ಡಿಗ್ರಿ ಮುಗಿದ ಮೇಲೆ ಗೌರವಯುತ ಸರ್ಕಾರಿ ನೌಕರಿಗಾಗಿ UPSC ಮತ್ತೆ KPSC ಜೊತೆ ಈ ಕೆಲಸಗಳಿಗೂ ತಯಾರಿ ಮಾಡಿ!!

0
558

ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸಿನ ಜೀವನ ಪ್ರತಿಯೊಬ್ಬರ ಕನಸು. ಅದನ್ನು ಸಾಕಾರಗೊಳಿಸಲು ಒಂದು ಉತ್ತಮ ಉದ್ಯೋಗವನ್ನು ಆಯ್ಕೆ ಮಾಡುವುದು ಮತ್ತು ಸೇರಿಕೊಳ್ಳುವುದು ಬಹಳ ಮುಖ್ಯ. ಅದರಲ್ಲಿಯೂ ಸರಕಾರಿ ಉದ್ಯೋಗ ಒಂದು ಉತ್ತಮ ಆಯ್ಕೆ. ಇತ್ತೀಚಿನ ದಿನಗಳಲ್ಲಿ ಅವಕಾಶಗಳು ಹೆಚ್ಚುತ್ತಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿ ಅತ್ಯಗತ್ಯ.

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 2 ವಿಷಯದಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಸಾಮಾನ್ಯಜ್ಞಾನ ಮತ್ತು ಆ್ಯಪ್ಟಿಟ್ಯೂಡ್ ಟೆಸ್ಟ್. ಯುಪಿಎಸ್ಸಿ ಮತ್ತು ಕೆಪಿಎಸ್ಸಿ ಪರೀಕ್ಷೆಗಳಿಗೆ ಶೇ.80ರಷ್ಟು ಸಾಮಾನ್ಯಜ್ಞಾನ ಮತ್ತು ಶೇ.20ರಷ್ಟು ಅಪ್ಟಿಟ್ಯೂಡ್ ವಿಚಾರಗಳಿಗೆ ಪ್ರಾಧಾನ್ಯತೆ ನೀಡಲಾಗುತ್ತದೆ. ಬ್ಯಾಂಕಿಂಗ್, ರೈಲ್ವೇಸ್, ಪೋಸ್ಟಲ್, ಎಸ್ಎಸ್ಸಿ ಮುಂತಾದ ಪರೀಕ್ಷೆಗಳಿಗೆ ಶೇ.80ರಷ್ಟು ಅಪ್ಟಿಟ್ಯೂಡ್, ರೀಸನಿಂಗ್, ಮ್ಯಾಥ್ಸ್ ಸಂಬಂಧಿಸಿದ ಪ್ರಶ್ನೆಗಳು ಹಾಗೂ ಶೇ.20ರಷ್ಟು ಸಾಮಾನ್ಯಜ್ಞಾನ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಎರಡು ವಿಷಯಗಳು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುತ್ತದೆ.

UPSC ಮತ್ತು KPSCಗೆ ಜೊತೆ ಜೊತೆಯಲ್ಲೇ ಸಿದ್ಧತೆ ನಡೆಸುತ್ತಿರುವ ಬಹುಸಂಖ್ಯಾತ ಪದವೀಧರ ಅಭ್ಯರ್ಥಿಗಳು ಇದ್ದಾರೆ. ಇವರಲ್ಲಿ ಕೆಲವರು ಎರಡು, ಮೂರು ಅಟೆಂಪ್ಟ್ನಲ್ಲಿ UPSC, KPSC ಯಾವುದೇ ಪರೀಕ್ಷೆಗಳಲ್ಲಿ ಯಶಸ್ಸು ಕಾಣದಿದ್ದಲ್ಲಿ ತಮ್ಮ ಗುರಿಯಲ್ಲಿ ಸ್ವಲ್ಪ ಸಡಿಲಿಕೆ ಮಾಡಿಕೊಂಡುಬಿಡುತ್ತಾರೆ. ಇದಕ್ಕೆ ಕಾರಣ ಏಕಾಗ್ರತೆ ಕೊರತೆ, ತಾಳ್ಮೆಯ ಕೊರತೆ, ಅವರ ಹಿನ್ನೆಲೆ ಮತ್ತು ಇತರೆ ಇರಬಹುದು. ಅಂತಹ ಕೆಲವರ ಪೈಕಿ ಇತ್ತೀಚೆಗೆ ಕೆಲವು ಅಭ್ಯರ್ಥಿಗಳು UPSC ಮತ್ತು ರಾಜ್ಯ PSC ಪರೀಕ್ಷೆಗಳ ತಯಾರಿ ಸಮಯದಲ್ಲಿ ಇತರೆ ಯಾವ ಪೂರಕ ಪರೀಕ್ಷೆಗಳನ್ನು ಪದವೀಧರರು ತೆಗೆದುಕೊಳ್ಳಬಹುದು ಎಂದು ಕೇಳಿದ್ದರು. ಅದಕ್ಕೆ ಪೂರಕವಾದ ಮಾಹಿತಿಯನ್ನು ಇಂದಿನ ಲೇಖನದಲ್ಲಿ ಈ ಕೆಳಗಿನಂತೆ ತಿಳಿಸಲಾಗಿದೆ.

