ್ತಿದ್ದರೂ ಸಹ ಸುಮ್ಮನೆ ಇದ್ದರೆ ಮುಂದಿನ ನಮ್ಮ ಪೀಳಿಗೆಗೆ ನಾವು ಭಾರೀ ಅನ್ಯಾಯ ಮಾಡಿದಂತಾಗುತ್ತದೆ.

ನಾಗರೀಕರಾಗಿರುವ ನಾವೆಲ್ಲರೂ ಎಚ್ಚೆತ್ತುಕೊಂಡು ಇದನ್ನು ಸರಿಪಡಿಸುವ ಕಾರ್ಯ ಮಾಡಬೇಕಿದೆ. ವಾಹನ ಸಂಚಾರವಾದಕ್ಷಣ ಬರೀ ಮಲಿನವಾಗುತ್ತದೆ ಎಂದರೆ ತಪ್ಪಾಗುತ್ತದೆ, ನಿಜವಾದ ಮಲಿನತೆ ಎಲೆಗಳು ಆಹಾರ ಉತ್ಪತ್ತಿ ಮಾಡದೇ ಇರುವುದರಿಂದ ಆಗುತ್ತದೆ. ಇದರಿಂದ ಉಸಿರಿಗೆ ಸಂಭಂದಪಟ್ಟ ಕಾಯಿಲೆಗಳು ಎತೇಚ್ಚವಾಗತೊಟಗಿವೆ.

ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಈ ನಿಟ್ಟಿನಲ್ಲಿ ಸೂಕ್ತ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಬೇಕಿವೆ. ಹಾಳಾಗಿ ಹಳೆಯದಾಗಿ ಬರೀ ಮಣ್ಣಿನಿಂದ ಇರವ ರಸ್ತೆಗಳನ್ನು ದೂಳು ಮುಕ್ತ ರಸ್ತಗಳನ್ನಾಗಿ ಮಾಡುವುದರಿಂದಲೇ ಶೇ.60 ರಷ್ಟು ಸಮಸ್ಯಯನ್ನು ತಡೆಯಬಹುದು. ಎಲ್ಲೋ ಇರುವ ಗುಡ್ಡಗಾಡು ಪ್ರದೇಶ ಅನಿಲವನ್ನು ಶದ್ದಿ ಮಾಡಿದರೆ ಅದು ಸಿಟಿಗಳನ್ನು ತಲುಪಬಹುದೇ. ಆದ್ದರಿಂದ ನಗರಳಲ್ಲಿರುವ ನಾವು ನಮ್ಮ ರಸ್ತೆ ಸುರಕ್ಷತೆಯ ಬಗ್ಗೆ ಎಚ್ಚೆತ್ತುಕೊಂಡು ಸೂಕ್ತ ಪರಿಹಾರ ಕಂಡುಕೊಳ್ಳುವುದೊಂದೇ ಇದಕ್ಕಿರುವ ಸೂಕ್ತ ಮಾರ್ಗ.

ಬನ್ನಿ ನಾವೆಲ್ಲರೂ ಸೇರಿ ಸಮಸ್ಯಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ನಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳುವುದರ ಮೂಲಕ ಸ್ಪಂದಿಸೋಣ ಮತ್ತು ಸಮಾಜವನ್ನು ಉತ್ಮಮದ ಕಡೆ ಕೊಂಡೊಯ್ಯವಲ್ಲಿ ಒಂದು ಹೆಜ್ಜೆ ಮುಂದಾಗೋಣ.