ಬೈಕ್ ಅಪಘಾತದ ಸಂದರ್ಭದಲ್ಲಿ ವ್ಯಕ್ತಿಯ ಪ್ರಾಣ ಉಳಿಸಿದ ಸ್ಮಾರ್ಟ್ ವಾಚ್; ಶೋಕಿಗಾಳಿ ಬಳಸುವ ಡಿಜಿಟಲ್ ಗ್ಯಾಜೆಟ್-ಗಳು ಏನೆಲ್ಲಾ ಮಾಡುತ್ತಿವೆ.!

0
944

ಇತ್ತೀಚಿನ ದಿನಗಳಲ್ಲಿ ಬರುವ ಡಿಜಿಟಲ್ ವಸ್ತುಗಳು ಬರಿ ಜನರ ಜೀವನವನ್ನು ತೆಗೆಯಲು ಮುಂದಾಗಿವೆ. ಹಲವು ಕಾಯಿಲೆಗಳನ್ನು ತರುತ್ತೇವೆ ಎನ್ನುವ ಮಾತುಗಳು ಕೇಳಿಬರುತ್ತಿದ್ದವು ಈಗ ಡಿಜಿಟಲ್ ಗ್ಯಾಜೆಟ್-ಗಳು ಜನರ ಪ್ರಾಣವನ್ನು ಉಳಿಸುತ್ತಿವೆ ಎಂದರೆ ಅದೊಂದು ಹೆಮ್ಮೆ ಪಡುವ ವಿಚಾರವಾಗಿದ್ದು. ವ್ಯಕ್ತಿಯೋರ್ವ ಅಪಘಾತಕ್ಕೀಡಾಗಿದ್ದ ಸಂದರ್ಭದಲ್ಲಿ ಆತ ಧರಿಸಿದ್ದ ಸ್ಮಾರ್ಟ್ ವಾಚ್ ಆತನ ಪ್ರಾಣವನ್ನು ಕಾಪಾಡಿದೆ. ಇದರ ಬಗ್ಗೆ ಹೆಮ್ಮೆಯಿಂದ ವ್ಯಕ್ತಿಯ ಮಗ ಬರೆದುಕೊಂಡಿದ್ದು ಭಾರಿ ವೈರಲ್ ಆಗಿದೆ.

Also read: ದೊಡ್ಡ ನಗರಗಳಲ್ಲಿ ಪ್ಲಾಟ್ ಖರೀದಿಸುವ ಮುನ್ನ ಈ ಕತೆ ಓದಿ; ಹಣ ನೀಡಿ ಹತ್ತು ವರ್ಷ ಹೋರಾಡಿ ಪ್ಲಾಟ್ ಪಡೆದ ಜನರ ಪರಿಸ್ಥಿತಿ ಹೇಗಿದೆ ನೋಡಿ.!

ಪ್ರಾಣ ಉಳಿಸಿದ ಸ್ಮಾರ್ಟ್ ವಾಚ್?

ಹೌದು ಇದು ಒಂದು ಸಂತೋಷದ ವಿಚಾರ ಅಂತಲೇ ಹೇಳಬಹುದು ಏಕೆಂದರೆ ಮೈಮೇಲೆ ದರಿಸುವ ಡಿಜಿಟಲ್ ವಸ್ತುಗಳು ಪ್ರಾಣ ಉಳಿಸುವ ಕೆಲಸ ಮಾಡುತ್ತಿವೆ. ಅದರಂತೆ ಒಂದು ಘಟನೆ ನಡೆದಿದ್ದು ವ್ಯಕ್ತಿಯೋರ್ವ ಅಪಘಾತಕ್ಕೀಡಾಗಿದ್ದ ಸಂದರ್ಭದಲ್ಲಿ ಆತ ಧರಿಸಿದ್ದ ಸ್ಮಾರ್ಟ್ ವಾಚ್ ಆತನ ಕುಟುಂಬಕ್ಕೆ ವಿಚಾರ ತಿಳಿಸಿ, ಸೂಕ್ತ ಸಂದರ್ಭದಲ್ಲಿ ಆತನಿಗೆ ಚಿಕಿತ್ಸೆ ಲಭಿಸುವಂತೆ ಮಾಡಿದೆ. ಆ ಮೂಲಕ ಆತನ ಜೀವ ಉಳಿಸುವಲ್ಲಿ ಸ್ಮಾರ್ಟ್ ವಾಚ್ ನೆರವಾಗಿದೆ. ಈ ಬಗ್ಗೆ ಬೈಕ್ ಅಪಘಾತದ ಸಂದರ್ಭದಲ್ಲಿ ನನ್ನ ತಂದೆಯ ಜೀವ ಉಳಿಸಲು ಆಪಲ್ ವಾಚ್ ಸಹಾಯ ಮಾಡಿತು ಎಂದು ವಾಷಿಂಗ್ಟನ್‍ನ ಸ್ಪೋಕೇನ್ ನಗರದ ವ್ಯಕ್ತಿಯೊಬ್ಬರು ಆಪಲ್ ವಾಚ್‍ನನ್ನು ಹೊಗಳಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಗೆ ಸ್ವತಃ ಆಪಲ್ ಕಂಪನಿ ಸಿಇಓ ಟಿಮ್ ಲೈಕ್ ಕೊಟ್ಟಿದ್ದಾರೆ.

Also read: ಕೇವಲ ಪ್ಯಾಶನ್ ಎಂದು ಟ್ಯಾಟೂ ಹಾಕಿಸಿಕೊಳ್ಳುವ ಮುನ್ನ ಎಚ್ಚರ; ಸ್ವಲ್ಪ ಹೆಚ್ಚು ಕಡಿಮೆಯಾದರೆ ಬರುತ್ತವೆ ಈ ಕಾಯಿಲೆಗಳು.!

