ಅಂಬೋಲಿ ಜಲಪಾತದ ಬಗ್ಗೆ ಸ್ವಲ್ಪ ಓದಿ, ಖಂಡಿತ ಅಲ್ಲಿಗೆ ಚಾರಣ ಹೋಗೋಕ್ಕೆ ತಯಾರಿ ಶುರು ಮಾಡ್ತೀರ!!

0
1298

ನೆರೆಯ ಮಹಾರಾಷ್ಟ್ರ ರಾಜ್ಯದ ಪಶ್ಚಿಮ ಘಟ್ಟದ ಸಿಂಧುದುರ್ಗ ಜಿಲ್ಲೆಯಲ್ಲಿರುವ ಸುಂದರ ನಯನ ಮನೋಹರ ಗಿರಿಧಾಮವೇ ಈ ಅಂಬೋಲಿ. ಇಲ್ಲಿವಿವಿಧ ಸಸ್ಯ ಪ್ರಭೇದಗಳನ್ನು ಒಳಗೊಂಡಿರುವ ಈ ತಾಣ ತನ್ನೊಡಲಲ್ಲಿಸಾಕಷ್ಟು ಕೋಟೆಗಳನ್ನು, ಸ್ಮಾರಕಗಳನ್ನು ಹುದುಗಿಸಿಕೊಂಡಿದೆ. ಈ ಮೂಲಕ ಅಂದಿನ ಭವ್ಯ ಗಯಕಾಲದ ವೈಭವಕ್ಕೆ ಇನ್ನೂ ಸಾಕ್ಷಿಯಾಗಿ ನಿಂತಿದೆ. ವಾರದ ಜಂಜಾಟದಿಂದ ಹೊರ ಬಂದು ವೀಕೆಂಡನಲ್ಲಿ ಸ್ವಲ್ಪ ಕಾಲ ನೆಮ್ಮದಿಯಿಂದ ಇರಲು ಇಲ್ಲಿ ಸಾಕಷ್ಟು ರಮ್ಯ ತಾಣಗಳಿವೆ.

ದೈವಿಕ ತಾಣ

ಈ ಅಂಬೋಲಿ ಗಿರಿಧಾಮದಲ್ಲಿ ನೋದಲೇಬೇಕಾದ ಹಲವಾರು ಪ್ರಮುಖ ಪುರಾಣ ಸ್ಥಳಗಳಿವೆ. ಈ ಪೈಕಿ ಪ್ರಮುಖವಾದದ್ದು ಹಿರಣ್ಯಕೇಶಿ ನದಿಯ ತಟದಲ್ಲಿರುವ ‘ಹಿರಣ್ಯಕೇಶಿ’ ಎಂಬ ಹೆಸರಿನ ದೇಗುಲವಿದೆ. ಇಲ್ಲಿ ಪ್ರತಿ ನಿತ್ಯ ಶಿವನ ವಿಗ್ರಹಕ್ಕೆ ಪೂಜೆ ಪುನಸ್ಕಾರಗಳು ನಡೆಯುತ್ತದೆ. ಈ ದೇಗುಲ ಸ್ವತಃ ಶಿವನ ಸ್ವಶರೀರವೆ ಆಗಿದೆ ಅನ್ನುತ್ತಾರೆ ಭಕ್ತರು ಈ ಪ್ರದೇಶವು ಅತ್ಯಂತ ಪ್ರಶಾಂತ ವಾತಾವರಣದಿಂದ ಕೂಡಿದ್ದು, ಯೋಗಾಭ್ಯಾಸ, ಧ್ಯಾನ ಮಾಡಲು ಸೂಕ್ತ ಸ್ಥಳವಾಗಿದೆ. ಈ ದೇವಸ್ಥಾನಕ್ಕೆ ವರ್ಷ ಪೂರ್ತಿ ಭಕ್ತಾದಿಗಳು ಬಂದು ದೇವಿಯ ದರ್ಶನ ಪಡೆಯುತ್ತಾರೆ.

