ಹುತಾತ್ಮ ಯೋಧರ ಕುಟುಂಬಗಳಿಗೆ ಅಕ್ಷಯ್ 1.08 ಕೋಟಿ ನೆರವು

0
466

ಹುತಾತ್ಮ ಯೋಧರ ಕುಟುಂಬಗಳಿಗೆ ಅಕ್ಷಯ್  1.08 ಕೋಟಿ ನೆರವುನೀಡಿ,ನಿಜ ಜೀವನದಲ್ಲಿ ಹೀರೋ ಆದ ಬಾಲಿಹುಡ್ ನಟ ಅಕ್ಷಯ್ ಕುಮಾರ್

ಮುಂಬೈ: ಬಾಲಿವುಡ್‌ನಲ್ಲಿ ಮೊದಲಿನಿಂದಲೂ ಅತಿ ಉದಾರಿ ಎನಿಸಿರುವ ನಟ ಅಕ್ಷಯ್ ಕುಮಾರ್ ಈ ಹಿಂದೆ ಉರಿ ಉಗ್ರರ ದಾಳಿಯಲ್ಲಿ ಹುತಾತ್ಮರಾಗಿದ್ದ ಭಾರತೀಯ ಯೋಧರ ಕುಟುಂಬಕ್ಕೆ ಧನ ಸಹಾಯ ಮಾಡಿ ಔದಾರ್ಯ ಮೆರೆದಿದ್ದರು. ಸದ್ಯ ಸುಕ್ಮಾ ಜಿಲ್ಲೆಯಲ್ಲಿ ನಡೆದ ನಕ್ಸಲರ ದಾಳಿಗೆ ಹುತಾತ್ಮರಾಗಿರುವ ಸಿಆರ್‌ಪಿಎಫ್‌ನ 12 ಯೋಧರ ಕುಟುಂಬಗಳಿಗೆ ತಲಾ 9 ಲಕ್ಷದಂತೆ ಒಟ್ಟು 1.08 ಕೋಟಿ ನೆರವು ನೀಡಿದ್ದಾರೆ.

ಛತ್ತೀಸ್’ಗಡದ ಸುಕ್ಮಾದಲ್ಲಿ ನಕ್ಸಲ್ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ  ಬಾಲಿವುಡ್ ನಟ ಅಕ್ಷಯ್ ಕುಮಾರ್ ರೂ.1.08 ಕೋಟಿ ಹಣಕಾಸು ನೆರವನ್ನೊದಗಿಸಿ ತಾನು ನೈಜ ಜೀವನದಲ್ಲೂ ಹೀರೋ ಎಂದು ತೋರಿಸಿಕೊಟ್ಟಿದ್ದಾರೆ.

ಮಾ.11 ರಂದು ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರ ದಾಳಿಗೆ 12 ಮಂದಿ ಸಿಆರ್’ಪಿಎಫ್’ ಯೋಧರು ಹುತಾತ್ಮರಾಗಿದ್ದರು. ಅಕ್ಷಯ್ ಕುಮಾರ್ ಹುತಾತ್ಮ ಯೋಧರ ಕುಟುಂಬಗಳಿಗೆ ತಲಾ ರೂ.9 ಲಕ್ಷಗಳನ್ನು ನೀಡಿದ್ದಾರೆ.

ಹುತಾ ಯೋಧರ ಬ್ಯಾಂಕ್ ಖಾತೆ ಸಂಖ್ಯೆಯನ್ನು ಒದಗಿಸುವಂತೆ ಗೃಹ ಸಚಿವಾಲಯಕ್ಕೆ ನಿನ್ನೆ ಮಧ್ಯಾಹ್ನ ಅಕ್ಷಯ್ ಕುಮಾರ್ ಮನವಿ ಮಾಡಿಕೊಂಡಿದ್ದರು. ಮನವಿಗೆ ಇಲಾಖೆಯು ಸಕಾರಾತ್ಮಕವಾಗಿ ಸ್ಪಂದಿಸಿದ ಬೆನ್ನಲ್ಲೇ ಅಕ್ಷಯ್ ಯೋಧರ ಖಾತೆಗಳಿಗೆ ಹಣವನ್ನು ವರ್ಗಾಯಿಸಿದ್ದಾರೆ.

ಅಕ್ಷಯ್ ಕುಮಾರ್ ಅವರ  ಕ್ರಮವು ದೇಶಪ್ರೇಮ ಹಾಗೂ ಸಿಆರ್’ಪಿಎಫ್’ನೊಂದಿಗಿರುವ ಗೌರವವನ್ನು ತೋರಿಸುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಹಿಂದೆ ಜಮ್ಮು-ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ನಡೆದ ಉಗ್ರರ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾಗಿರುವ 18 ವೀರ ಯೋಧರ ಪ್ರತಿ ಕುಟುಂಬಗಳಿಗೆ ಸುಮಾರು 5ರಿಂದ 10 ಲಕ್ಷ ರೂ.ಗಳ ಚೆಕ್‌ ವಿತರಿಸುವ ಮೂಲಕ ಅಕ್ಷಯ್ ಕುಮಾರ್‌ ಒಟ್ಟು 80 ಲಕ್ಷ ರೂಪಾಯಿ ನೆರವು ನೀಡಿದ್ದರು.