ಮೊಟ್ಟೆಯಲ್ಲಿರುವ ಔಷಧೀಯ ಗುಣಗಳನ್ನು ತಿಳಿದರೆ ಈಗಿನಿಂದಲೇ ಮೊಟ್ಟೆ ತಿನ್ನೋಕೆ ಶುರು ಮಾಡ್ತೀರ..

0
1819

ದಿನಕ್ಕೊಂದು ಸೇಬು ತಿನ್ನಿ, ವೈದ್ಯರಿಂದ ದೂರವಿರಿ’ ಎಂಬ ಮಾತಿನಂತೆ, ದಿನಕ್ಕೊಂದು ಮೊಟ್ಟೆ ತಿನ್ನಿ, ನಿಮ್ಮ ಆರೋಗ್ಯವನ್ನು ಸದೃಢವಾಗಿಟ್ಟುಕೊಳ್ಳಿ ಎಂಬ ಸಲಹೆ, ವಿವಿಧ ಅಧ್ಯಯಗಳಿಂದ ಹೊರಹೊಮ್ಮಿದೆ. ಕೈಗೆಟಕುವ ಬೆಲೆಯಲ್ಲಿ ಮೊಟ್ಟೆಗಳು ಮಾರುಕಟ್ಟೆಯಲ್ಲಿ ದೊರೆಯಲಿವೆ. ದುಬಾರಿ ಆಹಾರ ಪದಾರ್ಥಗಳಿಗಿಂತ ಅಗ್ಗದ ದರದ ಮೊಟ್ಟೆಯಲ್ಲಿ ಪೋಷಕಾಂಶಗಳು ಹೇರಳವಾಗಿದ್ದು, ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ದೊಡ್ಡ ಮಟ್ಟದಲ್ಲಿ ನೆರವಾಗುವ ಜತೆಗೆ, ನಮ್ಮ ದೇಹದ ಮೇಲೆ ದಾಳಿಯಿಡುವ ರೋಗಗಳನ್ನು ದೂರವಿಡುವಲ್ಲಿಯೂ ಸಹಕಾರಿಯಾಗಿದೆ.

Also read: ಮೊಟ್ಟೆ ಪ್ರಿಯರಿಗಾಗಿ ಬಗೆ-ಬಗೆಯ ರುಚಿಯಲ್ಲಿ ತಯಾರಿಸಬಹುದಾದ ಆಮ್ಲೆಟ್‌ ರೆಸಿಪಿ..!!

ಮೊಟ್ಟೆಯಲ್ಲಿರುವ ಔಷಧೀಯ ಗುಣಗಳು:

ಒಂದು ಮೊಟ್ಟೆಯಲ್ಲಿ 75 ಕ್ಯಾಲೋರಿ, 5 ಗ್ರಾಂ ಕೊಬ್ಬು, 80 ಮಿ.ಗ್ರಾಂ ಕೊಲೆಸ್ಟ್ರಾಲ್(ಇದು ಆರೋಗ್ಯಕರ ಕೊಲೆಸ್ಟ್ರಾಲ್‌ ಆಗಿದೆ), 1.6 ಗ್ರಾಂ ಸ್ಯಾಚುರೇಟಡ್‌ ಫ್ಯಾಟ್‌ ಹಾಗೂ ಅಲ್ಪ ಪ್ರಮಾಣದಲ್ಲಿ ವಿಟಮಿನ್‌ ಎ, ಡಿ, ವಿಟಮಿನ್‌ ಬಿ6, ಕಬ್ಬಿಣದಂಶ ಹಾಗೂ ವಿಟಮಿನ್‌ ಬಿ 12. ಇರುವುದರಿಂದ ಎಷ್ಟೊಂದು ಔಷಧಿಯ ಗುಣಗಳಿವೆ.

ದೃಷ್ಟಿ ಸಮಸ್ಯೆಯನ್ನು ನಿವಾರಿಸುತ್ತದೆ:

ಮೊಟ್ಟೆಯಲ್ಲಿ ವಿಟಮಿನ್ ಎ ಅಧಿಕವಾಗಿದ್ದು ದೃಷ್ಟಿ ಸಮಸ್ಯೆಯ ನಿವಾರಣೆಗೆ ಸಹಕಾರಿಯಾಗಿದೆ. ಬುದ್ಧಿಶಕ್ತಿ ಬೆಳೆವಣಿಗೆ ಮತ್ತು ರೋಗಗಳ ವಿರುದ್ಧ ಹೋರಾಡಲು ಅವ್ಯಶಕವಾದ ಕೋಲಿನ್, ಲಿನೊಲಿಕ್ ಲಿಸಿಡ್ ಮತ್ತು ಅಮೈನೋ ಆಸಿಡ್ ಗಳನ್ನು ಒದಗಿಸುತ್ತದೆ.

