ಮತ್ತೆ ಭಾರತದ ತಂಟೆಗೆ ಹೋದ್ರೆ ಪರಿಣಾಮ ನೆಟ್ಟಗಿರಲ್ಲ; ಪಾಕಿಸ್ತಾನಕ್ಕೆ ಅಮೆರಿಕದಿಂದ ಮತ್ತೊಂದು ಎಚ್ಚರಿಕೆ..

0
403

ಪುಲ್ವಾಮ ದಾಳಿಯ ನಂತರ ಪಾಕ್ ವಿರುದ್ದ ನೆರೆಹೊರೆಯ ದೇಶಗಳು ನಿಂತು ಉಗ್ರರನ್ನು ಸಾಕುತ್ತಿರುವ ಪಾಕಿಸ್ತಾನಕ್ಕೆ ಸರಿಯಾಗಿ ಪಾಠ ಕಲಿಸಬೇಕು ಎಂದು ಹೇಳಿ ಭಾರತಕ್ಕೆ ಬೆಂಬಲ ಸೂಚಿಸಿದವು. ಅದರಂತೆ ಅಮೆರಿಕ ಕೂಡ ಪಾಕಿಸ್ತಾನವನ್ನು ದ್ವೇಷ ಮಾಡಿ. ಹಲವು ಎಚ್ಚರಿಕೆಯನ್ನು ಸೂಚಿಸಿದವು ಆದರೆ ಚೀನಾ ಮಾತ್ರ ಪಾಕ್ ಪರ ನಿಲ್ಲುವಂತೆ ಅನುಮಾನಗಳು ಕಾಣುತ್ತಿದ್ದವು. ಆದರೆ ಅದಿಕೃತ ಹೇಳಿಕೆ ನೀಡಿರಲಿಲ್ಲ. ಆದಾದ ನಂತರ. ಭಾರತ ಪಾಕ್ ನಡುವೆ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು. ಈ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಭಾರತದ ಮೇಲೆ ಮತ್ತೊಂದು ಉಗ್ರರ ದಾಳಿ ನಡೆದರೆ ಪಾಕ್ ಗೆ ತೀವ್ರ ಸಮಸ್ಯೆಯಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

Also read: ಈ ಹೊಸ ಸಮೀಕ್ಷೆ ನೋಡಿ ಇದರ ಪ್ರಕಾರ ಮೋದಿ ಮತ್ತೆ ಅಧಿಕಾರಕ್ಕೆ ಬರುವುದು ಪಕ್ಕಾ!! ನೀವು ಈ ಸಮೀಕ್ಷೆ ನಿಜವಾಗುತ್ತೆ ಅಂತೀರಾ??

ಹೌದು ಬಾಲಕೋಟ್​ ಪ್ರದೇಶದಲ್ಲಿ ಭಾರತ ದಾಳಿ ನಡೆಸಿತು ಭಾರತದ ಎಫ್​-16 ವಿಮಾನ ಭಾರತದ ಗಡಿ ಪ್ರವೇಶಿಸಲು ಮುಂದಾಗಿತ್ತು. ಈ ವೇಳೆ ವಿಮಾನವನ್ನು ಭಾರತ ಹೊಡೆದುರುಳಿಸಿತ್ತು. ಇನ್ನು ಭಾರತದ ಸೇನಾ ಸಿಬ್ಬಂದಿ ಅಭಿನಂದನ್​ ಅವರನ್ನು ಪಾಕಿಸ್ತಾನ ತನ್ನ ಬಂಧನದಲ್ಲಿಟ್ಟುಕೊಂಡು ಬಿಡುಗಡೆ ಮಾಡಿತು. ಈ ಎಲ್ಲ ಬೆಳವಣಿಗೆಯಿಂದಾಗಿ ಎರಡೂ ರಾಷ್ಟ್ರಗಳ ನಡುವೆ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು. ಯುದ್ದ ನಡೆಯುವುದು ಬಹುತೇಕ ವೆಂದು ಖಚಿತವಾಗಿತ್ತು.

ಪಾಕ್ ಗೆ ಅಮೆರಿಕ ವಾರ್ನಿಂಗ್;

Also read: ಸಾವಿರಾರು ಕೋಟಿ ನುಂಗಿ ದೇಶ ಬಿಟ್ಟು ಪರಾರಿಯಾಗಿದ್ದ ಉದ್ಯಮಿ ನೀರವ್ ಮೋದಿ ಕೊನೆಗೂ ಅರೆಸ್ಟ್; ಶೀಘ್ರದಲ್ಲೇ ಭಾರತಕ್ಕೆ ಹಸ್ತಾಂತರ..

