ಕಾಂಬೋಡಿಯಾದ ಆಂಗ್ಕೋರ್ ವಾಟ್ ನಲ್ಲಿರುವ ವಿಶ್ವದ ಅತೀ ದೊಡ್ಡ ದೇವಾಲಯದ ಅಚ್ಚರಿ ಸಂಗತಿಗಳನ್ನು ಕೇಳಿದ್ರೆ ಹಿಂದೂ ಧರ್ಮದ ಬಗ್ಗೆ ಹೆಮ್ಮೆಯುಂಟಾಗುತ್ತದೆ..

0
2225

ದೇವಾಲಯಗಳು ಇರುವುದು ಕೇವಲ ಭಾರತದಲ್ಲಿ ಮಾತ್ರವಲ್ಲ. ಬದಲಾಗಿ ಪ್ರಪಂಚದ ಹಲವಾರು ತಾಣಗಳಲ್ಲಿ ಅತ್ಯದ್ಭುತ ದೇವಾಲಯಗಳ ನಿರ್ಮಾಣವಾಗಿತ್ತು. ಇತಿಹಾಸ ತಜ್ಞರ ಪ್ರಕಾರ ವೇದದ ಕಾಲದಲ್ಲಿ ಹಿಂದೂ ದೇವಸ್ಥಾನಗಳು ಅಷ್ಟಾಗಿ ಇರಲಿಲ್ಲ. ಕೆಲವು ಇಂದು ನಿನ್ನೆ ನಿರ್ಮಾಣವಾಗಿದ್ದರೆ, ಇನ್ನೂ ಕೆಲವು ಇತಿಹಾಸ ಕೆದಕಿದರೂ ಅದರ ಇತಿಹಾಸ ಹೇಳಲು ಬಾರದು. ಇಷ್ಟಾದರೂ ಹಿಂದೂಗಳಿಗೆ ವಿಜ್ಞಾನದ ಬಗ್ಗೆ ಪಾಠ ಮಾಡಿದವರು ನಾವೆಂದು ಹೇಳುತ್ತಾರೆ ೪೦೦ ವರ್ಷ ಇತಿಹಾಸ ಇರುವ ಅಮೇರಿಕನ್ನರು ಯೂರೋಪಿಯನ್ನರು.

ಪ್ರಸುತ್ತ ಲೇಖನದಲ್ಲಿ ಸ್ವರ್ಗದಂತೆ ಕಂಗೊಳಿಸುತ್ತಿರುವ ಕಾಂಬೋಡಿಯಾದ “ಆಂಗ್ಕೋರ್ ವಾಟ್ ” ದೇವಾಲಯ ಬಗ್ಗೆ ತಿಳಿಯೋಣ.

source: 3.bp.blogspot.com

ಪ್ರಪಂಚದ ಅತ್ಯಂತ ದೊಡ್ಡದಾದ ಹಾಗೂ ಪುರಾತನವಾದ ದೇವಾಲಯ ಇರುವುದು ಕಾಂಬೋಡಿಯಾದಲ್ಲಿ. ಅದುವೇ ಅಂಗ್‌ಕೋರ್‌ ವ್ಯಾಟ್‌ ದೇವಾಲಯ. ಈ ಕಾಂಬೋಡಿಯನ್ ದೇವಾಲಯವು 900 ವರ್ಷಗಳ ಹಿಂದೆ “ಭೂಮಿಯ ಮೇಲೆ ಸ್ವರ್ಗವನ್ನು” ಹೋಲುವಂತೆ ನಿರ್ಮಿಸಲಾಗಿತ್ತು. ಇದು ಇರುವುದು ಕಾಂಬೋಡಿಯಾ ದೇಶದ ಸಿಮ್ ಕ್ಯಾಂಪ್ ಎಂಬ ಊರಿನ ಹತ್ತಿರ ಇರುವ ಅಂಗ್ಕೋರ್ ನಲ್ಲಿ. ಜಗತ್ತಿನ ಅದ್ಭುತ ದೇವಾಲಯಗಳಲ್ಲಿ ಇದು ಮೊದಲ ಸ್ಥಾನದಲ್ಲಿದೆ ಇದರ ವೈಭವ ಎಂದೋ ನಶಿಸಿ ಹೋಗಿದ್ದರೂ ಈಗಲೂ ಅಳಿದುಳಿದ ಅವಶೇಷಗಳು ಇದರ ಹಿರಿಮೆಯನ್ನು ಸಾರಿ ಸಾರಿ ಹೇಳುತ್ತವೆ. ಬಣ್ಣ ರಚನೆ ವಿನ್ಯಾಸ ಹೀಗೆ ಎಲ್ಲಾ ದೃಷ್ಟಿಯಿಂದಲೂ ಇದು ವಿಭಿನ್ನವಾಗಿದೆ. ಅಂದು ಇದನ್ನು ನಿಮಿ೯ಸಿದ ಜಕಣರ ಜ್ಞಾನ ಉತ್ತಮವಾಗಿದ್ದು ಇಂದಿನ ಮತ್ತು ಮುಂದಿನ ಪೀಳಿಗೆಗೆ ಅದಶ೯ವಾಗಿದೆ.

