ಕಾವೇರಿ ಹೋರಾಟಕ್ಕೆ ಕಾಲಿಟ್ಟ ಮಂಡ್ಯದ ಗಂಡು

0
785

ಕಾವೇರಿ ವಿವಾದ ತೀವ್ರಗೊಂಡ ಸಂದರ್ಭದಲ್ಲಿ ಮಂಡ್ಯದ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಅಂಬರೀಶ್ ಅವರು ವಿದೇಶದಲ್ಲಿ ಜೂಜಾಡುತ್ತಿರುವುದು ರಾಜ್ಯದ ಜನತೆಯಲ್ಲಿ ಆಕ್ರೋಶ ಮೂಡಿಸಿದ್ದರು. ವ್ಯಾಪಕವಾಗಿ ಟೀಕೆ, ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸೆಪ್ಟೆಂಬರ್ 28 ರಂದು ಅಮೇರಿಕಾದಿಂದ ಬೆಂಗಳೂರಿಗೆ ವಾಪಸ್ ಆಗಿ ಪ್ರೆಸ್ ಮೀಟ್ ನಡೆಸಿದ್ದರು ಹಾಗು ಸೆ.30ರ ತೀರ್ಪು ನೋಡಿಕೊಂಡು ಮಂಡ್ಯಕ್ಕೆ ಭೇಟಿ ನೀಡುತ್ತೇನೆ ಅಂತ ಹೇಳಿದ್ದರು. ಆದರೆ ಅವರು ಅವರ ಮಾತಿನಂತೆ ನಡೆದುಕೊಂಡಿರಲಿಲ್ಲಾ.

ವ್ಯಾಪಕವಾಗಿ ಟೀಕೆ, ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸೆಪ್ಟೆಂಬರ್ 28 ರಂದು ಅಮೇರಿಕಾದಿಂದ ಬೆಂಗಳೂರಿಗೆ ವಾಪಸ್ ಆಗಿ ಪ್ರೆಸ್ ಮೀಟ್ ನಡೆಸಿದ ಬಳಿಕ ಮಾಧ್ಯಮಗಳ ಮುಂದೆ ಅಂಬರೀಶ್ ಕಾಣಿಸಿಕೊಂಡಿರುವುದು ಈಗಲೇ.! ಕಾವೇರಿ ನೀರು ಕುರಿತು ಕಳೆದ ಬಾರಿ ವಿಶೇಷ ವಿಧಾನ ಮಂಡಲ ಅಧಿವೇಶನ ನಡೆದಾಗ ಅಂಬರೀಶ್ ಗೈರಾಗಿದ್ದರು. ಇಂದು ಬೆಳಗ್ಗೆ ಕೂಡ ವಿಧಾನ ಮಂಡಲ ಅಧಿವೇಶನದಲ್ಲಿ ಅಂಬರೀಶ್ ಪಾಲ್ಗೊಳ್ಳಲಿಲ್ಲ. ಈ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದಂತೆ, ಭೋಜನ ವಿರಾಮದ ನಂತರ ಆರಂಭವಾದ ವಿಧಾನ ಸಭೆ ಕಲಾಪಕ್ಕೆ ಅಂಬರೀಶ್ ಹಾಜರ್ ಆದರು.

© kannada.filmibeat
© kannada.filmibeat

ಕಾವೇರಿ ವಿಷಯದಲ್ಲಿ ರಾಜ್ಯ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಅಧಿಕಾರ ಬಿಟ್ಟು ಬಂದಾಗಲೂ ಜನ ನನ್ನ ಸೋಲಿಸಿದರು. ಅಧಿಕಾರ ಇರುತ್ತೆ, ಹೋಗುತ್ತೆ. ಆದರೆ ನಾವು ಜನರಿಗಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿ ತುಂಬಾ ತಡವಾಗಿ ತಮ್ಮ ಕರ್ತವ್ಯವನ್ನ ನಿರ್ವಹಿಸುತ್ತಿರುವ ಅಂಬರೀಶ್, ಮಂಡ್ಯಗೆ ಭೇಟಿ ಕೊಟ್ಟು ರೈತರನ್ನ ಸಂತೈಸುವುದು ಯಾವಾಗ ಎಂದು ಕಾದು ನೋಡಬೇಕಾಗಿದೆ.