Credits: Amitabha Gupta

ಬಹು ಆಕರ್ಷಕ ಜಲಪಾತಗಳು

ಅಂಬೋಲಿಯಲ್ಲಿರುವ ಜಲಪಾತಗಳ ದೃಶ್ಯ ವೈಭವವನ್ನು ನೋಡಲು ಎರಡು ಕಣ್ಣುಗಳು ಕೂಡಾ ಸಾಲದು. ಮಳೆಗಾಲದಲ್ಲಿ ಶುದ್ದ ಹಾಲಿನ ನೊರೆಯಂತೆ ಎತ್ತರದಿಂದ ಧುಮುಕುವ ಜಲಪಾತ ಎಂಥವರನ್ನು ಮೂಕವಿಸ್ಮಿತಗೊಳಿಸುತ್ತದೆ. ಇಲ್ಲಿನ ಇನ್ನೊಂದು ವಿಶೇಷವೆಂದರೆ, ಚಳಿಗಾಲದಲ್ಲಿ ಈ ಪ್ರದೇಶ ಸಂಪೂರ್ಣ ಮಂಜಿನಿಂದ ಆವೃತ್ತವಾಗಿ ಪ್ರಕೃತಿ ಪ್ರೀಯರ ಕಣ್ಣಿಗೆ ಹಬ್ಬವನ್ನುಂಟುಮಾಡುತ್ತದೆ. ಅಭೋಲಿ ಗಿರಿಧಾಮದಿಂದ ಕೇವಲ 10 ಕಿ.ಮೀ ಅಂತರದಲ್ಲಿ ಇನ್ನೊಂದು ಜಲಪಾತವಿದೆ. ನಂಗತಾಘಸ್ ಜಲಪಾತವೆಂದು ಕರೆಯುತ್ತಾರೆ. ಸಿಂಧುದುರ್ಗ ಜಿಲ್ಲೆಯಲ್ಲಿರುವ ಈ ಜಲಪತ ಅತ್ಯಂತ ಮನಮೋಹಕವಾಗಿದ್ದು, ಬೆಟ್ಟದ ಮೇಲಿಂದ ರಭಸವಾಗಿ 10 ಅಡಿ ಆಳದ ಕಮರಿಯಲ್ಲಿ ಧುಮುಕ್ಕುತ್ತದೆ.

ಈ ಜಲಪಾತದ ನೀರು ಬೀಳುವ ಶಬ್ದದ ಪ್ರತಿಧ್ವನಿ ಕೇಳಲು ರೋಮಾಂಚಕವಾಗಿರುತ್ತದೆ. ಇಲ್ಲಿರುವ ಎತ್ತರದ ಕಣಿವೆಯ ಮೇಲೆ ನಿರ್ಮಿಸಲಾದ ಸೇತುವೆಯ ಮೇಲೆ ನಿಂತು ಜಲಪಾತದ ದೃಶ್ಯವನ್ನುಕೂಡಾ ಕಣ್ತುಂಬಿಕೊಳ್ಳಬಹುದು. ಶಾಂತಿ ನೆಮ್ಮದಿ ಬಯಸುವವರಿಗೆ ಇದು ಹೇಳಿ ಮಾಡಿಸಿದ ತಾಣ. ಇನ್ನೂ ಅಂಬೋಲಿ ನಗರದಿಂದ ಕೇವಲ 2.5 ಕಿ.ಮೀ ದೂರದಲ್ಲಿರುವ ಶಿರ್ಗಾಂವ್ಕರ್ ಪಾಯಿಂಟ್ ಕೂಡ ಅತ್ಯಂತ ಆಕರ್ಷಕವಾಗಿದೆ. ಈ ಎತ್ತರದ ಪ್ರದೇಶ ಇಲ್ಲಿನ ಪ್ರಮುಖ ಪಿಕ್ನಿಕ್ ಸ್ಪಾಟ್ ಆಗಿದೆ.

ಹೋಗುವುದು ಹೇಗೆ?

ಅಂಬೋಲಿ ಗಿರಿಧಾಮ ಅತ್ಯುತ್ತಮವಾದ ವಾಯುಮಾರ್ಗ. ರೈಲು ಮಾರ್ಗ ಹಾಗೂ ಸುಲಭವಾದ ರಸ್ತೆ ಸಂಪರ್ಕವನ್ನೂ ಹೊಂದಿದೆ. ದೇಶದ ದೂರದ ನಗರಗಳಿಂದ ಬರುವ ಪ್ರವಾಸಿಗರಿಗೆ ಗೋವಾ ಹತ್ತಿರದ ವಿಮಾನ ನಿಲ್ದಾಣ. ಇಲ್ಲಿಂದ ಸುಮಾರು 70 ಕಿ. ಮೀ ದೂರದಲ್ಲಿರುವ ಅಂಬೋಲಿ ತಲುಪಲು ಸಾಕಷ್ಟು ಸಾರಿಗೆ ಬಸ್‍ಗಳಿವೆ. ಅಂಬೋಲಿಗೆ ಹತ್ತಿರದ ರೈಲು ನಿಲ್ದಾಣ ಸಾವಂತವಾಡಿ. ಇಲ್ಲಿಂದ ಗಿರಿಧಾಮಕ್ಕೆ ಹೋಗಲು ಸಾಕಷ್ಟು ಕ್ಯಾಬ್ ಮತ್ತು ಬಸ್‍ಗಳಿವೆ. ರಾಜ್ಯದ ಪ್ರಮುಖ ನಗರಗಳಿಂದಲೂ ಈ ಗಿರಿಧಾಮಕ್ಕೆ ಸಾರಿಗೆ ವ್ಯವಸ್ಥೆಯಿದೆ. ಅಂಬೋಲಿ ಅತ್ಯುತ್ತಮ ಹಾಗೂ ಎತ್ತರದ ಗಿರಿಧಾಮವಾಗಿದ್ದು, ವರ್ಷದ ಎಲ್ಲ ಕಾಲದಲ್ಲೂ ಇಲ್ಲಿ ಅತ್ಯಂತ ತಂಪಾದ ವಾತಾವರಣವಿರುತ್ತದೆ. ಬೇಸಿಗೆಯಲ್ಲೂ ಇಲ್ಲಿನ ವಾತಾವರಣ ತಂಪಾಗಿರುತ್ತದೆ.