ಸಾಂದರ್ಭಿಕ ಚಿತ್ರ

UPSC ಸಿದ್ಧತೆ ನಡೆಸಿರುವ ಅಭ್ಯರ್ಥಿಗಳು ಇದೇ ಸಮಯದಲ್ಲಿ ಸ್ಟಾಫ್ ಸೆಲೆಕ್ಷನ್ ಕಮಿಷನ್ ನಡೆಸುವ ಕೇಂದ್ರ ಸರ್ಕಾರದ ವಿವಿಧ ಇಲಾಖೆ, ಸಚಿವಾಲಯಗಳ ಹುದ್ದೆಗೆ ನಡೆಸುವ ನೇಮಕಾತಿ ಪ್ರಕ್ರಿಯೆಗಳಲ್ಲಿ ಭಾಗವಹಿಸಬಹುದು. ಈ ಪರೀಕ್ಷೆಗಳಿಗೆ ಗಣಿತ ಅಥವಾ ಇಂಗ್ಲಿಷ್ ಹೆಚ್ಚು ಗೊತ್ತಿದ್ದರೆ ಸಾಕು. ಇತರೆ ಹೆಚ್ಚಿನ ತಯಾರಿ ಬೇಕಾಗುವುದಿಲ್ಲ. ಕೆಲವೊಂದು ಟಿಪ್ಸ್‌ ಇಲ್ಲಿದೆ ನಿಮಗಾಗಿ..

ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಪಠ್ಯಕ್ರಮಕ್ಕೂ ಕೇಂದ್ರ ನಾಗರಿಕ ಸೇವೆಗಳ ಪರೀಕ್ಷೆ ಪಠ್ಯಕ್ರಮಕ್ಕೂ ಹೆಚ್ಚು ಒಂದೇ ರೀತಿ ಇದ್ದು, ಈ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು.

ಇನ್ನು ಪದವೀಧರರು UPSC, KPSC ಪರೀಕ್ಷೆಗೆ ಓದುವ ವೇಳೆ, ತಾವು ಮುಖ್ಯ ಪರೀಕ್ಷೆಗೆ ಆಯ್ಕೆಮಾಡಿಕೊಳ್ಳಬೇಕು ಎಂದುಕೊಂಡ ವಿಷಯದಲ್ಲೇ ಸ್ನಾತಕೋತ್ತರ ಪದವಿಯನ್ನು ಕರೆಸ್ಪಾಂಡೆನ್ಸ್ನಲ್ಲಿ ಅಥವಾ ರೆಗ್ಯುಲರ್ನಲ್ಲಿ ಕಂಪ್ಲೀಟ್ ಮಾಡಿಕೊಳ್ಳಬಹುದು. ಹೀಗೆ ಮಾಡುವುದರಿಂದ ಮುಖ್ಯ ಪರೀಕ್ಷೆಗೆ ಹೆಚ್ಚು ಸಿದ್ಧತೆಗೆ ಮತ್ತಷ್ಟು ಅನುಕೂಲವು ಆಗುತ್ತದೆ. ಜತೆಗೆ ನಂತರದಲ್ಲಿ ಟೀಚಿಂಗ್ ಅರ್ಹತಾ ಪರೀಕ್ಷೆಗಳನ್ನು ಜತೆಯಲ್ಲೇ ಪಾಸ್ಮಾಡಿಕೊಳ್ಳಬಹುದು.

ಅಷ್ಟೇ ಅಲ್ಲದೇ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹುದ್ದೆಗಳಿಗೆ ಉತ್ತಮ ವೇತನ ಇದೆ. ಅಲ್ಲದೇ UPSE CSE ಪಠ್ಯಕ್ರಮಕ್ಕೂ ಕೆಲವು ಒಂದೇ ರೀತಿ ಇದೆ. ಆದ್ದರಿಂದ ಈ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು ಎನ್ನುತ್ತಾರೆ ಹಲವರು.