ಮೂಳೆಗಳನ್ನು ಬಳಗೊಲಿಸುತ್ತದೆ:

ಇದರಲ್ಲಿ ವಿಟಮಿನ್‌ ಡಿ ಹಾಗೂ ಕ್ಯಾಲ್ಸಿಯಂ ಇದ್ದು ಮೂಳೆಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೊಟ್ಟೆಯನ್ನು ಡಯಟ್‌ನಲ್ಲಿ ಸೇರಿಸಿದರೆ ಸಂಧಿವಾತ ತಡೆಗಟ್ಟಬಹುದು. ಮತ್ತು ಮೊಟ್ಟೆಯಲ್ಲಿನ ಕ್ಯಾಲ್ಸಿಯಂ ಮೆಗ್ನೇಷಿಯಂ ಮತ್ತು ಲವಣಾಂಶಗಳು ಮಾಂಸಖಂಡಗಳ ಬೆಳವಣಿಗೆ ಅತಿ ಮುಖ್ಯವಾಗಿವೆ.

ಹೃದಯದ ಆರೋಗ್ಯ ಕಾಪಾಡುತ್ತೆ:

ಮೊಟ್ಟೆಯಲ್ಲಿ ಕೊಲೆಸ್ಟ್ರಾಲ್‌ ಇರುವುದರಿಂದ ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಭಾವನೆ ಇದೆ. ಆದರೆ ಹೃದಯದ ಆರೋಗ್ಯಕ್ಕೆ ಒಳ್ಳೆಯ ಕೊಲೆಸ್ಟ್ರಾಲ್‌ ಅವಶ್ಯಕ ಅದು ಮೊಟ್ಟೆಯಲ್ಲಿದೆ. ಮತ್ತು ಇತ್ತೀಚೆಗೆ ನಡೆಸಿದ ಅಧ್ಯಯನದ ಪ್ರಕಾರ ಮಧುಮೇಹಿಗಳೂ ವಾರದಲ್ಲಿ 12 ಮೊಟ್ಟೆಗಳವರೆಗೆ ತಿನ್ನಬಹುದೆಂದು ಎಂದು ತಿಳಿಸಿದೆ.

ಸೌದರ್ಯ ಹೆಚ್ಚಿಸುತ್ತದೆ:

ಆರೋಗ್ಯಕ್ಕೆ ಮೊಟ್ಟೆ ವರದಾನ ಸೌಂದರ್ಯ ರಕ್ಷಣೆಗೆ ಬೇಕಾದ ವಿಟಮಿನ್ ಇ.ಡಿ ಮತ್ತು ಸೆಲಿನಿಯಂ ಅಂಶಗಳು ಮೊಟ್ಟೆಯಲ್ಲಿ ಹೇರಳವಾಗಿವೆ ಇದರಲ್ಲಿ ಕಬ್ಬಿಣ ಹಾಗೂ ಫೋಲಿಕ್ ಆಮ್ಲ ಯಥೇಚ್ಛವಾಗಿದ್ದು ಗರ್ಭಿಣಿ ಮತ್ತು ಬಾಣoತಿಯರಿಗೆ ಬಹಳ ಉಪಯುಕ್ತವಾಗಿದೆ. ಮತ್ತು ಆರೋಗ್ಯಕರ ಕೂದಲು ಹಾಗೂ ಉಗುರು ಪಡೆಯಬಹುದು.

ಕೊಬ್ಬಿನಾಂಶ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತೆ:

ಮೊಟ್ಟೆಯ ಹಳದಿ ತಿನ್ನದಿದ್ದರೆ ಅದರಲ್ಲಿರುವ ಪೋಷಕಾಂಶಗಳು ಸುಮ್ಮನೆ ವ್ಯರ್ಥವಾಗಿತ್ತದೆ. ಹಳದಿಯಲ್ಲಿರುವ ಕೊಬ್ಬಿನಂಶ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡುವುದು. ವಾರದಲ್ಲಿ 2 ಬಾರಿ ಇದರ ಹಳದಿ ತಿಂದರೆ ದೇಹಕ್ಕೆ ಉತ್ತಮ ಪೋಷಕಾಂಶ ದೊರಕಿದಂತೆ ಆಗುತ್ತದೆ. ಹಳದಿಯಲ್ಲಿ ಉತ್ತಮ ಕೊಲೆಸ್ಟ್ರಾಲ್ ಮತ್ತು ಕ್ಯಾಲೋರಿ ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ.

Also read: ಬೇಯಿಸುವಾಗ ಮೊಟ್ಟೆ ಒಡೆಯಬಾರದು ಅಂದ್ರೆ ಏನು ಮಾಡಬೇಕು…?