ಅಮೆರಿಕದಲ್ಲಿ ಇಸ್ಪೀಟ್ ಆಡುತ್ತಿರುವ ಅಂಬರೀಶ್ :ಕಾವೇರಿ ಸಮಸ್ಯೆಯ ನಡುವೆಯೂ!

0
6987

ಸುಪ್ರೀಮ್ ಕೋರ್ಟ್ ತೀರ್ಪಿನ ಅನುಸಾರ ಕರ್ನಾಟಕ ಬರದ ಪರಿಸ್ಥಿತಿ ನಡುವೆಯೂ ತಮಿಳು ನಾಡಿಗೆ ನೀರು ಬಿಡಬೇಕಿತ್ತು ಇದನ್ನು ವಿರೋಧಿಸಿ ಕರ್ನಾಟಕದ ಜನ ಪ್ರತಿಭಟನೆಗಳ ಮೂಲಕ ವ್ಯಕ್ತ ಪಡಿಸುತ್ತಿದ್ದಾರೆ
ಇವತ್ತು ಅಖಿಲ ಕರ್ನಾಟಕ ಬಂದ್ ಸಹ ಆಚರಿಸಿದರು .ಆದರೆ ಇದ್ಯಾವ ಘಟನೆಗಳ ಪರಿವೆಯೇ ಇಲ್ಲದೇ ಮಾಜಿ ಸಚಿವ ಅಂಬರೀಶ್ ಅಮೆರಿಕದಲ್ಲಿ ಜೂಜಾಡುತ್ತಿದ್ದಾರೆಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.

ಅಮೆರಿಕದಲ್ಲಿ ಅಕ್ಕ ಸಮ್ಮೇಳನ ಸೇ(04) ತಾರೀಖು ಮುಗಿದಿತ್ತು ಆದರೂ ಇಂದು ಸೇ(09) ಸಂಸದ ಅಂಬರೀಷ್ ಮಂಡ್ಯದ ಗಂಡು ಇಂದು ಯಾವುದೇ ಪ್ರತಿಭಟನೆಯಲ್ಲಿ ಭಾಗಿಯಾಗಿರಲಿಲ್ಲ. ಅಕ್ಕ ಸಮ್ಮೇಳನದಲ್ಲಿ ರ್ನಾಟಕದ ಸಂಸ್ಕೃತಿ ಮತ್ತು ಕಲೆಗಳನ್ನು ಬಿಂಬಿಸುವಂತಹ ಕಾರ್ಯಕ್ರಮಗಳು ನಡೆಯುತ್ತವೆ. ಆದರೆ ಈ ವರ್ಷ 100 ಅಮೆರಿಕನ್ ಡಾಲರ್ ಗಳಷ್ಟು ಪ್ರವೇಶ ಶುಲ್ಕವನ್ನಿಟ್ಟು ಎಂಬ ಜೂಜು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದರಲ್ಲಿ ಬಹಳಷ್ಟು ಜನರು ಭಾಗವಹಿಸಿದ್ದು, ಕೊನೆಯ ಹಂತದಲ್ಲಿ ಭಾಗವಹಿಸುವವರು ಅಂಬರೀಶ್ ಜೊತೆ ಆಡಲಿದ್ದಾರೆಂದು ಪ್ರಾಯೋಜಕರು ಪ್ರಚಾರ ನಡೆಸಿದ್ದಾರೆ.

ಸದ್ಯಕ್ಕೆ ಮಾಜಿ ಸಚಿವ ಅಂಬರೀಶ್ ಕೂಡಾ ಅಮೇರಿಕದಲ್ಲಿದ್ದು, ತಮ್ಮ ಕ್ಷೇತ್ರವಾದ ಮಂಡ್ಯದ ಜನತೆ ನೀರಿನ ಅಭಾವದ ಕುರಿತ ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ ಅಂಬರೀಶ್ ಅಮೆರಿಕದಲ್ಲಿ ಜೂಜಾಡುತ್ತಿರುವುದು ರಾಜ್ಯದ ಜನತೆಯಲ್ಲಿ ಆಕ್ರೋಶ ಮೂಡಿಸಿದೆ.