source: 1.bp.blogspot.com

ಅಂಗ್ಕೋರ್ ಪ್ರದೇಶವು ಪ್ರಪಂಚದ ಅತ್ಯಂತ ಪ್ರಮುಖ ಪುರಾತತ್ವ ಸ್ಥಳಗಳಲ್ಲಿ ಒಂದಾಗಿದೆ. ಈ ಊರಿನಲ್ಲಿ ಅನೇಕ ಹಿಂದೂ ಮತ್ತು ಬೌದ್ಧ ದೇವಸ್ಥಾನಗಳಿವೆ. ಅದರಲ್ಲಿ “ಅಂಗ್ಕೊರ್ ವಾಟ್” ಅನ್ನೋ ದೇವಾಲಯ ಸುಮಾರು 1 ಚದರ ಮೈಲು ಹರಡಿಕೊಂಡಿದೆ. ಇದು ವಿಶ್ವದ ಅತಿ ದೊಡ್ಡ ಧಾರ್ಮಿಕ ಸ್ಮಾರಕ ಎಂದು ಹೇಳಲಾಗುತ್ತದೆ. ಇದು 3.6 ಕಿಲೋಮೀಟರುಗಳಷ್ಟು ವಿಸ್ತರಿಸಿರುವ ಕಂದಕ ಮತ್ತು ಹೊರ ಗೋಡೆಗಳನ್ನು ಹೊಂದಿದೆ. ಗೋಡೆಗಳೊಳಗೆ ಮುಖ್ಯ ದೇವಸ್ಥಾನಕ್ಕೆ ಸುದೀರ್ಘ ಹಾದಿಯಲ್ಲಿ ಖಾಲಿ ಜಾಗವಿದೆ. ದೇವಾಲಯದ ಬದಿಗಳಲ್ಲಿ ಮುಖ್ಯವಾಗಿ ಮಹಾಕಾವ್ಯದ ಹಿಂದೂ ಕಥೆಗಳನ್ನು ತೋರಿಸಲಾಗಿದೆ.

ಇಲ್ಲಿ ಹಿಂದೂ ಪುರಾಣಗಳನ್ನು ದೊಡ್ಡ ಗೋಡೆ ಮೇಲೆ ಕೆತ್ತಿದ್ದಾರೆ. ಶಿವ ಮತ್ತು ವಿಷ್ಣು ದೇವರನ್ನು ತುಂಬಾ ಭಕ್ತಿ ಗೌರವದಿಂದ ಇಲ್ಲಿ ಆರಾಧಿಸ್ತಾರೆ. ಹಿಂದೂ ಸಂಪ್ರದಾಯದಲ್ಲಿ ಬರುವ ಅನೇಕ ಕಥೆ ಮತ್ತು ರಾಜ ತನ್ನ ರಾಜ್ಯದ ಜನತೆಯ ಜೊತೆ ಇರುವ ಚಿತ್ರಗಳನ್ನು ಇಲ್ಲಿನ ದೇವಾಲಯದ ಗೋಡೆಗಳ ಮೇಲೆ ನೋಡಬಹುದು.

source: khanacademy.org

500 ಕ್ಕೂ ಹೆಚ್ಚು ವರ್ಷಗಳ ಕಾಲ ಇದು ಖಮೇರ್ ಸಾಮ್ರಾಜ್ಯದ ಕೇಂದ್ರವಾಗಿತ್ತು ಮತ್ತು ಇಂದಿಗೂ ಇದು ಕಾಂಬೋಡಿಯಾದ ಆಧ್ಯಾತ್ಮಿಕ ಹೃದಯವಾಗಿದೆ. ಈ ದೇವಾಲಯದ ಚಿತ್ರವನ್ನು ಕಾಂಬೋಡಿಯನ್ ದೇಶದ ರಾಷ್ಟ್ರೀಯ ಧ್ವಜದಲ್ಲಿ ಕಾಣಬಹುದು. ಇಲ್ಲಿ ಖ್ಮೇರ್‌ ರಾಜವಂಶಸ್ಥರು ನಿರ್ಮಾಣ ಮಾಡಿದ ಹಿಂದೂ ದೇವಾಲಯ ಇದಾಗಿತ್ತು. ಇದೀಗ ಈ ದೇವಾಲಯ ನಿಧಾನವಾಗಿ ಬುದ್ಧರ ದೇವಾಲಯವಾಗಿ ಮಾರ್ಪಾಡು ಹೊಂದುತ್ತಿದೆ. ಇದನ್ನು ಖ್ಮೇರ್‌ ರಾಜ ಸೂರ್ಯವರ್ಮನ್‌ 12 ನೇ ಶತಮಾನದಲ್ಲಿ ಯಶೋಧರಪುರದಲ್ಲಿ ನಿರ್ಮಾಣ ಮಾಡಿದರು. ಇದು ಖ್ಮೇರ್‌ ರಾಜವಂಶಸ್ಥರ ರಾಜಧಾನಿಯಾಗಿತ್ತು. ಶೈವ ಸಂಪ್ರದಾಯವನ್ನು ಮುರಿದ ಈ ರಾಜ ಅಂಗ್‌ಕೋರ್‌ ವ್ಯಾಟ್‌ ದೇವಾಲಯ ಸ್ಥಾಪಿಸಿ ಅಲ್ಲಿ ವಿಷ್ಣುವನ್ನು ಪೂಜಿಸಲು ಆರಂಭಿಸಿದರು. ಈ ದೇವಾಲಯ ಖ್ಮೇರ್‌ ವಾಸ್ತುಶಿಲ್ಪದ ಅದ್ಭುತ ಕಲೆಗಳನ್ನು ಒಳಗೊಂಡಿದೆ.

source: co.pinterest.com

source: .thehistoryhub.com

source: retireediary.files.wordpress.com