ಪುಲ್ವಾಮಾ ದಾಳಿ ನಂತರ ಭಯೋತ್ಪಾದನೆ ನಿರ್ಮೂಲನೆ ಮಾಡುವಂತೆ ಪಾಕಿಸ್ತಾನದ ಮೇಲೆ ಒತ್ತಡ ಹೆಚ್ಚಿದೆ. ಈಗಾಗಲೇ ಹಲವು ಬಾರಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಈಗ ಈ ಮಾತನ್ನು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ಭಾರತದ ಮೇಲೆ ಮತ್ತೊಂದು ಉಗ್ರ ದಾಳಿ ನಡೆದರೆ ಅದು ತೀವ್ರ ಸಮಸ್ಯಾತ್ಮಕವಾಗಿ ಪರಿಣಮಿಸಲಿದೆ. ಭಯೋತ್ಪಾದನೆ ಸಂಘಟನೆಗಳ ವಿರುದ್ಧ ಪಾಕಿಸ್ತಾನ ಕ್ರಮ ಕೈಗೊಳ್ಳಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಜೈಷ್​-ಇ-ಮೊಹ್ಮದ್​ ಸಂಘಟನೆಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಇದು ಎರಡೂ ರಾಷ್ಟ್ರಗಳಿಗೆ ಸಮಸ್ಯೆ ತಂದೊಡ್ಡಲಿದೆ. ಭಾರತ-ಪಾಕ್​ ನಡುವೆ ಮತ್ತೆ ಉದ್ವಿಗ್ನ ವಾತಾವರಣ ಸೃಷ್ಟಿಯಾಗುವುದು ನಮಗೆ ಇಷ್ಟವಿಲ್ಲ,” ಎಂದು ಅಮೆರಿಕದ ಶ್ವೇತಭವನ ಅಧಿಕಾರಿಗಳು ಹೇಳಿದ್ದಾರೆ.

ಭಾರತಕ್ಕೆ ಉಗ್ರದಾಳಿ ನಡೆದರೆ ಪಾಕ್ ಉಳಿಗಾಲವಿಲ್ಲ;

Also read: ಹಿಂದೂ ಧರ್ಮದ ಅವಹೇಳನ ಮತ್ತು ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಐವರು “ಬುದ್ದಿಜೀವಿಗಳ” ಮೇಲೆ ಕೇಸ್!!

ಅಮೇರಿಕದ ಅಧ್ಯಕ್ಷರ ಎಚ್ಚರಿಕೆಯಂತೆ, ಭಾರತದಲ್ಲಿ ಉಗ್ರ ದಾಳಿ ನಡೆದರೇ ಪಾಕಿಸ್ತಾನ ನಿಜಕ್ಕೂ ಅತ್ಯಂತ ಕಷ್ಟಕರ ದಿನಗಳನ್ನು ಎದುರಿಸಲಿದೆ. ಉಗ್ರರ ಶಮನ ಮಾಡುವ ನಿಟ್ಟಿನಲ್ಲಿ ಪಾಕ್ ಸರ್ಕಾರ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತದೆ ಎನ್ನುವುದು ನಾವು ಗಮನಿಸಬೇಕಿದೆ. ಇಲ್ಲವಾದಲ್ಲಿ ಮತ್ತೆ ಉಗ್ರ ಚಟುವಟಿಕೆಗಳು ಕಾಣಿಸಿಕೊಳ್ಳುತ್ತದೆ. ಎಂದು ಹೇಳಿದ್ದಾರೆ. ಈ ಮೂಲಕ ಪಾಕಿಸ್ತಾನ ಮತ್ತೆ ತನ್ನ ಬಾಲ ಬಿಚ್ಚಿದಲ್ಲಿ ಭಾರತ ಅತ್ಯಂತ ಪರಿಣಾಮಕಾರಿ ಪ್ರತ್ಯುತ್ತರ ನೀಡೋದು ನಿಶ್ಚಿತ ಎನ್ನುವ ಸಂದೇಶವನ್ನು ಪಾಕಿಸ್ತಾನಕ್ಕೆ ಅಮೆರಿಕ ರವಾನಿಸಿದೆ.

ಒಟ್ಟಾರೆಯಾಗಿ ಪುಲ್ವಾಮಾ ದಾಳಿ ನಂತರದಲ್ಲಿ ವಿವಿಧ ರಾಷ್ಟ್ರಗಳು ಪಾಕಿಸ್ತಾನದ ಮೇಲೆ ಭಾರೀ ಒತ್ತಡ ಹೇರಿದ್ದವು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಉಗ್ರ ಸಂಘಟನೆಗಳ ವಿರುದ್ಧ ಕೆಲ ಕ್ರಮ ಕೈಗೊಂಡಿದೆ. ಹಲವು ಉಗ್ರ ಸಂಘಟನೆಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಮತ್ತು ಜೆಇಎಮ್​ ಕೇಂದ್ರಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಇನ್ನು ಉಗ್ರರ ನಿರ್ಮೂಲನೆಯನ್ನು ಪಾಕಿಸ್ತಾನ ಮಾಡಲಿದೆಯೇ ಎನ್ನುವುದಕ್ಕೆ ಈಗಲೇ ಅಂತಿಮ ತೀರ್ಮಾನಕ್ಕೆ ಬರುವುದು ಕಷ್ಟ ಎಂದು ಪ್ರಕಟಣೆ ಹೇಳಿದೆ.