ಆಗಿದ್ದೇನು?

ಬೈಕಿಂಗ್​ ಟ್ರಿಪ್​ಗಾಗಿ ತೆರಳಿದ್ದ ಗೇಬ್​ ಬರ್ಡೆಟ್​ರ ತಂದೆ ಬೋಬಿಯೋರ​ ಬೈಕ್​​ ಅಪಘಾತಗೀಡಾಗಿತ್ತು. ಈ ವೇಳೆ ಕೈಲಿದ್ದ ಆ್ಯಪಲ್​ ವಾಚ್​​ಗೆ ಹಾನಿಯಾದ ಹಿನ್ನೆಲೆ ವಾಚ್​ ತಕ್ಷಣ ಬೋಬಿಯೋ​ ಕುಟುಂಬಸ್ಥರಿಗೆ ತುರ್ತು ಸಂದೇಶ ರವಾನಿಸಿದೆ. ಬೋಬಿಯೋ​ ನೆಲಕ್ಕೆ ಬೀಳುತ್ತಿದ್ದಂತೆ ಬಲವಾಗಿ ಕೆಳಗೆ ಬಿದ್ದಿರುವ ಸೂಚನೆ ನೀಡಿ ಆ್ಯಪಲ್​ ವಾಚ್​ ಬರ್ಡೆಟ್‌​​​​ಗೆ ಮೆಸೇಜ್​ ಕಳುಹಿಸಿದೆ. ತಕ್ಷಣ ವಾಚ್​ ನೀಡಿದ್ದ ಲೊಕೇಷನ್​ ಜಾಡು ಹಿಡಿದು ಹೊರಡಲು ಸಿದ್ದರಾಗ್ತಾರೆ. ಅಲ್ಲದೆ ವಾಚ್​ ತಾನಾಗಿಯೇ ಆ್ಯಂಬುಲೆನ್ಸ್​ ಸರ್ವಿಸ್​​​​ಗೂ ಕೂಡ ಕರೆ ಮಾಡಿ ಲೊಕೇಷನ್​ ಶೇರ್​ ಮಾಡುತ್ತೆ. ಹೀಗಾಗಿ ಮಗ ಬರ್ಡೆಟ್​​​ ಆ್ಯಕ್ಸಿಡೆಂಟ್ ಆಗಿದ್ದ ಸ್ಥಳ ತಲುಪುವ ಹೊತ್ತಿಗೆ ತಂದೆ ಬೋಬಿಯೋ​ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

Also read: ನೀವೂ ಗೂಗಲ್ ಪೇ app ಬಳಕೆ ಮಾಡುತ್ತಿರಾ? ಹಾಗಾದ್ರೆ ಎಚ್ಚರ; ವ್ಯಕ್ತಿ ಕರೆಂಟ್ ಬಿಲ್ ಕಟ್ಟಲು ಹೋಗಿ 96 ಸಾವಿರ ರೂ ಕಳೆದುಕೊಂಡಿದು ಹೇಗೆ ಗೊತ್ತಾ??

ಲೊಕೇಶನ್ ಕಳುಹಿಸಿದ ನಂತರ ತಂದೆ “ಸೇಕ್ರೆಡ್ ಹಾರ್ಟ್ ಮೆಡಿಕಲ್ ಸೆಂಟರ್” ಜಾಗದಲ್ಲಿದ್ದಾರೆ ಎಂದು ಸಂದೇಶದಲ್ಲಿತ್ತು. ಸಂದೇಶವನ್ನು ನೋಡಿದ ತಕ್ಷಣ ಬರ್ಡೆಟ್ ಆಸ್ಪತ್ರೆಗೆ ತೆರಳಿದ್ದಾರೆ. ಇದಕ್ಕೂ ಮೊದಲು ವಾಚ್​ನಲ್ಲಿ ತುರ್ತು ಪರಿಸ್ಥಿತಿಯ ವೇಳೆ ಸಂಪರ್ಕಿಸಬೇಕಾದ ನಂಬರ್​​ನಲ್ಲಿ ಮಗನ ನಂಬರ್​​ ದಾಖಲಿಸಿದ್ದರು. ಹೀಗಾಗಿ ತಂದೆ ಅಪಾಯದಲ್ಲಿದ್ದಾಗ ಆ್ಯಪಲ್​ ವಾಚ್ ಮಗನಿಗೆ ಲೊಕೇಷನ್ ಜೊತೆಗೆ ಮೆಸೇಜ್​ ಕಳುಹಿಸಿದೆ. ಆ್ಯಪಲ್​ನಿಂದಾಗಿ ತಂದೆಯ ಜೀವ ಉಳಿದಿದೆ ಅಂತ ಬರ್ಡೆಟ್​​ ಫೇಸ್​​ಬುಕ್​​ನಲ್ಲಿ ಪೋಸ್ಟ್​ ಮಾಡಿದ್ದು. ಆ್ಯಪಲ್​​ ವಾಚ್​​ನಿಂದ ತಮಗಾದ ಸಹಾಯ ನೆನೆದು ಕಂಪನಿಗೆ ಧನ್ಯವಾದ ಅರ್ಪಿಸಿದ್ದಾರೆ. ಒಟ್ಟಾರೆಯಾಗಿ ಗ್ಯಾಜೆಟ್ ಗಳನ್ನು ಶೋಕಿಗಾಳಿ ಬಳಸುವುದಿಲ್ಲ ಪ್ರಾಣವನ್ನು ಕಾಪಾಡಲು ಕೂಡ ಬಳಸುತ್ತಾರೆ ಎನ್ನುವುದು ತಿಳಿಸಿದೆ.